Brundavana Serial: ಸಹನಾಗೆ ಸತ್ಯ ಗೊತ್ತಾಯ್ತು, ಭಾರ್ಗವಿ ಬದಲಾದ್ಲು, ಸುಖಾಂತ್ಯ ಕಂಡ ಬೃಂದಾವನ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸಹನಾಗೆ ಸತ್ಯ ಗೊತ್ತಾಯ್ತು, ಭಾರ್ಗವಿ ಬದಲಾದ್ಲು, ಸುಖಾಂತ್ಯ ಕಂಡ ಬೃಂದಾವನ ಧಾರಾವಾಹಿ

Brundavana Serial: ಸಹನಾಗೆ ಸತ್ಯ ಗೊತ್ತಾಯ್ತು, ಭಾರ್ಗವಿ ಬದಲಾದ್ಲು, ಸುಖಾಂತ್ಯ ಕಂಡ ಬೃಂದಾವನ ಧಾರಾವಾಹಿ

Brindavana Kannada Serial Today Episode May 24th: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಹಾಗೂ ಅಂತಿಮ ಎಪಿಸೋಡ್‌ನಲ್ಲಿ ಸಹನಾ ಆಕಾಶ್‌ ಎದುರು ಬದುರಾಗುತ್ತಾರೆ. ಭಾರ್ಗವಿಯೇ ಸಹನಾ ತಾಯಿ ಎಂಬುದು ತಿಳಿಯುತ್ತದೆ. ಭಾರ್ಗವಿ ಬೃಂದಾವನದ ಮಗಳೇ ಎಂಬ ವಿಚಾರವೂ ಹೊರ ಬರುವ ಮೂಲಕ ಧಾರಾವಾಹಿ ಮುಕ್ತಾಯವಾಗುತ್ತದೆ.

ಸಹನಾಗೆ ಸತ್ಯ ಗೊತ್ತಾಯ್ತು, ಭಾರ್ಗವಿ ಬದಲಾದ್ಲು, ಸುಖಾಂತ್ಯ ಕಂಡ ಬೃಂದಾವನ ಧಾರಾವಾಹಿ
ಸಹನಾಗೆ ಸತ್ಯ ಗೊತ್ತಾಯ್ತು, ಭಾರ್ಗವಿ ಬದಲಾದ್ಲು, ಸುಖಾಂತ್ಯ ಕಂಡ ಬೃಂದಾವನ ಧಾರಾವಾಹಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 24) ಸಂಚಿಕೆಯಲ್ಲಿ ಸಹನಾ-ಪುಷ್ಪ‌ ರೂಮ್‌ನಲ್ಲಿ ಮಾತನಾಡುತ್ತಿರುವಾಗ ಸಹನಾಗೆ ಸುನಾಮಿಯಿಂದ ಕಾಲ್ ಬರುತ್ತೆ, ರೂಮಿಂದ ಹೊರಗಡೆ ಬಂದು ಮಾತನಾಡುವ ಸಹನಾ ಬಳಿ ಸುನಾಮಿ ʼಸಹನಾ ನೀನು ಈಗ ಎಲ್ ಇದೀಯಾ, ಹೇಗ್ ಇದೀಯಾ ಹಂಗೆ ಕಾಲೇಜ್ ಹತ್ರ ಇರೋ ಕಾಫಿ ಡೇಗೆ ಬಾ. ಆಕಾಶ್ ಕಡೆಯಿಂದ ನಿಂಗೊಂದು ಸರ್ಪ್ರೈಸ್ ಇದೆʼ ಎಂದು ಕಾಲ್‌ ಕಟ್‌ ಮಾಡುತ್ತಾರೆ‌. ಅವನ ಮಾತು ಕೇಳಿ ಥ್ರಿಲ್ ಆಗುವ ಸಹನಾ ಕೂಡಲೇ ಹೊರಟು ನಿಲ್ಲುತ್ತಾಳೆ. ಪುಷ್ಪಾ ಸ್ವಲ್ಪ ಹೊತ್ತು ಇದ್ದು ಹೋಗು ಅಂದ್ರು ಆಕೆ ಕೇಳೋದಿಲ್ಲ. ಸಹನಾಳನ್ನ ಬಿಡಲು ಹಾಲ್‌ಗೆ ಬರುತ್ತಾಳೆ ಪುಷ್ಪಾ. ಸಹನಾ ಅಜ್ಜಮ್ಮ ಸೇರಿ ಮನೆಯವರೆಲ್ಲರಿಗೂ ಹೇಳಿ ಹೊರಡುವಾಗ ಬೃಂದಾವನದ ಫ್ಯಾಮಿಲಿ ಫೋಟೊ ಕಣ್ಣಿಗೆ ಬೀಳುತ್ತದೆ. ಅದನ್ನ ನೋಡಿದ ಸಹನಾ ʼಹೇ, ಪುಷ್ಪಾ ನೀನೆಷ್ಟು ಪೆದ್ದಿ, ಇಡೀ ಮನೆಯವರನ್ನ ಪರಿಚಯ ಮಾಡಿಸಲು ಮನೆಯೆಲ್ಲಾ ಸುತ್ತಿಸುವ ಬದಲು ಈ ಫ್ಯಾಮಿಲಿ ಫೋಟೊದಲ್ಲೇ ಎಲ್ಲರನ್ನೂ ತೋರಿಸಬಹುದಿತ್ತುʼ ಅಂತ‌ ಫೋಟೊ ಹತ್ತಿರ ಹೋಗಿ ನೋಡುತ್ತಾಳೆ. ಆ ಫೋಟೊದಲ್ಲಿ ಆಕಾಶ್‌ನನ್ನು ನೋಡಿ ಶಾಕ್ ಆಗ್ತಾಳೆ. ಇವರು ಎಂದು ಫೋಟೊ ಕಡೆ ಕೈ ತೋರಿಸುವ ಹೊತ್ತಿಗೆ ʼಇವರು ಯಾರು ಹೇಳು?ʼ‌ ಎಂದು ಪುಷ್ಪಾ‌ ಪ್ರಶ್ನೆ ‌ಮಾಡುತ್ತಾಳೆ.‌ ಗೊಂದಲದಲ್ಲೇ ಸಹನಾ ʼಆಕಾಶ್‌ʼ ಎಂದು ಉದ್ಘಾರ ತೆಗೆಯುತ್ತಾಳೆ. ಆಗ ಸಹನಾ ʼಹೌದು ಇವರೇ ಆಕಾಶ್, ನನ್ನ ಪತಿದೇವರು ನನ್ನ ಗಂಡʼ ಎಂದು ಹೇಳೋದು ಕೇಳಿ ಸಹನಾ ಮನಸ್ಸು ನುಚ್ಚು ನೂರಾಗುತ್ತೆ, ಆದರೂ ಸಾವರಿಸಿಕೊಂಡ ಸಹನಾಗೆ ಎಲ್ಲಾ ವಿಷಯ ಅರ್ಥ ಆಗುತ್ತೆ, ಆಕಾಶ್ ತನ್ನಿಂದ ತಪ್ಪಿಸಿಕೊಳ್ಳುವ ಸಲುವಾಗಿಯೇ ಹೊಟ್ಟೆ ಕೆಟ್ಟಂತೆ ನಾಟಕ ಮಾಡಿ ಬಾತ್‌ರೂಮ್ ಅಲ್ಲಿ ಇರುವುದು ಎನ್ನುವುದು ತಿಳಿಯುತ್ತದೆ. ಆಗ ಅವಳು ಪುಷ್ಪಾ ಬಳಿ ಈಗಲೇ ನಿನ್ನ ಗಂಡನ ಬಳಿಗೆ ಹೋಗಿ ನನ್ನ ಸ್ನೇಹಿತೆ ಹೋದ್ಲು ಅಂತ ಹೇಳಿ ಕರ್ಕೊಂಡ್ ಬಾ ಎಂದು ಕಳುಹಿಸುತ್ತಾಳೆ. ಪುಷ್ಪಾ ಯಾಕೆ? ಅಂತ ಕೇಳಿದ್ರೆ ʼಮೊದಲು ನೀನು ಕರ್ಕೊಂಡ್ ಬಾ ಆಮೇಲೆ ನಿಂಗೆ ಅರ್ಥ ಆಗುತ್ತೆʼ ಅಂತ ಹೇಳಿ ಕಳಿಸುತ್ತಾಳೆ.

ಮನೆಯವರ ಎದುರು ಸಹನಾ-ಆಕಾಶ್‌ ಎದುರು ಬದುರು

ಇತ್ತ ಸಹನಾ ಹೋದ್ಲಾ ಇಲ್ವಾ ಅಂತ ನೋಡೋಕೆ ನಿಧಾನಕ್ಕೆ ಹೊರ ಬರುವ ಆಕಾಶ್ ಎದುರೇ ಪುಷ್ಪಾ ಬಂದು ನಿಲ್ತಾಳೆ. ಹೊಟ್ಟೆನೋವಿನ ಬಗ್ಗೆ ವಿಚಾರಿಸುವ ಪುಷ್ಪಾ ಅಜ್ಜಿ ಕರಿತಿದಾರೆ ಎಂದು ಸುಳ್ಳು ಹೇಳಿ ಆಕಾಶ್‌ನನ್ನ ಹಾಲ್‌ಗೆ ಕರೆದುಕೊಂಡು ಬರ್ತಾಳೆ. ಸಹನಾ ಹೋಗೇಬಿಟ್ಲು ಎಂಬ ಧೈರ್ಯದಿಂದ ಹಾ;ಗೆ ಬರುವ ಆಕಾಶ್‌ಗೆ ಸಹನಾ ಎದುರಾಗುತ್ತಾಳೆ. ಅವಳನ್ನು ನೋಡಿ ಸಹನಾ ಅದು ಇದು‌ ಎಂದು ತೊದಲು ಆಕಾಶ್‌ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ ಸಹನಾ. ಅಲ್ಲದೇ‌ ಮನೆಯವರ ಎದುರು ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನೂ ಹೇಳುತ್ತಾಳೆ. ಇದನ್ನ ಕೇಳಿ ಮನೆಯವರಿಗೆಲ್ಲಾ ಶಾಕ್ ಆಗುವುದು ಮಾತ್ರವಲ್ಲ ಆಕಾಶ್ ಮೇಲೆ‌ ಸಿಕ್ಕಾಪಟ್ಟೆ ಬೇಸರ ಆಗುತ್ತದೆ. ಮೊಮ್ಮಗ ಮಾಡಿದ‌ ಕೆಲಸ‌ ಸಹಿಸದ ಅಜ್ಜಮ್ಮ‌ ಕೂಡಲೇ ಮನೆ ಬಿಟ್ಟು ಹೋಗುವಂತೆ ಆಕಾಶ್‌ಗೆ ಆಜ್ಞೆ ಮಾಡುತ್ತಾರೆ.

ಸಹನಾಗೆ ಬ್ರೈನ್‌ಟ್ಯೂಮರ್‌ ಇರುವ ವಿಚಾರ ಹೇಳಿದ ಆಕಾಶ್‌

ಆಗ ಆಕಾಶ್ ʼನನಗೆ ಈಗಲೂ ಪುಷ್ಪಾ ಮೇಲೆ ಪ್ರೀತಿ ಇರೋದು ನಾನು ಸಹನಾಳನ್ನ ಪ್ರೀತಿ ಮಾಡುತ್ತಿರುವಂತೆ ನಾಟಕ ಮಾಡುತ್ತಿರುವುದಕ್ಕೆ ಕಾರಣ ಇದೆ. ಆಕೆಗೆ ಬ್ರೈನ್ ಟ್ಯೂಮರ್ ಇದೆ. ಅದಕ್ಕೆ ಅವಳು‌ ಖುಷಿಯಾಗಿರಲಿ ಅಂತ ಪ್ರೀತಿ ನಾಟಕ ಮಾಡಿದೆ. ಅವಳಿನ್ನು ಬದುಕೋದು ಕೇವಲ ಆರು ತಿಂಗಳುʼ ಎಂದು ಇರುವ ಸತ್ಯವನ್ನು ಮನೆಯವರ ಮುಂದೆ ಹೇಳಿಕೊಳ್ಳುತ್ತಾಳೆ. ಅದನ್ನ ಕೇಳಿ ಸಹನಾಗೆ ಇನ್ನಷ್ಟು ಕೋಪ ಬರುತ್ತೆ, ʼಯಾರ್ ಹೇಳಿದ್ದು ನಿಂಗೆ, ನಂಗೆ ಟ್ಯೂಮರ್ ಇದೆ ಅಂತ ನಂಗೆ ಚಿಕ್ಕ ಕಾಯಿಲೆನೂ ಇಲ್ಲ‌, ಈಗ ನಿನ್ನ ನಾಟಕ ತಿಳಿಯುತ್ತೆ ಅಂತ ಸುಳ್ಳು ಹೇಳ್ತೀಯಾ?ʼ ಎಂದು ಕೋಪ ವ್ಯಕ್ತಪಡಿಸುತ್ತಾಳೆ. ಆಕಾಶ್‌ಗೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನಿಸಿದಾಗ ಸತ್ಯ ಹೇಳಿರುತ್ತಾನೆ. ಈಗ ಸಹನಾ ಕೋಪ ಕಂಡ ಆಕಾಶ್‌ ʼನಿಂಗೆ ಬ್ರೈನ್‌ ಟ್ಯೂಮರ್‌ ಇರುವ ವಿಚಾರ ಹೇಳಿದ್ದು ನಿಮ್ಮ ತಾಯಿ. ಅವರೇ ನನ್ನ ಬಳಿ ಪ್ರೀತಿಸುವಂತೆ ನಾಟಕ ಮಾಡುವಂತೆ ಹೇಳಿದ್ದುʼ ಎಂದು ಹೇಳುತ್ತಾರೆ. ಅಲ್ಲದೇ ಇದೇ ಸತ್ಯ ಎಂದು ಅಜ್ಜಿ ಹಾಗೂ ಪುಷ್ಪಾಳ ಮೇಲೆ ಆಣೆ ಮಾಡಿ ಹೇಳುತ್ತಾನೆ. ಅಲ್ಲದೇ ಬೇಕಾದ್ರೇ ನಿಮ್ಮ ತಾಯಿಗೆ ಕೇಳು ಎನ್ನುತ್ತಾನೆ. ಆಗ ಕೇಳೋದೇನು ಅವರನ್ನೇ ಇಲ್ಲಿಗೆ ಕರ್ಕೊಂಡು ಬರ್ತೀನಿ, ನಿಮ್ಮ ಮನೆಯವರ ಎದುರು ಸತ್ಯ ಬಯಲಾಗ್ಲಿ ಎಂದು ಕೋಪದಿಂದ ಮನೆಗೆ ಹೋಗುತ್ತಾಳೆ. ಭಾರ್ಗವಿಯನ್ನು ಕರೆದು ಈಗಲೇ ನನ್ನೊಂದಿಗೆ ಬಾ ಎಂದು ಕೈಹಿಡಿದು ಎಳೆದುಕೊಂಡು ಹೋಗುತ್ತಾಳೆ. ಎಲ್ಲಿಗೆ ಎಂದು ಕೇಳಿದ್ರು ಹೇಳೋದಿಲ್ಲ.

ಬೃಂದಾವನದ ಕುಡಿಯೇ ಭಾರ್ಗವಿ

ಭಾರ್ಗವಿಯನ್ನು ಸೀದಾ ಬೃಂದಾವನಕ್ಕೆ ಕರೆದುಕೊಂಡು ಬರುತ್ತಾಳೆ ಸಹನಾ. ಸಹನಾ ತಾಯಿಯೇ ಭಾರ್ಗವಿ ಎಂದು ತಿಳಿದು ಸುಧಾಮೂರ್ತಿ (ಅಜ್ಜಮ್ಮ), ಅನುಪಮಾ, ಪುಷ್ಪಾ ಶಾಕ್‌ ಆಗುತ್ತಾರೆ. ಆ ಕ್ಷಣಕ್ಕೆ ಸುಧಾಮೂರ್ತಿ ಅವರಿಗೆ ಎಲ್ಲವೂ ಅರ್ಥವಾಗಿದೆ. ʼಯೇ ಪಾಪಿ ನಿನ್ನ ದ್ವೇಷಕ್ಕೆ ಮಗಳ ಜೀವನ ಹಾಳು ಮಾಡಲು ಹೊರಟಿದ್ದೀಯಾ?ʼ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಭಾರ್ಗವಿ ʼಹೌದು, ನೀವು ಮಾಡಿರುವುದಕ್ಕೆ ನಾನು ದ್ವೇಷ ತೀರಿಸಿಕೊಂಡೇ ತೀರಿಸಿಕೊಳ್ಳುತ್ತೇನೆ, ನಿಮ್ಮ ಮೇಲಿನ ದ್ವೇಷಕ್ಕೆ ನಾನು ಏನ್‌ ಬೇಕಾದ್ರೂ ಮಾಡ್ತೀನಿʼ ಅಂತಾಳೆ. ʼನೀವು ನನ್ನ ಗಂಡನನ್ನು ಸಾಯಿಸಿದ್ರಿ, ನಾನು ಅವರನ್ನು ಮದುವೆಯಾಗುವುದು ನಿಮಗೆ ಇಷ್ಟ ಇರ್ಲಿಲ್ಲಾ ಅದಕ್ಕೆ ನೀವು ಆಕ್ಸಿಡೆಂಟ್‌ ಮಾಡಿ ಕೊಲೆ ಮಾಡಿಸಿದ್ರಿ ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಸುತ್ತಾಳೆ. ಅಲ್ಲದೇ ಸುಧಾಮೂರ್ತಿ ಅವರು ತನ್ನ ದೊಡ್ಡಮ್ಮ ಎಂಬ ಸತ್ಯವನ್ನು ಮಗಳಿಗೆ ಹೇಳುತ್ತಾಳೆ. ಅವಳ ಮಾತು ಕೇಳಿ ಆಕ್ರೋಶಗೊಳ್ಳುವ ʼಭಾರ್ಗವಿ ನಿಂಗೆ ಆವತ್ತಿಂದಾನೂ ಹೇಳ್ತಾ ಇದೀನಿ, ನಿನ್ನ ಗಂಡನನ್ನ ಕೊಲೆ ಮಾಡಿದ್ದು ನಾನಲ್ಲ. ನಿನ್ನ ಗಂಡ ಸ್ಮಗ್ಲರ್‌ ಆಗಿದ್ದ, ಪೊಲೀಸ್‌ ರೆಕಾರ್ಡ್‌ ಅಲ್ಲಿ ಅವರ ಹೆಸರಿತ್ತು. ಅದಕ್ಕೆ ಅವನನ್ನ ಮದುವೆಯಾಗೋದು ಬೇಡ ಅಂತ ನಿನಗೆ ತಡೆದಿದ್ದು. ಪೊಲೀಸರು ಆರೆಸ್ಟ್‌ ಮಾಡಿ ಕರೆದುಕೊಂಡು ಹೋಗುವಾಗ ಅವನನ್ನು ತಪ್ಪಿಸಿಕೊಂಡು ರೋಡ್‌ ಕ್ರಾಸ್‌ ಮಾಡುವಾಗ ಲಾರಿ ಆಕ್ಸಿಡೆಂಟ್‌ ಅವನು ಸತ್ತಿದ್ದು, ಆದರೆ ಇದನ್ನ ಹೇಳಿದ್ರೆ ನೀನು ಕೇಳಿಸಿಕೊಳ್ತಾನೆ ಇರ್ಲಿಲ್ಲʼ ಎಂದು ಸತ್ಯವನ್ನೆಲ್ಲಾ ಎಲ್ಲರ ಎದುರ ಹೇಳಿ ಬಿಡುತ್ತಾರೆ.

ಕ್ಷಮೆ ಕೇಳಿ ಬದಲಾಗುವ ಭಾರ್ಗವಿ

ಸುಧಾಮೂರ್ತಿ ಅವರ ಮಾತು ಕೇಳಿ ಭಾರ್ಗವಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಎಲ್ಲರೆದುರು ಸುಧಾಮೂರ್ತಿ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾಳೆ, ಮಾತ್ರವಲ್ಲ ತನ್ನನ್ನೂ ಸಹನಾಳನ್ನು ಈ ಮನೆಗೆ ಸೇರಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಾಳೆ. ಅವಳು ಬದಲಾಗಿದ್ದನ್ನು ನೋಡಿ ಸಂಭ್ರಮದಿಂದ ನಲಿದಾಡುತ್ತಾರೆ ಸುಧಾಮೂರ್ತಿ. ಸಹನಾ ಕೂಡ ಆಕಾಶ್‌ನನ್ನು ಪುಷ್ಪಾಗೆ ಒಪ್ಪಿಸುತ್ತಾಳೆ. 37ರಿದ್ದ ಬೃಂದಾವನದಲ್ಲಿ ಭಾರ್ಗವಿ ಸಹನಾ ಸೇರಿ 39 ಆಗುತ್ತಾರೆ. ಎಲ್ಲರೂ ಒಂದಾಗುವ ಮೂಲಕ ಬೃಂದಾವನ ಧಾರಾವಾಹಿ ಅಂತ್ಯವಾಗುತ್ತದೆ.

Whats_app_banner