ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

Brindavana Kannada Serial Today Episode May 16th: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಮನೆಯವರ ಮುಂದೆ ಆಕಾಶ್‌-ಸಹನಾ ಬೈಕ್‌ನಲ್ಲಿ ಹೋಗುತ್ತಿದ್ದ ವಿಚಾರ ಹೇಳಿ, ಮನೆ ಮಗ ದಾರಿ ತಪ್ಪುತ್ತಿದ್ದಾನೆ ಎಂದು ಎಚ್ಚರಿಸುತ್ತಾರೆ ಸತ್ಯಮೂರ್ತಿ. ಆಕಾಶ್‌ ವಿಚಾರದಲ್ಲಿ ಮಗಳ ತಲೆ ಕೆಡಿಸುತ್ತಿದ್ದಾಳೆ ಭಾರ್ಗವಿ. ಮನೆಯವರ ಮುಂದೆ ಸಿಕ್ಕಿಕೊಂಡ ಆಕಾಶ್‌.

ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?
ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 16) ಸಂಚಿಕೆಯಲ್ಲಿ ಓಡಿಕೊಂಡೇ ಮನೆಗೆ ಬರುವ ಸತ್ಯಮೂರ್ತಿ ಅಲ್ಲೇ ಆಟವಾಡುತ್ತಿದ್ದ ಮಕ್ಕಳ ಬಳಿ ಪುಷ್ಪಾ ಅತ್ತೆ, ಅಜ್ಜಿ, ಅನುಪಮಾ ಎಲ್ಲರನ್ನೂ ಕರೆಯಿರಿ ಎಂದು ಹೇಳುತ್ತಾರೆ. ಸತ್ಯಮೂರ್ತಿ ಕಿರುಚಾಟ ಕೇಳಿ ಎಲ್ಲರೂ ಹಾಲ್‌ಗೆ ಓಡಿ ಬರುತ್ತಾರೆ. ಸತ್ಯಮೂರ್ತಿ ಎದುಸಿರು ಬಿಡುತ್ತಾ ನೀರು ನೀರು ಎನ್ನುವುದನ್ನು ನೋಡಿ ಎಲ್ಲರೂ ಗಾಬರಿಯಾಗುತ್ತಾರೆ. ಕೊನೆಗೆ ಅವರು ಸುಧಾರಿಸಿಕೊಂಡ ಮೇಲೆ ಏನಾಯ್ತು ಎಂದು ಪ್ರಶ್ನೆ ಮಾಡುತ್ತಾರೆ. ಆಗ ಸತ್ಯಮೂರ್ತಿ ನಡೆದ ಘಟನೆಯನ್ನೆಲ್ಲಾ ವಿವರವಾಗಿ ಹೇಳುತ್ತಾರೆ. ʼಆಕಾಶ್‌ ದಾರಿ ತಪ್ಪಿದ್ದಾನೆ, ಅವನು ಪುಷ್ಪಾಳಿಗೆ ಮೋಸ ಮಾಡುತ್ತಿದ್ದಾನೆ. ಅವನು ಬೇರೆ ಹುಡುಗಿಯ ಸಹವಾಸ ಮಾಡಿದ್ದಾನೆ. ಅವನು ಸ್ಕೂಟಿಯಲ್ಲಿ ಬೇರೆ ಹುಡುಗಿಯ ಜೊತೆ ಹೋಗುತ್ತಾ ಇರುವುದನ್ನು ನಾನೇ ನೋಡಿದ್ದೇನೆ. ಆ ಹುಡುಗಿ ಅವನ ಜೊತೆ ಸಲುಗೆಯಿಂದ ಹೆಗಲ ಮೇಲೆ ಕೈ ಹಾಕಿದ್ದಳು, ಆವತ್ತು ಅವನ ಸ್ನೇಹಿತ ಸುನಾಮಿ ಕುಡಿದು ಬಂದು ಹೇಳಿದ್ದು ಇದನ್ನೇ. ಒಂದು ಮೊಬೈಲ್‌ಗೆ ಎರಡು ಸಿಮ್‌, ಒಂದೇ ದೋಣಿಯಲ್ಲಿ ಇಬ್ಬರು ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದೆಲ್ಲಾ ಹೇಳಿದ್ದ ಆದರೆ ನಾವು ಅರ್ಥ ಮಾಡಿಕೊಂಡಿಲ್ಲ ಎಂದು ಆಕಾಶ್‌ನನ್ನು ದೂರುತ್ತಾನೆ. ಆಗ ಅನುಪಮಾ ಯಾಕೆ ಭಾವ ಏನೇನೋ ಹೇಳ್ತೀರಾ, ನಮ್ಮ ಆಕಾಶ್‌ ಬಳಿ ಕಾರ್‌ ಇರುವಾಗ ಬೈಕ್‌ನಲ್ಲಿ ಯಾಕೆ ಹೋಗ್ತಾನೆ, ನೀವು ಯಾರನ್ನೋ ನೋಡಿ ಗೊಂದಲ ಮಾಡಿಕೊಂಡಿದ್ದೀರಾ ಅಷ್ಟೇ ಎಂದು ಅವನಿಗೆ ಬಯ್ಯುತ್ತಾಳೆ. ಆಗ ಸತ್ಯಮೂರ್ತಿ ಆಕಾಶ್‌ ಮುಂದೆ ಬೈಕ್‌ನಲ್ಲಿ ಹೋದ ಮೇಲೆ ಹಿಂದೆ ಸುನಾಮಿ ಕಾರ್‌ನಲ್ಲಿ ಬಂದಿದ್ದು ತನಗೆ ಯಾಮಾರಿಸಿ ಹೋಗಿದ್ದು ಎಲ್ಲವನ್ನೂ ವಿವರಿಸಿ ಹೇಳುತ್ತಾರೆ. ಆಕಾಶ್‌ ಪುಷ್ಪಾಳಿಗೆ ಮೋಸ ಮಾಡುತ್ತಿದ್ದಾನೆ ಎಂದು ಮತ್ತೆ ಮತ್ತೆ ಒತ್ತಿ ಹೇಳಿದ್ರು ಯಾರೂ ನಂಬುವ ಹಾಗೆ ಕಾಣುವುದಿಲ್ಲ. ಕೊನೆಗೆ ಸತ್ಯಮೂರ್ತಿ ಆಕಾಶ್‌ ಮನೆಗೆ ಬರಲಿ ಅವನ ಬಾಯಿಂದ ಸತ್ಯ ಹೇಳಿಸುತ್ತೇನೆ ಎಂದು ಪಣ ತೊಡುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಸಹನಾ ತಲೆ ಕೆಡಿಸುವ ಭಾರ್ಗವಿ

ಆಕಾಶ್‌ ಮನೆಯಿಂದ ಹೊರಟ ಮೇಲೆ ಭಾರ್ಗವಿ ಸಹನಾ ಬಳಿ ಬಂದು ʼಸ್ವೀಟಿ, ನೀನು ಇತ್ತೀಚಿಗೆ ಬಹಳ ಸಂತೋಷವಾಗಿದ್ದೀಯಾ, ಅದಕ್ಕೆ ಕಾರಣ ಆಕಾಶ್‌ ಎನ್ನುವುದು ನನಗೆ ಗೊತ್ತು. ಆದರೆ ಆಕಾಶ್‌ಗೆ ನೀನೇ ಪ್ರಪಂಚ ಆಗಬೇಕು. ಅವನು ನಿನ್ನನ್ನು ಬಿಟ್ಟು ಬದುಕಬಾರದು. ನಿನಗೆ ಅವನನ್ನು ಬಿಟ್ಟು ಬೇರೆ ಪ್ರಪಂಚ ಇಲ್ಲ ಎನ್ನುವ ಭಾವನೆ ನೀನು ಅವನಲ್ಲಿ ಮೂಡಿಸಬೇಕುʼ ಎಂದು ಏನೆಲ್ಲಾ ಹೇಳಿ ತಲೆ ಕೆಡಿಸಲು ನೋಡುತ್ತಾಳೆ. ತನ್ನ ತಾಯಿಯ ಮೋಸದ ಅರಿವಿಲ್ಲದ ಸಹನಾ ತಾಯಿ ತನ್ನ ಪ್ರೀತಿಗಾಗಿ ಇಷ್ಟೆಲ್ಲಾ ಹೇಳುತ್ತಿದ್ದಾಳೆ ಅಂದುಕೊಳ್ಳುತ್ತಾಳೆ ಹೊರತು ತಾಯಿಯ ಮೋಸದ ಒಳಸಂಚು ಅವಳಿಗೆ ತಿಳಿಯುವುದಿಲ್ಲ.

ಮನೆಯವರ ಎದುರು ಸಿಕ್ಕಿಹಾಕಿಕೊಳ್ಳುವ ಆಕಾಶ್‌

ಸತ್ಯಮೂರ್ತಿ ಮಾತಿನಿಂದ ಗೊಂದಲಕ್ಕೆ ಒಳಗಾದ ಮನೆಯವರು ಆಕಾಶ್‌ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸುನಾಮಿ ಮೊದಲೇ ಸಿಕ್ಕು ಆಕಾಶ್‌ಗೆ ಸತ್ಯಮೂರ್ತಿ ಅವರು ಅವನನ್ನು ನೋಡಿದ್ದು, ತನ್ನನ್ನು ಹಿಡಿದುಕೊಂಡು, ತಾನು ಅವರ ಕೈಯಿಂದ ಎಸ್ಕೇಪ್‌ ಆಗಿದ್ದು ಎಲ್ಲವನ್ನೂ ಹೇಳಿರುತ್ತಾನೆ, ಹಾಗಾಗಿ ಮನೆಯವರನ್ನು ಎದುರಿಸಲು ಸಿದ್ಧವಾಗಿಯೇ ಬಂದಿರುತ್ತಾನೆ ಆಕಾಶ್‌.

ಮನೆಗೆ ಬಂದ ಕೂಡಲೇ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾರೆ ಸತ್ಯಮೂರ್ತಿ. ಆದರೆ ಆಕಾಶ್‌ ಸತ್ಯಮೂರ್ತಿ ಅವರೇ ಗೊಂದಲವಾಗಿದ್ದಾರೆ, ನಾನು ಕಾರ್‌ ಇರುವಾಗ ಬೈಕ್‌ನಲ್ಲಿ ಯಾಕೆ ಹೋಗುತ್ತೇನೆ ಅದು, ಇದು ಹೇಳಿ ಸಂಭಾಳಿಸುತ್ತಾನೆ. ಕೊನೆಗೆ ತಾನು ಸಹನಾ ಜೊತೆಗೆ ಬೈಕ್‌ನಲ್ಲಿ ಹೋಗೇ ಇಲ್ಲ ಎಂಬಂತೆ ವಾದ ಮಾಡುತ್ತಾನೆ. ಆಗ ಸತ್ಯಮೂರ್ತಿ ಸರಿ ಹಾಗಾದ್ರೆ ನಿನ್ನ ಸ್ನೇಹಿತ ಸುನಾಮಿಯನ್ನು ಬರೋಕೆ ಹೇಳು, ಅವನಿಗೆ ಕಾಲ್‌ ಮಾಡು ಎನ್ನುತ್ತಾರೆ. ಕ್ಷಣ ಗಾಬರಿಯಾದ್ರೂ ಸಾವರಿಸಿಕೊಂಡು ಕಾಲ್‌ ಮಾಡಲು ಪಕ್ಕಕ್ಕೆ ಹೋಗುತ್ತಾನೆ ಆಕಾಶ್‌. ಆದರೆ ಅಲ್ಲೇ ಲೌಡ್‌ ಸ್ಪೀಕರ್‌ ಹಾಕಿ ಮಾತನಾಡುವಂತೆ ಹೇಳುತ್ತಾರೆ ಸತ್ಯಮೂರ್ತಿ. ಆಕಾಶ್‌ ಕಾಲ್‌ ರಿಸೀವ್‌ ಮಾಡಿದ್ದೆ ತಡ ʼಏನೋ ಗೆಳೆಯ, ನಿಮ್‌ ಮಾವನ್ನ ಸಂಭಾಳಿಸಿದ್ಯಾ? ಎಂದು ಪ್ರಶ್ನೆ ಮಾಡುತ್ತಾನೆ ಸುನಾಮಿ. ಆಗ ಸತ್ಯಮೂರ್ತಿ ನೋಡಿದ್ರಲ್ಲ, ನಾನು ಹೇಳಿದ್ರೆ ನೀವ್ಯಾರು ನಂಬಿಲ್ಲ. ಈಗ ನಿಮಗೆ ಅರ್ಥ ಆಯ್ತಾ ಎಂದು ಹೇಳೋದು ಅಲ್ದೆ, ಸುನಾಮಿಯನ್ನು ಈ ಕೂಡಲೇ ಮನೆಗೆ ಬರೋಕೆ ಹೇಳುತ್ತಾರೆ.

ಬೃಂದಾವನಕ್ಕೆ ಬರುವ ಸುನಾಮಿ ಸತ್ಯ ಹೇಳ್ತಾನಾ, ಸತ್ಯಮೂರ್ತಿಗಳ ಮಾತನ್ನು ಎಂದಿನಂತೆ ಎಲ್ಲರೂ ನೆಗ್‌ಲೆಕ್ಟ್‌ ಮಾಡ್ತಾರಾ, ಆಕಾಶ್‌-ಪುಷ್ಪಾರ ಜೊತೆಗೆ ಸಹನಾ ಬಾಳನ್ನು ಹಾಳು ಮಾಡ್ತಾಳಾ ಭಾರ್ಗವಿ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024