ಕನ್ನಡ ಸುದ್ದಿ  /  ಮನರಂಜನೆ  /  ಬೃಂದಾವನ ಸೀರಿಯಲ್‌: ಹಣದಾಸೆಗೆ ಗಂಡನನ್ನೇ ದಾಳವಾಗಿಸಿಕೊಂಡ ಗಿರಿಜಾ, ಅಣ್ಣನ ನೆನಪಿನಲ್ಲಿ ಪುಷ್ಪಾ ಕಣ್ಣೀರು

ಬೃಂದಾವನ ಸೀರಿಯಲ್‌: ಹಣದಾಸೆಗೆ ಗಂಡನನ್ನೇ ದಾಳವಾಗಿಸಿಕೊಂಡ ಗಿರಿಜಾ, ಅಣ್ಣನ ನೆನಪಿನಲ್ಲಿ ಪುಷ್ಪಾ ಕಣ್ಣೀರು

Brindavana Kannada Serial Today Episode Feb 19: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಪುಷ್ಪಾಳ ಮನೆಯಲ್ಲೇ ಉಳಿಯಲು ಸುಳ್ಳಿನ ಸರಮಾಲೆ ಕಟ್ಟಿದ್ದಾಳೆ ಗಿರಿಜಾ. ಗಂಡನಿಗೆ ಹಾರ್ಟ್‌ ವೀಕ್‌ ಆಗಿದೆ ಎಂದು ಸುಳ್ಳು ಹೇಳಿ ಪುಷ್ಪಾಳಿಂದ ಹಣ ಪಡೆಯಲು ಮಾಸ್ಟರ್‌ ಪ್ಲಾನ್‌ ಮಾಡಿದ ಕಿಲಾಡಿ.

ಬೃಂದಾವನ ಸೀರಿಯಲ್‌: ಹಣದಾಸೆಗೆ ಗಂಡನನ್ನೇ ದಾಳವಾಗಿಸಿಕೊಂಡ ಗಿರಿಜಾ, ಅಣ್ಣನ ನೆನಪಿನಲ್ಲಿ ಪುಷ್ಪಾ ಕಣ್ಣೀರು
ಬೃಂದಾವನ ಸೀರಿಯಲ್‌: ಹಣದಾಸೆಗೆ ಗಂಡನನ್ನೇ ದಾಳವಾಗಿಸಿಕೊಂಡ ಗಿರಿಜಾ, ಅಣ್ಣನ ನೆನಪಿನಲ್ಲಿ ಪುಷ್ಪಾ ಕಣ್ಣೀರು

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.19) ಸಂಚಿಕೆಯಲ್ಲಿ ಆಕಾಶ್‌ ತಂದೆ ಗಿರಿ ಬೆಳಿಗ್ಗೆ ಬೇಗ ಎದ್ದು ಮನೆಯವರಿಗೆ ಕಾಫಿ ಮಾಡುತ್ತಾರೆ. ಅಲ್ಲದೇ ಕಾಫಿ ಕೇಳಲು ಬಂದ ಅಣ್ಣನ ಮಗಳಿಗೆ ಕಾಫಿ ನೀಡಿ ತನ್ನ ತಾಯಿಯ ಬಗ್ಗೆ ಅಭಿಮಾನದ ಮಾತುಗಳನ್ನು ಹೇಳುವುದಲ್ಲದೇ, ತಾಯಿ ಹಾಗೂ ಹೆಂಡತಿಗೆ ಕಾಫಿ ಮಾಡಿಕೊಂಡು ಹೋಗಿ ನೀಡುತ್ತಾನೆ. ಸುಧಾಮೂರ್ತಿ, ಗಿರಿ ಹಾಗೂ ದಾಕ್ಷಾಯಿಣಿ ಕಾಫಿ ಕುಡಿಯುವ ಹೊತ್ತಿಗೆ ಸರಿಯಾಗಿ ಪ್ರತ್ಯಕ್ಷ ಆಗ್ತಾಳೆ ಗಿರಿಜಾ. ಅವಳಿಗೂ ಕಾಫಿ ನೀಡಿ ಮಾತನಾಡುತ್ತಿರುವಾಗ ಅಲ್ಲಿಗೆ ಬರುವ ಅಲಮೇಲು ಗಿರಿಜಾಳ ಬಳಿ ʼನೀವಿನ್ನೂ ಹೋಗಿಲ್ವಾ, ಬೆಳಿಗ್ಗೆ ಮೊದಲ ಬಸ್ಸಿಗೆ ಹೋಗ್ತೀನಿ ಅಂದ್ರಿ?ʼ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ತಡಬಡಾಯಿಸುವ ಗಿರಿಜಾ ಪಟ್‌ ಅಂತ ತಾನು ಉಳಿದಿರುವುದಕ್ಕೆ ಪುಷ್ಪಾ ಕಾರಣ ಎನ್ನುತ್ತಾರೆ.

ಟ್ರೆಂಡಿಂಗ್​ ಸುದ್ದಿ

ʼನಾನು ಊರಿಗೆ ಹೋಗೋಣ ಅಂತ ಪುಷ್ಪಾಳ ಬಳಿ ಹೇಳಲು ಹೋಗಿದ್ದೆ, ಆದರೆ ಅವಳು ನೀವು ಹೋಗಬೇಡಿ ಅಂತ ಗೋಳೋ ಅಂತ ಅತ್ಲು, ನೀವು ಹೋದ್ರೆ ನನ್‌ ಮೇಲಾಣೆʼ ಹಾಕಿದ್ಲು, ಅದಕ್ಕೆ ನಾನು ಹೋಗಿಲ್ಲʼ ಅಂತಾಳೆ. ಅದಕ್ಕೆ ಅಲಮೇಲು ಅದಕ್ಕೆ ನೀವೇನ್‌ ಹೇಳಿದ್ರಿ, ಇಲ್ಲೇ ಉಳ್ಕೊಂಡ್‌ ಬಿಡ್ತೀನಿ ಅಂದ್ರಾ?ʼ ಅಂತ ವ್ಯಂಗ್ಯವಾಗಿ ಕೇಳುತ್ತಾಳೆ. ʼಇಲ್ಲ ಇಲ್ಲ ಒಂದೆರಡು ದಿನ ಇದ್ದು ಹೋಗ್ತೀನಿ, ನನಗೂ ಊರಲ್ಲಿ ಗಂಡ-ಮಗಳು ಕಾಯ್ತಾ ಇರ್ತಾರೆʼ ಅಂತ ಅವರಿಂದ ಆ ಕ್ಷಣಕ್ಕೆ ತಪ್ಪಿಸಿಕೊಳ್ತಾಳೆ.

ಗಂಡನ ಹಾರ್ಟ್‌ ವೀಕ್‌ ಆಗಿದೆ, ಅಪರೇಷನ್‌ಗೆ 50 ಲಕ್ಷ ಬೇಕು ಎಂದ ಗಿರಿಜಾ

ಮನೆಯವರೆಲ್ಲಾ ಆ ಕಡೆ ಈ ಕಡೆ ಹೋದ್‌ ಕೂಡ್ಲೇ ಸೋಫಾ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು ದರ್ಬಾರ್‌ ತೋರುವ ಗಿರಿಜಾ, ಪುಷ್ಪಾ ಗಂಡನಿಗೆಂದು ಪ್ರೀತಿಯಿಂದ ಮಾಡಿದ ಕಾಫಿಯನ್ನು ಕಸಿದು ಕುಡಿಯುತ್ತಾಳೆ. ಆಗ ಮತ್ತೆ ಅಣ್ಣನ ಬಗ್ಗೆ ಕೇಳುವ ಪುಷ್ಪಾ ʼಅತ್ತಿಗೆ ಅಣ್ಣನಿಗೆ ಅಂಥದ್ದೇನಾಗಿದೆ, ನಾನು ಅವರ ಜೊತೆ ಒಮ್ಮೆ ಮಾತನಾಡಬೇಕುʼ ಅಂತಾಳೆ. ಅದಕ್ಕೆ ಇನ್ನೊಂದು ಸುಳ್ಳಿನ ಕಥೆ ಕಟ್ಟುತ್ತಾಳೆ ಗಿರಿಜಾ. ʼನಿಮ್ಮ ಅಣ್ಣನಿಗೆ ಹಾರ್ಟ್‌ ವೀಕ್‌ ಆಗಿದೆ. ಈ ವಿಷ್ಯಾ ಅವರಿಗೂ ಗೊತ್ತಿಲ್ಲ. ಅಪರೇಷನ್‌ ಮಾಡಿಲ್ಲ ಅಂದ್ರೆ ಜೀವಕ್ಕೆ ಅಪಾಯ ಅಂತ ಡಾಕ್ಟ್ರು ಹೇಳಿದಾರೆ. ಆದ್ರೆ ಆಪರೇಷನ್‌ ಮಾಡ್ಸೋಕೆ ನನ್‌ ಬಳಿ ಆಗ್ಲಿ, ನನ್ನ ಗಂಡನ ಬಳಿ ಆಗ್ಲಿ ಹಣ ಎಲ್ಲಿದೆ ಹೇಳುʼ ಅಂತಾ ಮೊಸರೆ ಕಣ್ಣೀರಿನ ಕೋಡಿ ಹರಿಸುತ್ತಾಳೆ. ಅಲ್ಲದೇ ನಂಗೀಗ ನೀನೇ ಹಣದ ಸಹಾಯ ಮಾಡಬೇಕು, ನಮಗೆ ನಿನ್‌ ಬಿಟ್ರೆ ಯಾರಿದಾರೆ ಹೇಳು ಅಂತೆಲ್ಲಾ ಡ್ರಾಮಾ ಮಾಡ್ತಾಳೆ. ಇದರಿಂದ ಇನ್ನಷ್ಟು ಗಾಬರಿ ಹಾಗೂ ಬೇಸರಗೊಳ್ಳುವ ಪುಷ್ಪಾ, ಅತ್ತಿಗೆ ಅಣ್ಣನ ಟ್ರೀಟ್‌ಮೆಂಟ್‌ ಎಷ್ಟು ಹಣ ಬೇಕಾಗಬಹುದು?ʼ ಎಂದು ಕೇಳುತ್ತಾಳೆ. ಅದಕ್ಕೆ ಮನಸ್ಸಲ್ಲೇ ಮಂಡಿಗೆ ತಿನ್ನುವ ಗಿರಿಜಾ ಹೊಡ್ರೆ ದೊಡ್‌ ಲಾಟ್ರಿನೇ ಹೊಡಿಲೀ ಅಂದ್ಕೊಂಡು 50 ಲಕ್ಷ ಬೇಕಾಗುತ್ತೆ ಅಂದಿದಾರೆ ಡಾಕ್ಟ್ರು ಅಂತ ಇನ್ನೊಂದು ಸುಳ್ಳು ಹೇಳ್ತಾಳೆ. ಅದಕ್ಕೆ ಕೇಳಿ ತಬ್ಬಿಬ್ಬಾಗುವ ಪುಷ್ಪಾ ಅಷ್ಟೊಂದು ದುಡ್ಡು ನನ್‌ ಹತ್ರ ಎಲ್ಲಿದೆ ಅತ್ತಿಗೆ, ನನ್ನ ಹತ್ರ ಅಷ್ಟು ದುಡ್ಡು ಎಲ್ಲಿಂದ ಬರ್ಬೇಕು ಅಂತ ಪ್ರಶ್ನಿಸುತ್ತಾಳೆ. ಅದಕ್ಕೆ ತೆರೆದ ಬಾಯಿಗೆ ʼಇದೇನು ಪುಷ್ಪಾ ಹಿಂಗತೀಯಾ, ಈ ಮನೇಲಿ ದುಡ್ಡು, ಒಡವೆ ಎಲ್ಲಾ ನಿನ್ನ ಬಳಿಯಲ್ಲೇ ಇದೆ, ತಿಜೋರಿ ಕೀ ಕೂಡ ನಿನ್‌ ಹತ್ರ ಇದೇ ಅಲ್ವಾ ಅಂತಾಳೆ. ಅದಕ್ಕೆ ಪುಷ್ಪಾ ಅದೆಲ್ಲಾ ಈ ಮನೆ ದುಡ್ಡು ಅತ್ತಿಗೆ, ನಂದ್‌ ಹೇಗಾಗುತ್ತೆ ಅಂತ ಕಣ್ಣೀರು ಸುರಿಯುತ್ತಾಳೆ.

ಮತ್ತೆ ಆಕಾಶ್‌ ಕೋಪಕ್ಕೆ ತುತ್ತಾದ ಪುಷ್ಪಾ

ಅಣ್ಣ ನೆನಪಲ್ಲೇ ಕೊರಗುತ್ತಾ ಆಕಾಶ್‌ಗೆಂದು ಕಾಫಿ ಮಾಡ್ಕೊಂಡು ರೂಮಿಗೆ ಹೋಗುವ ಪುಷ್ಪಾ ಇನ್ನೇನು ಕಾಫಿ ನೀಡಬೇಕು ಅನ್ನೋಷ್ಟ್ರಲ್ಲಿ ನಿದ್ದೆ ಕಣ್ಣಲ್ಲಿ ಕಾಫಿ ಕಪ್‌ಗೆ ಕೈ ತಾಗಿಸುತ್ತಾನೆ ಆಕಾಶ್‌. ಅಣ್ಣ ಲೋಕದಲ್ಲಿ ಮುಳುಗಿ ಹೋಗಿದ್ದ ಪುಷ್ಪಾಗೆ ಇದರ ಅರಿವೇ ಇರುವುದಿಲ್ಲ. ಬಿಸಿ ಕಾಫಿ ಆಕಾಶ್‌ ಮೈಮೇಲೆ ಚೆಲ್ಲುತ್ತದೆ. ಇದರಿಂದ ಕೋಪಗೊಳ್ಳುವ ಆಕಾಶ್‌ ಮತ್ತೆ ಪುಷ್ಪಾಗೆ ಬಾಯಿಗೆ ಬಂದಂತೆ ಬೈತಾನೆ. ಅಣ್ಣನ ಅನಾರೋಗ್ಯದ ವಿಚಾರ, ಗಂಡನ ಬೈಗುಳ ಎರಡೂ ಪುಷ್ಪಾಳ ಮನಸ್ಸನ್ನು ಘಾಸಿಗೊಳಿಸುತ್ತೆ. ಗಿರಿಜಾ ಹೇಳಿದಂತೆ ಅಣ್ಣನ ಅನಾರೋಗ್ಯಕ್ಕೆ ಗಂಡ ಮನೆಯ ಹಣ ಕೊಡ್ತಾಳಾ ಪುಷ್ಪಾ, ಇದ್ರಿಂದ ಅವಳು ಆಕಾಶ್‌ನಿಂದ ಶಾಶ್ವತವಾಗಿ ದೂರಾಗ್ತಾಳ ನಾಳಿನ ಸಂಚಿಕೆಯಲ್ಲಿ ನೋಡಬೇಕು.

IPL_Entry_Point