ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸುಳ್ಳು ಹೇಳಿ ಪ್ರೀತಿಗೆ ಒಪ್ಪಿಸಿದ್ದಾಯ್ತು, ಆಕಾಶ್‌ ಜೊತೆ ಸಹನಾಳ ಮದುವೆ ಪ್ಲಾನ್‌ ಮಾಡುತ್ತಿರುವ ಭಾರ್ಗವಿ

Brundavana Serial: ಸುಳ್ಳು ಹೇಳಿ ಪ್ರೀತಿಗೆ ಒಪ್ಪಿಸಿದ್ದಾಯ್ತು, ಆಕಾಶ್‌ ಜೊತೆ ಸಹನಾಳ ಮದುವೆ ಪ್ಲಾನ್‌ ಮಾಡುತ್ತಿರುವ ಭಾರ್ಗವಿ

Brindavana Kannada Serial Today Episode May 7th: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಹೆಂಡತಿಯ ಬಳಿ ಮುತ್ತಿನ ಬೇಡಿಕೆ ಇಡುತ್ತಿರುವ ಆಕಾಶ್‌, ಅತ್ತ ಸಹನಾ ತಲೆಯಲ್ಲಿ ಮದುವೆ ಆಸೆ ಹುಟ್ಟಿಸುತ್ತಿರುವ ಭಾರ್ಗವಿ. ಸಹನಾಗೆ ಹೇಗಾದ್ರೂ ವಿಷ್ಯ ಹೇಳಿ ಆಕಾಶ್‌ನಿಂದ ದೂರ ಮಾಡ್ಬೇಕು ಅಂತಿದ್ದಾನೆ ಸುನಾಮಿ.

ಸುಳ್ಳು ಹೇಳಿ ಪ್ರೀತಿಗೆ ಒಪ್ಪಿಸಿದ್ದಾಯ್ತು, ಆಕಾಶ್‌ ಜೊತೆ ಸಹನಾಳ ಮದುವೆ ಪ್ಲಾನ್‌ ಮಾಡುತ್ತಿರುವ ಭಾರ್ಗವಿ
ಸುಳ್ಳು ಹೇಳಿ ಪ್ರೀತಿಗೆ ಒಪ್ಪಿಸಿದ್ದಾಯ್ತು, ಆಕಾಶ್‌ ಜೊತೆ ಸಹನಾಳ ಮದುವೆ ಪ್ಲಾನ್‌ ಮಾಡುತ್ತಿರುವ ಭಾರ್ಗವಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 7) ಸಂಚಿಕೆಯಲ್ಲಿ ಆಫೀಸಿಗೆ ಹೊರಟು ರಾಘು ರತ್ನಾಳ ಬಳಿ ಮುತ್ತು ಕೇಳುತ್ತಾನೆ. ಬೆಳಿಗ್ಗೆಯಿಂದ ಸಂಜೆವರೆಗೆ ಎನರ್ಜಿ ಇರಬೇಕು ಅಂದ್ರೆ ಮುತ್ತು ಬೇಕು ಎಂದು ಸರಸ-ಸಲ್ಲಾಪದಲ್ಲಿ ತೊಡಗಿದ್ದ ರಾಘ ಹಾಗೂ ರತ್ನಳನ್ನು ನೋಡುವ ಆಕಾಶ್‌ಗೆ ತನಗೂ ಮುತ್ತು ಬೇಕು ಎಂದು ಬಯಕೆ ಮೂಡುತ್ತದೆ. ಹೇಗಾದ್ರೂ ಇವತ್ತು ಪುಷ್ಪಾಳ ಬಳಿ ಮುತ್ತು ಪಡೆಯಬೇಕು ಎಂದು ಹೊರಡುತ್ತಾನೆ ಆಕಾಶ್‌. ಅಡುಗೆಮನೆಯಲ್ಲಿ ಇರುವ ಪುಷ್ಪಾಳ ಬಳಿಗೆ ಹೋಗುವ ಆತ ನನಗೆ ಏನೋ ಬೇಕಿತ್ತು ಎನ್ನುತ್ತಾರೆ, ಆದರೆ ಏನು ಎಂದು ಬಾಯಿ ಬಿಟ್ಟು ಹೇಳುವುದಿಲ್ಲ. ಸಮುದ್ರದೊಳಗೆ ಇರುವುದು ಅದು ಇದು ಹೇಳಿ ಪುಷ್ಪಾಳಗೆ ತಿಳಿದುಕೊಳ್ಳುವಂತೆ ಮಾಡುತ್ತಾನೆ. ಆದರೆ ಪುಷ್ಪಾಗೆ ಅವನು ಏನು ಹೇಳುತ್ತಿದ್ದಾನೆ ಅರ್ಥವಾಗುವುದಿಲ್ಲ. ಕೊನೆಗೆ ಇಲ್ಲದ ಸರ್ಕಸ್‌ ಮಾಡಿದ್ರು ಪುಷ್ಪಾಗೆ ಅರ್ಥವಾಗುವುದಿಲ್ಲ. ಅನುಪಮಾ ಪುಷ್ಪಾಳನ್ನು ದೇವಸ್ಥಾನಕ್ಕೆ ಕರೆಯಲು ಅಡುಗೆಮನೆಗೆ ಬಂದಾಗ ಕರ್ಚಿಫ್‌ ಸಿಕ್ಕಿಲ್ಲ ಎಂದು ಹೇಳಿ ಪುಷ್ಪಾಳನು ರೂಮಿಗೆ ಕಳುಹಿಸುತ್ತಾನೆ, ಕರ್ಚೀಫ್‌ ಹುಡುಕುತ್ತಿರುವ ಪುಷ್ಪಾಳ ಬಳಿ ಹೋಗುವ ಆಕಾಶ್‌ ಅಲ್ಲೂ ಮುತ್ತಿನ ಬೇಡಿಕೆ ಇಡುತ್ತಾನೆ. ಆಕಾಶ್‌ ಪುಷ್ಪಾ ಜೊತೆ ಒಂದಾಗುವ ಸಮಯದಲ್ಲೇ ಭಾರ್ಗವಿ ಆಕಾಶ್‌ಗೆ ಸಹನಾ ಜೊತೆ ಮದುವೆ ಮಾಡಿಸುವ ಪ್ಲಾನ್‌ ಮಾಡುತ್ತಾಳೆ. 

ಟ್ರೆಂಡಿಂಗ್​ ಸುದ್ದಿ

ಸಹನಾ ಮನದಲ್ಲಿ ಮದುವೆ ಆಸೆ ಹುಟ್ಟಿಸುವ ಭಾರ್ಗವಿ

ಕಾಲೇಜಿಗೆ ಹೋಗುವಾಗ ತಾನು ಆಕಾಶ್‌ಗೆ ಕೊಟ್ಟ ಗಿಫ್ಟ್‌ ಬಾಕ್ಸ್‌ನಿಂದ ಕುಂಕುಮ ಹಚ್ಚಿಕೊಂಡು ಖುಷಿಪಡುವ ಸಹನಾಳನ್ನ ನೋಡುವ ಭಾರ್ಗವಿ ʼಸ್ವೀಟಿ ಈ ತಾಳಿಯನ್ನ ಆಕಾಶ್‌ ನಿನ್ನ ಕೊರಳಿಗೆ ಕಟ್ಟಿದಾಗಷ್ಟೇ ಅವನು ನಿನ್ನ ಹಣೆಗೆ ಕುಂಕುಮ ಹಚ್ಚಲು ಸಾಧ್ಯ, ನಿಂಗೆ ಬಳೆ ತೊಡಿಸಲು ಸಾಧ್ಯ. ಅದಕ್ಕಾಗಿ ನೀನು ಆಕಾಶ್‌ನನ್ನು ಆದಷ್ಟು ಬೇಗ ಮದುವೆ ಆಗಬೇಕು. ನೀನು ಅವನನ್ನು ಮದುವೆ ಆಗಬೇಕು ಅಂದ್ರೆ ಪ್ರತಿದಿನ, ಪ್ರತಿಕ್ಷಣ ಅವನ ಜೊತೆಗೆ ಇರಬೇಕು. ಅವನ ಹಿಂದೆ ಮುಂದೆ ಸುತ್ತುತ್ತಿರಬೇಕು. ಆಕಾಶ್‌ಗೆ ನಿನ್ನನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಹತ್ತಿರ ಆಗಬೇಕುʼ ಎಂದೆಲ್ಲಾ ತಲೆ ಕೆಡಿಸುವ ಜೊತೆಗೆ ಮದುವೆ ಆಸೆಯನ್ನೂ ಹುಟ್ಟುಹಾಕುತ್ತಾಳೆ. ಇದಕ್ಕೆ ಮಾಮ ಭಾಸ್ಕರ ಕೂಡ ಒಗ್ಗರಣೆ ಹಾಕುತ್ತಾನೆ.

ಸಹನಾಳಿಗೆ ವಿಷಯ ತಿಳಿಸುವ ಪ್ರಯತ್ನದಲ್ಲಿ ಸುನಾಮಿ

ಕುಡಿದ ನಶೆ ಇಳಿದ ಸುನಾಮಿಗೆ ತಾನು ನಿನ್ನೆ ಸಹನಾಗೆ ಫೋನ್‌ ಮಾಡಿ ವಿಷಯ ಹೇಳಿದಾಗ ತನ್ನ ಫೋನ್‌ ಸ್ವಿಚ್‌ ಆಫ್‌ ಆಗಿದ್ದು ಅರಿವಾಗುತ್ತದೆ. ಮಾತ್ರವಲ್ಲ ನಾನು ಹೇಳಿದ್ದು ಸಹನಾ ಕೇಳಿಸಿಕೊಂಡಿಲ್ಲ ಎಂಬುದು ಅರ್ಥವಾಗುತ್ತದೆ. ಜೊತೆಗೆ ಆಕಾಶ್‌ ಕೂಡ ಇರುವ ವಿಷಯವನ್ನು ಮನೆಯಲ್ಲಿ ಹೇಳಲು ಬಿಟ್ಟಿಲ್ಲ ಎಂಬ ಸತ್ಯ ಕೂಡ ಸುನಾಮಿಗೆ ಅರ್ಥವಾಗುತ್ತದೆ. ಅದಕ್ಕೆ ಸಹನಾ ಬಳಿ ಹೋಗಿ ಎಲ್ಲಾ ವಿಷಯವನ್ನು ಕ್ಲಿಯರ್‌ ಮಾಡುತ್ತೇನೆ ಎಂದು ನಿರ್ಧಾರ ಮಾಡುತ್ತಾನೆ ಸುನಾಮಿ.

ಸುನಾಮಿ ಹೇಳುವ ಮಾತನ್ನು ಸಹನಾ ಕೇಳಿಸಿಕೊಳ್ಳುತ್ತಾಳಾ, ಮಗಳ ಮನದಲ್ಲಿ ಮದುವೆ ಆಸೆ ಹುಟ್ಟಿಸಿ, ಆಕಾಶ್‌ ಜೀವನ ಹಾಳು ಮಾಡುವ ಭರದಲ್ಲಿ ತನ್ನ ಮಗಳ ಬದುಕನ್ನೇ ಹಾಳು ಮಾಡುತ್ತಿದ್ದಾಳ ಭಾರ್ಗವಿ, ಬೃಂದಾವನಕ್ಕೆ ನಿಜಕ್ಕೂ ಕೆಡುಕಾಗುವುದಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point