ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ನರ್ಮದಾ ಸಂಸಾರ ಸರಿಪಡಿಸಲು ಹೊರಟ ಪುಷ್ಪಾಗೆ ತನ್ನ ಸಂಸಾರದ ಸೂತ್ರ ದಿಕ್ಕು ತಪ್ಪಿದ್ದರ ಅರಿವಿಲ್ಲ

Brundavana Serial: ನರ್ಮದಾ ಸಂಸಾರ ಸರಿಪಡಿಸಲು ಹೊರಟ ಪುಷ್ಪಾಗೆ ತನ್ನ ಸಂಸಾರದ ಸೂತ್ರ ದಿಕ್ಕು ತಪ್ಪಿದ್ದರ ಅರಿವಿಲ್ಲ

Brindavana Kannada Serial Today Episode May 14th: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ನರ್ಮದಾ ಜೀವನ ಸರಿ ಮಾಡುವ ಪಟತೊಟ್ಟ ಪುಷ್ಪಾ ಆಕೆಗೊಂದು ಸೂಪರ್‌ ಡೂಪರ್‌ ಐಡಿಯಾ ನೀಡುತ್ತಾಳೆ. ಸತ್ಯಮೂರ್ತಿ ಕೈಯಲ್ಲಿ ಸಿಕ್ಕಿಹಾಕಿಕೊಂಡ ಸುನಾಮಿ. ಸಹನಾ ಮನೆಗೆಯೊಳಗೆ ಹೋಗುತ್ತಿದ್ದಾನೆ ಆಕಾಶ್‌.

ನರ್ಮದಾ ಸಂಸಾರ ಸರಿ ಪಡಿಸಲು ಹೊರಟ ಪುಷ್ಪಾಗೆ ತನ್ನ ಸಂಸಾರದ ಸೂತ್ರ ದಿಕ್ಕು ತಪ್ಪಿದ್ದರ ಅರಿವಿಲ್ಲ
ನರ್ಮದಾ ಸಂಸಾರ ಸರಿ ಪಡಿಸಲು ಹೊರಟ ಪುಷ್ಪಾಗೆ ತನ್ನ ಸಂಸಾರದ ಸೂತ್ರ ದಿಕ್ಕು ತಪ್ಪಿದ್ದರ ಅರಿವಿಲ್ಲ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 14) ಸಂಚಿಕೆಯಲ್ಲಿ ಹೆಂಡತಿಯ ಮೇಲೆ‌‌ ತ್ರಿಶೂಲ್‌ಗೆ ನಂಬಿಕೆ ಬರುತ್ತಿಲ್ಲ. ಮನೆಗೆ ಬಂದವನೇ ರೂಮ್‌ಗೆ ಹೋಗಿ ನರ್ಮದಾಗೆ ಇನ್ನಿಲ್ಲದ ಪ್ರಶ್ನೆ ಮಾಡುತ್ತಾನೆ. ʼರೂಮ್ ಅಲ್ಲಿ ಒಬ್ಳೆ ಏನ್ ಮಾಡ್ತಾ ಇದ್ದೆ, ಎಲ್ಲರೂ ಹಾಲ್ ಅಲ್ಲಿ ಇರುವಾಗ ನೀನ್ಯಾಕೆ ರೂಮ್ ಅಲ್ಲಿ ಒಬ್ಳೆ ಇದೀಯಾʼ ಎಂದೆಲ್ಲಾ ಪ್ರಶ್ನೆ ಮಾಡುತ್ತಾನೆ. ಅವನ ಮಾತಿಗೆ ನರ್ಮದಾ ʼನಾನು ನೀವು ತಿಳಿದುಕೊಂಡ ಹಾಗಲ್ಲ, ನಂಗೆ ಯಾರ ಜೊತೆಗೂ ಕಾಂಟ್ಯಾಕ್ಟ್ ಇಲ್ಲʼ ಎಂದು ಪರಿ ಪರಿಯಾಗಿ ಕೇಳಿಕೊಂಡ್ರು ತ್ರಿಶೂಲ್ ಅದನ್ನ ಕೇಳೋಕೆ ರೆಡಿ ಇರುವುದಿಲ್ಲ. ಇವರ ಮಾತು ತಾರಕ್ಕೇರುತ್ತಿದೆ ಎಂದು ಅರಿತ ಪುಷ್ಪಾ ಜ್ಯೂಸ್ ಕೊಡುವ ನೆಪದಲ್ಲಿ ಅವರ ರೂಮ್‌ಗೆ ಬರುತ್ತಾಳೆ ಮಾತ್ರವಲ್ಲ ತ್ರಿಶೂಲ್‌ಗೆ ಇನ್‌ಡೈರೆಕ್ಟ್ ಆಗಿ ಎಚ್ಚರಿಕೆ ನೀಡುತ್ತಾಳೆ. ಆದರೆ ತ್ರಿಶೂಲ್‌ ಯಾಕೋ ಸರಿ ಹೋಗುವ ಹಾಗೆ ಕಾಣುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಅಡುಗೆಕೋಣೆಗೆ ಬರುವ ನರ್ಮದಾ ಬಳಿ ಕಷ್ಟ ಸುಖ ವಿಚಾರಿಸುತ್ತಾಳೆ ಪುಷ್ಪಾ. ಆದರೆ ನರ್ಮದಾ ತನಗೆ ಏನೂ ಆಗಿಲ್ಲ ಎಂದೇ ಹೇಳುತ್ತಾರೆ. ಆಗ ಪುಷ್ಪಾ ಸಮಸ್ಯೆಗಳೆಂಬುದು ಕಳೆಗಿಡಗಳ ಹಾಗೆ. ಅದನ್ನು ಬೆಳೆಯಲು ಬಿಟ್ರೆ ಊರ ತುಂಬಾ ಬೆಳೆಯುತ್ತವೆ. ಆ ಕಾರಣಕ್ಕೆ ಆರಂಭದಲ್ಲೇ ಅದನ್ನು ಕಿತ್ತು ಹಾಕಬೇಕು. ನಂಗೆ ನೀವು ಹೇಳಿಲ್ಲ ಅಂದ್ರು ನಿಮ್ಮ ಸಮಸ್ಯೆ, ನೋವು ಅರ್ಥ ಆಗ್ತಾ ಇದೆ ಎಂದು ನರ್ಮದಾಳಿಗೆ ಸಮಾಧಾನ ಮಾಡುತ್ತಾಳೆ. ಆಗ ಇರುವ ವಿಚಾರವನ್ನೆಲ್ಲಾ ಪುಷ್ಪಾಳ ಮುಂದೆ ಹೇಳಿಕೊಳ್ಳುವ ನರ್ಮದಾ ತನಗೆ ಈ ಸಮಸ್ಯೆಯಿಂದ ಹೇಗೆ ಹೊರಬರುವುದು ಎಂಬುದು ಅರ್ಥ ಆಗುತ್ತಿಲ್ಲ ಎಂದು ಗೋಳು ತೋಡಿಕೊಳ್ಳುತ್ತಾಳೆ. ಆಗ ಪುಷ್ಪಾ ನರ್ಮದಾಗೆ ಒಂದು ಸೂಪರ್‌ ಐಡಿಯಾ ನೀಡುತ್ತಾಳೆ.

ಸತ್ಯಮೂರ್ತಿ ಕೈಯಲ್ಲಿ ತಾಗ್ಲಾಕೊಂಡ ಸುನಾಮಿ

ಆಕಾಶ್‌-ಸಹನಾರನ್ನು ಬೈಕ್‌ನಲ್ಲಿ ನೋಡಿದ ಸತ್ಯಮೂರ್ತಿ ಅವರ ಹಿಂದೆ ಓಡಲು ಆರಂಭಿಸುತ್ತಾರೆ. ಅವರು ಓಡಿದ್ದು ನೋಡಿದ ಬೇಕರಿಯವನು ದುಡ್ಡು ನೀಡಿದ ಓಡಿದ ಸತ್ಯಮೂರ್ತಿಯನ್ನು ಹಿಂಬಾಲಿಸಿಕೊಂಡು ಓಡುತ್ತಾರೆ. ಕೊನೆಗೂ ಒಂದೆಡೆ ಸತ್ಯಮೂರ್ತಿಯನ್ನು ಹಿಡಿದುಕೊಳ್ಳುವ ಬೇಕರಿ ಓನರ್‌ ದುಡ್ಡು ಕೊಡದೇ ಮೋಸ ಮಾಡುತ್ತಿಯಾ ಎಂದೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಸತ್ಯಮೂರ್ತಿ ನಮ್ಮ ಮನೆಯ ಹುಡುಗ ಯಾವುದೋ ಹುಡುಗಿ ಜೊತೆ ಬೈಕ್‌ನಲ್ಲಿ ಹೋದ ಆ ಕಾರಣಕ್ಕೆ ಅವರನ್ನು ಹಿಡಿಯಲು ನಾನು ಓಡಿದ್ದು ಎಂದು ಎಷ್ಟೇ ಹೇಳಿದ್ರು ಕೇಳುವುದಿಲ್ಲ. ಕೊನೆಗೆ ಬೇಕರಿಯವನಿಗೆ 200 ರೂ ಕೊಟ್ಟು, ಆಕಾಶ್‌-ಸಹನಾರನ್ನು ಹಿಡಿಯಲು ಆಗದೇ ಹಿಂದಿರುಗಿ ಬರುವಾಗ ಆಕಾಶ್‌ ಕಾರ್‌ ಬರುವುದು ಕಾಣಿಸುತ್ತದೆ. ಆದರೆ ಅದರಲ್ಲಿ ಸುನಾಮಿ ಇರುತ್ತಾನೆ. ಸತ್ಯಮೂರ್ತಿ ಕೈಯಲ್ಲಿ ಸಿಕ್ಕಹಾಕಿಕೊಂಡ ಸುನಾಮಿಗೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಾರೆ ಸತ್ಯವಾನ್‌ ಸತ್ಯಮೂರ್ತಿ. ಅಕಾಶ್‌-ಸಹನಾ ಜೊತೆಯಾಗಿ ಹೋಗಿದ್ದು ನೋಡಿದೆ ಎನ್ನುವ ಅವರು ಆ ಹುಡುಗಿ ಯಾರು ಏನು, ನೀನು ಆವತ್ತು ಕುಡಿದು ಬಂದಾಗ ಮಾಡಿದ ಮಾತಿಗೂ ಇದಕ್ಕೂ ಸಂಬಂಧ ಇದ್ಯಾ ಎಂದೆಲ್ಲಾ ಪ್ರಶ್ನೆ ಮಾಡುತ್ತಾರೆ. ಆದರೆ ಅದಕ್ಕೆಲ್ಲಾ ಸುನಾಮಿ ತಪ್ಪಿಸಿಕೊಳ್ಳುವ ಮಾತನಾಡಿ ನೀವು ನೋಡಿದ್ದು ಬೇರೆ ಯಾರನ್ನೋ ಇರಬೇಕು ಎಂದು ಎಸ್ಕೇಪ್‌ ಆಗಲು ನೋಡುತ್ತಾನೆ.

ಸಹನಾ ಮನೆಗೆ ಕಾಲಿಟ್ಟ ಆಕಾಶ್‌

ಬೈಕ್‌ನಲ್ಲಿ ಸಹನಾ ಮನೆವರೆಗೂ ಬರುವ ಆಕಾಶ್‌ ಅಲ್ಲಿಂದ ಹೊರಡುತ್ತೇನೆ ಎಂದು ಹೇಳುತ್ತಾನೆ. ಆದರೆ ಅದಕ್ಕೆ ಒಪ್ಪದ ಸಹನಾ ಇಲ್ಲಿಯವರೆಗೆ ಬಂದ ಮೇಲೆ ಮನೆ ಒಳಗೆ ಬರದಿದ್ದರೆ ಹೇಗೆ, ಮನೆಯೊಳಗೆ ಬಂದು ಹೋಗಿ ಹೇಗೂ ಸುನಾಮಿ ಕಾರ್‌ ತರುವುದು ತಡ ಆಗುತ್ತೆ ಎನ್ನುತ್ತಾರೆ. ಅದಕ್ಕೆ ಒಪ್ಪುವ ಆಕಾಶ್‌ ಸುನಾಮಿ ಬಳಿ ಸಹನಾ ಮನೆ ಹತ್ತಿರ ಕಾರ್‌ ತರುವಂತೆ ಹೇಳಿ ಸಹನಾ ಮನೆಯೊಳಗೆ ಹೋಗುತ್ತಾನೆ.

ತ್ರಿಶೂಲ್‌ಗೆ ಪ್ರಶ್ನೆ ಮಾಡುವ ನರ್ಮದಾ

ತ್ರಿಶೂಲ್‌ನನ್ನು ಸೋಲಿಸಲು ಅವನ ದಾರಿಯಲ್ಲೇ ಹೋಗುವಂತೆ ನರ್ಮದಾಗೆ ಐಡಿಯಾ ನೀಡಿರುತ್ತಾಳೆ ಪುಷ್ಪಾ. ಆಫೀಸಿನ ರೆಸೆಪ್ಷನಿಸ್ಟ್‌ ಕಾಲ್‌ ಮಾಡಿದಾಗ ಆಚೆ ಹೋಗಿ ಮಾತನಾಡುವ ತ್ರಿಶೂಲ್‌ ಫೋನ್‌ ಇಟ್ಟ ತಕ್ಷಣ ಪ್ರಶ್ನೆಗಳ ಸುರಿಮಳೆ ಸುರಿಸುತ್ತಾಳೆ ನರ್ಮದಾ. ಯಾರ ಕಾಲ್‌, ಆಕೆ ನಿಮಗ್ಯಾಕೆ ಕಾಲ್‌ ಮಾಡಿದ್ಲು, ಆಫೀಸ್‌ ಕೆಲಸ ಮನೆಗೆ ಬಂದ ಮೇಲೂ ಏನಿರುತ್ತೆ, ಆಕೆಯನ್ನು ಕೆಲಸದಿಂದ ತೆಗೆಯಲು ಹೊರಟಾಗ ಶಿಫಾರಸು ಮಾಡಿ ಉಳಿಸಿಕೊಂಡಿದ್ದು ಇದೇ ಕಾರಣಕ್ಕಾ? ಎಂದೆಲ್ಲಾ ಸಾವಿರ ಪ್ರಶ್ನೆ ಮಾಡುತ್ತಾಳೆ. ತಾಳ್ಮೆ ಕಳೆದುಕೊಂಡ ತ್ರಿಶೂಲ್‌ ಆಕೆಗೆ ಹೊಡೆಯಲು ಮುಂದಾಗುತ್ತಾನೆ. ಆಗ ಪುಷ್ಪಾ ಅವನನ್ನು ತಡೆಯುತ್ತಾಳೆ.

ಪುಷ್ಪಾ ನೀಡಿದ ಐಡಿಯಾದಿಂದ ನರ್ಮದಾ-ತ್ರಿಶೂಲ್‌ ನಡುವೆ ಇದ್ದ ಬಿರುಕು ಮಾಯಾವಾಗಿ ಮತ್ತೆ ಖುಷಿ ಮೂಡುತ್ತಾ, ಸಹನಾ ಮನೆಯೊಳಗೆ ಕಾಲಿಟ್ಟ ಆಕಾಶ್‌ನನ್ನು ವಶೀಕರಣ ಮಾಡಿಕೊಳ್ತಾರಾ ಭಾರ್ಗವಿ-ಭಾಸ್ಕರ, ಸುನಾಮಿ ಸತ್ಯಮೂರ್ತಿ ಬಳಿ ಸತ್ಯ ಹೇಳ್ತಾನಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point