ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸುನಾಮಿಯನ್ನು ತಡೆದು ಸತ್ಯ ಮುಚ್ಚಿಟ್ಟ ಆಕಾಶ್‌, ಗಂಡನ ಮೇಲಿನ ನಂಬಿಕೆಯೇ ಪುಷ್ಪಾ ಬಾಳಿಗೆ ಮುಳುವಾಗುತ್ತಾ?

Brundavana Serial: ಸುನಾಮಿಯನ್ನು ತಡೆದು ಸತ್ಯ ಮುಚ್ಚಿಟ್ಟ ಆಕಾಶ್‌, ಗಂಡನ ಮೇಲಿನ ನಂಬಿಕೆಯೇ ಪುಷ್ಪಾ ಬಾಳಿಗೆ ಮುಳುವಾಗುತ್ತಾ?

Brindavana Kannada Serial Today Episode May 6th: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಕುಡಿದ ಮತ್ತಿನಲ್ಲಿ ಒಗಟೊಗಟಾಗಿ ಮಾತನಾಡುವ ಸುನಾಮಿ ಕೊನೆಗೂ ವಿಷಯ ಹೇಳುವುದಿಲ್ಲ. ಅವನನ್ನು ತಡೆಯುವ ಆಕಾಶ್‌ ಮನೆಯವರಿಂದ ಬಚಾವ್‌ ಆಗುತ್ತಾನೆ. ಪುಷ್ಪಾ ಗಂಡನ ಮೇಲಿಟ್ಟ ಅತಿಯಾದ ನಂಬಿಕೆಯೇ ಅವಳ ಬದುಕಿಗೆ ಮುಳ್ಳಾಗುವುದೇ?

ಸುನಾಮಿಯನ್ನು ತಡೆದು ಸತ್ಯ ಮುಚ್ಚಿಟ್ಟ ಆಕಾಶ್‌, ಗಂಡ ಮೇಲಿನ ನಂಬಿಕೆಯೇ ಪುಷ್ಪಾಗೆ ಮುಳುವಾಗುವುದೇ?
ಸುನಾಮಿಯನ್ನು ತಡೆದು ಸತ್ಯ ಮುಚ್ಚಿಟ್ಟ ಆಕಾಶ್‌, ಗಂಡ ಮೇಲಿನ ನಂಬಿಕೆಯೇ ಪುಷ್ಪಾಗೆ ಮುಳುವಾಗುವುದೇ?

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 6) ಸಂಚಿಕೆಯಲ್ಲಿ ಸುನಾಮಿ ಒಂದೇ ಸಲಕ್ಕೆ ಇಬ್ಬರ ಜೊತೆ ಸಂಬಂಧ ಅಂತೆಲ್ಲಾ ಹೇಳಿದರೂ ಮನೆಯವರಿಗೆ ಅರ್ಥವಾಗುವುದಿಲ್ಲ. ಕುಡಿದ ಮತ್ತಿನಲ್ಲಿ ಮಾತನಾಡುವ ಸುನಾಮಿ ಸಂಪೂರ್ಣ ಒಗಟೊಟಾಗಿ ಮಾತನಾಡುತ್ತಾನೆ. ಒಂದೇ ಫೋನ್‌ನಲ್ಲಿ ಎರಡು ಸಿಮ್‌ ಹಾಕಿ ಮಾತನಾಡಲು ಸಾಧ್ಯವೇ, ಎರಡು ದೋಣಿಯ ಮೇಲೆ ಕಾಲಿಟ್ಟು ಪ್ರಯಾಣ ಮಾಡಲು ಸಾಧ್ಯವೇ ಎಂದೆಲ್ಲಾ ಹೇಳಿ ಗೊಂದಲ ಮೂಡಿಸುತ್ತಾನೆ ಹೊರತು ಇರುವ ವಿಷಯವನ್ನು ಹೇಳುವುದಿಲ್ಲ. ಇನ್ನು ಸುನಾಮಿಗೆ ಮಾತನಾಡಲು ಬಿಟ್ಟರೆ ಕಷ್ಟವಾಗುವುದು ಎಂಬುದನ್ನು ಅರಿತ ಆಕಾಶ್‌ ಆತನನ್ನು ತಡೆದು ನೀನು ಮನೆಗೆ ಹೋಗು ನಾನೇ ಎಲ್ಲ ಸತ್ಯವನ್ನು ಮನೆಯವರ ಮುಂದೆ ಹೇಳುತ್ತೇನೆ ಎಂದು ಹಠ ಹಿಡಿಯುತ್ತಾನೆ. ಆದರೆ ಸತ್ಯಮೂರ್ತಿಯವರಿಗೆ ಇದರಿಂದ ಅನುಮಾನ ಮೂಡಿ ಸುನಾಮಿ ಬಳಿಯೇ ಎಲ್ಲವನ್ನೂ ಹೇಳುವಂತೆ ಕೇಳುತ್ತಾರೆ. ಆಗ ಆಕಾಶ್‌ ನಾನೇ ಎಲ್ಲವನ್ನೂ ಕ್ಲಿಯರ್‌ ಮಾಡುತ್ತೇನೆ ಎಂದು ಮತ್ತೆ ಮತ್ತೆ ಹೇಳಿ ಸುನಾಮಿಯನ್ನು ಅಲ್ಲಿಂದ ಸಾಗ ಹಾಕುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಸಹನಾಗೆ ಸತ್ಯ ಹೇಳಿ ಬಿಟ್ಟೆ ಎನ್ನುವ ಸುನಾಮಿ

ಹಾಗೂ ಹೀಗೂ ಮಾಡಿ ಸುನಾಮಿಯನ್ನು ಮನೆಯಿಂದ ಹೊರ ಕರೆ ತರುವ ಆಕಾಶ್‌ ಬಳಿ ಸುನಾಮಿ ನನಗೆ ಈ ನೆಮ್ಮದಿ ಅನ್ನಿಸ್ತಾ ಇದೆ ಗೆಳೆಯಾ, ನಾನು ಸಹನಾಗೆ ನಿಂಗೆ ಮದುವೆಯಾಗಿರುವ ವಿಚಾರ ಕಾಲ್‌ ಮಾಡಿ ಹೇಳಿದೆ, ಈಗ ನಿಮ್ಮ ಮನೆಯವರಿಗೂ ತಿಳಿಯಿತು. ಈಗ ನಂಗೆ ಖುಷಿ ಅನ್ನಿಸ್ತಾ ಇದೆ, ನಾನು ಇಬ್ಬರು ಹೆಣ್ಣುಮಕ್ಕಳ ಜೀವನ ಹಾಳಾಗೋದು ತಪ್ಪಿಸಿದೆ ಎಂದು ಕುಡಿದ ಮತ್ತಿನಲ್ಲೇ ಬಡಬಡಿಸುತ್ತಾನೆ. ಅವನ ಮಾತು ಕೇಳಿ ಶಾಕ್‌ ಆಗುವ ಆಕಾಶ್‌ ತಕ್ಷಣಕ್ಕೆ ಸಹನಾಗೆ ಕಾಲ್‌ ಮಾಡಿ ಮಾತನಾಡುತ್ತಾನೆ, ಆದರೆ ಸುನಾಮಿ ಹೇಳಿದ್ದು ಯಾವುದೂ ಸಹನಾ ಕೇಳಿಸಿಕೊಂಡಿಲ್ಲ, ಮಧ್ಯೆದಲ್ಲೇ ಫೋನ್‌ ಕಾಲ್‌ ಕಟ್‌ ಆಗಿತ್ತು ಎನ್ನುವ ವಿಚಾರ ತಿಳಿದ ಆಕಾಶ್‌ ನೆಮ್ಮದಿಯಿಂದ ಉಸಿರಾಡುತ್ತಾನೆ.

ಮನೆಯವರಿಗೆ ಆಕಾಶ್‌ ಮೇಲೆ ಬೆಟ್ಟದಷ್ಟು ನಂಬಿಕೆ

ಸುನಾಮಿಯನ್ನು ಡ್ರಾಪ್‌ ಮಾಡಿ ಬರಲು ಆಕಾಶ್‌ ಹೊರಟಾಗ, ಸತ್ಯಮೂರ್ತಿ ಮನೆಯವರ ಮುಂದೆ ಆಕಾಶ್‌ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ, ಅವನಿಗೆ ಕಾಲೇಜಿನಲ್ಲಿ ಬೇರೆ ಹುಡುಗಿ ಮೇಲೆ ಪ್ರೀತಿಯಾಗಿದೆ, ಅದನ್ನೇ ಸುನಾಮಿ ಹೇಳಿದ್ದು ಎಂದು ಮನೆಯವರ ಮುಂದೆ ಹೇಳುತ್ತಾರೆ. ಆದರೆ ಎಂದಿನಿಂತೆ ಎಲ್ಲರೂ ಸತ್ಯಮೂರ್ತಿಗೆ ಬಯ್ಯುತ್ತಾರೆ, ಮಾತ್ರವಲ್ಲ ಆಕಾಶ್‌ ಮೇಲಿನ ಬೆಟ್ಟದಷ್ಟು ನಂಬಿಕೆಯನ್ನು ಮಾತಿನ ಮೂಲಕ ಹೊರ ಹಾಕುತ್ತಾರೆ. ಆ ಕ್ಷಣಕ್ಕೆ ಮನೆಯವರಿಂದ ತಪ್ಪಿಸಿಕೊಳ್ಳಲು ಆಕಾಶ್‌ ತನ್ನ ಗೆಳೆಯನೊಬ್ಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಅವನು ನಮ್ಮ ವಿರುದ್ಧ ಗ್ಯಾಂಗ್‌ನವನು ಎಂದೆಲ್ಲಾ ಸುಳ್ಳು ಹೇಳುತ್ತಾನೆ. ಮನೆಯವರು ಆಕಾಶ್‌ ಮಾತನ್ನು ನಂಬುತ್ತಾರೆ.

ಗಂಡನ ಮೇಲೆ ಪುಷ್ಪಾಗಿಲ್ಲ ಅನುಮಾನ

ಎಲ್ಲವೂ ತಿಳಿಯಾಗಿ ಕೋಣೆಗೆ ಬರುವ ಆಕಾಶ್‌ ತಾನು ಸ್ನೇಹಿತ ಎಂದು ಹೇಳಿದ ಕಾರಣಕ್ಕಾಗಿ ಮನೆಯವರೆಲ್ಲಾ ಅವನ ಜೊತೆ ಚೆನ್ನಾಗಿರು, ಅವನನ್ನು ಪ್ರೀತಿಯಿಂದ ನೋಡಿಕೋ ಎಂದು ಹೇಳಿದರು, ಅದೇ ನಾನು ಸಹನಾ ವಿಷ್ಯಾ ಹೇಳಿದ್ರೆ ಯಾರೂ ಅದಕ್ಕೆ ಒಪ್ತಾ ಇರ್ಲಿಲ್ಲಾ, ನಾನು ಎಲ್ಲರಿಗೂ ಮೋಸ ಮಾಡ್ತಾ ಇದೀನಿ, ಮೊದಲು ಈ ವಿಚಾರವನ್ನು ಪುಷ್ಪಾಗೆ ಹೇಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಆದರೆ ಆಗ ಅಲ್ಲಿಗೆ ಬರುವ ಪುಷ್ಪಾ ನೀವು ಈ ವಿಚಾರವನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ, ಆಗ ಅವರು ಒಪ್ಪಿಕೊಳ್ತಾರೆ, ಅವರು ಕೂಡ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಿಮ್ಮ ಗೆಳೆಯನನ್ನು ತಮ್ಮವರಂತೆ ನೋಡಿಕೊಳ್ಳುತ್ತಾರೆ ಎಂದು ಸಲಹೆ ನೀಡುತ್ತಾಳೆ.

ಆಕಾಶ್‌ ಮೇಲೆ ಮನೆಯವರಿಟ್ಟ ನಂಬಿಕೆಯೇ ಬೃಂದಾವನದ ನೆಮ್ಮದಿ ಕೆಡಿಸುವ ಅಸ್ತ್ರವಾಗುವುದೇ, ಪುಷ್ಪಾಳಿಗೆ ಆಕಾಶ್‌ ನಿಜಕ್ಕೂ ಮೋಸ ಮಾಡ್ತಾನಾ, ಸಹನಾಳಿಗೆ ತಾನು ಹೇಳಿದ್ದು ಕೇಳಿಸಿಲ್ಲ ಎಂದು ಸುನಾಮಿಗೆ ತಿಳಿದ್ರೆ ಮತ್ತೆ ಸತ್ಯ ಹೇಳುವ ಪ್ರಯತ್ನ ಮಾಡ್ತಾನಾ? ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಯನ್ನು ನಿರೀಕ್ಷಿಸಿ.

IPL_Entry_Point