ಮುದ್ದು ಸೊಸೆ: ಕೋರ್ಟ್‌ ಮೆಟ್ಟಿಲೇರಿತು ವಿದ್ಯಾ ಬಾಲ್ಯವಿವಾಹ ಪ್ರಕರಣ; ಶಿವರಾಮೇಗೌಡನಿಗಿಲ್ಲ ಬಿಡುಗಡೆ ಭಾಗ್ಯ, ಭದ್ರನ ಮುಂದಿನ ನಡೆ ಏನು?
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ಕೋರ್ಟ್‌ ಮೆಟ್ಟಿಲೇರಿತು ವಿದ್ಯಾ ಬಾಲ್ಯವಿವಾಹ ಪ್ರಕರಣ; ಶಿವರಾಮೇಗೌಡನಿಗಿಲ್ಲ ಬಿಡುಗಡೆ ಭಾಗ್ಯ, ಭದ್ರನ ಮುಂದಿನ ನಡೆ ಏನು?

ಮುದ್ದು ಸೊಸೆ: ಕೋರ್ಟ್‌ ಮೆಟ್ಟಿಲೇರಿತು ವಿದ್ಯಾ ಬಾಲ್ಯವಿವಾಹ ಪ್ರಕರಣ; ಶಿವರಾಮೇಗೌಡನಿಗಿಲ್ಲ ಬಿಡುಗಡೆ ಭಾಗ್ಯ, ಭದ್ರನ ಮುಂದಿನ ನಡೆ ಏನು?

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 27 ನೇ ಸಂಚಿಕೆಯಲ್ಲಿ ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡನ ಮೇಲೆ ಎಫ್‌ಐಆರ್‌ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ಕೋರ್ಟ್‌ ಮೆಟ್ಟಿಲೇರಿತು ವಿದ್ಯಾ ಬಾಲ್ಯವಿವಾಹ ಪ್ರಕರಣ; ಶಿವರಾಮೇಗೌಡನಿಗಿಲ್ಲ ಬಿಡುಗಡೆ ಭಾಗ್ಯ, ಭದ್ರನ ಮುಂದಿನ ನಡೆ ಏನು?
ಮುದ್ದು ಸೊಸೆ: ಕೋರ್ಟ್‌ ಮೆಟ್ಟಿಲೇರಿತು ವಿದ್ಯಾ ಬಾಲ್ಯವಿವಾಹ ಪ್ರಕರಣ; ಶಿವರಾಮೇಗೌಡನಿಗಿಲ್ಲ ಬಿಡುಗಡೆ ಭಾಗ್ಯ, ಭದ್ರನ ಮುಂದಿನ ನಡೆ ಏನು?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 27ನೇ ಎಪಿಸೋಡ್‌ ಕಥೆ ಹೀಗಿದೆ. ಇನ್ಸ್‌ಪೆಕ್ಟರ್‌ ಮೇಲೆ ಶಿವರಾಮೇಗೌಡ ಹಲ್ಲೆ ಮಾಡಿದ ವಿಡಿಯೋ ವೈರಲ್‌ ಆಗುತ್ತದೆ. ಮಾಧ್ಯಮಗಳಲ್ಲೂ ಪ್ರಸಾರವಾಗುತ್ತದೆ. ಅದನ್ನು ನೋಡಿ ಭದ್ರ ಕೋಪಗೊಳ್ಳುತ್ತಾನೆ. ಅಪ್ಪನಿಗೆ ಈ ಗತಿ ತಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅರಚುತ್ತಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮೇಗೌಡನಿಗೆ ಬೇಲ್‌ ಕೂಡಾ ದೊರೆಯುವುದಿಲ್ಲ. ಆತನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

ಪುಸ್ತಕವೇ ನನ್ನ ಬೆಲೆ ಕಟ್ಟಲಾಗದ ಒಡವೆ ಎಂದ ವಿದ್ಯಾ

ಮದುವೆ ಮನೆಯಿಂದ ಖುಷಿಯಾಗಿ ಮನೆಗೆ ಬಂದ ವಿದ್ಯಾ ಸೀರೆ, ಒಡವೆಯನ್ನು ತೆಗೆಯುತ್ತಾಳೆ. ನಾನು ಓದಿ ಡಾಕ್ಟರ್‌ ಆಗಿ ನಮ್ಮ‌ ಮನೆಯ ಕಷ್ಟವನ್ನು ದೂರ ಮಾಡಬೇಕು ಎಂದು ಬಹಳ ಕನಸು ಕಂಡಿದ್ದೆ, ಒಂದು ವೇಳೆ ಈ ಮದುವೆ ನಡೆದಿದ್ದರೆ ನನ್ನ ಕನಸು ಕನಸಾಗೇ ಉಳಿದುಬಿಡುತ್ತಿತ್ತು ಎಂದು ವಿದ್ಯಾ ತನ್ನ ತಂಗಿ ಸರಸ್ವತಿ ಬಳಿ ಆತಂಕ ವ್ಯಕ್ತಪಡಿಸುತ್ತಾಳೆ. ಮದುವೆ ನಡೆಯಲಿಲ್ಲವಲ್ಲ, ಸಮಾಧಾನ ಮಾಡಿಕೋ, ಸದ್ಯಕ್ಕೆ ಯಾರೋ ಪುಣ್ಯಾತ್ಮರು ಸಮಯಕ್ಕೆ ಸರಿಯಾಗಿ ಪೊಲೀಸರಿಗೆ ಫೋನ್‌ ಮಾಡಿ ಈ ಮದುವೆ ನಿಲ್ಲಿಸಿದ್ಧಾರೆ ಎಂದು ಸರೂ ಹೇಳುತ್ತಾಳೆ. ಅದರು ಬೇರೆ ಯಾರೂ ಅಲ್ಲ, ನಾನೇ ಪೊಲೀಸರಿಗೆ ಫೋನ್‌ ಮಾಡಿದ್ದು ಎಂದು ವಿದ್ಯಾ ತಾನು ಎಲ್ಲರಿಂದ ಮುಚ್ಚಿಟ್ಟಿದ್ದ ರಹಸ್ಯವನ್ನು ತಂಗಿ ಬಳಿ ಹೇಳುತ್ತಾಳೆ. ಆ ಮಾತು ಕೇಳಿ ಸರೂಗೆ ನಡುಕ ಶುರುವಾಗುತ್ತದೆ. ಅಪ್ಪಿ ತಪ್ಪಿ ಈ ವಿಚಾರ ಅಪ್ಪನಿಗೆ ಗೊತ್ತಾದರೆ ನಿಜವಾಗಲೂ ತೊಂದರೆ ಆಗುತ್ತದೆ ಎನ್ನುತ್ತಾಳೆ.

ನನ್ನ ಉದ್ದೇಶ ಈ ಮದುವೆ ನಿಲ್ಲಬೇಕು ಎನ್ನುವುದು ಮಾತ್ರವಾಗಿತ್ತು. ಆದರೆ ಗೌಡರು ಬಹಳ ಒಳ್ಳೆಯವರು, ನನ್ನ ಸಲುವಾಗಿ ಅವರು ಜೈಲಿಗೆ ಹೋಗಬೇಕಾಗಿ ಬಂತು ಎಂದು ವಿದ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ಅಷ್ಟರಲ್ಲಿ ರತ್ನ ಅಲ್ಲಿಗೆ ಬರುತ್ತಾಳೆ. ಏನು ನಿಮ್ಮಿಬ್ಬರ ಗುಟ್ಟು ಎಂದು ಕೇಳುತ್ತಾಳೆ. ಅಮ್ಮ ನಮ್ಮ ಮಾತನ್ನು ಕೇಳಿಸಿಕೊಂಡಿರಬಹುದು ಎಂದು ಸರೂ ಗಾಬರಿಯಾಗುತ್ತಾಳೆ. ಏನಿಲ್ಲ ಸೀರೆ, ಒಡವೆ ಎಲ್ಲವನ್ನೂ ಜೋಪಾನವಾಗಿ ತೆಗೆದಿಡು ಎಂದು ಹೇಳುತ್ತಿದ್ದೆ ಎಂದು ಸರೂ ಸುಳ್ಳು ಹೇಳುತ್ತಾಳೆ. ಹೌದು, ಅದು ಗೌಡರ ಮನೆ ವಸ್ತುಗಳು, ಹುಷಾರು ಎಂದು ರತ್ನ ಹೇಳುತ್ತಾಳೆ. ನಾನು ಈಗ ಅವರ ಮನೆ ಸೊಸೆ ಅಲ್ಲ, ಆದ್ದರಿಂದ ಇದನ್ನು ಅವರಿಗೆ ವಾಪಸ್‌ ಕೊಡೋಣ ಎಂದು ವಿದ್ಯಾ ಹೇಳುತ್ತಾಳೆ. ಹೆಣ್ಣು ಮಕ್ಕಳಿಗೆ ಒಡವೆ ಎಂದರೆ ಬಹಳ ಇಷ್ಟ, ಆದರೆ ಇಷ್ಟೊಂದು ಒಡವೆಗಳು ಕಣ್ಣ ಮುಂದೆ ಇದ್ದರೂ ನಿನಗೆ ಬೇಕು ಎನಿಸುತ್ತಿಲ್ಲವಾ ಎಂದು ರತ್ನ ಕೇಳುತ್ತಾಳೆ. ಯಾರು ಇಲ್ಲ ಎಂದಿದ್ದು, ನನಗೂ ಎಲ್ಲರಿಗಿಂತ ಒಡವೆ ಎಂದರೆ ಬಹಳ ಇಷ್ಟ. ಆದರೆ ನನ್ನ ಒಡವೆ ಅದಲ್ಲ, ಇದು ಎಂದು ವಿದ್ಯಾ ತನ್ನ ಪುಸ್ತಕವನ್ನು ಎದೆಗೆ ಅವುಚಿಕೊಳ್ಳುತ್ತಾಳೆ. ಮಗಳಿಗೆ ಓದಿನ ಮೇಲೆ ಇದ್ದ ಪ್ರೀತಿ ಕಂಡು ರತ್ನ ಭಾವುಕಳಾಗುತ್ತಾಳೆ.

ಶಿವರಾಮೇಗೌಡನನ್ನು ಕೋರ್ಟ್‌ಗೆ ಕರೆತಂದ ಪೊಲೀಸರು

ಇತ್ತ ಲಾಯರ್‌ ಒಬ್ಬರೇ ಪೊಲೀಸ್‌ ಸ್ಟೇಷನ್‌ನಿಂದ ವಾಪಸ್‌ ಬರುವುದನ್ನು ನೋಡಿ ಭದ್ರ ಗಾಬರಿಯಾಗುತ್ತಾನೆ. ಅಪ್ಪ ಎಲ್ಲಿ ಎಂದು ಕೇಳುತ್ತಾನೆ. ಈ ಕೇಸ್‌ ನಾವು ಅಂದುಕೊಂಡಷ್ಟು ಸುಲಭವಲ್ಲ. ಈ ವಿಡಿಯೋ ನೋಡಿ ಎಂದು ಶಿವರಾಮೇಗೌಡನ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ಭದ್ರನಿಗೆ ತೋರಿಸುತ್ತಾರೆ. ಅದನ್ನು ನೋಡಿ ಭದ್ರ ಬೇಸರಗೊಳ್ಳುತ್ತಾನೆ. ಶಿವರಾಮೇಗೌಡ ಕೂಡಾ ಟಿವಿಯಲ್ಲಿ ಸುದ್ದಿ ನೋಡಿ ಸಿಟ್ಟಾಗುತ್ತಾನೆ. ಈ ಪ್ರಕರಣ ಬಹಳ ಗಂಭೀರವಾಗಿದೆ, ನಾವು ಕೋರ್ಟ್‌ಗೆ ಹೋಗಲೇಬೇಕು, ಬೇರೆ ದಾರಿ ಇಲ್ಲ ಎಂದು ಲಾಯರ್‌ ಹೇಳುತ್ತಾರೆ. ಎಲ್ಲರೂ ಕೋರ್ಟ್‌ನತ್ತ ಹೋಗುತ್ತಾರೆ. ವಿಚಾರ ತಿಳಿದ ಚೆಲುವ ಕೋರ್ಟ್‌ ಬಳಿ ಬರುತ್ತಾನೆ. ಅಲ್ಲೇ ಮರದ ಕೆಳಗೆ ಕುಳಿತಿದ್ದ ಸ್ವಾಮೀಜಿಯೊಬ್ಬರ ಬಳಿ ವಿಭೂತಿ ಪಡೆದು, ಗೌಡರಿಗೆ ಒಳಿತಾಗಲು ದೇವಸ್ಥಾನದಲ್ಲಿ ಪೂಜೆ ಮಾಡಿಸಿ ತಂದಿದ್ದೇನೆ ಎಂದು ಭದ್ರನ ಬಳಿ ಸುಳ್ಳು ಹೇಳುತ್ತಾನೆ. ವಿದ್ಯಾ ಬಹಳ ಬೇಸರಗೊಂಡಿದ್ದಾಳೆ. ಅವಳಿಗೆ ಸಮಾಧಾನ ಹೇಳುವಂತೆ ನಿಮ್ಮ ಅಜ್ಜಿ ಬಳಿ ಮನವಿ ಮಾಡಿದರೆ ವಿದ್ಯಾ ಕಾಲ್ಗುಣ ಸರಿ ಇಲ್ಲವೆಂದು ಹೇಳಿದ್ಧಾಗಿ ಚೆಲುವ ಹೇಳುತ್ತಾನೆ. ನಾವು ಒಮ್ಮೆ ಮನೆಗೆ ಬಂದು ಮಾತನಾಡುವುದಾಗಿ ಚೆಲುವನನ್ನು ಭದ್ರ ಸಮಾಧಾನ ಮಾಡುತ್ತಾನೆ.

ಮಗನ ಪರಿಸ್ಥಿತಿ ಕಂಡು ಶಿವರಾಮೇಗೌಡನ ತಾಯಿ ಕಣ್ಣೀರಿಡುತ್ತಾಳೆ. ನನ್ನ ಮಗನ ಬಗ್ಗೆ ದ್ವೇಷ ಇದ್ದರೆ ಎದುರಿಗೆ ಬಂದು ಹೋರಾಡಬಹುದಿತ್ತು, ಈ ರೀತಿ ಮಾಡಿದವರ ಮನೆ ಹಾಳಾಗಲಿ ಎಂದು ಹಿಡಿಶಾಪ ಹಾಕುತ್ತಾಳೆ. ಪೊಲೀಸರು ಬಂದು ಮದುವೆ ನಿಲ್ಲಿಸಲು ಹೇಳಿದಾಗ ಸುಮ್ಮನೆ ನಿಲ್ಲಿಸಬಹುದಿತ್ತು, ಇಲ್ಲದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಈಶ್ವರಿ ಹೇಳುತ್ತಾಳೆ. ಅಷ್ಟರಲ್ಲಿ ಸುಭಾಷ್‌ ಬಂದು ವಿಡಿಯೋ ವೈರಲ್‌ ಆಗಿರುವುದನ್ನು ಈಶ್ವರಿಗೆ ತೋರಿಸುತ್ತಾನೆ. ಸಿಕ್ಕಿದ್ದೇ ಚಾನ್ಸ್‌ ಎಂದುಕೊಂಡು ಈಶ್ವರಿ ಮತ್ತೆ ನಾಟಕ ಶುರು ಮಾಡುತ್ತಾಳೆ. ಇನ್ನು ಭಾವನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, ಆಗಬಾರದ್ದು ಆಗಿ ಹೋಗಿದೆ ಎಂದು ಅಳುತ್ತಾಳೆ. ಅದನ್ನು ಕೇಳಿ ಮೋಹನ ಹಾಗೂ ಶಿವರಾಮೇಗೌಡನ ತಾಯಿ ಮತ್ತೆ ಶಾಕ್‌ ಆಗುತ್ತಾರೆ. ಕೈಯಲ್ಲಿ ಮಚ್ಚು ಹಿಡಿದು ಬರುವ ಸುಭಾಷ್‌ , ನನ್ನ ದೊಡ್ಡಪ್ಪನಿಗೆ ಈ ಗತಿ ತಂದವರನ್ನು ಉಳಿಸುವುದಿಲ್ಲ ಎಂದು ಡ್ರಾಮಾ ಶುರು ಮಾಡುತ್ತಾನೆ. ಮಗನ ಕೆನ್ನೆಗೆ ಹೊಡೆಯುವ ಈಶ್ವರಿ ನೀನು ಹೀಗೆಲ್ಲಾ ಮಾಡಿದರೆ ನಿನ್ನ ದೊಡ್ಡಪ್ಪನ ಮರ್ಯಾದೆ ಮತ್ತಷ್ಟು ಹೋಗುತ್ತದೆ ಎನ್ನುತ್ತಾಳೆ.

ಕೋರ್ಟ್‌ನಲ್ಲಿ ಶಿವರಾಮೇಗೌಡನಿಗೆ ಶಿಕ್ಷೆ ಆಗುವುದಾ? ಪೊಲೀಸರಿಗೆ ಕರೆ ಮಾಡಿದ್ದು ಯಾರು ಎಂಬ ಸತ್ಯ ಹೊರ ಬೀಳುವುದಾ? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರೂ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in