ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

Brundavana Serial: ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

Brindavana Kannada Serial Today Episode May 20th: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಆಕಾಶ್‌ ಕಾಲ್‌ ರಿಸೀವ್‌ ಮಾಡದೇ ಇದ್ದಾಗ ಸುನಾಮಿಗೆ ಕಾಲ್‌ ಮಾಡಿ ಪಿಜಿ ಅಡ್ರೆಸ್‌ ಕೇಳುವ ಸಹನಾ. ಆಕಾಶ್‌ನನ್ನು ಮನೆಗೆ ಡಿನ್ನರ್‌ಗೆ ಆಹ್ವಾನಿಸುವಂತೆ ಸಲಹೆ ನೀಡುವ ಭಾರ್ಗವಿ. ಪುಷ್ಪಾಗೆ ಆಕಾಶ್‌ ನೀಡಿದ ಸಿಹಿಮುತ್ತು.

ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌
ಡಿನ್ನರ್‌ಗೆ ಮನೆಗೆ ಕರೆದ ಸಹನಾ; ನಿಧಾನಕ್ಕೆ ಭಾರ್ಗವಿ ಮೋಸದ ಬಲೆಯೊಳಗೆ ಸಿಲುಕುತ್ತಿದ್ದಾನೆ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 20) ಸಂಚಿಕೆಯಲ್ಲಿ ಸಹನಾ ಆಕಾಶ್‌ಗೆ ಕರೆ ಮಾಡುತ್ತಾಳೆ. ಆದರೆ ಎಷ್ಟೇ ಕಾಲ್‌ ಮಾಡಿದ್ರೂ ಆಕಾಶ್‌ ರಿಸೀವ್‌ ಮಾಡುವುದಿಲ್ಲ. ತನ್ನ ಪ್ರೀತಿಯ ಹುಡುಗ ಯಾಕೆ ಕಾಲ್‌ ರಿಸೀವ್‌ ಮಾಡುತ್ತಿಲ್ಲ ಎಂಬ ಆತಂಕದಲ್ಲೇ ಸುನಾಮಿಗೆ ಕಾಲ್‌ ಮಾಡುವ ಸಹನಾ ʼಆಕಾಶ್‌ ಏಕೆ ಕಾಲ್‌ ರಿಸೀವ್‌ ಮಾಡುತ್ತಿಲ್ಲʼ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಸುನಾಮಿ ʼಅಯ್ಯೋ ಅವನು ಮನೆಯಲ್ಲಿ ಇರ್ಬೇಕಮ್ಮ, ಮನೆಯವರ ಜೊತೆ ಇರಬಹುದು. ಮತ್ತೆ ಮಾಡ್ತಾನೆ ಬಿಡುʼ ಅಂತಾನೆ. ಆಗ ಸಹನಾಗೆ ಶಾಕ್‌ ಆಗುತ್ತದೆ. ʼಏನ್‌ ಹೇಳ್ತಾ ಇದೀಯಾ ಸುನಾಮಿ, ಆಕಾಶ್‌ ಇರುವುದು ಪಿಜಿ ಅಲ್ಲಿ ಅಲ್ವಾ ಮನೆಯಲ್ಲಿ ಇರೋದಾ? ಆಕಾಶ್‌ ನಂಗೆ ಸುಳ್ಳು ಹೇಳಿದ್ರಾ? ಎಂದು ಪ್ರಶ್ನೆ ಮಾಡುತ್ತಾಳೆ. ತಕ್ಷಣಕ್ಕೆ ಗಾಬರಿಯಾಗುವ ಸುನಾಮಿ ಸಹನಾಳಿಂದ ತಪ್ಪಿಸಿಕೊಳ್ಳಲು ʼಸಹನಾ ಮನೆ ಅಂದ್ರೆ ನಮ್ಮ ಪಿಜಿ ಹೆಸರು ನಮ್ಮನೆ, ನಾವು ಅದನ್ನ ಮನೆ ಅಂತಲೇ ಕರೆಯುತ್ತೇವೆ. ಪಿಜಿಯಲ್ಲಿ ದಿನಾ ಒಂದೇ ರೀತಿ ಊಟ ತಿಂಡಿ ಬೇಸರ ಆಗಿರಬೇಕು. ಅದಕ್ಕೆ ಆಕಾಶ್‌ ಹೊರಗಡೆ ತಿನ್ನಲು ಹೋಗಿರಬೇಕು, ಬರ್ತಾನೆ, ಬಂದ ಮೇಲೆ ನಿನಗೆ ಕಾಲ್‌ ಮಾಡ್ತಾನೆʼ ಅಂತ ಹೇಳಿ ಕಾಲ್‌ ಮಾಡ್ತಾನೆ.

ಟ್ರೆಂಡಿಂಗ್​ ಸುದ್ದಿ

ಆಕಾಶ್‌ಗೆ ಡಿನ್ನರ್‌ಗೆ ಬರಲು ಹೇಳು ಎನ್ನುವ ಭಾರ್ಗವಿ

ಇತ್ತ ಸುನಾಮಿ ಪಿಜಿಯಲ್ಲಿ ಆಕಾಶ್‌ಗೆ ಊಟ ತಿಂಡಿ ಸರಿಯಾಗುತ್ತಿಲ್ಲ ಎಂದು ಹೇಳಿದ ಮಾತನ್ನೇ ಮನಸ್ಸಿಗೆ ಹಚ್ಚಿಕೊಂಡು ಚಿಂತಿಸುತ್ತಿರುವ ಸಹನಾ ಬಳಿ ಬರುತ್ತಾರೆ ಭಾರ್ಗವಿ ಭಾಸ್ಕರ. ಸಹನಾ ಚಿಂತೆಗೆ ಕಾರಣ ಕೇಳಿ ʼಅದಕ್ಯಾಕೆ ಚಿಂತೆ ಮಾಡ್ತೀಯಾ, ಆಕಾಶ್‌ನ ಇಲ್ಲಿಗೆ ಬರೋಕೆ ಹೇಳಿ ನೀನೇ ನಿನ್ನ ಕೈಯಿಂದ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸು. ಎಲ್ಲರೂ ಸೇರಿ ಊಟ ಮಾಡೋಣʼ ಎಂದು ಬಾಯಿ ಮಾತಿಗೆ ಹೇಳುತ್ತಾನೆ ಭಾಸ್ಕರ. ಆದರೆ ಇದೇ ಒಳ್ಳೆ ಐಡಿಯಾ ಎನ್ನಿಸಿ ಭಾರ್ಗವಿ ಸಹನಾಗೆ ನೀನು ಇವತ್ತು ಆಕಾಶ್‌ಗೆ ಡಿನ್ನರ್‌ಗೆ ಬರಲು ಹೇಳುʼ ಎಂದು ನೀನೇ ಅಡುಗೆ ಮಾಡು ಸಲಹೆ ನೀಡುತ್ತಾಳೆ. ಈ ಮಾತು ಕೇಳಿ ಸಹನಾ ಜೊತೆ ಆಕಾಶದಲ್ಲಿ ತೇಲುತ್ತಾಳೆ. ಕೂಡಲೇ ಆಕಾಶ್‌ಗೆ ಕಾಲ್‌ ಮಾಡಲು ಹೊರಡುತ್ತಾಳೆ. ಏನಕ್ಕಾ ನಾನು ಬಾಯಿ ಮಾತಿಗೆ ಏನೋ ಹೇಳಿದ್ರೆ ನೀನು ಅದನ್ನೇ ಮಾಡ್ತಾ ಇದೀಯಾ, ನಾಳೆ ಆಕಾಶ್‌ ಪಿಜಿಯಲ್ಲಿ ಬೆಡ್‌ ಸರಿಯಿಲ್ಲ ಅಂದು ನಮ್ಮನೇಲೇ ಮಲಗೋ ದಿನ ಬಂದ್ರೆ? ಅಂತ ಪ್ರಶ್ನೆ ಮಾಡ್ತಾನೆ, ಆಗ ಭಾರ್ಗವಿ ಭಾಸ್ಕರನನ್ನು ಹೊಗಳುತ್ತಾ ನಿನಗೂ ಆಗಾಗ ಒಳ್ಳೆ ಐಡಿಯಾಗಳು ಬರುತ್ತವೆ ಭಾಸ್ಕರ, ಆಕಾಶ್‌ ನಮ್ಮ ಮನೆಯಲ್ಲೇ ಬಂದು ಇರುವ ದಿನಗಳೂ ದೂರದಲ್ಲಿಲ್ಲ ಎಂದು ಹೇಳಿ ಆಕಾಶ್‌ನನ್ನು ಇನ್ನಷ್ಟು ಮೋಸದಲ್ಲಿ ಸಿಲುಕಿಸುವ ಪ್ಲಾನ್‌ ಮಾಡುತ್ತಾಳೆ.

ಸಹನಾ-ಪುಷ್ಪಾ ಮಾತುಕತೆ, ಹೆಂಡತಿಗೆ ಮುತ್ತಿಟ್ಟ ಆಕಾಶ್‌

ಇತ್ತ ಆಕಾಶ್‌ಗೆ ಕಾಲ್‌ ಮಾಡಿ ಡಿನ್ನರ್‌ಗೆ ಆಹ್ವಾನಿಸುವ ಸಹನಾ ಖುಷಿಯಿಂದ ಗಾಳಿಯಲ್ಲಿ ತೇಲಾಡುತ್ತಿರುತ್ತಾಳೆ. ಅದೇ ಖುಷಿಯಲ್ಲಿ ಪುಷ್ಪಾಗೆ ಕಾಲ್‌ ಮಾಡಿ ತನ್ನ ಹುಡುಗ ಮನೆಗೆ ಡಿನ್ನರ್‌ಗೆ ಬರುತ್ತಿದ್ದಾನೆ ಎಂಬ ಖುಷಿ ಹಂಚಿಕೊಳ್ಳುತ್ತಾಳೆ. ನನ್ನ ಗಂಡನೇ ಅವಳ ಹುಡುಗ ಎಂದು ಅರಿಯದ ಪುಷ್ಪಾ ಆಕಾಶ್‌ಗಾಗಿ ಸ್ವೀಟ್‌ ಏನಾದ್ರೂ ಮಾಡು ಎಂದು ಐಡಿಯಾ ಕೊಡುತ್ತಾಳೆ. ಅಲ್ಲದೇ ಅವರಿಬ್ಬರ ಜೀವನ ಸದಾ ಖುಷಿಯಿಂದ ಕೂಡಿರಲಿ ಎಂದು ಹಾರೈಸುತ್ತಾಳೆ. ಪುಷ್ಪಾ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಅಲ್ಲಿಗೆ ಬರುವ ಆಕಾಶ್‌ ಮುತ್ತು ನೀಡುತ್ತಾನೆ. ಅದನ್ನ ಮನೆಯ ಮಕ್ಕಳು ನೋಡಿದಾಗ ಚಾಕೊಲೇಟ್‌ ಕೊಡಿಸುತ್ತೇನೆ, ಯಾರಿಗೂ ಹೇಳಬಾರದು ಎಂದು ಪೂಸಿ ಹೊಡೆಯುತ್ತಾನೆ.

ಸಹನಾ ಮನೆಗೆ ಡಿನ್ನರ್‌ಗೆ ಬರುವ ಆಕಾಶ್‌ ಬಳಿ ಭಾರ್ಗವಿ ಹೊಸ ನಾಟಕ ಶುರು ಮಾಡ್ತಾಳಾ. ಭಾರ್ಗವಿ ಅಂದುಕೊಂಡಂತೆ ಆಕಾಶ್‌ ತನ್ನ ಮನೆ ಬಿಟ್ಟು ಸಹನಾ ಮನೆಯಲ್ಲಿ ಇರುವಂತೆ ಆಗುತ್ತದಾ? ಪುಷ್ಪಾಗೆ ತನ್ನ ಗಂಡ ದಾರಿ ತಪ್ಪುತ್ತಿರುವ ವಿಷಯ ಅರಿವಿಗೆ ಬರುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಟಿ20 ವರ್ಲ್ಡ್‌ಕಪ್ 2024