ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ; ಬೃಂದಾವನಕ್ಕೆ ಕೇಡು ತಪ್ಪಿದಲ್ವಾ?

Brundavana Serial: ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ; ಬೃಂದಾವನಕ್ಕೆ ಕೇಡು ತಪ್ಪಿದಲ್ವಾ?

Brindavana Kannada Serial Today Episode May 10th: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುನಾಮಿ ಮುಂದೆ ಎಲ್ಲಾ ಸತ್ಯವನ್ನು ಹೇಳಿ ನೆಮ್ಮದಿಯ ನಿಟ್ಟುಸಿರು ಬಿಡುವ ಆಕಾಶ್‌. ಪುಷ್ಪಾಗೆ ಕಾಲ್‌ ಮಾಡುವ ಭಾರ್ಗವಿ ಬೃಂದಾವನದ ನೆಮ್ಮದಿ ಕೆಡಿಸುತ್ತೇನೆ ಎಂದು ಅವಾಜ್‌ ಹಾಕಿ, ಚಾಲೆಂಜ್‌ ಮಾಡುತ್ತಾಳೆ.

ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ
ಪುಷ್ಪಾಗೆ ಕಾಲ್‌ ಮಾಡಿ ಚಾಲೆಂಜ್‌ ಮಾಡುವ ಭಾರ್ಗವಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 10) ಸಂಚಿಕೆಯಲ್ಲಿ ಕೊನೆಗೂ ಸುನಾಮಿ ಮುಂದೆ ಎಲ್ಲವನ್ನೂ ಹೇಳುವ ಆಕಾಶ್‌ ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಸಹನಾಗೆ ಬ್ರೈನ್‌ ಟ್ಯೂಮರ್‌ ಎಂಬ ಸತ್ಯ ತಿಳಿದಿರದ ಸುನಾಮಿ ಆಕಾಶ್‌ ಮಾತು ಕೇಳಿ ಮೌನಕ್ಕೆ ಶರಣಾಗುತ್ತಾನೆ. ಆಗ ಆಕಾಶ್‌ ಸಹನಾ ಅಮ್ಮ ಇವನ ಬಳಿ 6 ತಿಂಗಳ ಕಾಲ ಪ್ರೀತಿ ಮಾಡುವಂತೆ ಹೇಳಿದ್ದು, ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ಪುಷ್ಪಾ ಸ್ನೇಹಿತರ ಕೈಬಿಡಬೇಡಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದು ಎಲ್ಲವನ್ನೂ ವಿವರಿಸುತ್ತಾನೆ. ಆಗ ಸುನಾಮಿಗೆ ಪುಷ್ಪಾಳ ಮೇಲೆ ಇನ್ನಷ್ಟು ಗೌರವ ಮೂಡುತ್ತದೆ. ಆಕಾಶ್‌ ಬಳಿ ಸಾರಿ ಕೇಳುವ ಸುನಾಮಿ ʼನಾನು ವಿಷ್ಯಾ ಗೊತ್ತಿಲ್ಲದೇ ಏನೇನೋ ಮಾಡಲು ಹೊರಟಿದ್ದೆ, ಸಾರಿ ಗೆಳೆಯ ಎನ್ನುವ ಸುನಾಮಿ ʼಈ ವಿಚಾರದಲ್ಲಿ ಮಗಳನ್ನು ಪ್ರೀತಿ ಮಾಡುವಂತೆ ಕೇಳಿಕೊಂಡ ಸಹನಾ ತಾಯಿಯಾಗಲಿ, ಎಲ್ಲ ಗೊತ್ತಿದ್ದು ಪ್ರೀತಿಸುವಂತೆ ನಾಟಕ ಮಾಡುತ್ತಿರುವ ನೀನಾಗಲಿ ಗ್ರೇಟ್‌, ಸ್ನೇಹಿತರನ್ನು ಕೈ ಬಿಡಬೇಡಿ ಎಂದು ಹೇಳಿದ ಪುಷ್ಪಾ ಗ್ರೇಟ್‌ ಎಂದು ತುಂಬು ಮನಸ್ಸಿನಿಂದ ಹೊಗಳುತ್ತಾನೆ ಸುನಾಮಿ.

ಟ್ರೆಂಡಿಂಗ್​ ಸುದ್ದಿ

ಕಾಲೇಜಿನಲ್ಲಿ ಭಾಸ್ಕರನಿಗೆ ಬಿತ್ತು ಗುನ್ನ

ಆಕಾಶ್‌-ಸಹನಾ ಒಂದಾಗಿದ್ದಾರಾ ಇಲ್ವಾ, ಅವರು ಕಾಲೇಜಿನಲ್ಲಿ ಹೇಗಿರ್ತಾರೆ ಎಂದು ನೋಡಿ ಹೋಗಲು ಬರುವ ಭಾಸ್ಕರ ನಾನು ಓದದೇ ಕಾಲೇಜ್‌ ಲೈಫ್‌ ಕಾಣದೇ ಜೀವನ ಹಾಳು ಮಾಡಿಕೊಂಡೆ ಎಂದು ಹಲುಬುತ್ತಾನೆ. ಸಿಕ್ಕ ಹುಡುಗಿಯರ ಹಿಂದೆ ಮುಂದೆ ಸುತ್ತಾತ್ತಾ ನನ್ನ ಪಾಡಿಗೆ ತಾನೇ ಏನೇನೋ ಮಾಡಿಕೊಳ್ಳುತ್ತಾನೆ. ಅಷ್ಟೊತ್ತಿಗೆ ದೂರದಲ್ಲಿ ಸಹನಾ ಹಾಗೂ ಆಕಾಶ್‌ ಸ್ನೇಹಿತರ ಜೊತೆ ನಿಂತು ಮಾತನಾಡುವುದು ಕಾಣಿಸುತ್ತದೆ. ಹೇಗಾದ್ರೂ ಅವರ ಮಾತನ್ನು ಕದ್ದು ಕೇಳಬೇಕು ಎಂದು ಅಡ್ಡ ಅಡ್ಡವಾಗಿ ಹೋಗುತ್ತಾನೆ. ಆಗ ಪಾರ್ಕ್‌ ಬಳಿ ಕುಳಿತಿದ್ದ ಹುಡುಗಿಯ ಜಡೆ ತಾಕುತ್ತದೆ. ಅವನು ಜಡೆ ಎಳೆದ ಎಂದು ಹೇಳಿ ಕಾಲೇಜು ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ಚೆನ್ನಾಗಿ ಬಾರಿಸುತ್ತಾರೆ.

ಅನುಪಮಾ ಬಳಿ ತ್ರಿಶೂಲ್‌ ಬಗ್ಗೆ ಕೇಳುವ ಪುಷ್ಪಾ

ತ್ರಿಶೂಲ್‌ ನರ್ಮದಾ ಜೊತೆ ನಡೆದುಕೊಂಡ ರೀತಿ ಕಂಡು ಅನುಮಾನ ಪಡುವ ಪುಷ್ಪಾ ಅನುಪಮಾ ಬಳಿ ಮಂಜುಳಾ ಅಂಟಿ ಬಂದಿದ್ದು, ಅವರ ಮಗನಿಗೂ ನರ್ಮದಾಗೂ ಮದುವೆಯಾಗಬೇಕಿತ್ತು ಆಗಬೇಕು ಅಂದಿದ್ದು, ಆದರೆ ಕಾರಣಾಂತರಗಳಿಂದ ಅದು ಕ್ಯಾನ್ಸಲ್‌ ಆಗಿದ್ದು ಈ ಎಲ್ಲದರ ಬಗ್ಗೆ ಕೇಳುತ್ತಾಳೆ. ಕೊನೆಗೆ ತ್ರಿಶೂಲ್‌ ಹೇಗೆ ಎಂದು ಕೇಳುವ ಪುಷ್ಪಾ, ಅವನ ವರ್ತನೆಯ ಬಗ್ಗೆಯೂ ಪ್ರಶ್ನೆ ಮಾಡುತ್ತಾಳೆ. ಆದರೆ ಅನುಪಮಾ ತ್ರಿಶೂಲ್‌ ಬಗ್ಗೆ ಒಳ್ಳೆಯ ಮಾತನ್ನೇ ಆಡುತ್ತಾಳೆ. ಆಗ ಪುಷ್ಪಾಗೆ ಕೊಂಚ ನೆಮ್ಮದಿಯಾಗುತ್ತದೆ. ಮಾತ್ರವಲ್ಲ ತ್ರಿಶೂಲ್‌ ಮಂಜುಳಾ ಮಾತಿನಿಂದ ಡಿಸ್ಟರ್ಬ್‌ ಆಗಿದ್ದು ಎಂಬುದು ಅವಳಿಗೆ ಅರಿವಾಗುತ್ತದೆ.

ಪುಷ್ಪಾಗೆ ಕಾಲ್‌ ಮಾಡಿ ನಡುಕ ಹುಟ್ಟಿಸುವ ಭಾರ್ಗವಿ

ಪುಷ್ಪಾಗೆ ಕಾಲ್‌ ಮಾಡುವ ಭಾರ್ಗವಿ ತನ್ನ ಹೆಸರು ಹೇಳುತ್ತಾಳೆ. ಜೊತೆಗೆ ಪುಷ್ಪಾ ಅಂದು ತನ್ನ ಮನೆಗೆ ಬಂದು ನನಗೆ ಅವಾಜ್‌ ಹಾಕಿದ್ದನ್ನು ನೆನೆಪಿಸಿಕೊಂಡು ಕೋಪ ವ್ಯಕ್ತ ಪಡಿಸುತ್ತಾಳೆ. ಆಗ ಪುಷ್ಪಾ ʼನಾನು ನೀವು ಯಾರು, ನೀವು ಏನು ಮಾಡಿದ್ದೀರಿ ಎಂಬುದನ್ನೆಲ್ಲಾ ನಿಮ್ಮ ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣವೇ ಮರೆತಿದ್ದೇನೆ. ನಾನು‌ ಎಲ್ಲಾ ಮರೆತು ನೆಮ್ಮದಿಯಾಗಿದ್ದೇನೆ. ನೀವು ಹಾಗೇ ಇರಿʼ ಎಂದು ಸಲಹೆ ನೀಡುತ್ತಾಳೆ. ಆಗ ಇನ್ನಷ್ಟು ಕೋಪಗೊಳ್ಳುವ ಭಾರ್ಗವಿ ಪುಷ್ಪಾಗೆ ಚಾಲೆಂಜ್‌ ಮಾಡುತ್ತಾಳೆ. ನೀನು ಸುಮ್ಮನಿದ್ರೂ ನಂಗೆ ಸುಮ್ಮನಿರಲು ಆಗುವುದಿಲ್ಲ. ಈಗಾಗಲೇ ನಾನು ಒಂದು ಕಿಡಿ ಹೊತ್ತಿಸಿದ್ದೇನೆ. ಆ ಕಿಡಿ ಇಡೀ ವೃಂದಾವನವನ್ನೇ ಸುಡುತ್ತದೆʼ ಎಂದು ಹೇಳುವ ಜೊತೆಗೆ ನಾನು ಬೃಂದಾವನವನ್ನು ಸುಟ್ಟು ಬೂದಿ ಮಾಡುತ್ತೇನೆ ಎಂದು ಚಾಲೆಂಜ್‌ ಹಾಕುತ್ತಾಳೆ. ಭಾರ್ಗವಿಯ ಮಾತು ಪುಷ್ಪಾಳಲ್ಲಿ ಆತಂಕ ಹುಟ್ಟಿಸುತ್ತದೆ.

ಬೃಂದಾವನವನ್ನು ಸುಟ್ಟು ಬೂದಿ ಮಾಡಲು ಭಾರ್ಗವಿಯಿಂದ ಸಾಧ್ಯವಾಗುವುದಾ? ಬೃಂದಾವನದಲ್ಲಿ ನಿಜಕ್ಕೂ ಕೆಡುವುದು ಮೂಡುವುದಾ? ಗಂಡನನ್ನೇ ಸಹನಾಳನ್ನ ಪ್ರೀತಿ ಮಾಡಿದ ಎಂದು ಹೇಳಿದ ಪುಷ್ಪಾಳಿಂದ ಎಲ್ಲವನ್ನೂ ಸರಿ ಮಾಡಲು ಸಾಧ್ಯವೇ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point