ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಆಕಾಶ್‌-ಪುಷ್ಪಾ ನಡುವೆ ಪ್ರೀತಿ ಚಿಗುರುವ ಹೊತ್ತಿನಲ್ಲೇ ಸಹನಾ ಮುಂದೆ ಸತ್ಯ ಬಿಚ್ಚಿಟ್ಟ ಸುನಾಮಿ

Brundavana Serial: ಆಕಾಶ್‌-ಪುಷ್ಪಾ ನಡುವೆ ಪ್ರೀತಿ ಚಿಗುರುವ ಹೊತ್ತಿನಲ್ಲೇ ಸಹನಾ ಮುಂದೆ ಸತ್ಯ ಬಿಚ್ಚಿಟ್ಟ ಸುನಾಮಿ

Brindavana Kannada Serial Today Episode May 8th: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಆಕಾಶ್‌-ಪುಷ್ಪಾ ನಡುವೆ ಸರಸ ಸಲ್ಲಾಪ, ಸುನಾಮಿ ಮುಂದೆ ಮನದ ಮಾತು ಹೇಳಿಕೊಂಡ ಮಿಂಚು. ಇತ್ತ ಸಹನಾ ಮುಂದೆ ಸತ್ಯದ ಎಳೆ ಎಳೆಯನ್ನು ಬಿಚ್ಚಿಡುತ್ತಿದ್ದಾನೆ ಸುನಾಮಿ.

ಆಕಾಶ್‌-ಪುಷ್ಪಾ ನಡುವೆ ಪ್ರೀತಿ ಚಿಗುರುವ ಹೊತ್ತಿನಲ್ಲೇ ಸಹನಾ ಮುಂದೆ ಸತ್ಯ ಬಿಚ್ಚಿಟ್ಟ ಸುನಾಮಿ
ಆಕಾಶ್‌-ಪುಷ್ಪಾ ನಡುವೆ ಪ್ರೀತಿ ಚಿಗುರುವ ಹೊತ್ತಿನಲ್ಲೇ ಸಹನಾ ಮುಂದೆ ಸತ್ಯ ಬಿಚ್ಚಿಟ್ಟ ಸುನಾಮಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 8) ಸಂಚಿಕೆಯಲ್ಲಿ ಕರ್ಚಿಫ್‌ ವಿಚಾರದಲ್ಲಿ ಹೆಂಡತಿಯನ್ನು ರೂಮಿಗೆ ಕಳುಹಿಸಿ, ತಾನು ಬರುವ ಆಕಾಶ್‌ ಮುತ್ತಿಗಾಗಿ ಬೇಡಿಕೆ ಇಡುತ್ತಾನೆ. ಮುತ್ತಿಗೆ ಎನರ್ಜಿ ಬೂಸ್ಟರ್‌ ಎಂದು ಕರೆಯುವ ಆಕಾಶ್‌, ತಾನು ಕಾಲೇಜಿನಲ್ಲಿ ದಿನವಿಡೀ ಎನರ್ಜಿಯಿಂದ ಇರಲು ತನಗೆ ಪುಷ್ಪಾಳಿಂದ ಎನರ್ಜಿ ಬೂಸ್ಟರ್‌ ಬೇಕೆಂದು ಬೇಡಿಕೆ ಇಡುತ್ತಾನೆ. ಇದಕ್ಕೆ ಒಪ್ಪದ ಪುಷ್ಪಾ ಹಿಂದಕ್ಕೆ ಹಿಂದಕ್ಕೆ ಹೋಗಿ ಹಾಸಿಗೆಯ ಮೇಲೆ ಬೀಳುತ್ತಾಳೆ. ಆಗ ಹುಡುಗಿಯೊಬ್ಬಳು ಜೋರಾಗಿ ಕೂಗಿಕೊಳ್ಳುತ್ತಾಳೆ. ಅದಕ್ಕೆ ಕಾರಣ ಬೆಡ್‌ಶೀಟ್‌ ಅಡಿ ಹುಡುಗಿಯೊಬ್ಬಳು ಅವಿತು ಕುಳಿತಿರುತ್ತಾಳೆ. ಮಕ್ಕಳೆಲ್ಲಾ ಸೇರಿ ಆಟವಾಡುವಾಗ ಅನುಪಮಾಳ ಮಗಳು ಹಾಸಿಗೆ ಮೇಲೆ ಬೆಡ್‌ಶೀಟ್‌ ಅಡಿ ಅವಿತು ಕೂತಿರುವುದನ್ನು ಪುಷ್ಪಾ-ಆಕಾಶ್‌ ಗಮನಿಸಿರುವುದಿಲ್ಲ. ಕೊನೆಗೆ ಆಕಾಶ್‌ಗೆ ಮುತ್ತು ನೀಡದೇ ಕಾಲೇಜಿಗೆ ಕಳುಹಿಸುತ್ತಾಳೆ ಪುಷ್ಪಾ.

ಟ್ರೆಂಡಿಂಗ್​ ಸುದ್ದಿ

ಸುನಾಮಿ ಮುಂದೆ ಮನದ ಮಾತು ಹೇಳಿಕೊಂಡ ಮಿಂಚು

ಕುಡಿದ ಮತ್ತೆಲ್ಲಾ ಇಳಿದು ಕಾಲೇಜಿಗೆ ಬರುವ ಸುನಾಮಿ ಇಂದು ಹೇಗಾದ್ರೂ ಸಹನಾ ಮುಂದೆ ಎಲ್ಲಾ ಸತ್ಯವನ್ನು ಹೇಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಸಹನಾಗಾಗಿ ಕಾಯುತ್ತಿರುವ ಹೊತ್ತಿನಲ್ಲಿ ಅಲ್ಲಿಗೆ ಮಿಂಚು ಬರುತ್ತಾಳೆ. ಸುನಾಮಿ ಬಳಿ ಕುಡಿದಿದ್ದು ಯಾಕೆ, ಕುಡಿಯುವಂಥದ್ದ ಏನಾಯ್ತು ಅದು ಇದು ಪ್ರಶ್ನಿಸುತ್ತಾಳೆ. ಆಗ ಕೋಪಗೊಳ್ಳುವ ಸುನಾಮಿ ನನ್ನ ಇಷ್ಟ ನಾನು ಏನ್‌ ಬೇಕಾದ್ರೂ ಮಾಡ್ತೀನಿ, ಅದನ್ನ ಕೇಳೋಕೆ ನೀನ್ಯಾರು ಎಂದು ಪ್ರಶ್ನೆ ಮಾಡುತ್ತಾನೆ. ಆಗ ಸುನಾಮಿ ನಾನು ಒಬ್ಬ ಒಳ್ಳೆಯ ಸ್ನೇಹಿತೆಯಾಗಿ, ನಿಮ್ಮ ಮೇಲಿನ ಕಾಳಜಿಯಿಂದ ಹೇಳ್ತಾ ಇರೋದು ಎನ್ನುತ್ತಾಳೆ. ಅದಕ್ಕೆ ಸುನಾಮಿ ಕಾಳಜಿ ಬೇಡ, ಏನೂ ನಂಗೆ ಈಗ ಸಹನಾ ಬೇಕು, ಸಹನಾ ಬಳಿ ಎಲ್ಲ ಸತ್ಯ ಹೇಳಬೇಕು ಎಂದು ರೋಷದಿಂದ ಮಾತನಾಡುತ್ತಾನೆ. ಆಗ ಮಿಂಚು ಎಲ್ಲರ ಮೇಲೂ ಕಾಳಜಿ ಬರುವುದಿಲ್ಲ. ನಮ್ಮ ಮನಸ್ಸಿಗೆ ಇಷ್ಟವಾದವರ ಮೇಲಷ್ಟೇ ಕಾಳಜಿ ಮೂಡೋದು ಎಂದು ಸುನಾಮಿ ತನಗೆ ಇಷ್ಟ ಎಂದು ಇನ್‌ಡೈರೆಕ್ಟ್‌ ಆಗಿ ಹೇಳುತ್ತಾಳೆ. ಅದಕ್ಕೆ ಬೈಯ್ಯುವ ಸುನಾಮಿ ಮೊದಲು ಸಹನಾ ವಿಷ್ಯಾ ಕ್ಲಿಯರ್‌ ಮಾಡಿ, ಆಮೇಲೆ ನಿನ್ನ ವಿಷಯಕ್ಕೆ ಬರುತ್ತೇನೆ ಎಂದು ಹೇಳುತ್ತಾನೆ.

ಫೋನ್‌ನಲ್ಲಿ ಮುತ್ತು ನೀಡುವ ಪುಷ್ಪಾ

ಆಕಾಶ್‌ಗೆ ಮುತ್ತು ನೀಡಿಲ್ಲ ಎಂದು ಬೇಸರ ಮಾಡಿಕೊಳ್ಳುವ ಪುಷ್ಪಾ ಅವನಿಗೆ ಕಾಲ್‌ ಮಾಡುತ್ತಾಳೆ. ಮಾತನಾಡಿ ಸಮಾಧಾನ ಮಾಡಲು ಪ್ರಯತ್ನಿಸುವ ಹೆಂಡತಿಯ ಮೇಲೆ ಹುಸಿ ಮುನಿಸು ತೋರುತ್ತಾನೆ ಆಕಾಶ್‌. ಕೊನೆಗೆ ಪುಷ್ಪಾ ಗಂಡನಿಗೆ ಫೋನ್‌ನಲ್ಲೇ ಮುತ್ತು ನೀಡಿ ಸಮಾಧಾನ ಮಾಡುತ್ತಾಳೆ. ಇತ್ತ ಮಕ್ಕಳು ಪುಷ್ಪಾ-ಆಕಾಶ್‌ ಸರಸ ಸಲ್ಲಾಪವನ್ನು ಎಲ್ಲರೆದುರು ಹೇಳಿ ಮುಜುಗರ ಉಂಟಾಗುವಂತೆ ಮಾಡುತ್ತಾರೆ.

ಸಹನಾ ಮುಂದೆ ಸತ್ಯ ಬಿಚ್ಚಿಡುವ ಸುನಾಮಿ

ಸಹನಾ ಮುಂದೆ ಬರುವ ಸುನಾಮಿ ಸತ್ಯದ ಅನಾವರಣ ಮಾಡಲು ನಿರ್ಧಾರ ಮಾಡುತ್ತಾನೆ. ಆಕಾಶ್‌ ವಿದೇಶದಲ್ಲಿ ಓದುತ್ತಿದ್ದಿದ್ದು, ಆಗ ಅವರ ಮನೆಯವರು ಮದುವೆ ಮಾಡಲು ನಿರ್ಧಾರ ಮಾಡಿದ್ದು, ಆಗ ಪುಷ್ಪಾ ಬದಲು ಸಹನಾ ಫೋಟೊ ಸೆಂಡ್‌ ಆಗಿದ್ದು ಈ ಎಲ್ಲವನ್ನೂ ಹೇಳುತ್ತಾನೆ. ಇನ್ನೇನು ಆಕಾಶ್‌ಗೆ ಮದುವೆಯಾಗಿದೆ ಎಂದು ಹೇಳಬೇಕು ಅನ್ನುವಷ್ಟ್ರರಲ್ಲಿ ಅಲ್ಲಿಗೆ ಬರುವ ಆಕಾಶ್‌ ಸುನಾಮಿಯನ್ನು ಕರೆದುಕೊಂಡು ಹೋಗಿ, ಸತ್ಯ ಹೇಳದಂತೆ ತಡೆಯುತ್ತಾನೆ.

ಸಹನಾಗೆ ಸತ್ಯ ತಿಳಿಯುವುದೇ ಇಲ್ವಾ, ಭಾರ್ಗವಿ ಮಾಡಿದ ಮೋಸಕ್ಕೆ ಸಹನಾ-ಆಕಾಶ್‌ ಇಬ್ಬರ ಬಾಳು ಹಾಳಾಗುತ್ತಾ, ಪುಷ್ಪಾ ಗತಿ ಏನು? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point