ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ
ಕನ್ನಡ ಸುದ್ದಿ  /  ಮನರಂಜನೆ  /  ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ

ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ

ಕಲರ್ಸ್‌ ಕನ್ನಡದ ಮುದ್ದು ಸೊಸೆ ಧಾರಾವಾಹಿ 40 ನೇ ಸಂಚಿಕೆಯಲ್ಲಿ ವಿದ್ಯಾ ಮೇಲೆ ಆರೋಪ ಹೊರಿಸಲು ಲೋಕೇಶ ನಿರಾಕರಿಸುತ್ತಾನೆ. ವಿನಂತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. (ಬರಹ: ರಕ್ಷಿತಾ)

ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ
ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 40ನೇ ಎಪಿಸೋಡ್‌ ಕಥೆ ಹೀಗಿದೆ ವಿದ್ಯಾ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯುವಾಗ ಅಲ್ಲಿಗೆ ವಿನಂತಿ ಬರುತ್ತಾಳೆ. ಭದ್ರ ಮಾವನನ್ನು ನಾನು ಚಿಕ್ಕಂದಿನಿಂದ ಪ್ರೀತಿಸುತ್ತಿದ್ದೇನೆ, ಅವನನ್ನೇ ನನ್ನ ಗಂಡ ಎಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನಿಮ್ಮ ಮಗಳು ಭದ್ರ ಮಾವನನ್ನು ಮದುವೆಯಾಗಲು ನಾನು ಬಿಡುವುದಿಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಚೆಲುವ, ಅಳಿಯನಿಗೆ ಕರೆ ಮಾಡುತ್ತಾನೆ. ಈಗಲೇ ಎಲ್ಲರಿಗೂ ಕ್ಷಮೆ ಕೇಳಿ ಮನೆಗೆ ಬರುವಂತೆ ಭದ್ರ ತಾಕೀತು ಮಾಡುತ್ತಾನೆ. ವಿನಂತಿ ಎಲ್ಲರ ಕ್ಷಮೆ ಕೇಳಿ ಅಲ್ಲಿಂದ ಹೊರಡುತ್ತಾಳೆ.

ಭದ್ರನ ಬಳಿ ವಿದ್ಯಾ ಬಗ್ಗೆ ಸುಳ್ಳು ಹೇಳುವುದಿಲ್ಲ ಎಂದ ಲೋಕೇಶ

ಮದುವೆ ದಿನ ಶಿವರಾಮೇಗೌಡನ ಕುಟುಂಬದವರು ಛತ್ರಕ್ಕೆ ಬರುತ್ತಾರೆ. ಶಿವರಾಮೇಗೌಡ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸುತ್ತಾನೆ. ಅಷ್ಟರಲ್ಲಿ ಲೋಕೇಶ ಕೂಡಾ ಮದುವೆ ಮನೆಗೆ ಬರುತ್ತಾನೆ. ಕ್ವಾಟ್ಲೆ ಅವನನ್ನು ಕರೆದು, ನಿನ್ನ ಬಳಿ ಪೋನ್‌ ಕೇಳಿದ ಹುಡುಗಿ ಸಿಕ್ಕಳಾ ಎಂದು ಕೇಳುತ್ತಾನೆ. ಇಲ್ಲ ಅವಳನ್ನೇ ಹುಡುಕುತ್ತಿದ್ದೇನೆ ಎಂದು ಲೋಕೇಶ ಹೇಳುತ್ತಾನೆ. ಅದೇ ಸಮಯಕ್ಕೆ ಹೆಣ್ಣಿನ ಮನೆಯವರು ಬರುತ್ತಾರೆ. ಮದುಮಗಳಿಗೆ ಆರತಿ ಮಾಡಲು ಶಿವರಾಮೇಗೌಡ ಹೇಳುತ್ತಾನೆ. ಈಶ್ವರಿ ಆರತಿ ತಟ್ಟೆ ಹಿಡಿದು ಬರುತ್ತಾಳೆ. ಅವಳು ತನ್ನ ಜೊತೆಗೆ ವಿನಂತಿಯನ್ನು ಕರೆಯುತ್ತಾಳೆ. ವಿನಂತಿ ಒಲ್ಲದ ಮನಸ್ಸಿನಿಂದಲೇ ಬಂದು ಸಿಟ್ಟಿನಿಂದ ವಿದ್ಯಾಗೆ ಆರತಿ ಮಾಡುತ್ತಾಳೆ. ನನ್ನ ಮಗಳ ಕೈಯಲ್ಲೇ ಆರತಿ ಮಾಡಿಸುತ್ತೀಯ, ನಾನು ಈ ವಿದ್ಯಾಗೆ ಎಲ್ಲರ ಮಂದೆ ಮಂಗಳಾರತಿ ಮಾಡಿಸುತ್ತೇನೆ ಎಂದುಕೊಂಡು ಈಶ್ವರಿ ಬಗ್ಗೆ ಸಾವಿತ್ರಿ ಸಿಟ್ಟಾಗುತ್ತಾಳೆ.

ಸಾವಿತ್ರಿ ಲೋಕೇಶನಿಗೆ ಕರೆ ಮಾಡುತ್ತಾಳೆ. ನಾನು ನಿನ್ನೆ ಹೇಳಿದ್ದ ಕೆಲಸ ನೆನಪಿದೆ ತಾನೇ ನಾನು ಹೇಳಿದ ಹುಡುಗಿಯನ್ನೇ ನೀನು ತೋರಿಸಬೇಕು, ನಾನು ನಿನಗೆ 5 ಲಕ್ಷ ರೂ ಕೊಟ್ಟು ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ, ನೀನು ನನಗೆ ಕೊಟ್ಟ ಮಾತು ಉಳಿಸಿಕೋ ಎಂದು ಸಾವಿತ್ರಿ ಹೇಳುತ್ತಾಳೆ. ಅದು ಯಾರು ತೋರಿಸಿ ಅಕ್ಕ ಎಂದು ಲೋಕೇಶ ಹೇಳುತ್ತಾನೆ. ಅಲ್ಲಿ ಆರತಿ ಮಾಡಿಸಿಕೊಳ್ಳುತ್ತಿದ್ದಾಳಲ್ಲ ಮದುವೆ ಹೆಣ್ಣು, ಪೊಲೀಸರಿಗೆ ಫೋನ್‌ ಮಾಡಿದ್ದು ಅವಳೇ ಎಂದು ಭದ್ರನಿಗೆ ಹೇಳು ಎಂದು ಹೇಳುತ್ತಾಳೆ. ಸಾವಿತ್ರಿ ಮಾತು ಕೇಳಿ ಲೋಕೇಶ ಗಾಬರಿ ಆಗುತ್ತಾನೆ. ಆದರೂ ದುಡ್ಡಿನ ಆಸೆಗೆ ಸರಿ ನೀವು ಹೇಳಿದಂತೆ ಮಾಡುತ್ತೇನೆ ಎಂದು ಭದ್ರನನ್ನು ಹುಡುಕುತ್ತಾ ಹೊರಡುತ್ತಾನೆ. ವಿದ್ಯಾ ಹಣೆಬರಹವೇ ಸರಿ ಇಲ್ಲ, ಅವಳಿಗೆ ಮದುವೆ ಆಗುವ ಯೋಗವೇ ಇಲ್ಲ, ಒಮ್ಮೆ ನೀನು ಮದುವೆ ನಿಲ್ಲಿಸಿದೆ, ಈಗ ನಾನು ನಿಲ್ಲಿಸುತ್ತಿದ್ದೇನೆ ನೋಡು ಎಂದು ಸಾವಿತ್ರಿ ಮಗಳ ಬಳಿ ಹೇಳಿಕೊಂಡು ಖುಷಿಯಾಗುತ್ತಾಳೆ.

ತಾಯಿ ಮಾತಿಗೆ ನೊಂದು ಆತ್ಮಹತ್ಯೆಗೆ ಮುಂದಾದ ವಿನಂತಿ

ಲೋಕೇಶ ಭದ್ರನ ಬಳಿ ಬರುತ್ತಾನೆ. ಮದುವೆ ಮನೆ ಹೊರಗೆ ಭದ್ರ, ಗೋವಿಂದ, ಕ್ವಾಟ್ಲೆ ಮೂವರೂ ಸೇರಿ ಒಂದು ಹುಡುಗನಿಗೆ ಥಳಿಸುತ್ತಾರೆ. ಅದನ್ನು ನೋಡಿ ಲೋಕೇಶ ಗಾಬರಿ ಆಗುತ್ತಾನೆ. ಅವಳು ನಾನು ಮದುವೆ ಆಗುತ್ತಿರುವ ಹುಡುಗಿ, ಅವಳ ಬಗ್ಗೆಯೇ ನೀನು ಅನುಮಾನ ಪಡುತ್ತಿದ್ದೀಯ ನಿನಗೆ ಎಷ್ಟು ಧೈರ್ಯ ಎಂದು ಬೈಯ್ಯುತ್ತಾ ಭದ್ರ ಆ ಹುಡುಗನಿಗೆ ಹೊಡೆಯುತ್ತಿರುತ್ತಾನೆ. ಅವನಿಗೆ ಏಕೆ ಹೊಡೆಯುತ್ತಿದ್ದೀರ ಹೇಳಿ ಎಂದು ಲೋಕೇಶ ಕೇಳುತ್ತಾನೆ. ನೀವು ಮದುವೆ ಆಗುತ್ತಿರುವ ಹುಡುಗಿಯೇ ಪೊಲೀಸರಿಗೆ ಫೋನ್‌ ಮಾಡಿರಬಹುದು ಎಂದು ಆತ ಅನುಮಾನಪಟ್ಟ ಅದಕ್ಕೆ ಹಾಗೆ ಹೊಡೆಯುತ್ತಿದ್ದೇವೆ ಎಂದು ಕ್ವಾಟ್ಲೆ ಹೇಳುತ್ತಾನೆ. ಆ ಮಾತು ಕೇಳಿ ಲೋಕೇಶ ಶಾಕ್‌ ಆಗುತ್ತಾನೆ. ನಾನು ಅದೇ ಮಾತನ್ನು ಹೇಳಲು ಬಂದೆ, ಫೋನ್‌ ಮಾಡಿದ್ದು ಮದುವೆ ಹುಡುಗಿ ಎಂದು ಈಗ ಹೇಳಿದರೆ ಖಂಡಿತ ಇವರು ನನ್ನನ್ನು ಉಳಿಸುವುದಿಲ್ಲ ಎಂದುಕೊಳ್ಳುತ್ತಾನೆ. ಆ ಹುಡುಗಿ ಯಾರು ಗೊತ್ತಾಯ್ತಾ ಎಂದು ಕ್ವಾಟ್ಲೆ ಕೇಳುತ್ತಾನೆ. ಇಲ್ಲ ಹುಡುಕುತ್ತಿದ್ದೇನೆ ಎಂದು ಹೇಳಿ ಲೋಕೇಶ ಅಲ್ಲಿಂದ ಎಸ್ಕೇಪ್‌ ಆಗುತ್ತಾನೆ.

ಲೋಕೇಶ ನಾನು ಕೊಟ್ಟ ಕೆಲಸ ಮಾಡಿ ಮುಗಿಸಿದ್ದಾನೆ ಎಂದು ಸಾವಿತ್ರಿ ಖುಷಿಯಾಗಿರುತ್ತಾಳೆ. ಆದರೆ ಲೋಕೇಶ ಅಲ್ಲಿ ನಡೆದ ವಿಚಾರವನ್ನು ಸಾವಿತ್ರಿ ಬಳಿ ಹೇಳುತ್ತಾನೆ. ನೀವು ಬೇಡ ನಿಮ್ಮ ಸಹವಾಸವೂ ಬೇಡ, ಬದುಕಿದ್ದರೆ ಭಿಕ್ಷೆ ಬೇಡಿ ಆದರೂ ತಿನ್ನುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಅಂದುಕೊಂಡ ಕೆಲಸ ಆಗಲಿಲ್ಲ ಎಂದು ಸಾವಿತ್ರಿ ಬೇಸರಗೊಳ್ಳುತ್ತಾನೆ. ತಾಯಿ ಬಗ್ಗೆ ವಿನಂತಿ ಕೂಡಾ ಸಿಟ್ಟಾಗುತ್ತಾಳೆ. ನೀನು ಕೇವಲ ಮಾತನಾಡಿಕೊಂಡಿರುವುದಕ್ಕೆ ಲಾಯಕ್ಕು, ನಿನ್ನ ಕೈಲಿ ಏನೂ ಮಾಡಲು ಸಾಧ್ಯವಿಲ್ಲ, ನಿನ್ನ ಮಾತು ಕೇಳಿಕೊಂಡು ಭದ್ರ ಮಾವನ ಜೊತೆ ಹಸೆಮಣೆ ಏರುವ ಕನಸು ಕಂಡೆ, ತಪ್ಪು ನಂದು ಎಂದು ವಿನಂತಿ ಗೋಳಾಡುತ್ತಾಳೆ. ನಿನ್ನ ಕಣ್ಣೆದುರಿಗೆ ನಾನು ಇಷ್ಟು ಪ್ರಯತ್ನ ಮಾಡುತ್ತಿದ್ದೀನಿ ಮತ್ತೇನು ಮಾಡಲು ಸಾಧ್ಯ ಎಂದು ಸಾವಿತ್ರಿ ಕೇಳುತ್ತಾಳೆ. ಹಾಗಾದರೆ ಇಲ್ಲದಿರುವ ಆಸೆಗಳನ್ನು ಏಕೆ ಹುಟ್ಟುಹಾಕಿದೆ, ನನಗೆ ಸಾಯಬೇಕು ಎನಿಸುತ್ತಿದೆ ಎಂದು ವಿನಂತಿ ಅಳುತ್ತಾಳೆ. ಅಷ್ಟು ಮಾಡು, ನೀನು ಸತ್ತರೆ ನಾನೂ ನೆಮ್ಮದಿಯಾಗಿರುತ್ತೇನೆ ಎಂದು ಸಾವಿತ್ರಿ ಸಿಟ್ಟಿನಿಂದ ಮಾತನಾಡಿ, ಮಗಳನ್ನೇ ಅಲ್ಲೇ ಬಿಟ್ಟು ಹೋಗುತ್ತಾಳೆ. ಇಷ್ಟೆಲ್ಲಾ ಆದ ನಂತರ ನಾನು ಬದುಕಿದ್ದೂ ವ್ಯರ್ಥ ಎಂದು ವಿನಂತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ.

ವಿನಂತಿ ನಿಜವಾಗಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಾಳಾ ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಮುದ್ದು ಸೊಸೆ ಧಾರಾವಾಹಿ ಪಾತ್ರವರ್ಗ

‌ಭದ್ರೇಗೌಡ - ತ್ರಿವಿಕ್ರಮ್‌

ಶಿವರಾಮೇಗೌಡ - ಮುನಿ

ಶಿವರಾಮೇಗೌಡ ತಾಯಿ - ಲಕ್ಷ್ಮೀ ನಾಡಗೌಡ

ವಿದ್ಯಾ - ಪ್ರತಿಮಾ ಠಾಕೂರ್‌

ರತ್ನ (ವಿದ್ಯಾ ತಾಯಿ) - ಹರಿಣಿ ಶ್ರೀಕಾಂತ್

ಸರಸ್ವತಿ (ವಿದ್ಯಾ ತಂಗಿ) - ಗ್ರೀಷ್ಮಾ

ಸಾವಿತ್ರಿ - ಶಿಲ್ಪಾ ಅಯ್ಯರ್‌

ಕ್ವಾಟ್ಲೆ - ನಿಶಿತ್‌ ರಾಜ್‌ ಶೆಟ್ಟಿ

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in