ಬೃಂದಾವನ ಸೀರಿಯಲ್: ವಧುದಕ್ಷಿಣೆ ಬಗ್ಗೆ ಹೆಂಡತಿಯನ್ನು ಕೆದಕಿದ ಆಕಾಶ್, ಗೊಂದಲದಲ್ಲಿ ಸಿಲುಕಿದ ಪುಷ್ಪಾ
Brindavana Kannada Serial Today Episode Feb 7: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಮದುವೆಯ ಸಮಯದಲ್ಲಿ ಪುಷ್ಪಾಳ ಅತ್ತಿಗೆ ಪಡೆದ ವಧುದಕ್ಷಿಣೆಯ ಬಗ್ಗೆ ಪುಷ್ಪಾಳ ಬಳಿ ಇಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ ಆಕಾಶ್. ವಧುದಕ್ಷಿಣೆ ವಿಚಾರ ತಿಳಿದಿರದ ಪುಷ್ಪಾ ಈ ಬಗ್ಗೆ ಅಜ್ಜಿ ಹಾಗೂ ಅತ್ತೆಯನ್ನು ಪ್ರಶ್ನಿಸುತ್ತಾಳೆ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.7) ಸಂಚಿಕೆಯಲ್ಲಿ ಪುಷ್ಪಾಳ ಬಳಿ ಆಕಾಶ್ ವಧುದಕ್ಷಿಣೆಯ ಬಗ್ಗೆ ನೇರವಾಗಿ ಪ್ರಶ್ನೆ ಕೇಳುತ್ತಾನೆ. ʼಮದುವೆ ಸಮಯದಲ್ಲಿ ತಮ್ಮ ಮನೆಯವರಿಂದ ಎಷ್ಟು ಹಣ ಪಡೆದಿದ್ರಿʼ ಎಂದು ಕೇಳಿದ ಗಂಡನ ಪ್ರಶ್ನೆಗೆ ಪುಷ್ಪಾ ಗಾಬರಿಗೊಳ್ಳುತ್ತಾಳೆ. ಅಲ್ಲದೇ ʼನನಗೆ ದೇವರಿಗೆ ದಕ್ಷಿಣೆ ನೀಡುವುದು ಗೊತ್ತು, ವಧುದಕ್ಷಿಣೆ ಅಂದ್ರೆ ಏನು?, ಅದನ್ನ ಯಾಕೆ ಕೊಡ್ತಾರೆʼ ಎಂದು ತನ್ನ ಎಂದಿನ ಮುಗ್ಧತೆಯಿಂದ ಗಂಡನನ್ನು ಮರು ಪ್ರಶ್ನಿಸುತ್ತಾಳೆ. ಇದರಿಂದ ಕೋಪಗೊಂಡ ಆಕಾಶ್ ಆಕೆಯ ಮೇಲೆ ಕೈ ಎತ್ತಲು ಹೋಗಿ ಕೋಪ ನಿಯಂತ್ರಣ ಮಾಡಿಕೊಳ್ಳುತ್ತಾನೆ.
ಆಗ ಪುಷ್ಪಾ ನೆನಪಿಗೆ ಬಂದಂತೆ ತನಗೆ ಮದುವೆಯಾದ ಮೇಲೆ ಅತ್ತೆ ತಾಯಿ ಒಂದೇ ಹಾಕಿಕೊಳ್ಳೋದು ನೋಡಿ ಈ ಸರ ಕೊಟ್ಟಿದ್ದಾರೆ ಎನ್ನುತ್ತಾಳೆ. ಆದರೂ ಆಕಾಶ್‌ಗೆ ಆಕೆಯ ಉತ್ತರಗಳ ಮೇಲೆ ಸಮಾಧಾನ ಮೂಡುವುದಿಲ್ಲ. ಗಂಡನ ಕೋಪ, ಕೋಪದ ಹಿಂದಿನ ಉದ್ದೇಶ ತಿಳಿಯದ ಪುಷ್ಪಾ ಗೊಂದಲಕ್ಕೆ ಸಿಲುಕುತ್ತಾಳೆ. ಅಲ್ಲದೇ ಇದರ ಬಗ್ಗೆ ನಾನು ಅತ್ತೆಯ ಬಳಿಯೇ ಕೇಳುತ್ತೇನೆ ಎಂದು ನೇರವಾಗಿ ಅತ್ತೆಯ ಬಳಿ ಬರುತ್ತಾಳೆ.
ಆಕಾಶ್ ಬಗ್ಗೆ ದಾಕ್ಷಾಯಿಣಿಯ ಅಭಿಮಾನದ ಮಾತು
ಅತ್ತೆ ಸುಧಾಮೂರ್ತಿಗೆ ಮಾತ್ರೆ ಕೊಡಲು ಬರುವ ದಾಕ್ಷಾಯಿಣಿ ಅತ್ತೆ ಬಳಿಯ ನಾಳೆಯ ನಡೆಯುವ ಪೂಜೆ ಬಗ್ಗೆ ಮಾತನಾಡುತ್ತಾಳೆ. ಸೊಸೆ ಮನೆಯಲ್ಲಿ ಪೂಜೆ ನಡೆಸಲು ತಯಾರಿ ನಡೆಸಿರುವ ಬಗ್ಗೆ ಸುಧಾಮೂರ್ತಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಲ್ಲದೆ ಈ ಪೂಜೆ ನಡೆಯಲು ಹಾಗೂ ಮನೆಯಲ್ಲಿ ಎಲ್ಲರನ್ನೂ ಒಂದಾಗಿ ಸೇರಿಸಲು ನೀನೇ ಕಾರಣ ಎನ್ನುತ್ತಾರೆ. ಆ ದಾಕ್ಷಾಯಿಣಿ ಇದಕ್ಕೆ ಕಾರಣ ನನ್ನ ಮಗ ಆಕಾಶ್ ಎಂದು ಆತನನ್ನು ಮನಸಾರೆ ಹೊಗಳುತ್ತಾಳೆ. ಜೊತೆಗೆ ತಾನು ಆಕಾಶ್‌ಗೆ ಜೀವ ಅಷ್ಟೇ ಕೊಟ್ಟೆ, ಆದ್ರೆ ಈ ಮನೆಯಲ್ಲಿ ಎಲ್ಲರೂ ಅವನಿಗೆ ಪ್ರೀತಿ ನೀಡಿದ ತಾಯಿಯಾದ್ರೂ ಅಂತೆಲ್ಲಾ ಭಾವುಕಳಾಗಿ ಮಾತನಾಡುತ್ತಾಳೆ. ಅದಕ್ಕೆ ಅತ್ತೆ ಸುಧಾಮೂರ್ತಿ ಶ್ರೀಕೃಷ್ಣನ ಉದಾಹರಣೆ ನೀಡಿ ʼಶ್ರೀಕೃಷ್ಣನಂತೆ ನಮ್ಮ ಆಕಾಶ, ದೇವಕಿ ಅವನನ್ನು ಹೆತ್ತರೂ ಆತ ಬೆಳೆದಿದ್ದು ಯಶೋಧೆಯ ಮಡಿಲಲ್ಲಿ, ಆಕಾಶ್ ಕೂಡ ಎಲ್ಲರ ಮಡಿಲಿನಲ್ಲಿ ಬೆಳೆದ ಹುಡುಗʼ ಎಂದು ಖುಷಿಯಿಂದ ಹೇಳುತ್ತಾರೆ. ಇವರಿಬ್ಬರೂ ಮಾತನಾಡುವಾಗ ಬರುವಾಗ ಪುಷ್ಪಾ ಬಾಗಿಲ ಬಳಿಯೇ ನಿಲ್ಲುತ್ತಾಳೆ. ಮರಳಿ ಹೋಗೋಣ ಎಂದುಕೊಂಡಾಗ ಫ್ಲವರ್ ವಾಜ್ ಕಾಲಿಗೆ ತಾಕಿ ಶಬ್ದವಾಗುತ್ತದೆ.
ಅತ್ತೆ, ಅಜ್ಜಮ್ಮನ ಬಳಿ ವಧುದಕ್ಷಿಣೆ ಬಗ್ಗೆ ಕೇಳುವ ಸೊಸೆ
ವಧುದಕ್ಷಿಣೆ ಬಗ್ಗೆ ಗೊಂದಲ ಹೊಂದಿದ್ದ ಪುಷ್ಪಾ ಈ ಬಗ್ಗೆ ನೇರವಾಗಿ ಅತ್ತೆ ಹಾಗೂ ಅಜ್ಜಮ್ಮನ ಬಳಿ ʼಮದುವೆಯಲ್ಲಿ ನಾವು ವಧುದಕ್ಷಿಣೆ ಪಡೆದಿದ್ದೀವಾ?ʼ ಎಂದು ಪ್ರಶ್ನಿಸುತ್ತಾಳೆ. ಆಗ ಅತ್ತೆ ಹಾಗೂ ಅಜ್ಜಮ್ಮನ ಇಬ್ಬರೂ ಶಾಕ್‌ಗೆ ಒಳಗಾಗುತ್ತಾರೆ. ನಿನಗೆ ಈ ಬಗ್ಗೆ ಯಾರು ಕೇಳಿದ್ದು ಎಂದು ಪುಷ್ಪಾ ಬಳಿ ಕೇಳುತ್ತಾರೆ. ಆಗ ಪುಷ್ಪಾ ಆಕಾಶ್ ಅವರೇ ಕೇಳಿದ್ದು ಎನ್ನುತ್ತಾಳೆ. ಆಗ ಆಕಾಶ್ ತಾಯಿ ದಾಕ್ಷಾಯಿಣಿ ಅವನು ತಮಾಷೆ ಮಾಡಿದ್ದು, ನೀನು ಅದನ್ನು ಗಂಭೀರವಾಗಿ ತಗೋಬೇಡ ಎಂದು ಸಮಾಧಾನ ಮಾಡುತ್ತಾರೆ. ನಾಳೆ ಮನೆಯಲ್ಲಿ ನಡೆಯುವ ಪೂಜೆ ಸಾಂಗವಾಗಿ ನೆರವೇರುವುದೇ, ವಧುದಕ್ಷಿಣೆಯ ಬಗ್ಗೆ ಆಕಾಶ್‌ಗೆ ನಿಜ ಅರಿವಾಗುವುದೇ ಎಂಬುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಬೇಕು.