ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ, ಗಂಡನನ್ನೇ ದೂರ ಮಾಡಿಕೊಳ್ತಾಳಾ?

Brundavana Serial: ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ, ಗಂಡನನ್ನೇ ದೂರ ಮಾಡಿಕೊಳ್ತಾಳಾ?

Brindavana Kannada Serial Today Episode May 2nd: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ತನ್ನ ಮನದ ಗೊಂದಲವನ್ನು ಪುಷ್ಪಾ ಬಳಿ ಕೇಳಿಕೊಂಡ ಆಕಾಶ್‌. ಸಹನಾ ಬಯಸುತ್ತಿರುವುದು, ಭಾರ್ಗವಿ ದಾಳವಾಗಿಸಿಕೊಂಡಿದ್ದು ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ. ಸಹನಾಗೆ ಆಕಾಶ್‌ ವಿಷಯದಲ್ಲಿ ಕ್ಲ್ಯಾರಿಟಿ ಕೊಡಲೇಬೇಕು ಎಂದು ನಿರ್ಧಾರ ಮಾಡಿದ ಸುನಾಮಿ.

ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ
ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 2) ಸಂಚಿಕೆಯಲ್ಲಿ ಮನದಲ್ಲಿ ಸಾವಿರ ಗೊಂದಲ ತುಂಬಿಕೊಂಡು ಮನೆಗೆ ಬರುವ ಆಕಾಶ್‌ಗೆ ಸಮಾಧಾನ ಮಾಡುವ ಪುಷ್ಪಾ ಅವನಿಗೆ ಏನಾಗಿದೆ ಎಂದು ಒತ್ತಾಯಿಸಿ ಕೇಳುತ್ತಾಳೆ. ಆಗ ಆಕಾಶ್‌ ನಂಗೇನೂ ಆಗಿಲ್ಲ ನನ್ನ ಸ್ನೇಹಿತರೊಬ್ಬರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ತಾಯಿ ನನ್ನ ಬಳಿ ಬಂದು ಅವರು ಇರುವಷ್ಟು ದಿನ ಅವರನ್ನು ಪ್ರೀತಿಯಿಂದ, ಚೆನ್ನಾಗಿ ನೋಡಿಕೊಳ್ಳಿ ಅಂತ ಬೇಡಿಕೊಂಡ್ರು, ನಂಗೆ ಈಗ ಏನ್‌ ಮಾಡ್ಬೇಕು ಅಂತಾನೇ ಗೊತ್ತಾಗ್ತಾ ಇಲ್ಲʼ ಎಂದು ಹೆಂಡತಿಯ ಮುಂದೆ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಆಕಾಶ್‌ ಹೇಳುವುದು ಭಾರ್ಗವಿ ಬಗ್ಗೆ, ಆಕೆ ಬೀಸಿದ ಮೋಸದ ಬಲೆಯಲ್ಲಿ ಆಕಾಶ್‌ ಬಿದ್ದಿದ್ದಾನೆ, ಆತನ ಗೆಳತಿ ಅಂದರೆ ಸಹನಾ ಬಯಸುತ್ತಿರುವುದು ಆಕಾಶ್‌ನನ್ನು ಎಂದು ತಿಳಿಯದ ಪುಷ್ಪಾ ಸಾಯುವವರಿಗೆ ನಾವು ಜೀವ ಕೊಡಲು ಸಾಧ್ಯವಿಲ್ಲ, ಆದರೆ ಅವರೊಂದಿಗೆ ಒಂದಿಷ್ಟು ದಿನ ಚೆನ್ನಾಗಿ ಇರುವ ಮೂಲಕ ಅವರನ್ನು ಇನ್ನಷ್ಟು ದಿನ ಬದುಕುವಂತೆ ಮಾಡಬಹುದು, ಹಾಗಾಗಿ ನೀವು ಅವರ ತಾಯಿ ಹೇಳಿದಂತೆ ಕೇಳಿ ಎಂದು ಸಲಹೆ ನೀಡುತ್ತಾರೆ. ಆ ಮೂಲಕ ತನ್ನ ಸಮಾಧಿಗೆ ತಾನೇ ಗುಂಡಿ ತೋಡುವ ಕೆಲಸ ಮಾಡಿಕೊಂಡಿದ್ದಾಳೆ ಪುಷ್ಪಾ. ಹೆಂಡತಿಯ ಮಾತು ಆಕಾಶ್‌ಗೆ ಇಷ್ಟವಾಗುತ್ತದೆ. ಕೊನೆಗೆ ಆತ ಸಹನಾಗೆ ಕಾಲ್‌ ಮಾಡಿ ಮಾತನಾಡುತ್ತಾನೆ.

ಗೆದ್ದೆ ಎಂದು ಬೀಗುತ್ತಿರುವ ಭಾರ್ಗವಿ

ಮಗಳು ಆಕಾಶ್‌ ಜೊತೆ ಖುಷಿ ಖುಷಿಯಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುವ ಭಾರ್ಗವಿ, ಭಾಸ್ಕರ ಆಕಾಶ್‌ ತಾವು ಬೀಸಿದ ಬಲೆಯಲ್ಲಿ ಬಿದ್ದಿದ್ದಾನೆ ಎಂದು ಸಂತಸಪಡುತ್ತಾರೆ. ಅಕ್ಕಾ ನಿನ್ನ ಪ್ಲಾನ್‌ ಸಕ್ಸಸ್‌ ಆದ ಹಾಗೆ, ಇನ್ನೂ ಬೃಂದಾವನದವರಿಗೆ ನೆಮ್ಮದಿನೇ ಇಲ್ಲʼ ಎಂದು ಭಾಸ್ಕರ ಹೇಳಿದಾಗ ʼನಾನು ಹೇಳಿಲ್ವಾ ಭಾಸ್ಕರ ಬೃಂದಾವನದವರಿಗೆ ಬೇರೆಯವರ ಕಣ್ಣೀರು ಸಹಿಸುವುದು ಆಗುವುದಿಲ್ಲ. ತಮ್ಮ ಕಣ್ಣಲ್ಲಿ ರಕ್ತ ಹರಿದ್ರೂ ಇನ್ನೊಬ್ಬರು ಕಣ್ಣಲ್ಲಿ ನೀರು ಬರಲು ಬಿಡುವುದಿಲ್ಲ, ಅದು ಅವರ ಗುಣ. ಅದೇ ನನಗೆ ಇಂದು ವರವಾಗಿದ್ದುʼ ಎಂದು ನಾನು ಗೆದ್ದೇ ಬಿಟ್ಟೇ ಎಂಬರ್ಥದಲ್ಲಿ ಮಾತನಾಡುತ್ತಾಳೆ.

ಸಹನಾಗೆ ಬುದ್ಧಿವಾದ ಹೇಳುವ ಸುನಾಮಿ

ಇತ್ತ ಪ್ರೀತಿಯಲ್ಲಿ ತೇಲಾಡುತ್ತಿದ್ದ ಸಹನಾಳನ್ನು ನೋಡಿ ಕೋಪಗೊಳ್ಳುವ ಸುನಾಮಿ ಆಕೆಗೆ ಸತ್ಯ ಗೊತ್ತಾದ ಮೇಲೂ ಹೀಗೇಕೆ ಮಾಡುತ್ತಿದ್ದಾಳೆ ಎಂದು ಗೊಂದಲಕ್ಕೆ ಒಳಗಾಗುತ್ತಾನೆ. ಸಹನಾಳನ್ನು ಬಳಿ ಕರೆದು ʼನೀನು ಮಾಡುತ್ತಿರುವುದು ಸರಿಯಲ್ಲ, ಮದುವೆಯಾಗಿದೆ ಎಂದು ತಿಳಿದ ಮೇಲೂ ಅವನ ಜೊತೆ ಸುತ್ತಾಡುವುದು ಎಷ್ಟು ಸರಿʼ ಎಂದು ಪ್ರಶ್ನೆ ಮಾಡಿ ಬುದ್ಧಿವಾದ ಹೇಳಲು ನೋಡುತ್ತಾನೆ. ಆದರೆ ಸತ್ಯದ ಅರಿವಿಲ್ಲದ ಸಹನಾ ಸುನಾಮಿ ತಮ್ಮಿಬ್ಬರ ಪ್ರೀತಿಗೆ ಅಡ್ಡಗಾಲಾಗುತ್ತಿದ್ದಾನೆ ಎಂದು ಅರಿತು ತನ್ನ ಮತ್ತು ಆಕಾಶ್‌ ಮಧ್ಯೆ ಬರದಂತೆ ವಾರ್ನಿಂಗ್‌ ನೀಡುತ್ತಾನೆ. ಇದರಿಂದ ಸುನಾಮಿಗೆ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ.

ಸಹನಾ ಪ್ರೀತಿಗೆ ಅಂತ್ಯ ಹಾಡ್ತಾನಾ ಸುನಾಮಿ 

ಅತ್ತ ತಲೆ ಕೆಟ್ಟು ಬಾರ್‌ಗೆ ಬರುವ ಸುನಾಮಿ ಕುಡಿಯುತ್ತಾ ತಾನು ಹೇಗಾದ್ರೂ ಸಹನಾಗೆ ಆಕಾಶ್‌ಗೆ ಮದುವೆಯಾಗಿರುವ ವಿಚಾರ ಹೇಳಲೇಬೇಕು. ಈ ವಿಷಯಕ್ಕೆ ಒಂದು ಅಂತ್ಯ ತರಬೇಕು. ಇಲ್ಲದೇ ಇದ್ರೆ ಸಹನಾ-ಆಕಾಶ್‌ ಇಬ್ಬರಿಗೆ ಮಾತ್ರವಲ್ಲ, ಆಕಾಶ್‌ ಮದುವೆಯಾದ ಪುಷ್ಪಾಳ ಬದುಕೂ ಹಾಳಾಗುತ್ತದೆ ಎಂದು ಯೋಚಿಸುತ್ತಾನೆ. ಅವರಿಬ್ಬರ ನಡುವೆ ಪ್ರೀತಿ ಅರಳುವಂತಾಗಿದ್ದು ನನ್ನಿಂದ ಈಗ ನಾನೇ ಅದನ್ನು ದೂರ ಮಾಡ್ತೀನಿ ಎಂದು ಪಣ ತೊಡುತ್ತಾನೆ.

ಸುನಾಮಿ ಅಂದುಕೊಂಡಂತೆ ಆಕಾಶ್‌-ಸಹನಾಳನ್ನು ದೂರ ಮಾಡ್ತಾನಾ, ಸಹನಾಗೆ ಪುಷ್ಪಾಳ ಗಂಡ ಆಕಾಶ್‌ ಎನ್ನುವುದು ಅರಿವಾಗುತ್ತಾ, ಸತ್ಯ-ಧರ್ಮಕ್ಕಿಂತ ಅನ್ಯಾಯ ಗೆಲ್ಲುತ್ತಾ, ಭಾರ್ಗವಿ ಆಟ ಮುಂದುವರಿಯುತ್ತಾ? ಈ ಎಲ್ಲವನ್ನ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point