ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

Brundavana Serial: ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

Brindavana Kannada Serial Today Episode May 13th: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಭಾರ್ಗವಿಯ ಕಿಡಿ ಮಾತು ಪುಷ್ಪಾಳ ಮನದಲ್ಲಿ ಭಯ ಮೂಡಿಸಿದೆ. ಸಂಪೂರ್ಣ ಬದಲಾಗಿದೆ ತ್ರಿಶೂಲ್‌ ವರ್ತನೆ. ಬೈಕ್‌ಯೇರಿ ಹೊರಟ ಆಕಾಶ್‌-ಸಹನಾ ಸತ್ಯಮೂರ್ತಿ ಕೈಗೆ ಸಿಕ್ಕಿಬಿದ್ರು.

ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌
ಪುಷ್ಪಾಳ ಚಿಂತೆಗೆ ಕಾರಣವಾಗಿದೆ ಭಾರ್ಗವಿ ಮಾತು; ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿ ಬಿದ್ರು ಸಹನಾ-ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 13) ಸಂಚಿಕೆಯಲ್ಲಿ ಭಾರ್ಗವಿಯ ಮಾತುಗಳೇ ಪುಷ್ಪಾಳ ಕಿವಿಯಲ್ಲಿ ಪ್ರತಿಧ್ವನಿಸುತ್ತದೆ. ʼನಾನು ಸೈಲೆಂಟ್‌ ಆಗಿದೀನಿ ಅಂದ್ರೆ ವೈಲೆಂಟ್‌ ಆಗೋಕೆ ಸ್ಕೆಚ್‌ ಹಾಕಿದೀನಿ ಎಂದರ್ಥ. ಈಗಾಗಲೇ ದ್ವೇಷ ಕಿಡಿ ಹೊತ್ತಿಸಿದ್ದೇನೆ, ಆ ಕಿಡಿ ನಿಮ್ಮ ಇಡೀ ಮನೆಯನ್ನು ಸುಡಲು ಆರಂಭಿಸಿದೆ. ಇಡೀ ಬೃಂದಾವನವನ್ನು ನಾಶ ಮಾಡಿದ್ರೆ ಮಾತ್ರ ನನಗೆ ನೆಮ್ಮದಿʼ ಭಾರ್ಗವಿಯ ಈ ದ್ವೇಷದ ಮಾತುಗಳು ಪುಷ್ಪಾಳ ಚಿಂತೆಯನ್ನು ಹೆಚ್ಚಿಸುತ್ತದೆ. ಅಡುಗೆಮನೆಯಲ್ಲಿ ಗಾಢ ಯೋಚನೆಯಲ್ಲಿ ಮುಳುಗಿದ ಪುಷ್ಪಾಳನ್ನ ನೋಡಿ ಅನುಪಮಾ ಎನಾಯಿತು ಎಂದು ವಿಚಾರಿಸುತ್ತಾಳೆ. ಆದರೆ ತಕ್ಷಣಕ್ಕೆ ಸಾವರಿಸಿಕೊಳ್ಳುವ ಪುಷ್ಪಾ ನನಗೆ ಏನೂ ಆಗಿಲ್ಲ, ಸುಮ್ಮನೆ ಏನೋ ಯೋಚಿಸ್ತಾ ಇದ್ದೆ ಅಂತಾಳೆ. ಆದರೆ ಭಾರ್ಗವಿ ಹೊತ್ತಿಸಿದ ಕಿಡಿ ಯಾವುದು ಎಂದು ಅವಳಿಗೆ ಗೊಂದಲವಾಗುತ್ತದೆ. ತ್ರಿಶೂಲ್‌ ಬಗ್ಗೆಯೇ ಯೋಚಿಸುವ ಪುಷ್ಪಾ ತ್ರಿಶೂಲ್‌ ವರ್ತನೆ ಭಾರ್ಗವಿ ಹೊತ್ತಿಸಿದ ಕಿಡಿ ಇರಬಹುದು ಎಂದು ಗೊಂದಲಕ್ಕೆ ಒಳಗಾಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಆಕಾಶ್‌ ಜೊತೆಗೆ ಹೊರಗಡೆ ಸುತ್ತಾಡುವ ಬಯಕೆಯಲ್ಲಿ ಸಹನಾ

ಕಾಲೇಜು ಮುಗಿಸಿ ಮನೆಗೆ ಹೊರಡುವಾಗ ಮಿಂಚು ಸಹನಾಗೆ ಆಕಾಶ್‌ ಜೊತೆಗೆ ಡೇಟಿಂಗ್‌ ಹೋಗಲು ಐಡಿಯಾ ನೀಡುತ್ತಾಳೆ. ಮಾತ್ರವಲ್ಲ ತನ್ನ ಮನದಲ್ಲಿ ಸುನಾಮಿ ಇರುವ ಬಯಕೆಯನ್ನು ಸಹನಾ ಬಳಿ ಹೇಳಿಕೊಳ್ಳುತ್ತಾಳೆ. ನೀನು ಆಕಾಶ್‌ ಜೊತೆ ನಿನ್ನ ಗಾಡಿಯಲ್ಲಿ ಹೋಗು, ನಾನು ಸುನಾಮಿ ಜೊತೆ ಆಕಾಶ್‌ ಕಾರ್‌ನಲ್ಲಿ ಬರುತ್ತೇವೆ ಎಂದು ಹೇಳಿ ಒಪ್ಪಿಸುತ್ತಾಳೆ. ಕೊನೆಗೂ ಸಹನಾ ಆಸೆಯಂತೆ ಆಕಾಶ್‌ ಅವಳನ್ನು ಗಾಡಿಯಲ್ಲಿ ಕೂರಿಸಿಕೊಂಡು ಹೊರಡುತ್ತಾನೆ, ಇತ್ತ ಸುನಾಮಿ-ಮಿಂಚು ಒಂದೇ ಕಾರ್‌ನಲ್ಲಿ ಪ್ರಯಾಣ ಮಾಡುತ್ತಾರೆ.

ತ್ರಿಶೂಲ್‌ ಅನುಮಾನಕ್ಕೆ ಕೊನೆಯಿಲ್ಲ

ಆಫೀಸ್‌ನಿಂದ ಬೇಗ ಬರುವ ತ್ರಿಶೂಲ್‌ನನ್ನು ಕಂಡ ಸತ್ಯಮೂರ್ತಿ ಏನಪ್ಪಾ ತ್ರಿಶೂಲ, ಬೇಗ ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಕೆಲಸ ಬೇಗ ಮುಗೀತು ಎಂದು ರೂಮ್‌ಗೆ ಹೊರಡಲು ರೆಡಿ ಆಗುತ್ತಾನೆ. ಅವನನ್ನು ತಡೆಯುವ ಸತ್ಯಮೂರ್ತಿ ನರ್ಮದಾಳನ್ನೆ ಹಾಲ್‌ಗೆ ಕರೆಯುತ್ತಾನೆ, ನಿಮ್ಮ ಗಂಡ ಬೇಗ ಬಂದಿದ್ದಾನೆ. ಅವನಿಗೆ ಕಾಫಿ, ಟೀ ಮಾಡಿಕೊಡು ಎಂದು ನರ್ಮದಾಗೆ ಹೇಳುತ್ತಾಳೆ. ಆದರೆ ಅನುಮಾನದ ಬೆಂಕಿಯಲ್ಲಿ ಬೇಯುತ್ತಿರುವ ತ್ರಿಶೂಲ್‌ ನರ್ಮದಾಳಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ. ಅಡುಗೆಮನೆಯಲ್ಲಿ ಇದ್ದ ಪುಷ್ಪಾ ಇದನ್ನೆಲ್ಲಾ ಗಮನಿಸುತ್ತಿರುತ್ತಾಳೆ.

ಬೈಕ್‌ನಲ್ಲಿ ಆಕಾಶ್‌-ಸಹನಾರನ್ನು ನೋಡಿದ ಸತ್ಯಮೂರ್ತಿ

ಸಹನಾ ಆಸೆಯಂತೆ ಅವಳನ್ನು ಬೈಕ್‌ನಲ್ಲಿ ಕರೆದುಕೊಂಡು ಹೊರಡುತ್ತಾನೆ ಆಕಾಶ್‌. ದಾರಿ ಮಧ್ಯೆ ತಬ್ಬಿಕೊಂಡು ಕುಳಿತುಕೊಳ್ಳಲು ಬರುವ ಸಹನಾಗೆ ಹಾಗೆ ಕುಳಿತಕೊಳ್ಳಬೇಡಿ, ನನಗೆ ಅಭ್ಯಾಸ ಇಲ್ಲ, ಸ್ವಲ್ಪ ದೂರ ಕುತ್ಕೊಳ್ಳಿ ಎಂದು ಸಲಹೆ ನೀಡುತ್ತಾನೆ. ಆದರೂ ಸಹನಾ ಆಕಾಶ್‌ ಹೆಗಲ ಮೇಲೆ ಕೈ ಹಾಕಿ ಕುಳಿತುಕೊಳ್ಳುತ್ತಾಳೆ. ಹೀಗೆ ಮುಂದೆ ಹೋಗುತ್ತಿರುವಾಗ ಬೇಕರಿಯೊಂದರ ಮುಂದೆ ನಿಂತು ತಿಂಡಿ ತಿನ್ನುತ್ತಿದ್ದ ಸತ್ಯಮೂರ್ತಿ ಸಹನಾ-ಆಕಾಶ್‌ ಜೊತೆಯಾಗಿ ಬೈಕ್‌ನಲ್ಲಿ ಹೋಗುವುದನ್ನು ನೋಡುತ್ತಾರೆ. ಅಲ್ಲದೇ ಅವರನ್ನೇ ಫಾಲೋ ಮಾಡಲು ಅವರ ಹಿಂದೆ ಓಡಿ ಹೋಗುತ್ತಾರೆ.

ಭಾರ್ಗವಿ ಹೊತ್ತಿಸಿದ ಕಿಡಿ ತ್ರಿಶೂಲ್‌ ಅಲ್ಲ ತನ್ನ ಗಂಡ ಎಂಬುದು ಪುಷ್ಪಾಗೆ ಅರಿವಾಗುತ್ತಾ, ಸತ್ಯಮೂರ್ತಿ ಸಹನಾ-ಆಕಾಶ್‌ರನ್ನು ಹಿಡಿಯುತ್ತಾರಾ, ಅವರು ಬೈಕ್‌ನಲ್ಲಿ ಹೋದ ವಿಚಾರ ಮನೆಯಲ್ಲಿ ಹೇಳಿದ್ರೆ ಮನೆಯವರು ನಂಬ್ತಾರಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point