Brundavana Serial: ಮನೆಯಲ್ಲಿ ಪ್ರೇಯಸಿ ಸಹನಾಳನ್ನು ನೋಡಿ ಶಾಕ್ ಆದ ಆಕಾಶ್, ಇನ್ನಾದ್ರೂ ಮಡದಿ ಪುಷ್ಪಾ ಬಳಿ ಸತ್ಯ ಹೇಳ್ತಾನಾ?
Brindavana Kannada Serial Today Episode May 23rd: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಬೃಂದಾವನಕ್ಕೆ ಬಂದ ಸಹನಾಳನ್ನು ಆತ್ಮೀಯವಾಗಿ ಸ್ವಾಗತಿಸಿದ ಮನೆಯವರು. ತನ್ನ ಮನೆಯಲ್ಲಿ ಸಹನಾಳನ್ನ ನೋಡಿ ಶಾಕ್ ಆಗುವ ಆಕಾಶ್ ಬಾತ್ ರೂಮ್ ಬಿಟ್ಟು ಹೊರಗೆ ಬರ್ತಿಲ್ಲ. ಆಕಾಶ್ ಪಾರಾಗಲು ಹೆಲ್ಪ್ ಮಾಡ್ತಾನಾ ಸುನಾಮಿ.
ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 23) ಸಂಚಿಕೆಯಲ್ಲಿ ಸಹನಾ ಮನೆಗೆ ಬರುವ ಖುಷಿಯಲ್ಲಿ ಬೆಳಿಗ್ಗೆನೇ ಎದ್ದು ರೆಡಿ ಆಗಿ ಗಂಡನನ್ನ ಎಬ್ಬಿಸಲು ಬರುತ್ತಾಳೆ ಪುಷ್ಪಾ. ಆದರೆ ಆಕಾಶ್ ಎಳದೇ ಮುತ್ತಿಗಾಗಿ ಪುಷ್ಪಾಳನ್ನ ಪೀಡಿಸುತ್ತಾನೆ. ಇವತ್ತು ನನ್ನ ಗೆಳತಿ ಮನೆಗೆ ಬರ್ತಾಳೆ ಬೇಗ ಎದ್ದು ರೆಡಿಯಾಗಿ ಎಂದು ಗಂಡನಿಗೆ ತಾಕೀತು ಮಾಡಿ ಬಲವಂತದಿಂದ ಅವನನ್ನು ಎಬ್ಬಿಸಿ ಸ್ನಾನಕ್ಕೆ ಕಳುಹಿಸುತ್ತಾಳೆ. ಆ ಸೈಕಲ್ ಗ್ಯಾಪ್ ಅಲ್ಲೇ ಹೆಂಡತಿಗೆ ಸಿಹಿ ಮುತ್ತು ನೀಡುತ್ತಾನೆ ಆಕಾಶ್.
ಬೃಂದಾವನಕ್ಕೆ ಹೊರಟ ಸಹನಾಗೆ ದಾರಿ ಮಧ್ಯದಲ್ಲೇ ಹಳೆಯ ಸ್ನೇಹಿತೆಯೊಬ್ಬಳು ಅಡ್ಡ ಬರುತ್ತಾಳೆ. ಅವಳನ್ನು ನೋಡಿ ಕೋಪಗೊಳ್ಳುವ ಸಹನಾ ಎಲ್ಲವನ್ನೂ ಬಿಟ್ಟು ಹೋದ ನೀನು ಈಗ್ಯಾಕೆ ಬಂದೆ ಎಂದು ಕೋಪದಿಂದ ಪ್ತಶ್ನೆ ಮಾಡುತ್ತಾಳೆ.. ಆಗ ಅವಳ ಸ್ನೇಹಿತೆ ತನ್ನ ಬದುಕಿನಲ್ಲಿ ನಡೆದ ಘಟನೆಗಳನ್ನು ವಿವರಿಸುತ್ತಾಳೆ. ತಾನು ಪ್ರೀತಿಸಿ ಮದುವೆಯಾದ ಹುಡುಗನಿಗೆ ಮೊದಲೇ ಮದುವೆ ಆಗಿದ್ದು ತನ್ನ ಜೊತೆ ಪ್ರೀತಿ ನಾಟಕ ಮಾಡಿ ತನ್ನ ಬದುಕು ಹಾಳು ಮಾಡಿದ್ದು ಎಲ್ಲವನ್ನೂ ವಿವರಿಸುತ್ತಾಳೆ. ಅದನ್ನ ಕೇಳಿ ಸಹನಾಗೆ ಸ್ನೇಹಿತೆ ಮೇಲೆ ಕನಿಕರ ಬಂದ್ರೂ ಅವಳಿಗೆ ಮೋಸ ಮಾಡಿದ ವ್ಯಕ್ತಿ ಮೇಲೆ ಕೆಟ್ಟ ಕೋಪ ಬರುತ್ತೆ, ಅಲ್ಲದೇ ಮೊದಲೇ ಮದುವೆ ಆಗಿದ್ದು ಇನ್ನೊಂದು ಹುಡುಗಿ ಜೊತೆ ಪ್ರೀತಿ ನಾಟಕ ಮಾಡುವ ಗಂಡಸರಿಗೆ ಬಯ್ಯುವ ಸಹನಾ ಅಂತಹವರಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ.
ಬೃಂದಾವನದವರ ಪ್ರೀತಿ ಕಂಡು ಕಣ್ಣೀರಾದ ಸಹನಾ
ಬೃಂದಾವನಕ್ಕೆ ಬಂದ ಸಹನಾಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ ಮನೆ ಮಂದಿ. ಪುಷ್ಪಾ ತನ್ನ ಮನೆಯವರನ್ನೆಲ್ಲಾ ಸಹನಾಗೆ ಪರಿಚಯ ಮಾಡಿಕೊಡುತ್ತಾಳೆ.ಆ ಮನೆಯವರ ಮಾತು ಆತ್ಮೀಯತೆ ಸಹನಾಗೆ ಕಣ್ಣಲ್ಲಿ ನೀರು ಬರುವ ಹಾಗೆ ಮಾಡುತ್ತೆ. ಅವಳ ಕಣ್ಣೀರಿಗೆ ಕಾರಣ ಕೇಳಿದ ಮನೆಯವರ ಬಳಿ ತಾನು ಒಂಟಿಯಾಗಿ ಅಮ್ಮನ ಪ್ರೀತಿಯಲ್ಲಿ ಮಾತ್ರ ಬೆಳೆದಿರುವ ವಿಚಾರವನ್ನು ಹೇಳಿಕೊಳ್ಳುತ್ತಾಳೆ ಸಹನಾ. ಆಗ ಅಜ್ಜಮ್ಮ ಸೇರಿದಂತೆ ಪ್ರತಿಯೊಬ್ಬರು ಸಹನಾಳ ಬಳಿ ಇದು ನಿನ್ನ ಮನೆ, ನಾವೆಲ್ಲರೂ ನಿನ್ನವರು ಅಂದ್ಕೊ, ಇನ್ನು ಮುಂದೆ ನಿಂಗೆ ಬೇಕು ಅನ್ನಿಸಿದಾಗೆಲ್ಲ ಇಲ್ಲಿಗೆ ಬಾ ಎಂದು ಪ್ರೀತಿಯಿಂದ ಆಹ್ವಾನಿಸುತ್ತಾರೆ.
ತನ್ನ ಮನೆಯಲ್ಲಿ ಸಹನಾಳನ್ನ ನೋಡಿ ದಂಗಾದ ಆಕಾಶ್
ಸಹನಾ ಕಾಫಿ ಕುಡಿಯುತ್ತಾ ಮನೆಯವರ ಜೊತೆ ಮಾತನಾಡುತ್ತಿರುವ ಹೊತ್ತಿಗೆ ರೆಡಿಯಾಗಿ ಕೆಳಗೆ ಬರುತ್ತಾನೆ ಆಕಾಶ್. ಆದರೆ ಮೆಟ್ಟಿಲು ಇಳಿಯುತ್ತಾ ಬರುವ ಆಕಾಶ್ ಪುಷ್ಪಾ ಜೊತೆ ಸಹನಾ ಕುಳಿತಿದ್ದನ್ನು ನೋಡಿ ಶಾಕ್ ಆಗುತ್ತಾನೆ. ಅಲ್ಲಿ ಕ್ಷಣವೂ ನಿಲ್ಲದೇ ಗಾಬರಿಯಿಂದ ರೂಮ್ ಗೆ ಹೋಗುತ್ತಾನೆ. ಅವನು ಗಡಿಬಿಡಿಯಲ್ಲಿ ರೂಮ್‌ಗೆ ಹೋದ ರೀತಿ ಸತ್ಯಮೂರ್ತಿಗಳ ಮನದಲ್ಲಿ ಅನುಮಾನ ಹುಟ್ಟು ಹಾಕುತ್ತದೆ. ಆದರೆ ಮನೆಯವರು ಯಾರೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ರೂಮ್‌ಗೆ ಹೋದ ಆಕಾಶ್‌ಗೆ ಸಹನಾಳೇ ಪುಷ್ಪಾಳ ಸ್ನೇಹಿತೆ ಎಂಬುದು ಅರಿವಾಗುತ್ತದೆ. ಅವಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಅರಿಯದೇ ಪರದಾಡುತ್ತಿರುವ ಹೊತ್ತಿಗೆ ಮನೆ ತೋರಿಸುವ ನೆಪದಲ್ಲಿ ರೂಮ್ ಒಳಗೆ ಬರುತ್ತಾರೆ ಸಹನಾ ಪುಷ್ಪಾ. ಅವರು ಬರುವುದು ನೋಡಿ ಬಾತ್ ರೂಮ್ ಒಳಗೆ ಸೇರಿಕೊಳ್ಳುವ ಆಕಾಶ್ ತನಗೆ ಹೊಟ್ಟೆ ಕೆಟ್ಟಿದೆ ಎಂದು ಸುಳ್ಳು ಹೇಳುತ್ತಾನೆ. ಆದರೆ ಗಂಡನನ್ನು ಸಹನಾಗೆ ಪರಿಚಯ ಮಾಡಿಸಲೇಬೇಕು ಎಂದುಕೊಂಡ ಪುಷ್ಪಾ ಸಹನಾಳ ಜೊತೆ ರೂಮ್ ನಲ್ಲೇ ಕಾಯುತ್ತಿರುತ್ತಾಳೆ.ಇತ್ತು ಬಾತ್ ರೂಮ್ ನಲ್ಲಿ ಸಿಕ್ಕಿ ಹಾಕಿಕೊಂಡ ಆಕಾಶ್ ಸ್ನೇಹಿತ ಸುನಾಮಿಗೆ ಕಾಲ್ ಮಾಡಿ ಸಹನಾ ಮನೆಗೆ ಬಂದಿರುವ ವಿಚಾರ ಹೇಳುತ್ತಾನೆ. ಮಾತ್ರವಲ್ಲ ಹೇಗಾದ್ರು ಅವಳನ್ನ ಮನೆಯಿಂದ ಹೊರ ಬರುವ ಹಾಗೆ ಮಾಡು ಎಂದು ರಿಕ್ವೆಸ್ಟ್ ಮಾಡುತ್ತಾನೆ.
ಸುನಾಮಿ ಮಾಡಿದ ಪ್ಲಾನ್ ವರ್ಕ್ ಆಗುತ್ತಾ, ಬೃಂದಾವನದಲ್ಲಿ ಸಹನಾ-ಆಕಾಶ್ ಮುಖಾಮುಖಿ ಆಗುತ್ತಾ? ಸಹನಾ ಭಾರ್ಗವಿ ಮಗಳು ಅನ್ನೋದು ಮನೆಯವರಿಗೆ ತಿಳಿಯುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.
ಬೃಂದಾವನ ಸೀರಿಯಲ್ ಪಾತ್ರವರ್ಗ
ಚಿತ್ಕಳಾ ಬಿರಾದಾರ್: ಸುಧಾಮೂರ್ತಿ (ಅಜ್ಜಮ್ಮ)
ವರುಣ್ ಆರಾಧ್ಯ: ಆಕಾಶ್ (ನಾಯಕ)
ಅಮೂಲ್ಯ ಭಾರದ್ವಜ್: ಪುಷ್ಪಾ (ನಾಯಕಿ)
ಸಹನಾ ಶೆಟ್ಟಿ: ಸಹನಾ (ಆಕಾಶ್ ಗರ್ಲ್ ಫ್ರೆಂಡ್)
ಅನು ಪಲ್ಲವಿ ಗೌಡ: ಗಿರಿಜಾ (ಪುಷ್ಪಾಳ ಅತ್ತಿಗೆ)
ಮಾನಸ ಗುರುಸ್ವಾಮಿ: ಲಲಿತಾ (ಗಿರಿಜಾಳ ಸ್ನೇಹಿತೆ)
ರಕ್ಷಿತಾ ರವೀಂದ್ರ: ರತ್ನ (ಆಕಾಶ್ ಸಹೋದರಿ)
ಸಾಗರ್ ಗೌಡ: ರಾಘವೇಂದ್ರ (ಆಕಾಶ್ ಭಾವ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)