ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಆಕಾಶ್‌ ಬಳಿ ಪ್ರಮಾಣ ಮಾಡಿಸಿಕೊಂಡೇ ಬಿಟ್ಲು ಭಾರ್ಗವಿ, ಅಜ್ಜಮ್ಮನನ್ನು ಬಿಡದೇ ಕಾಡುತ್ತಿದೆ ಆತಂಕ

Brundavana Serial: ಆಕಾಶ್‌ ಬಳಿ ಪ್ರಮಾಣ ಮಾಡಿಸಿಕೊಂಡೇ ಬಿಟ್ಲು ಭಾರ್ಗವಿ, ಅಜ್ಜಮ್ಮನನ್ನು ಬಿಡದೇ ಕಾಡುತ್ತಿದೆ ಆತಂಕ

Brindavana Kannada Serial Today Episode May 15th: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಕೊನೆಗೂ ತ್ರಿಶೂಲ್‌ ಮನದಲ್ಲಿದ್ದ ಅನುಮಾನ ದೂರ ಮಾಡಿ ನರ್ಮದಾ ಜೀವನ ಸರಿ ಮಾಡಿದ್ಲು ಪುಷ್ಪಾ. ಸತ್ಯಮೂರ್ತಿಗೆ ಚಮಕ್‌ ಕೊಟ್ಟು ತಪ್ಪಿಸಿಕೊಂಡ ಸುನಾಮಿ. ಸಹನಾ ಮನೆಯಲ್ಲಿ ಆಕಾಶ್‌ ಬಳಿ ಆಣೆ ಮಾಡಿಸಿಕೊಂಡ ಭಾರ್ಗವಿ.

ಆಕಾಶ್‌ ಬಳಿ ಪ್ರಮಾಣ ಮಾಡಿಸಿಕೊಂಡೇ ಬಿಟ್ಲು ಭಾರ್ಗವಿ, ಅಜ್ಜಮ್ಮನನ್ನು ಬಿಡದೇ ಕಾಡುತ್ತಿದೆ ಆತಂಕ
ಆಕಾಶ್‌ ಬಳಿ ಪ್ರಮಾಣ ಮಾಡಿಸಿಕೊಂಡೇ ಬಿಟ್ಲು ಭಾರ್ಗವಿ, ಅಜ್ಜಮ್ಮನನ್ನು ಬಿಡದೇ ಕಾಡುತ್ತಿದೆ ಆತಂಕ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 15) ಸಂಚಿಕೆಯಲ್ಲಿ ಆಫೀಸ್‌ ರಿಸೆಪ್ಷನಿಸ್ಟ್‌ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ನರ್ಮದಾ ಹೊಡೆಯಲು ಕೈ ಎತ್ತುತ್ತಾನೆ ತ್ರಿಶೂಲ್‌. ಅದನ್ನು ತಡೆಯುವ ಪುಷ್ಪಾ ಅವನಿಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಾಳೆ. ʼಭಾವ ನೀವು ಮದುವೆಗೂ ಮೊದಲು ಬೇರೆ ಯಾವ ಹುಡುಗಿಯನ್ನೂ ನೋಡಲು ಹೋಗಿರಲಿಲ್ವಾ?, ಮೊದಲಿಗೆ ನೀವು ನರ್ಮದಾ ಅಕ್ಕನನ್ನೇ ನೋಡಿದ್ದಾ? ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ತ್ರಿಶೂಲ್‌ ಇಲ್ಲ ನೋಡೋದು ಹೋಗಿದ್ದೆ ಅಂತಾನೆ, ಆಗ ಪುಷ್ಪಾ, ʼಅವರಲ್ಲಿ ನಿಮಗೆ ಯಾರೂ ಇಷ್ಟ ಆಗಿರಲಿಲ್ಲ ಅನ್ನುತ್ತಾಳೆ. ಅದಕ್ಕೆ ʼಆಗಿದ್ರು, ಆದರೆ ಜಾತಕ ಅದು, ಇದು ಎಂದು ಮದುವೆಯಾಗಲು ಸಾಧ್ಯವಾಗಿರಲಿಲ್ಲʼ ಎಂದು ತ್ರಿಶೂಲ್‌ ಉತ್ತರಿಸುತ್ತಾನೆ. ʼಹಾಗಾದ್ರೆ ಮದುವೆಯಾಗೋಕೆ ಆಗದವರ ಜೊತೆ ನೀವು ಈಗಲೂ ಕಾಂಟ್ಯಾಕ್ಟ್‌ನಲ್ಲಿ ಇದೀರಾ?ʼ ಎಂದು ಪುಷ್ಪಾ ಕೇಳಿದ ಪ್ರಶ್ನೆ ತ್ರಿಶೂಲ್‌ ಮನವನ್ನು ಪರಿವರ್ತನೆ ಮಾಡುತ್ತದೆ. ಅವನಿಗೆ ಸತ್ಯ ಏನು ಎಂಬುದು ಅರಿವಾಗುತ್ತದೆ. ಅಲ್ಲದೇ ನರ್ಮದಾಳ ಬಳಿ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಅಂತೂ ಪುಷ್ಪಾ ಐಡಿಯಾ ಮಾಡಿ ಮನೆಯವರು ಯಾರಿಗೂ ತಿಳಿಸದೇ ನರ್ಮದಾ-ತ್ರಿಶೂಲ್‌ ಬದುಕನ್ನ ಸರಿ ಮಾಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಸತ್ಯಮೂರ್ತಿಗೆ ಚಮಕ್‌ ಕೊಟ್ಟ ಸುನಾಮಿ

ಆಕಾಶ್‌ ವಿಷಯ ಹೇಳುವಂತೆ ಸುನಾಮಿಗೆ ದಂಬಾಲು ಬಿದ್ದಿದ್ದಾರೆ ಸತ್ಯಮೂರ್ತಿ. ಆದರೆ ಸುನಾಮಿ ತಪ್ಪಿಸಿಕೊಳ್ಳುವ ಪ್ಲಾನ್‌ ಮಾಡುತ್ತಾನೆ. ಅಂಕಲ್‌ ನಂಗೆ ಅರ್ಜೆಂಟ್‌ ಕೆಲಸ ಇದೆ, ನಾನು ಹೊರಡುತ್ತೇನೆ ಎಂದು ಗಡಿಬಿಡಿಯಲ್ಲಿ ಕಾರ್‌ ಹತ್ತಿದ್ರೂ ಬಿಡಿದ ಸತ್ಯಮೂರ್ತಿ ಸುನಾಮಿ ಪಕ್ಕದ ಸೀಟ್‌ನಲ್ಲಿ ಒಂದು ಕುಳಿತುಬಿಡುತ್ತಾರೆ. ಆಕಾಶ್‌ ಯಾರ ಜೊತೆ ಹೋಗಿದ್ದು, ಆ ಹುಡುಗಿಗೂ ಇವನಿಗೂ ಏನು ಸಂಬಂಧ, ಈಗ ಎಲ್ಲಿಗೆ ಹೋಗಿದ್ದು? ಅಲ್ಲಿಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಪ್ರಶ್ನೆ ಮಾಡುತ್ತಾರೆ. ಸುನಾಮಿಗೆ ಏನ್‌ ಮಾಡೋದು, ಇವರಿಂದ ಹೇಗೆ ತಪ್ಪಿಸಿಕೊಳ್ಳೋದು ಎಂದು ಚಿಂತಿಯೇ ಕಾಡುತ್ತದೆ. ಕೊನೆಗೂ ಪ್ಲಾನ್‌ ಮಾಡಿ ಕಾರ್‌ ಸ್ಟಾರ್ಟ್‌ ಆಗುತ್ತಿಲ್ಲ, ತಳ್ಳಿ ಅಂಕಲ್‌ ಎಂದು ಹೇಳಿ ಕಾರ್‌ ತಳ್ಳುವಂತೆ ಮಾಡಿ, ಕಾರ್‌ ಸ್ಟಾರ್ಟ್‌ ಮಾಡಿಕೊಂಡು ಹೋಗೇ ಬಿಡುತ್ತಾನೆ.

ಪುಷ್ಪಾಳ ಮುಂದೆ ಭಯ ತೋಡಿಕೊಳ್ಳುವ ಅಜ್ಜಮ್ಮ

ಭಾರ್ಗವಿಗೆ ಪುಷ್ಪಾ ಖಡಕ್‌ ಎಚ್ಚರಿಕೆ ಕೊಟ್ಟು ಬಂದ್ರು ಸುಧಾಮೂರ್ತಿ ಅವರಲ್ಲಿ ಭಾರ್ಗವಿ ಬಗ್ಗೆ ಇದ್ದ ಭಯ ದೂರಾಗಿರುವುದಿಲ್ಲ. ಮಾತ್ರೆ ಕೊಡಲು ಬಂದ ಪುಷ್ಪಾಳನ್ನು ಆತ್ಮೀಯತೆಯಿಂದ ಮಾತನಾಡಿಸುವ ಅಜ್ಜಮ್ಮ ಕಾಲ್‌ ಬಂದ ತಕ್ಷಣ ಭಯ ಬೀಳುತ್ತಾರೆ. ಆದರೆ ಅದು ಬೇರಾರುವುದೋ ಕರೆ ಆಗಿರುತ್ತದೆ. ಆಗ ಪುಷ್ಪಾ ʼಅಜ್ಜಮ್ಮ ನಾನು ಆವತ್ತು ವಾರ್ನಿಂಗ್‌ ಕೊಟ್ಟು ಬಂದ ಮೇಲೆ ಅವರು ಸುಮ್ಮನಾಗಿದ್ದಾರೆ. ನೀವ್ಯಾಕೆ ಭಯ ಪಡ್ತಾ ಇದೀರಾ?ʼ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಸುಧಾಮೂರ್ತಿ ʼಅವಳು ಸುಮ್ಮನಾಗಿದ್ದಾಳೆ ಅಂದ್ರೆ ಏನೋ ದೊಡ್ಡ ಪ್ಲಾನ್‌ ಮಾಡುತ್ತಿದ್ದಾಳೆ ಎಂದರ್ಥ. ನಾವು ಎಚ್ಚರದಿಂದ ಇರಬೇಕು. ಇಲ್ಲದಿದ್ದರೆ ಅವಳು ಏನಾದ್ರೂ ಮಾಡದೇ ಮಾಡುತ್ತಾಳೆʼ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಇದು ಪುಷ್ಪಾಳ ಮನದಲ್ಲೂ ಭಯ ಹುಟ್ಟಿಸುತ್ತದೆ.

ಸಹನಾ ಮನೆಯಲ್ಲಿ ಭಾರ್ಗವಿಗೆ ಪ್ರಾಮಿಸ್‌ ಮಾಡಿದ ಆಕಾಶ್‌

ಭಾರ್ಗವಿಯ ಮೋಸ ಅರಿಯದ ಆಕಾಶ್‌ ಸಹನಾ ಜೊತೆ ಅವಳ ಮನೆಗೆ ಹೋಗುತ್ತಾನೆ. ಸಹನಾ ಕಾಫಿ ಕುಡಿದುಕೊಂಡೇ ಹೋಗಬೇಕು, ನನ್ನ ಕೈಯಾರೆ ನಾನೇ ಕಾಫಿ ಮಾಡ್ತೇನೆ ಎಂದು ಅಡುಗೆಮನೆ ಸೇರಿದಾಗ ಭಾರ್ಗವಿ ಆಕಾಶ್‌ನನ್ನು ಬಾಲ್ಕನಿಗೆ ಕರೆದುಕೊಂಡು ಹೋಗಿ ಥ್ಯಾಂಕ್ಸ್‌ ಹೇಳುತ್ತಾಳೆ. ಅಲ್ಲದೇ ಈ ವಿಚಾರ ಯಾರಿಗೂ ಗೊತ್ತಾಗಬಾರದು ಎಂದು ಕೂಡ ಹೇಳುತ್ತಾಳೆ. ಆಗ ಆಕಾಶ್‌ ಇದನ್ನು ನನ್ನ ಹೆಂಡತಿಗೆ ಸಮಯ ನೋಡಿಕೊಂಡು ಹೇಳುತ್ತೇನೆ, ಇಲ್ಲದಿದ್ದರೆ ಅವಳಿಗೆ ಮೋಸ ಮಾಡಿದ ಹಾಗೆ ಆಗುತ್ತದೆ ಎಂದು ಭಾರ್ಗವಿ ಬಳಿ ಹೇಳುತ್ತಾನೆ. ಇದನ್ನು ಕೇಳಿ ಗಾಬರಿಯಾಗುವ ಭಾರ್ಗವಿ, ʼನೀನು ಸಹನಾಳನ್ನು ಪ್ರೀತಿ ಮಾಡುತ್ತಿರುವಂತೆ ನಾಟಕ ಮಾಡುತ್ತಿರುವುದು ಸಹನಾ ಸೇರಿದಂತೆ ಬೇರೆ ಯಾರಿಗೂ ತಿಳಿಯಬಾರದು. ಇದರಿಂದ ನಿನ್ನ ಸಂಸಾರಕ್ಕೆ ತೊಂದರೆ ಆಗುತ್ತದೆ, ನಿನ್ನ ಹೆಂಡತಿ ಮನಸ್ಸು ಚೂರಾಗುತ್ತದೆʼ ಎಂದೆಲ್ಲಾ ಇಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡುತ್ತಾಳೆ ಭಾರ್ಗವಿ. ಕೊನೆಗೆ ಈ ವಿಚಾರವನ್ನು ಯಾರ ಬಳಿಯೂ ಹೇಳುವುದಿಲ್ಲ ಎಂದು ನಿಮ್ಮ ಅಜ್ಜಮ್ಮ ಹಾಗೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಪುಷ್ಪಾಳ ಮೇಲೆ ಆಣೆ ಮಾಡು ಎಂದು ಪ್ರಮಾಣ ಮಾಡಿಸಿಕೊಂಡೇ ಬಿಡುತ್ತಾಳೆ. ಅಲ್ಲದೇ ಗೆಲುವಿನ ನಗೆ ಬೀರುತ್ತಾಳೆ.

ಭಾರ್ಗವಿ ಅಂದುಕೊಂಡಂತೆ ಆಕಾಶ್‌ ಸಹನಾಳನ್ನು ವಿಷಯದಲ್ಲಿ ಪ್ರೀತಿ ನಾಟಕವಾಡುತ್ತಿರುವುದು ಯಾರಿಗೂ ತಿಳಿಯುವುದಿಲ್ವಾ? ಭಾರ್ಗವಿ ಅಂದುಕೊಂಡಂತೆ ಬೃಂದಾವನವನ್ನು ನಾಶ ಮಾಡಲು ಸಾಧ್ಯವಾಗುತ್ತಾ? ಈ ಎಲ್ಲಾ ವಿಚಾರ ಗೊತ್ತಿರುವ ಸುನಾಮಿ ಈ ಎಲ್ಲಾ ನಾಟಕಕ್ಕೂ ತೆರೆ ಎಳೆಯುತ್ತಾನಾ? ಇದೆಲ್ಲವನ್ನೂ ಕಾದು ನೋಡಿ.

IPL_Entry_Point