ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಗೆದ್ದು ಬಿಟ್ಟೆ ಎಂದು ಬೀಗುತ್ತಿರುವ ಭಾರ್ಗವಿ, ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

Brundavana Serial: ಗೆದ್ದು ಬಿಟ್ಟೆ ಎಂದು ಬೀಗುತ್ತಿರುವ ಭಾರ್ಗವಿ, ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

Brindavana Kannada Serial Today Episode May 3rd: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಕಂಠಪೂರ್ತಿ ಕುಡಿಯುವ ಸುನಾಮಿ ಸಹನಾಗೆ ಸತ್ಯ ಹೇಳುವ ಸಲುವಾಗಿ ಕಾಲ್‌ ಮಾಡ್ತಾನೆ. ಇತ್ತ ತಾನು ಗೆದ್ದೆ ಬಿಟ್ಟೆ ಎಂದು ಬೀಗುತ್ತಿದ್ದಾಳೆ ಭಾರ್ಗವಿ. ಕುಡಿದು ಆಕಾಶ್‌ ಮನೆಗೆ ಹೋಗುವ ಸುನಾಮಿ ಎಲ್ಲಾ ಸತ್ಯವನ್ನು ಮನೆಯವರ ಮುಂದೆ ಹೇಳ್ತಾನಾ?

ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ
ಸತ್ಯ ಹೇಳಿ ಆಕಾಶ್‌ ಬಾಳನ್ನು ಸರಿ ಮಾಡಲು ಹೊರಟಿದ್ದಾನೆ ಸುನಾಮಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 3) ಸಂಚಿಕೆಯಲ್ಲಿ ಬಾರ್‌ನಲ್ಲಿ ಕಂಠಪೂರ್ತಿ ಕುಡಿಯುವ ಸುನಾಮಿ ಹೇಗಾದ್ರೂ ಆಕಾಶ್‌-ಸಹನಾ ಸಂಬಂಧಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧಾರ ಮಾಡುತ್ತಾನೆ. ಈ ಗುಂಗಿನಲ್ಲೇ ಸಹನಾಗೆ ಕಾಲ್‌ ಮಾಡುತ್ತಾನೆ. ಕಾಲ್‌ ಮಾಡಿದ ತಕ್ಷಣ ಸಹನಾ ನೀನು ಮಾಡಿದ್ದು ಸರಿನಾ, ನಿಮ್ಮ ಪ್ರೀತಿ ಸಕ್ಸಸ್‌ ಆಗುವಂತೆ ಮಾಡಿದ್ದೇ ನಾನು ಆದರೆ ನೀನು ಹೀಗೆ ಮಾಡ್ತಾ ಇರೋದು ಸರಿನಾ ಎಂದು ಸಹನಾಗೆ ಪ್ರಶ್ನೆ ಮಾಡುತ್ತಾನೆ. ಅವಳು ತಾನು ಅವನಿಗೆ ಥ್ಯಾಂಕ್‌ ಹೇಳಿಲ್ಲ ಎಂದೇ ಹೀಗೆಲ್ಲಾ ಮಾತನಾಡುತ್ತಿದ್ದಾನೆ ಎಂದುಕೊಂಡು ಥ್ಯಾಂಕ್ಸ್‌ ಹೇಳುತ್ತಾನೆ. ಅಷ್ಟರಲ್ಲಿ ಸುನಾಮಿ ಆಕಾಶ್‌ಗೆ ಮದುವೆಯಾಗಿರುವುದು, ನೀನು ಅವನನ್ನು ಪ್ರೀತಿ ಮಾಡಿದ್ರೆ ಸಹನಾ ಸೇರಿ ಒಟ್ಟು ಜನರಿಗೆ ಅನ್ಯಾಯವಾಗುತ್ತೆ ಅಂತೆಲ್ಲಾ ಹೇಳಿಬಿಡುತ್ತಾನೆ. ಇನ್ನೇನು ಸಹನಾಗೆ ಎಲ್ಲಾ ವಿಷಯನೂ ಗೊತ್ತಾಯ್ತು ಎಂದು ಪ್ರೇಕ್ಷಕರು ಅಂದುಕೊಂಡರೆ ಅಲ್ಲಿ ಒಂದು ಟ್ವಿಸ್ಟ್‌ ಇರುತ್ತೆ. ಮಾತನಾಡುವ ಮಧ್ಯದಲ್ಲೇ ಸುನಾಮಿ ಫೋನ್‌ ಸ್ವಿಚ್‌ ಆಫ್‌ ಆಗಿರುತ್ತದೆ. ಇದರಿಂದ ಸಹನಾ ಮುಖ್ಯವಾದ ಮಾತು ಏನು ಕೇಳಿಸಿಕೊಳ್ಳಬೇಕಿತ್ತೋ ಅದನ್ನು ಕೇಳಿಸಿಕೊಂಡೇ ಇರುವುದಿಲ್ಲ. ಸುನಾಮಿಗೆ ಮತ್ತೆ ಕಾಲ್‌ ಟ್ರೈ ಮಾಡುವ ಸಹನಾ ಸ್ವಿಚ್‌ ಆಫ್‌ ಆಗಿದ್ದು ನೋಡಿ ಸುಮ್ಮನಾಗ್ತಾಳೆ.

ಟ್ರೆಂಡಿಂಗ್​ ಸುದ್ದಿ

ಗೆದ್ದೇ ಬಿಟ್ಟೆ ಎಂಬ ಸಂಭ್ರಮದಲ್ಲಿ ಭಾರ್ಗವಿ

ರಾತ್ರಿ ಸಹನಾ ರೂಮ್‌ಗೆ ಬರುವ ಭಾರ್ಗವಿ ಯಾರ ಜೊತೆ ಮಾತನಾಡುತ್ತಿದ್ದೀಯಾ ಎಂದು ಕೇಳುತ್ತಾಳೆ. ಆಕಾಶ್‌ ಜೊತೆ ಮಾಮ್‌, ಅವರು ನನ್ನ ಎಷ್ಟು ಕೇರ್‌ ಮಾಡ್ತಾರೆ ಗೊತ್ತಾ ಎಂದು ಖುಷಿಯಿಂದ ಹೇಳುತ್ತಾಳೆ. ಆಗ ಭಾರ್ಗವಿ ಪ್ರೀತಿ ಇದ್ದಲ್ಲಿ ಕಾಳಜಿ ಇದ್ದೇ ಇರುತ್ತದೆ. ಈಗ ನೀನು ಮಲ್ಕೊ ಎಂದು ಅಲ್ಲಿಂದ ಹೊರಡುತ್ತಾಳೆ. ಆಗ ಭಾಸ್ಕರ ಭಾರ್ಗವಿಯ ಬಳಿ ಅಕ್ಕಯ್ಯ ಒಂದು ವೇಳೆ ಸಹನಾಗೆ ನೀನು ಹೇಳಿರುವ ಸುಳ್ಳುಗಳೆಲ್ಲಾ ಗೊತ್ತಾದ್ರೆ ಏನ್‌ ಮಾಡ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಭಾರ್ಗವಿ ಇನ್ನಾರು ಸತ್ಯ ಗೊತ್ತಾಗುವಷ್ಟರಲ್ಲಿ ನನಗೆ ಏನು ಬೇಕೋ ಅದು ಸಿಕ್ಕಿರುತ್ತದೆ, ನಾನು ಅಂದುಕೊಂಡಿದ್ದನ್ನು ನಾನು ಮಾಡಿರುತ್ತೇನೆ. ಆಮೇಲೆ ಏನಾಗುತ್ತೋ ನೋಡೋಣ ಎಂದು ಸದ್ಯಕ್ಕೆ ತಾನು ಗೆದ್ದಿದ್ದೇನೆ. ಸಹನಾ ಆಕಾಶ್‌ ಪ್ರೀತಿಯೇ ತನ್ನ ಗೆಲುವಿನ ಅಸ್ತ್ರ ಎಂದುಕೊಂಡು ಬೀಗುತ್ತಿದ್ದಾಳೆ ಭಾರ್ಗವಿ.

ಆಕಾಶ್‌ ಮನೆಗೆ ಕುಡಿದು ಬರುವ ಸುನಾಮಿ

ಮಾತಿನ ಮಧ್ಯದಲ್ಲೇ ಫೋನ್‌ ಸ್ವಿಚ್‌ ಆಫ್‌ ಆಗುವ ಕಾರಣ ಸಹನಾಗೆ ಸತ್ಯ ತಿಳಿಯಿತೋ ಇಲ್ಲವೋ ಎಂದು ಗೊಂದಲಕ್ಕೆ ಸಿಲುಕುವ ಸುನಾಮಿ ನೇರವಾಗಿ ಆಕಾಶ್‌ ಮನೆಗೆ ಹೋಗುವ ನಿರ್ಧಾರ ಮಾಡುತ್ತಾನೆ. ರಾತ್ರೋರಾತ್ರಿ ಆಕಾಶ್‌ ಮನೆಗೆ ಬರುವ ಸುನಾಮಿ ಮನೆಯ ಎಲ್ಲರ ಎದುರು ಆಕಾಶ್‌ನ ಒಳ್ಳೆಯ ಗುಣ ಬಗ್ಗೆ ಹೊಗಳುತ್ತಾನೆ. ಬೃಂದಾವನದ ಗುಣಗಾನ ಮಾಡುತ್ತಾನೆ. ಪುಷ್ಪಾಳನ್ನು ನೋಡಿ ನೀನು ದೇವತೆ ಎಂದು ಹೊಗುತ್ತಾಳೆ. ಆಕಾಶ್‌-ಸಹನಾ ಪ್ರೀತಿಯ ಬಗ್ಗೆ ಒಗಟಾಗಿ ಹೇಳುವ ಸುನಾಮಿಯ ಮಾತಿಗೆ ಆಕಾಶ್‌ ಮಧ್ಯೆ ಮಧ್ಯೆ ಅಡ್ಡ ಬರುತ್ತಾನೆ. ಆದರೂ ಬಿಡದ ಸುನಾಮಿ ಎಂದು ಸತ್ಯವನ್ನು ಹೇಳಲೇಬೇಕು ಎಂದು ನಿರ್ಧಾರ ಮಾಡುತ್ತಾನೆ.

ಸುನಾಮಿ ಬೃಂದಾವನದ ಎದುರು ಆಕಾಶ್‌-ಸಹನಾ ಬಗ್ಗೆ ಹೇಳುತ್ತಾನಾ, ಸಹನಾ ಸುನಾಮಿ ಹೇಳಿದ್ದ ಸತ್ಯ ಕೇಳಿಸಿಕೊಂಡಿರುತ್ತಾಳಾ, ಭಾರ್ಗವಿಗೆ ನಿಜಕ್ಕೂ ಗೆಲುವಾಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point