ಬೃಂದಾವನ ಸೀರಿಯಲ್‌: ಸುಧಾಮೂರ್ತಿ ಮನೆಯ ಚಿನ್ನದ ಮೇಲೆ ಗಿರಿಜಾಳ ವಕ್ರದೃಷ್ಟಿ; ಪುಷ್ಪಾಗೆ ಕಾದಿದ್ಯಾ ಆಪತ್ತು
ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಸುಧಾಮೂರ್ತಿ ಮನೆಯ ಚಿನ್ನದ ಮೇಲೆ ಗಿರಿಜಾಳ ವಕ್ರದೃಷ್ಟಿ; ಪುಷ್ಪಾಗೆ ಕಾದಿದ್ಯಾ ಆಪತ್ತು

ಬೃಂದಾವನ ಸೀರಿಯಲ್‌: ಸುಧಾಮೂರ್ತಿ ಮನೆಯ ಚಿನ್ನದ ಮೇಲೆ ಗಿರಿಜಾಳ ವಕ್ರದೃಷ್ಟಿ; ಪುಷ್ಪಾಗೆ ಕಾದಿದ್ಯಾ ಆಪತ್ತು

Brindavana Kannada Serial Today Episode Feb 15: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಭಾವನೆ, ಅಭಿಪ್ರಾಯಗಳ ಪುಷ್ಪಾ ಮಾತನಾಡಿದ್ದು ಕೇಳಿ ಆಕಾಶ್‌ ಮನ ಕರಗುತ್ತದೆ. ಇತ್ತ ದುಡ್ಡಿಗಾಗಿ ಗಂಡನಿಗೆ ಕಾಯಿಲೆ ಎಂದು ಸುಳ್ಳು ಹೇಳಿ ಪುಷ್ಪಾಳ ಮುಂದೆ ಕಣ್ಣೀರು ಸುರಿಸುತ್ತಾಳೆ ಗಿರಿಜಾ.

ಬೃಂದಾವನ ಸೀರಿಯಲ್‌: ಸುಧಾಮೂರ್ತಿ ಮನೆಯ ಚಿನ್ನದ ಮೇಲೆ ಗಿರಿಜಾಳ ವಕ್ರದೃಷ್ಟಿ; ಪುಷ್ಪಾಗೆ ಕಾದಿದ್ಯಾ ಆಪತ್ತು
ಬೃಂದಾವನ ಸೀರಿಯಲ್‌: ಸುಧಾಮೂರ್ತಿ ಮನೆಯ ಚಿನ್ನದ ಮೇಲೆ ಗಿರಿಜಾಳ ವಕ್ರದೃಷ್ಟಿ; ಪುಷ್ಪಾಗೆ ಕಾದಿದ್ಯಾ ಆಪತ್ತು

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.15) ಸಂಚಿಕೆಯಲ್ಲಿ ಆಕಾಶ್‌ ಪುಷ್ಪಾ ಮೊದಲ ಬಾರಿಗೆ ಎಂಬಂತೆ ಆತ್ಮೀಯವಾಗಿ ಮಾತನಾಡುತ್ತಾರೆ. ಪೂಜೆಯ ವಿಚಾರ ಮಾತನಾಡುವ ಆಕಾಶ್‌ ʼಪೂಜೆಯಲ್ಲಿ ನಾವಿಬ್ಬರೂ ಜೊತೆಯಾಗಿ ಕೂತಿಲ್ಲ ಎಂಬುದು ನಿನಗೆ ಬೇಸರ ಆಗಿಲ್ವಾ?ʼ ಎಂದು ಕೇಳುತ್ತಾನೆ. ಅದಕ್ಕೆ ಪುಷ್ಪಾ ʼಬೇಸರ ಯಾಕಾಗ್ಬೇಕು, ನೀನು ಸರಿಯಾಗಿ ಮಾಡಿದ್ರಿ, ಮನೆಯ ಹಿರಿಯರು ಪೂಜೆ ಕುಳಿತುಕೊಳ್ಳುವುದರಿಂದ ಎಲ್ಲರಿಗೂ ಶ್ರೇಯಸ್ಸುʼ ಎಂದು ಹೇಳುತ್ತಾಳೆ. ಆಗ ಆಕಾಶ್‌ ʼನಿಂಗೆ ನಿನ್ನದೇ ಆದ ಅಭಿಪ್ರಾಯ ಇಲ್ವಾ? ಸದಾ ಬೇರೆಯವರು ಹೇಳಿದ್ದಷ್ಟೇ ಕೇಳೋದಾ?ʼ ಎಂದು ಪ್ರಶ್ನಿಸುತ್ತಾನೆ.

ಆ ಮಾತಿಗೆ ಪುಷ್ಪಾ ʼನನ್ನ ಭಾವನೆ, ಅಭಿಪ್ರಾಯ ಯಾರಿಗೆ ಬೇಕಿದೆ. ನಾನು ಮೊದಲಿನಿಂದಲೂ ಬೇರೆಯವರು ಏನು ಹೇಳ್ತಾರೋ ಅದನ್ನೇ ಕೇಳಿಕೊಂಡು ಬಂದಿದ್ದು, ಅಣ್ಣ-ಅತ್ತಿಗೆ ಏನು ಹೇಳ್ತಾರೋ ಅದನ್ನಷ್ಟೇ ಮಾಡಿದ್ದು. ಮದುವೆ ಕೂಡ ಅವರು ಹೇಳಿದ್ರು ನಾನು ಮದುವೆ ಆದೆ. ಆದರೆ ನಂಗೆ ನನ್ನದು ಅಂತ ಭಾವನೆ ಇದೆ, ನನ್ನ ಅಭಿಪ್ರಾಯಕ್ಕೂ ಬೆಲೆ ಇದೆ ಅಂತ ಗೊತ್ತಾಗಿದ್ದು ನಿಮ್ಮನ್ನು ಮದುವೆ ಆದ ಮೇಲೆ, ಈ ಮನೆಯಲ್ಲಿ ನಂಗೆ ನನ್ನ ಅಭಿಪ್ರಾಯಗಳಿಗೆ ಬೆಲೆ ಕೊಟ್ಟಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು. ನಿಮ್ಮಿಂದ ನಮ್ಮ ಜೀವನಕ್ಕೆ ಒಂದು ಅರ್ಥ ಬಂದಿದ್ದು. ಹಾಗಾಗಿ ನಾನು ಸಾಯುವವರೆಗೂ ನೀವು ಹೇಳಿದ್ದನ್ನು ಕೇಳ್ತೀನಿ, ನನ್ನ ಕೊನೆ ಉಸಿರು ಇರೋವರೆಗೂ ನಿಮ್ಮನ್ನು ಚೆನ್ನಾಗಿ ನೋಡ್ಕೋತೀನಿʼ ಎಂದು ಭಾವುಕಳಾಗಿ ಮಾತನಾಡುತ್ತಾಳೆ ಪುಷ್ಪಾ.

ಅವಳ ಮಾತನ್ನು ಕೇಳಿದ ಮೇಲೆ ಆಕಾಶ್‌ಗೆ ಅವಳ ಮೇಲೆ ಕನಿಕರ ಮೂಡುತ್ತದೆ. ಅಲ್ಲದೇ ಆಕೆ ನಿಜವಾಗಿಯೂ ಅಮಾಯಕಿನಾ ಇಲ್ಲ, ಮದುವೆ ಸಮಯದಲ್ಲಿ ದುಡ್ಡು ತೆಗೆದುಕೊಂಡ ವಿಚಾರ ತಿಳಿಯಬಾರದು ಎಂದು ಹೀಗೆ ನಾಟಕ ಮಾಡ್ತಾ ಇದಾಳ ಅಂತ ಗೊಂದಲದಲ್ಲಿ ಸಿಲುಕುತ್ತಾನೆ ಆಕಾಶ್‌.

ಆಕಾಶ್‌ ಕೈಯಿಂದ ತಪ್ಪಿಸಿಕೊಂಡ ಗಿರಿಜಾ

ಪುಷ್ಪಾಳ ಬಗ್ಗೆ ಯೋಚಿಸುತ್ತಿರುವಾಗಲೇ ಗಿರಿಜಾ ಅಲ್ಲಿಗೆ ಬರುತ್ತಾಳೆ. ಅವಳನ್ನು ನೋಡಿದ ಆಕಾಶ್‌ ನಿಂತ್ಕೊಳ್ಳಿ ನಾನು ನಿಮ್‌ ಜೊತೆ ಮಾತನಾಡಬೇಕು ಅಂದ್ರು ಕೇಳಿಸಿಕೊಳ್ಳದವರ ಹಾಗೆ ಅಲ್ಲಿಂದ ಓಡುತ್ತಾಳೆ ಗಿರಿಜಾ. ಅವಳನ್ನೇ ಹಿಂಬಾಲಿಸಿ ಹೋಗುವ ಆಕಾಶ್‌ನನ್ನು ಚೆಸ್‌ ಆಡುತ್ತಿದ್ದ ದೊಡ್ಡಪ್ಪ, ಮಾವಂದಿರು ತಡೆದು ನಿಲ್ಲಿಸಿ, ತಮ್ಮೊಂದಿಗೆ ಆಟವಾಡಲು ಬರುವಂತೆ ಒತ್ತಾಯಿಸುತ್ತಾರೆ. ಆಗ ಚೆಸ್‌ನಲ್ಲಿ ಸೋಲುವ ಆಕಾಶ್‌ಗೆ ನೀನು ಎಂದೂ ಸೋತವನಲ್ಲ, ಈಗ ಯಾಕೆ ಹೀಗೆ ಎಂದು ಪ್ರಶ್ನಿಸುತ್ತಾರೆ, ಅದಕ್ಕೆ ಉತ್ತರಿಸುವ ಆಕಾಶ್‌ ಜೀವನದಲ್ಲೇ ಸೋತಿದ್ದೇನೆ, ಇದರಲ್ಲಿ ಯಾವ ಲೆಕ್ಕ ಎಂದು ತನಗೆ ಅರಿವಿಲ್ಲದಂತೆ ಗೊಣಗುತ್ತಾನೆ. ಅದಕ್ಕೆ ಮನೆಯವರು ಕ್ಷಣ ಶಾಕ್‌ ಆಗುತ್ತಾರೆ. ಇದಕ್ಕೆ ತುಪ್ಪ ಸುರಿಯುವಂತೆ ಮಾವ ಸತ್ಯಮೂರ್ತಿ ನಾವು ಹೇಳಿಲ್ವಾ, ಪುಷ್ಪಾ-ಆಕಾಶ್‌ ದಾಂಪತ್ಯ ಸರಿಯಿಲ್ಲ ಎಂದು ಮತ್ತೆ ಹೇಳುತ್ತಾರೆ. ಅದನ್ನು ನಿರಾಕರಿಸುವ ಆಕಾಶ್‌ ಬೇರೆ ಮಾತನಾಡುತ್ತಾನೆ. ಆಗ ಆಕಾಶ್‌ ದೊಡ್ಡಪ್ಪಂದಿರು ಪುಷ್ಪಾ ನಿನ್ನ ಬಾಳಿನ ದೇವತೆ, ಅವಳಂತಹ ಹೆಂಡತಿ ಸಿಕ್ಕಿದ್ದು ನಿನ್ನ ಪುಣ್ಯ ಎಂದು ಹೊಗಳುತ್ತಾರೆ.

ಚಿನ್ನದ ಮೇಲೆ ಗಿರಿಜಾ ಕಣ್ಣು

ಇತ್ತ ಹೇಗಾದ್ರೂ ಪುಷ್ಪಾ ಬಳಿ ಹಣ ಕೀಳಬೇಕು ಎಂದು ಯೋಚಿಸುವ ಗಿರಿಜಾ ಮೊಸಳೆ ಕಣ್ಣೀರು ಸುರಿಸುತ್ತಾಳೆ. ಅಲ್ಲದೇ ದುಡ್ಡಿಗಾಗಿ ಗಂಡನಿಗೆ ಕಾಯಿಲೆ ಇದೆ ಎಂದು ಸುಳ್ಳು ಹೇಳುವ ಗಿರಿಜಾ ಆ ಮೂಲಕ ಪುಷ್ಪಾಳನ್ನು ನಂಬಿಸಲು ನೋಡುತ್ತಾಳೆ. ಅಣ್ಣನಿಗೆ ಫೋನ್‌ ಮಾಡಿಕೊಡಿ ನಾನು ಈಗಲೇ ಅಣ್ಣನ ಜೊತೆ ಮಾತನಾಡಬೇಕು ಎಂದು ಪುಷ್ಪಾ ಹೇಳಿದ್ದಕ್ಕೆ ಕ್ಷಣ ಗಾಬರಿಯಾಗುವ ಗಿರಿಜಾ ನನ್ನ ಫೋನ್‌ ಮಾರಿ ಅವರಿಗೆ ರಕ್ತ ಕೊಡಿಸಿದೆ ಎಂದು ಇನ್ನೊಂದು ಸುಳ್ಳು ಹೇಳುತ್ತಾಳೆ. ಹೀಗೆ ಸುಳ್ಳಿನ ಸರಮಾಲೆಗಳ ಮೂಲಕ ಪುಷ್ಪಾಳನ್ನು ನಂಬಿಸುವ ಹೊರಟ ಗಿರಿಜಾಳ ಪ್ಲಾನ್‌ಗೆ ಅತ್ತೆ ಅಡ್ಡ ಬರುತ್ತಾರೆ. ಪೂಜೆಗೆ ಬಳಸಿದ್ದ ಚಿನ್ನ, ಬೆಳ್ಳಿ ವಸ್ತುಗಳನ್ನೆಲ್ಲಾ ತರುವ ಅತ್ತೆ ಇದನ್ನೆಲ್ಲಾ ಜೋಪಾನವಾಗಿ ಲಾಕರ್‌ನಲ್ಲಿಡು ಎಂದು ಪುಷ್ಪಾಳ ಬಳಿ ಹೇಳುತ್ತಾರೆ. ಆಗ ಅಲ್ಲಿಯೇ ನಿಂತಿದ್ದ ಗಿರಿಜಾ ಚಿನ್ನವನ್ನು ನೋಡಿ ಭಕಪಕ್ಷಿಯಂತೆ ವರ್ತಿಸುತ್ತಾಳೆ.

ಅಣ್ಣನ ಕಾಯಿಲೆ ವಿಚಾರಕ್ಕೆ ಮರುಗಿ ಅತ್ತಿಗೆಗೆ ಸಹಾಯ ಮಾಡ್ತಾಳಾ ಪುಷ್ಪಾ, ಚಿನ್ನದ ಮೇಲೆ ಕಣ್ಣು ಹಾಕಿರುವ ಗಿರಿಜಾಳಿಂದ ಪುಷ್ಪಾಳಿಗೆ ಕಂಟಕ ಎದುರಾಗಲಿದ್ಯಾ ಎಂಬುದನ್ನು ನಾಳಿನ ಸಂಚಿಕೆಯಲ್ಲಿ ನೋಡಬೇಕು.

Whats_app_banner