ಬೃಂದಾವನ ಸೀರಿಯಲ್: ಊಟದ ಟೇಬಲ್ ಮುಂದೆ ಗಿರಿಜಾ ಹೈಡ್ರಾಮಾ; ಮಗನ ಸಂಸಾರದ ಬಗ್ಗೆ ದಾಕ್ಷಾಯಿಣಿ ಮನಸ್ಸಲ್ಲಿ ಮೂಡಿತು ಅನುಮಾನ
Brindavana Kannada Serial Today Episode Feb 14: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಊಟದ ಟೇಬಲ್ ಮುಂದೆ ನಾಟಕ ಮಾಡುವ ಗಿರಿಜಾ ಮನೆಯವರ ಸಿಂಪಥಿ ಗಿಟ್ಟಿಸಲು ಪ್ರಯತ್ನ ಮಾಡುತ್ತಾಳೆ. ಇತ್ತ ಕಡೆ ಮಗಳು ತಾಯಿ ಗಿರಿಜಾಳ ವರ್ತನೆಯ ಬಗ್ಗೆ ತಂದೆಯಲ್ಲಿ ದೂರು ಹೇಳುತ್ತಾಳೆ. ಆಕಾಶ್ ತಾಯಿಗೆ ಮಗನ ಸಂಸಾರದ ಚಿಂತೆ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.14) ಸಂಚಿಕೆಯಲ್ಲಿ ಆಕಾಶ್ ಗಿರಿಜಾಳ ಬಳಿ ವಧುದಕ್ಷಿಣೆ ವಿಚಾರವಾಗಿ ಪ್ರಶ್ನಿಸುತ್ತಿರುವಾಗಲೇ ಬರುವ ಆಕಾಶ್ ಅಕ್ಕ ಆತನನ್ನು, ಗಿರಿಜಾಳನ್ನು ಊಟಕ್ಕೆ ಕರೆಯುತ್ತಾಳೆ. ನಾನು ಅವರ ಬಳಿ ಮಾತನಾಡಬೇಕು ಎಂದು ಆಕಾಶ್ ಹೇಳಿದ್ರೂ ಕೇಳದ ಆಕೆ ಅವರನ್ನು ಊಟಕ್ಕೆ ಕರೆದುಕೊಂಡು ಹೋಗುತ್ತಾಳೆ. ಆ ಕ್ಷಣಕ್ಕೆ ಗಿರಿಜಾ ಪರಿಸ್ಥಿತಿ ಹದ್ದಿನಿಂದ ತಪ್ಪಿಸಿಕೊಂಡ ಹಾವಿನಂತಾಗಿರುತ್ತದೆ.
ಪೂಜೆ ಮುಗಿದು ಊಟದ ಹೊತ್ತಿಗೆ ಆಕಾಶ್ ಪಕ್ಕದಲ್ಲೇ ಪುಷ್ಪಾಳನ್ನ ಊಟಕ್ಕೆ ಕುಳಿತುಕೊಳ್ಳುವಂತೆ ಅಜ್ಜಿ-ತಾತ, ಅಪ್ಪ-ಅಮ್ಮ ಒತ್ತಾಯಿಸುತ್ತಾರೆ. ಅದಕ್ಕೆ ಒಪ್ಪದ ಪುಷ್ಪಾ ಅತ್ತೆ-ಮಾವನ ಬಳಿ ನೀವೇ ಊಟಕ್ಕೆ ಕುಳಿತುಕೊಳ್ಳಿ, ನಾನು ಬಡಿಸುತ್ತೇನೆ ಎನ್ನುತ್ತಾಳೆ. ಅವರು ಮತ್ತೆ ಒತ್ತಾಯ ಮಾಡುತ್ತಾರೆ, ಆಗ ಪುಷ್ಪಾ ಬೇಡ ಅಂತಲೇ ಹೇಳುತ್ತಾಳೆ. ಅದಕ್ಕೆ ಆಕಾಶ್ ʼನೀವ್ಯಾಕೆ ಒತ್ತಾಯ ಮಾಡ್ತೀರಾ, ಅವರು ಆಮೇಲೆ ಕುಳಿತುಕೊಳ್ಳುತ್ತೇನೆ ಎಂದು ಹೇಳ್ತಾ ಇಲ್ವಾʼ ಎಂದು ಖಾರವಾಗಿ ಪ್ರತಿಕ್ರಿಯೆ ನೀಡುತ್ತಾನೆ. ಅಂತೂ ಇಂತೂ ಪುಷ್ಪಾಳನ್ನು ಆಕಾಶ್ ಪಕ್ಕಾ ಊಟಕ್ಕೆ ಕೂರಿಸಲು ಯಶಸ್ವಿಯಾಗುತ್ತಾರೆ ಮನೆಯವರು. ಎಲ್ಲರೂ ಊಟಕ್ಕೆ ಕುಳಿತ ಮೇಲೆ ಅಲ್ಲಿಗೆ ಎಂಟ್ರಿ ಕೊಡ್ತಾಳೆ ಗಿರಿಜಾ.
ಊಟದ ಟೇಬಲ್ ಮುಂದೆ ಗಿರಿಜಾಳ ಡ್ರಾಮಾ
ಊಟದ ಟೇಬಲ್ ಬಳಿ ಬರುವ ಗಿರಿಜಾ ಥಟ್ಟಂತ ಎಲೆ ಹಾಗೂ ಲೋಟ ಎತ್ತಿಕೊಂಡು ನೆಲದಲ್ಲಿ ಕೂರುತ್ತಾಳೆ. ಮೊದಲೇ ಪ್ಲಾನ್ ಮಾಡಿದಂತೆ ಮನೆಯವರ ಮುಂದೆ ನಾಟಕ ಮಾಡಿ ಅವರ ಅನುಕಂಪ ಪಡೆಯಬೇಕು ಎಂಬುದು ಆಕೆಯ ಉದ್ದೇಶವಾಗಿರುತ್ತದೆ. ಗಿರಿಜಾ ನೆಲದಲ್ಲಿ ಕೂತಿದ್ದು ನೋಡಿ ಪುಷ್ಪಾ ಹಾಗೂ ಮನೆಯವರು ಆಕೆಯನ್ನು ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸುತ್ತಾರೆ. ಅದಕ್ಕೆ ರಂಗಿನ ನಾಟಕ ಮಾಡುವ ಗಿರಿಜಾ ʼನಿಮ್ಮ ಸಮಕ್ಕೆ ನಾನು ನಿಮ್ಮೆದುರು ಕುಳಿತು ಊಟ ಮಾಡುವುದು ಅಂದ್ರೆ ಏನು, ನಾನು ಎಂದಿಗೂ ನಿಮ್ಮ ಸಮಕ್ಕೆ ಬರಲು ಸಾಧ್ಯವಿಲ್ಲ. ನಂಗೆ ಮನೆಯಲ್ಲಿ ಮೇಲೆ ಕುಳಿತು ಊಟ ಮಾಡಿ ಅಭ್ಯಾಸವಿಲ್ಲ, ಇಲ್ಲಿ ಕುಳಿತು ಊಟ ಮಾಡುತ್ತೇನೆʼ ಎಂದು ಹೈಡ್ರಾಮಾ ಮಾಡುತ್ತಾಳೆ. ಆದರೆ ಸುಧಾಮೂರ್ತಿ ಹಾಗೂ ಮನೆಯವರು ʼಪುಷ್ಪಾ ನಮ್ಮ ಮನೆಯವಳು ಅಂದ ಮೇಲೆ ನೀವೂ ನಮ್ಮ ಮನೆಯವರೇ, ಮೇಲೆ ಕುಳಿತು ಊಟ ಮಾಡಿ ಬನ್ನಿʼ ಎಂದು ಒತ್ತಾಯ ಮಾಡುತ್ತಾರೆ. ಆದರೂ ಆಕೆ ನಾಟಕ ಮುಂದುವರಿಸುತ್ತಾಳೆ. ಆಗ ಪುಷ್ಪಾ ಹಾಗಾದ್ರೆ ನಾನು ನಿಮ್ಮ ಜೊತೆ ಕೆಳಗೆ ಕುಳಿತುಕೊಳ್ಳುತ್ತೇನೆ ಎಂದಿದ್ದೆ ತಡ ಊಟದ ತಲೆ ಹಿಡಿದು ಟೇಬಲ್ ಮುಂದೆ ಹಾಜರಾಗುತ್ತಾಳೆ ಗಿರಿಜಾ.
ಊಟದ ಸಮಯದಲ್ಲಿ ಪದೇ ಪದೇ ನಾನು ನಾಳೆ ಬೆಳಿಗ್ಗೆ ಬಸ್ಸಿಗೆ ಊರಿಗೆ ಹೋಗ್ತೀನಿ, ಊರಿಗೆ ಹೋಗ್ತೀನಿ ಅಂತ ಹೇಳ್ತಾನೆ ಇರ್ತಾಳೆ ಗಿರಿಜಾ. ಸುಧಾಮೂರ್ತಿ ಮನೆಯವರು ಆಕೆಯನ್ನು ಒಂದೆರಡು ದಿನ ಇಲ್ಲೇ ಉಳಿಯುತ್ತಾರೆ ಎಂದು ಹೇಳ್ತಾರೆ ಅಂತ ಆಕೆ ಅಂದುಕೊಂಡಿದ್ರೆ, ಅಲ್ಲಿ ಆಗೋದೇ ಬೇರೆ.
ಇತ್ತ ಗಿರಿಜಾಳ ಮಗಳು ಅಪ್ಪನ ಬಳಿ ತನ್ನ ಅಮ್ಮನ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾಳೆ. ಆ ವೇಳೆಗೆ ಮಗಳ ಜಾಗದಲ್ಲಿ ಪುಷ್ಪಾಳನ್ನು ಊಹಿಸಿಕೊಳ್ಳುವ ಆತ ಪಟ್ಟಣಕ್ಕೆ ಹೋಗಿ ಪುಷ್ಪಾಳನ್ನು ನೋಡಿ ಬರಬೇಕು ಎಂದುಕೊಳ್ಳುತ್ತಾನೆ.
ಆಕಾಶ್-ಪುಷ್ಪಾ ಸಂಸಾರದ ವಿಚಾರದಲ್ಲಿ ಅನುಮಾನ
ಇತ್ತ ಗಿರಿ ದಾಕ್ಷಾಯಿಣಿಯ ಬಳಿ ಸತ್ಯಮೂರ್ತಿಗಳು ಪುಷ್ಪಾ-ಆಕಾಶ್ ಚೆನ್ನಾಗಿಲ್ಲ, ಅವರಿಬ್ಬರೂ ತೋರಿಕೆ ನಮ್ಮ ಮುಂದೆ ಚೆನ್ನಾಗಿದಾರೆ ಎಂದು ಹೇಳಿದ ವಿಚಾರವನ್ನು ಹೇಳುತ್ತಾರೆ. ಮೊದಲಿನಿಂದಲೂ ಮಗನ ವರ್ತನೆಯನ್ನು ಗಮನಿಸಿದ ದಾಕ್ಷಾಯಿಣಿಗೆ ಮಗನ ಸಂಸಾರದಲ್ಲಿ ಏನೋ ಸರಿಯಿಲ್ಲ ಎನ್ನುವ ಅನುಮಾನ ಕಾಡಲು ಪ್ರಾರಂಭವಾಗುತ್ತದೆ. ಈ ಬಗ್ಗೆ ಆಕಾಶ್‌ನನ್ನೇ ಕೇಳುತ್ತೇನೆ ಎಂದು ಹೊರಟ ಆಕೆಯನ್ನು ಗಂಡ ಗಿರಿ ತಡೆಯುತ್ತಾನೆ.
ಆಕಾಶ್ ತಾಯಿಗೆ ಅವನಿಗೆ ಪುಷ್ಪಾ ಮೇಲೆ ಪ್ರೀತಿ ಇಲ್ಲ ಎನ್ನುವುದು ತಿಳಿಯುವುದಾ, ಗಿರಿಜಾ ಅಂದುಕೊಂಡ ಕೆಲಸ ಸಾಧಿಸುತ್ತಾಳಾ, ಆಕಾಶ್ ಗಿರಿಜಾ ಬಾಯಿ ಬಿಡಿಸಿ ಸತ್ಯ ಹೊರ ತೆಗೆಯುತ್ತಾನಾ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ.