ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ಸುನಾಮಿ ಮುಂದೆ ಅನಾವರಣ ಮಾಡಿದ ಆಕಾಶ್‌; ಕೊನೆಗೂ ಸುಳ್ಳಿಗೇ ಗೆಲುವಾಯ್ತಾ?

Brundavana Serial: ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ಸುನಾಮಿ ಮುಂದೆ ಅನಾವರಣ ಮಾಡಿದ ಆಕಾಶ್‌; ಕೊನೆಗೂ ಸುಳ್ಳಿಗೇ ಗೆಲುವಾಯ್ತಾ?

Brindavana Kannada Serial Today Episode May 9th: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಸಹನಾ ಮುಂದೆ ಸತ್ಯ ಹೇಳಲು ಹೊರಟ ಸುನಾಮಿಯನ್ನು ತಡೆದ ಆಕಾಶ್‌ ಆಕೆಗೆ ಬ್ರೈನ್‌ ಟ್ಯೂಮರ್‌ ಇರುವುದನ್ನು ಹೇಳುತ್ತಾನೆ. ಇತ್ತ ಮನೆಗೆ ಬಂದ ಮಂಜುಳಾ ಆಂಟಿ ಮಾತು ತ್ರಿಶೂಲ್‌ ಮನದಲ್ಲಿ ನರ್ಮದಾ ಮೇಲೆ ಅನುಮಾನ ಹುಟ್ಟುಹಾಕಿದೆ.

ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ಸುನಾಮಿ ಮುಂದೆ ಅನಾವರಣ ಮಾಡಿದ ಆಕಾಶ್‌; ಕೊನೆಗೂ ಸುಳ್ಳಿಗೇ ಗೆಲುವಾಯ್ತಾ?
ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ಸುನಾಮಿ ಮುಂದೆ ಅನಾವರಣ ಮಾಡಿದ ಆಕಾಶ್‌; ಕೊನೆಗೂ ಸುಳ್ಳಿಗೇ ಗೆಲುವಾಯ್ತಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 9) ಸಂಚಿಕೆಯಲ್ಲಿ ಸಹನಾ ಮುಂದೆ ಇರುವ ಎಲ್ಲಾ ಸತ್ಯವನ್ನು ಹೇಳಿ ಅವಳಿಂದ ಆಕಾಶ್‌ನನ್ನು ದೂರ ಮಾಡಬೇಕು ಎಂದು ಪಣತೊಟ್ಟು ಮಾತನಾಡುತ್ತಿರುವ ಸುನಾಮಿಯನ್ನು ತಡೆಯುವ ಆಕಾಶ್‌ ಅವನನ್ನು ದೂರ ಕರೆದುಕೊಂಡು ಹೋಗಿ ಮಾತನಾಡುತ್ತಾನೆ. ʼಎಲ್ಲಾ ಗೊತ್ತಿದ್ದು ನೀನು ಹೀಗ್ಯಾಕೆ ಮಾಡ್ತಾ ಇದೀಯಾ, ಬೃಂದವನದಂತಹ ಮನೆಗೆ, ಪುಷ್ಪಾಳಂತಹ ದೇವತೆಯಂತಹ ಹೆಂಡತಿಗೆ ಮೋಸ ಏಕೆ ಮಾಡ್ತಾ ಇದೀಯ? ನೀನು ಸಹನಾ ಮನೆಗೆ ಹೋಗಿ ಅವರ ತಾಯಿ ಎದುರು ನಿನಗೆ ಮದುವೆಯಾಗಿರುವ ವಿಚಾರ ಹೇಳಿದ ಮೇಲೂ ಮತ್ತೆ ಸಹನಾ ಜೊತೆ ಸಲುಗೆಯಿಂದ ಇರುವುದು ಯಾಕೆ?ʼ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ ಸುನಾಮಿ. ಅವರ ಎಲ್ಲಾ ಪ್ರಶ್ನೆಗಳನ್ನು ಸಾಮಾಧಾನದಿಂದ ಕೇಳಿಸಿಕೊಳ್ಳುವ ಆಕಾಶ್‌ ʼನಾನು ಅವರ ಮನೆಗೆ ಹೋಗಿದ್ದು ನಿಜ, ಅವರ ಅಮ್ಮನ ಬಳಿ ಮಾತನಾಡಿದ್ದು ನಿಜ. ಈಗ ಸಹನಾ ಜೊತೆ ಕ್ಲೋಸ್‌ ಇರುವುದು ನಿಜ. ಆದರೆ ನನಗೆ ಸಹನಾ ಮೇಲೆ ಪ್ರೀತಿ ಇಲ್ಲ, ಬದಲಾಗಿ ಪ್ರೀತಿ ಇರುವಂತೆ ನಾಟಕ ಮಾಡುತ್ತಿರುವುದಾಗಿ ಹೇಳುತ್ತಾನೆ. ಅಲ್ಲದೇ ಈ ರೀತಿ ನಾಟಕ ಮಾಡಲು ಸಹನಾ ಅವರ ಅಮ್ಮನೇ ಹೇಳಿದ್ದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸುನಾಮಿ ಇನ್ನಷ್ಟು ರೊಚ್ಚಿಗೇಳುತ್ತಾನೆ. ಸಹನಾ ಅಮ್ಮ (ಭಾರ್ಗವಿ) ಹಾಗೂ ಆಕಾಶ್‌ಗೆ ಸರಿಯಾಗಿ ಬಯ್ಯುತ್ತಾನೆ. ಅದಕ್ಕೆ ಈ ರೀತಿ ನಾಟಕ ಮಾಡುವುದಕ್ಕೆ ಒಂದು ಬಲವಾದ ಉದ್ದೇಶವಿದೆ ಎಂದು ಹೇಳಿ ʼಸಹನಾ ಸಾವು-ಬದುಕಿನ ಮಧ್ಯೆ ಹೋರಾಡ್ತಾ ಇದಾಳೆ, ಅವಳಿನ್ನು ಬದುಕೋದು ಕೇವಲ 6 ತಿಂಗಳು, ಅವಳಿಗೆ ಬ್ರೈನ್‌ ಟ್ಯೂಮರ್‌ ಇದೆʼ ಎಂದು ಭಾರ್ಗವಿ ತನ್ನ ಮುಂದೆ ಕಣ್ಣೀರು ಸುರಿಸಿದ್ದನ್ನು ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಮನೆಗೆ ಬಂದ ಮಂಜುಳಾ ಆಂಟಿ ಮಾಡಿದ್ರು ಯಡವಟ್ಟು

ಬೃಂದಾವನಕ್ಕೆ ಮದುವೆ ಹೇಳಲು ಬರುತ್ತಾರೆ ಮಂಜುಳಾ ಆಂಟಿ. ಅಪರೂಪಕ್ಕೆ ಮನೆಗೆ ಬಂದ ಮಂಜುಳಾ ಅವರನ್ನು ಆತ್ಮೀಯತೆಯಿಂದಲೇ ಸ್ವಾಗತಿಸುತ್ತಾಳೆ ಅನುಪಮಾ. ಎಲ್ಲರೂ ಅವರನ್ನು ಚೆನ್ನಾಗಿ ಮಾತನಾಡಿಸುತ್ತಾರೆ. ಪುಷ್ಪಾ ಅವರಿಗೆ ಊಟ ಮಾಡಿಕೊಂಡೇ ಹೋಗುವಂತೆ ಒತ್ತಾಯ ಹೇರುತ್ತಾಳೆ. ಹೀಗೆ ಮಗನ ಮದುವೆ ಕಾಗದ ಕೊಟ್ಟು ಹೋಗೋಣ ಅಂತ ಬಂದೆ ಎನ್ನುವ ಮಂಜುಳಾಗೆ ʼಕೊನೆಗೂ ಹಿಂದೆ ಆಗಿದ್ದೆಲ್ಲಾ ಮರೆತು ನಮ್ಮ ಮನೆಗೆ ಬಂದ್ರಲ್ಲ, ಅದೇ ಖುಷಿʼ ಎಂದು ಸಂತಸದಿಂದ ಹೇಳುತ್ತಾಳೆ ಅನುಪಮಾ. ಆಗ ಅಲ್ಲಿಗೆ ನರ್ಮದಾ, ತ್ರಿಶೂಲ್‌ ಬರುತ್ತಾರೆ. ನರ್ಮದಾಳನ್ನು ನೋಡಿದ ಮಂಜುಳಾ ಖುಷಿಯಿಂದ ಮಾತನಾಡಿಸುತ್ತಾರೆ ಅಲ್ಲದೇ, ʼಎಲ್ಲವೂ ಸರಿಯಾಗಿದ್ರೆ ಈ ಹೊತ್ತಿಗೆ ನರ್ಮದಾ ನಮ್ಮ ಮನೆಯ ಸೊಸೆಯಾಗಿ ಇರ್ತಾ ಇದ್ಲು, ಆದರೆ ನಮ್ಮ ನಡುವೆ ಉಂಟಾದ ಮನಸ್ತಾಪದಿಂದ ಎಲ್ಲವೂ ಎಲ್ಲವೂ ಹಾಳಾಯ್ತು, ಇವತ್ತು ನಮ್ಮ ಮಗ ಬೇರೆ ಹುಡುಗಿಯ ಕೈ ಹಿಡಿಯುವಂತಾಯ್ತು. ನರ್ಮದಾಗೆ ತ್ರಿಶೂಲ್‌ ಅಂತಲೇ ಬರೆದಿರಬೇಕು ಅದಕ್ಕೆ ತ್ರಿಶೂಲ್‌ ಆಕೆಯನ್ನು ಮದುವೆಯಾಗಿದ್ದಾನೆʼ ಎಂದು ಹಿಂದಿನ ಕಥೆಯನ್ನೆಲ್ಲಾ ಬಿಚ್ಚಿಡುತ್ತಾರೆ. ಅದನ್ನು ಕೇಳಿಸಿಕೊಂಡ ತ್ರಿಶೂಲ್‌ ಮನದಲ್ಲಿ ಅನುಮಾನ ಮೂಡಲು ಆರಂಭವಾಗುತ್ತದೆ.

ಮಗಳು ಕಾಲೇಜಿಗೆ ಹೋದ್ರು ಭಾರ್ಗವಿಗಿಲ್ಲ ನೆಮ್ಮದಿ

ಸಹನಾ ಕಾಲೇಜಿಗೆ ಹೋದ ಸ್ವಲ್ಪ ಹೊತ್ತಿನಲ್ಲೇ ಚಕ್ರಿಗೆ ಕಾಲ್‌ ಮಾಡುವ ಭಾರ್ಗವಿ ಮಗಳು-ಆಕಾಶ್‌ ಕಾಲೇಜಿನಲ್ಲಿ ಜೊತೆಯಾಗಿಯೇ ಇದ್ದಾರಾ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಚಕ್ರಿ ಕಾಲ್‌ ರಿಸೀವ್‌ ಮಾಡದೇ ಕೋಪಗೊಳ್ಳುವ ಭಾರ್ಗವಿಗೆ ತಮ್ಮ ಭಾಸ್ಕರ ಸಮಾಧಾನ ಮಾಡುತ್ತಾನೆ. ತಾನೇ ಹೋಗಿ ಸಹನಾ-ಆಕಾಶ್‌ ಕಾಲೇಜಿನಲ್ಲಿ ಹೇಗಿದ್ದಾರೆ ಎಂಬುದನ್ನು ತಿಳಿದುಕೊಂಡು ಬರುವ ನಿರ್ಧಾರ ಮಾಡುತ್ತಾನೆ.

ನರ್ಮದಾ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸಿದ ತ್ರಿಶೂಲ್‌

ಆಫೀಸಿಗೆ ಹೊರಡಲು ರೆಡಿ ಆಗುವ ತ್ರಿಶೂಲ್‌ ಫೈಲ್‌ ಕೊಡಲು ಬಂದ ಹೆಂಡತಿ ಮೇಲೆ ಅನುಮಾನದ ಪ್ರಶ್ನೆಗಳನ್ನು ಕೇಳುತ್ತಾನೆ. ಅಂಬಿಕಾ ಅವರ ಮಗನಿಗೂ ನಿನಗೂ ಏನು ಸಂಬಂಧ, ನಿನಗೂ ಅವರಿಗೂ ಮೊದಲಿನಿಂದಲೂ ಲವ್‌ ಇತ್ತಾ, ಅದಕ್ಕೆ ನೀವಿಬ್ಬರೂ ಸುತ್ತಾಡೋದು ನೋಡಿ ಮನೆಯವರು ಮದುವೆ ಮಾತುಕಥೆ ನಡೆಸಿದ್ರಾ ಎಂದೆಲ್ಲಾ ಚುಚ್ಚಿ ಮಾತನಾಡುತ್ತಾನೆ. ಇಲ್ಲ-ಸಲ್ಲದ ಪ್ರಶ್ನೆಗಳನ್ನೆಲ್ಲಾ ಕೇಳಿ ನರ್ಮದಾಗೆ ಬೇಸರ ಮಾಡುತ್ತಾನೆ. ಇದನ್ನೆಲ್ಲಾ ಹೊರಗಿನಿಂದ ಕೇಳಿಸಿಕೊಳ್ಳುತ್ತಾಳೆ ಪುಷ್ಪಾ. ತ್ರಿಶೂಲ್‌ ಆಫೀಸ್‌ಗೆ ಹೋದ ಮೇಲೆ ನರ್ಮದಾ ರೂಮಿಗೆ ಬರುವ ಪುಷ್ಪಾ ವಿಷಯ ಗೊತ್ತಿದ್ದು ಗೊತ್ತಿಲ್ಲದಂತೆ ನಟಿಸಿ ತನ್ನ ಮಾತಿನಿಂದಲೇ ನರ್ಮದಾಳನ್ನು ಸಮಾಧಾನ ಮಾಡುತ್ತಾಳೆ.

ಭಾರ್ಗವಿ ಆಕಾಶ್‌ಗೆ ಹೇಳಿದ ಸುಳ್ಳಿನ ಕಂತೆಯನ್ನು ಸುನಾಮಿ ನಂಬುತ್ತಾನಾ, ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬುದನ್ನು ಸುನಾಮಿ ನಂಬುತ್ತಾನಾ, ಮಂಜುಳಾ ಮಾತಿನಿಂದ ತ್ರಿಶೂಲ್‌-ನರ್ಮದಾ ನಡುವೆ ವಿರಸ ಮೂಡುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point