ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಒಲ್ಲದ ಮನಸ್ಸಿನಿಂದ ಪುಷ್ಪಾ ಇಷ್ಟ ಎಂದ ಆಕಾಶ್‌, ದೇವರಲ್ಲಿ ಬೇಡಿದ್ದು ಮಾತ್ರ ಬೇರೆ

ಬೃಂದಾವನ ಸೀರಿಯಲ್‌: ಒಲ್ಲದ ಮನಸ್ಸಿನಿಂದ ಪುಷ್ಪಾ ಇಷ್ಟ ಎಂದ ಆಕಾಶ್‌, ದೇವರಲ್ಲಿ ಬೇಡಿದ್ದು ಮಾತ್ರ ಬೇರೆ

Brindavana Kannada Serial Today Episode Feb 16: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಧಾಮೂರ್ತಿ ಮನೆಯಿಂದ ಚಿನ್ನ, ದುಡ್ಡು ಹೊಡೆಯಲು ಹೊಂಚು ಹಾಕುತ್ತಿದ್ದಾಳೆ ಗಿರಿಜಾ. ಇತ್ತ ಒಲ್ಲದ ಮನಸ್ಸಿನಿಂದ ಪುಷ್ಪಾ ಇಷ್ಟ ಎಂದ ಆಕಾಶ್‌, ದೇವರಲ್ಲಿ ಬೇಡುವುದೇ ಬೇರೆ.

ಬೃಂದಾವನ ಸೀರಿಯಲ್‌: ಒಲ್ಲದ ಮನಸ್ಸಿನಲ್ಲೇ ಪುಷ್ಪಾ ಇಷ್ಟ ಎಂದ ಆಕಾಶ್‌, ಆದ್ರೂ ದೇವರಲ್ಲಿ ಬೇಡೋದು ಮಾತ್ರ ಬೇರೆ!
ಬೃಂದಾವನ ಸೀರಿಯಲ್‌: ಒಲ್ಲದ ಮನಸ್ಸಿನಲ್ಲೇ ಪುಷ್ಪಾ ಇಷ್ಟ ಎಂದ ಆಕಾಶ್‌, ಆದ್ರೂ ದೇವರಲ್ಲಿ ಬೇಡೋದು ಮಾತ್ರ ಬೇರೆ!

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.16) ಸಂಚಿಕೆಯಲ್ಲಿ ಸುನಾಂದ ಅತ್ತೆ ಪುಷ್ಪಾಳ ಬಳಿ ಲಾಕರ್‌ನಲ್ಲಿ ಇಡಲು ತಂದ ಚಿನ್ನವನ್ನು ನೋಡಿ ಬೆರಗಾಗಿದ್ದಾಳೆ ಗಿರಿಜಾ. ಜೀವನದಲ್ಲಿ ಮೊದಲ ಬಾರಿಗೆ ಅಷ್ಟೊಂದು ಚಿನ್ನವನ್ನು ನೋಡಿದ ಗಿರಿಜಾ ಹೇಗಾದ್ರೂ ಅದನ್ನ ತನ್ನದಾಗಿಸಿಕೊಳ್ಳಬೇಕು ಎಂದು ಮನದಲ್ಲೇ ಮಂಡಿಗೆ ತಿನ್ನುತ್ತಿರುತ್ತಾಳೆ. ಇತ್ತ ಚಿನ್ನವನ್ನೆಲ್ಲಾ ಲಾಕರ್‌ನಲ್ಲಿಟ್ಟು ಅಜ್ಜಮ್ಮನ ಬಳಿ ಒಡವೆ ಲೆಕ್ಕಾಚಾರ ನೀಡಲು ಹೋಗುತ್ತಾಳೆ ಪುಷ್ಪಾ.

ಟ್ರೆಂಡಿಂಗ್​ ಸುದ್ದಿ

ಮನೆಯವರು ಪುಷ್ಪಾಳ ಮೇಲಿಟ್ಟ ನಂಬಿಕೆಗೆ ಅತ್ತಿಗೆಯೇ ಮುಳುವಾಗ್ತಾಳಾ?

ಚಿನ್ನದ ಲೆಕ್ಕಾಚಾರ ಕೊಡಲು ಅಜ್ಜಮ್ಮನ (ಸುಧಾಮೂರ್ತಿ) ಬಳಿ ಹೋಗುವ ಪುಷ್ಪಾ ಅವರ ಬಳಿ ಒಡವೆಯ ಲೆಕ್ಕಾಚಾರ ಹೇಳುತ್ತಾರೆ, ಅಲ್ಲದೆ ನೀವೊಮ್ಮೆ ಇದನ್ನು ನೋಡಿ ಒಂದು ಲೆಕ್ಕದ ಪುಸ್ತಕ ತೋರಿಸಿದಾಗ ʼನೀನು ನೋಡಿದ ಮೇಲೆ ಮುಗಿತು, ನೀನು ಲೆಕ್ಕ ತೋರಿಸೋದೇನು ಬೇಡ ಅಂತಾರೆ, ಅಲ್ಲದೇ ನಿಂಗೆ ಅದರಲ್ಲಿ ಎಷ್ಟು ಒಡವೆ ಇದೆ ಅಂತ ಅಂದಾಜಿದ್ಯಾ? ಅಂತ ಪ್ರಶ್ನಿಸುತ್ತಾರೆ. ಅದಕ್ಕೆ ಮುಗ್ಧಳಾಗಿ ಉತ್ತರಿಸುವ ಪುಷ್ಪಾ ಇಲ್ಲ ಅಜ್ಜಿ ಅದನ್ನೆಲ್ಲಾ ನಾನು ನೋಡಿಲ್ಲ, ಈಗ ಹೋಗಿ ನೋಡಿ ಬರ್ತೀನಿ ಅಂತಾಳೆ. ಅದಕ್ಕೆ ಅಜ್ಜಮ್ಮ ʼಅಯ್ಯೋ ಪುಷ್ಪಾ ನಂಗೆ ಗೊತ್ತಿದೆ ಎಷ್ಟಿದೆ ಅಂತ, ನೀನೇನು ನೋಡಿ ಬರೋದು ಬೇಡ, ಅದರಲ್ಲಿ ಸುಮಾರು ಒಂದೂವರೆ ಕೋಟಿ ಆಗುವಷ್ಟು ಒಡವೆ ಇದೆʼ ಅಂತಾರೆ. ಇದನ್ನೆಲ್ಲಾ ಕದ್ದು ಕೇಳಿಸಿಕೊಳ್ಳುವ ಗಿರಿಜಾ ಒಂದೂವರೆ ಕೋಟಿ ಒಡವೆ ಇರುವ ತಿಜೋರಿ ಕೀ ಪುಷ್ಪಾ ಕೈಯಲ್ಲಿ ಇರುವಾಗ ನಾನು ಜುಜುಬಿ 5 ಲಕ್ಷ ಕೇಳೋಕೆ ಇವಳ ಬಳಿ ಬಂದಿದ್ದೀನಲ್ಲಾ ಅಂತ ಯೋಚಿಸುತ್ತಾಳೆ. ಅಲ್ಲದೇ ಹೇಗಾದ್ರೂ ಚಿನ್ನ, ಒಡವೆ ಎತ್ತಿಕೊಂಡು ಹೋಗಬೇಕು ಅಂತ ಪ್ಲಾನ್‌ ಮಾಡುತ್ತಾಳೆ.

ಪುಷ್ಪಾ ಇಷ್ಟ ಅಂದೇ ಬಿಟ್ಟ ಆಕಾಶ್‌!

ಚಿನ್ನದ ಚೆಸ್‌ ಆಡುತ್ತಿರುವಾಗ ದೊಡ್ಡಪ್ಪ, ಅಣ್ಣ ಪುಷ್ಪಾಳನ್ನು ಹಾಡಿ ಹೊಗಳುತ್ತಿದ್ದರು ಸುಮ್ಮನಿರುವ ಆಕಾಶ್‌ನನ್ನು ನೋಡಿ ಮಾವ ಸತ್ಯಮೂರ್ತಿ ʼನಾನು ಹೇಳಿಲ್ವಾ ಅವನಿಗೆ ಹೆಂಡತಿ ಮೇಲೆ ಪ್ರೀತಿ ಇಲ್ಲ, ಅವಳಂದ್ರೇ ಇಷ್ಟ ಇಲ್ಲ ಅದಕ್ಕೆ, ಅವಳ ಬಗ್ಗೆ ನೀವು ಅಷ್ಟೆಲ್ಲಾ ಹೇಳಿದ್ರೂ ಅವನು ಏನು ಮಾತಾಡ್ತಿಲ್ಲʼ ಅಂತ ಮತ್ತೆ ತನ್ನ ಹಳೇ ಟೇಪ್‌ ರೆಕಾರ್ಡರ್‌ ಆನ್‌ ಮಾಡುತ್ತಾರೆ ಸತ್ಯಮೂರ್ತಿ. ಆಗ ಮನೆಯವರೆಲ್ಲಾ ಆಕಾಶ್‌ ಬಳಿ ʼಹೇಳು ಆಕಾಶ್‌, ನಿಂಗೆ ಪುಷ್ಪಾ ಇಷ್ಟ ಅಲ್ಲ ನಿಜನಾ? ನೀನು ಏನು ಹೇಳದೇ ಇದ್ರೆ ನಾವು ಈ ಸತ್ಯಮೂರ್ತಿಯವರ ಮಾತನ್ನೇ ನಂಬಬೇಕಾಗುತ್ತೆʼ ಒತ್ತಾಯ ಮಾಡ್ತಾರೆ. ಆಗ ಆಕಾಶ್‌ ಮನಸ್ಸಿನಲ್ಲೇ ʼಮನೆಯವರು ಇಷ್ಟೆಲ್ಲಾ ಇಷ್ಟಪಡೋ ಹುಡುಗಿನಾ ನಾನು ದೂರ ಮಾಡ್ತೀನಿ ಅಂದ್ರೆ ಇವ್ರೆಲ್ಲಾ ತಡ್ಕೋತಾರಾ, ಆದ್ರೆ ಅವರು ದುಡ್ಡು ತಗೊಂಡ್‌ ಇರೋ ವಿಷ್ಯಾ ಎಲ್ರಿಗೂ ಗೊತ್ತಾದ್ರೆ ಸರಿ ಹೋಗ್ತಾರೆ, ನಾನು ಅದನ್ನು ಅವರಿಗೆ ಅರ್ಥ ಮಾಡಿಸ್ತೀನಿ, ಆದ್ರೆ ಅದು ನಿಜನಾ ಸುಳ್ಳಾ ಎಂತ ಮೊದಲು ಸಾಬೀತು ಮಾಡ್ತೀನಿʼ ಅಂತೆಲ್ಲಾ ಯೋಚಿಸುತ್ತಾನೆ. ಅಲ್ಲದೇ ಒಲ್ಲದ ಮನಸ್ಸಿನಲ್ಲಿ ಪುಷ್ಪಾ ಅಂದ್ರೆ ನಂಗಿಷ್ಟ, ನಾವಿಬ್ಬರೂ ಚೆನ್ನಾಗಿದೀವಿ ಅಂತ ಉತ್ತರ ಕೊಡ್ತಾನೆ.

ಇತ್ತ ಗಿರಿಜಾ ಇಂದು ರಾತ್ರಿ ಒಳಗೆ ಹೇಗಾದ್ರೂ ಮನೆಯಲ್ಲಿ ಇರುವ ಚಿನ್ನ, ದುಡ್ಡು ಹೊಡಿಬೇಕು ಅಂತ ಪ್ಲಾನ್‌ ಮಾಡ್ತಾ ಇದ್ರೆ ಅತ್ತ ಪುಷ್ಪಾ ತಿಳಿಯದೇ ಮಾಡಿದ ತಪ್ಪು ಆಕಾಶ್‌ ಮನಸ್ಸು ಕೆಡಿಸುತ್ತದೆ. ಫ್ಯಾನ್‌ ಗಾಳಿಗೆ ಹಾರುವ ಪರೀಕ್ಷೆ ಪೇಪರ್‌ಗಳನ್ನು ಜೋಡಿಸಿ ಇಡುವ ಭರದಲ್ಲಿ ಅದರ ಮೇಲೆ ನೀರು ಚೆಲ್ಲುತ್ತಾಳೆ ಪುಷ್ಪಾ. ಇದರಿಂದ ಕೋಪಗೊಳ್ಳುವ ಆಕಾಶ್‌ ಅವಳ ಮೇಲೆ ರೇಗಿ ಕೋಣೆಯಿಂದ ಆಚೆ ಹೋಗುತ್ತಾನೆ. ʼದೇವರೇ ನಂಗೆ ಇಂತಹ ಹುಡುಗಿಯನ್ನು ಯಾಕೆ ಗಂಟು ಹಾಕಿದೆ, ಎಂತ ಪೆದ್ದು ಹುಡುಗಿ ಇವ್ಳು, ಇವಳಿಂದ ಬೇಗ ನಂಗೆ ಮುಕ್ತಿ ಕೊಡಿಸು ಅಂತ ಬೇಡ್ಕೋತಾನೆ. ಗಿರಿಜಾಳ ಹಣದ ದುರಾಸೆ ಪುಷ್ಪಾಳ ಮೇಲೆ ಮನೆಯವರು ಇಟ್ಟ ನಂಬಿಕೆ ಮುರಿಯುವಂತೆ ಮಾಡುತ್ತಾ? ಇದು ಪುಷ್ಪಾಳನ್ನು ಆಕಾಶ್‌ ಬದುಕಿನಿಂದ ದೂರವಾಗುವಂತೆ ಮಾಡುತ್ತಾ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

ಟಿ20 ವರ್ಲ್ಡ್‌ಕಪ್ 2024