ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಪುಷ್ಪಾ ಮನೆಗೆ ಹೊರಟು ನಿಂತ ಸಹನಾ, ಭಾರ್ಗವಿಗೆ ಬ್ಯಾಡ್‌ ಟೈಮ್‌ ಶುರುನಾ?

Brundavana Serial: ಪುಷ್ಪಾ ಮನೆಗೆ ಹೊರಟು ನಿಂತ ಸಹನಾ, ಭಾರ್ಗವಿಗೆ ಬ್ಯಾಡ್‌ ಟೈಮ್‌ ಶುರುನಾ?

Brindavana Kannada Serial Today Episode May 22nd: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸತ್ಯಮೂರ್ತಿ ಹೇಳಿದಂತೆ ಪುಷ್ಪಾ ಕಾಲ್‌ ರಿಸೀವ್‌ ಮಾಡೋದಿಲ್ಲ ಆಕಾಶ್‌. ಸಹನಾ ಪ್ರೀತಿ, ಭಾರ್ಗವಿ ದ್ವೇಷದ ನಡುವೆ ಸಿಲುಕಿದ ಆಕಾಶ್‌. ಸಹನಾಳನ್ನು ಮನೆಗೆ ಆಹ್ವಾನಿಸಿದ್ರು ಪುಷ್ಪಾ-ಅನುಪಮಾ.

ಪುಷ್ಪಾ ಮನೆಗೆ ಹೊರಟು ನಿಂತ ಸಹನಾ, ಭಾರ್ಗವಿಗೆ ಬ್ಯಾಡ್‌ ಟೈಮ್‌ ಶುರುನಾ?
ಪುಷ್ಪಾ ಮನೆಗೆ ಹೊರಟು ನಿಂತ ಸಹನಾ, ಭಾರ್ಗವಿಗೆ ಬ್ಯಾಡ್‌ ಟೈಮ್‌ ಶುರುನಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 22) ಸಂಚಿಕೆಯಲ್ಲಿ ಸತ್ಯಮೂರ್ತಿ ಮಾತಿನ ಬಗ್ಗೆ ಯೋಚಿಸುತ್ತಾ ಅಡುಗೆ ಮಾಡುತ್ತಿದ್ದ ಪುಷ್ಪಾಳನ್ನು ಕಂಡು ಅನುಪಮಾ ಮಾತಿಗೆ ಎಳೆಯುತ್ತಾಳೆ. ಪುಷ್ಪಾಳ ಚಿಂತೆಗೆ ಕಾರಣ ಏನು ಎಂದು ಕೇಳಿದರೆ ಆಕೆ ಹೇಳುವುದಿಲ್ಲ. ಆಕಾಶ್‌ ಎಲ್ಲಿ ಎಂದು ಕೇಳಿದ್ರೆ ಹೊರಗಡೆ ಹೋಗ್ತೇನೆ ಅಂತ ಹೋದ್ರು ಎಲ್ಲಿಗೆ ಅಂತ ಗೊತ್ತಿಲ್ಲ ಎಂದು ಹೇಳುತ್ತಾಳೆ ಪುಷ್ಪಾ. ಆಗ ಅನುಪಮಾ ಅವನಿಗೆ ಕಾಲ್‌ ಮಾಡಿ ಈಗಲೇ ಮನೆಗೆ ಬರೋಕೆ ಹೇಳು ಎನ್ನುತ್ತಾಳೆ. ಆದರೆ ಆಕಾಶ್‌ ಕಾಲ್‌ ರಿಸೀವ್‌ ಮಾಡೋದಿಲ್ಲ. ಆ ಸಮಯಕ್ಕೆ ಸರಿಯಾಗಿ ಅಡುಗೆ ಮನೆಗೆ ಬರುವ ಸತ್ಯಮೂರ್ತಿ ಅವನು ಕಾಲ್‌ ರಿಸೀವ್‌ ಮಾಡೋದು ಇಲ್ಲ, ಮನೆಗೆ ಬಂದ ಮೇಲೆ ಊಟ ಮಾಡೋದು ಇಲ್ಲ. ಅವನು ಅವನ ಹುಡುಗಿಯ ಜೊತೆ ಹೋಗಿದ್ದಾಗ ಮನೆಗೆ ಬಂದು ಊಟ ಮಾತಾಡ್ತಾನಾ ಎಂದು ಪ್ರಶ್ನೆ ಮಾಡುತ್ತಾರೆ. ಸತ್ಯಮೂರ್ತಿ ಮಾತನ್ನು ಯಾವಾಗಲೂ ನಿರ್ಲಕ್ಷ್ಯ ಮಾಡುವ ಅನುಪಮಾ ಈ ಬಾರಿಯೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಸತ್ಯಮೂರ್ತಿ ಅವರಿಗೆ ಬೈದು ಸುಮ್ಮನಿರಿಸುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಸಹನಾ ಮನೆಯಲ್ಲಿ ಗಡದ್‌ ಊಟ

ಸಹನಾ ಆಕಾಶ್‌ ಮೇಲಿನ ಪ್ರೀತಿಯಿಂದ ಬಗೆ ಬಗೆಯ ಅಡುಗೆ ಮಾಡಿರುತ್ತಾಳೆ. ಡೈನಿಂಗ್‌ ಟೇಬಲ್‌ ಮುಂದೆ ಸಹನಾ ಬಡಿಸುವಾಗ ಆಕಾಶ್‌ ಬೇಡ ಎನ್ನುತ್ತಾನೆ. ಆಗ ಭಾಸ್ಕರ ಸಹನಾ ತನಗೆ ಇಷ್ಟಪಟ್ಟಿದ್ದು ಸಿಗದೇ ಇದ್ದಾಗ ತನಗೆ ಬೇಕು ಅನ್ನಿಸಿದ್ದು ಸಿಗದೇ ಹೋದಾಗ ಉಗ್ರರೂಪ ತಾಳುತ್ತಾಳೆ, ಅವಳಿಗೆ ಇಷ್ಟಪಟ್ಟಿದ್ದನ್ನು ಪಡೆದುಕೊಂಡೇ ಅಭ್ಯಾಸʼ ಎಂದೆಲ್ಲಾ ಹೆದರಿಸುತ್ತಾನೆ. ಆಗ ಆಕಾಶ್‌, ಸುನಾಮಿ ಬೇರೆ ದಾರಿ ಕಾಣದೇ ಹೊಟ್ಟೆ ತುಂಬಾ ಊಟ ಮಾಡಿ ಹೊರಡಲು ರೆಡಿ ಆಗ್ತಾರೆ.

ಆಕಾಶ್‌ ತಮ್ಮ ಮನೆಗೆ ಡಿನ್ನರ್‌ ಬಂದಿದ್ದಕ್ಕೆ ಸಹನಾ ಖುಷಿಯಲ್ಲಿ ಕುಣಿತಾ ಇದ್ರೆ ಭಾರ್ಗವಿ ಆಕಾಶ್‌ ತನ್ನ ಬಲೆಗೆ ಬಿದ್ದ ಎಂಬ ಸಂಭ್ರಮದಲ್ಲಿ ಮೆರೆಯುತ್ತಾಳೆ. ಆಕಾಶ್‌ನನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸುತ್ತೇನೆ ಎಂದು ಶಪಥ ಮಾಡುತ್ತಿದ್ದಾಳೆ ಭಾರ್ಗವಿ.

ಸತ್ಯಮೂರ್ತಿ ಮಾತು ಸುಳ್ಳು ಮಾಡಿದ ಆಕಾಶ್‌

ಸಹನಾ ಮನೆಯಿಂದ ಹೊರ ಆಕಾಶ್‌ಗೆ ಪುಷ್ಪಾ ಕಾಲ್‌ ಬರುತ್ತೆ. ಮನೆಗೆ ಊಟಕ್ಕೆ ಬರ್ತೀರಾ ಅಲ್ವಾ ಕೇಳುವ ಹೊತ್ತಿಗೆ ಫೋನ್‌ ಕಿತ್ತುಕೊಂಡು ಹೌದಮ್ಮ ಪುಷ್ಪಾ ಮನೆಗೆ ಬಂದು ಊಟ ಮಾಡ್ತಾನೆ, ಇನ್ನೇನು ಸ್ವಲ್ಪ ಹೊತ್ತಿಗೆ ಬರ್ತಾನೆ ಅಂತ ಫೋನ್‌ ಕಟ್‌ ಮಾಡಿ, ಆಕಾಶ್‌ ಹೇಗೋ ಮನೆಗೆ ಹೋಗಿ ಮ್ಯಾನೇಜ್‌ ಮಾಡು ಎಂದು ಹೇಳಿ ಮನೆಗೆ ಕಳುಹಿಸುತ್ತಾನೆ. ಮನೆಗೆ ಬರುವ ಆಕಾಶ್‌ ಹೊಟ್ಟೆ ತುಂಬಿದ್ದರೂ ಮತ್ತೊಮ್ಮೆ ಮನೆಯಲ್ಲಿ ಊಟ ಮಾಡುತ್ತಾನೆ. ಒಟ್ಟಾರೆ ಸತ್ಯಮೂರ್ತಿ ಹೇಳಿದ್ದ ಮಾತು ಸುಳ್ಳಾಗಿಸಿ ಮನೆಯಲ್ಲಿ ಊಟ ಮಾಡಿ ಮನೆಯವರ ಅನುಮಾನ ದೂರ ಮಾಡುವ ಪ್ರಯತ್ನ ಮಾಡುತ್ತಾನೆ.

ಪುಷ್ಪಾ ಮನೆಗೆ ಹೊರಟ ಸಹನಾ

ಸಹನಾ ಹುಡುಗ ಅವಳ ಮನೆಗೆ ಬಂದಿರುವ ವಿಚಾರವಾಗಿ ಮಾತನಾಡಲು ಕಾಲ್‌ ಮಾಡುತ್ತಾಳೆ ಪುಷ್ಪಾ. ಸಹನಾ ಜೊತೆ ಖುಷಿ ಖುಷಿಯಾಗಿ ಮಾತನಾಡುತ್ತಿರುವ ಹೊತ್ತಿನಲ್ಲೇ ಅಲ್ಲಿಗೆ ಬರುವ ಅನುಪಮಾ ಸಹನಾಗೆ ತಮ್ಮ ಮನೆಗೆ ಬರಲು ಹೇಳು ಎಂದು ಪುಷ್ಪಾ ಬಳಿ ಹೇಳುತ್ತಾರೆ. ಮೊದಲು ಸಹನಾ ಒಪ್ಪದೇ ಇದ್ದಾಗ ಫೋನ್‌ ತೆಗೆದುಕೊಂಡು ಮನೆಗೆ ಬರುವಂತೆ ಆಹ್ವಾನ ನೀಡುತ್ತಾರೆ ಅನುಪಮಾ. ಅವರ ಒತ್ತಾಯಕ್ಕೆ ಒಪ್ಪಿಕೊಳ್ಳುವ ಸಹನಾ ಪುಷ್ಪಾ ಮನೆಗೆ ಹೋಗಲು ಸಿದ್ಧಳಾಗುತ್ತಾಳೆ. ತನ್ನ ತಾಯಿಯ ಬಳಿ ನಾನು ನನ್ನ ಫ್ರೆಂಡ್‌ ಮನೆಗೆ ಹೋಗುತ್ತಿದ್ದೇನೆ. ಆಕಾಶ್‌ ನನಗೆ ಸಿಗಲು ಹೆಲ್ಪ್‌ ಮಾಡಿದ ಸ್ಪೆಷಲ್‌ ಫ್ರೆಂಡ್‌ ಅವರು ಎಂದು ಹೇಳಿ ಹೊರಡುತ್ತಾಳೆ. ಅವಳು ಹೊರ ಹೊರಟ ಬೆನ್ನಲ್ಲೇ ಭಾಸ್ಕರನ ಕಣ್ಣು ಅದುರಲು ಆರಂಭವಾಗುತ್ತದೆ. ಭಾರ್ಗವಿಯ ಬಳಿ ನನ್ನ ಎಡಗಣ್ಣು ಅದುರುತ್ತಿದೆ, ಏನೋ ಅನಾಹುತದ ಮುನ್ಸೂಚನೆ ಎಂದು ಗಾಬರಿ ವ್ಯಕ್ತಪಡಿಸುತ್ತಾನೆ ಭಾಸ್ಕರ.

ಸಹನಾ ಪುಷ್ಪಾ ಮನೆಗೆ ಹೋಗ್ತಾಳಾ, ಪುಷ್ಪಾಳ ಗಂಡ ಆಕಾಶ್‌ ಎನ್ನುವುದು ಅವಳಿಗೆ ತಿಳಿಯುತ್ತಾ? ಭಾರ್ಗವಿಯ ಸಂಚಿಗೆ ಇಂದೇ ಕೊನೆಯ ಸಿಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಬೃಂದಾವನ ಸೀರಿಯಲ್‌ ಪಾತ್ರವರ್ಗ

ಚಿತ್ಕಳಾ ಬಿರಾದಾರ್‌: ಸುಧಾಮೂರ್ತಿ (ಅಜ್ಜಮ್ಮ)

ವರುಣ್‌ ಆರಾಧ್ಯ: ಆಕಾಶ್‌ (ನಾಯಕ)

ಅಮೂಲ್ಯ ಭಾರದ್ವಜ್‌: ಪುಷ್ಪಾ (ನಾಯಕಿ)

ಸಹನಾ ಶೆಟ್ಟಿ: ಸಹನಾ (ಆಕಾಶ್‌ ಗರ್ಲ್‌ ಫ್ರೆಂಡ್‌)

ಅನು ಪಲ್ಲವಿ ಗೌಡ: ಗಿರಿಜಾ (ಪುಷ್ಪಾಳ ಅತ್ತಿಗೆ)

ಮಾನಸ ಗುರುಸ್ವಾಮಿ: ಲಲಿತಾ (ಗಿರಿಜಾಳ ಸ್ನೇಹಿತೆ)

ರಕ್ಷಿತಾ ರವೀಂದ್ರ: ರತ್ನ (ಆಕಾಶ್‌ ಸಹೋದರಿ)

ಸಾಗರ್ ಗೌಡ: ರಾಘವೇಂದ್ರ (ಆಕಾಶ್‌ ಭಾವ)

ಟಿ20 ವರ್ಲ್ಡ್‌ಕಪ್ 2024