ನಮ್ಮ ದೇಶ ನಮ್ಮ ಹೆಮ್ಮೆ ಅಭಿಯಾನಕ್ಕೆ ಕೈ ಜೋಡಿಸಿದ ಕಲರ್ಸ್‌ ಕನ್ನಡ ಸೀರಿಯಲ್‌ ಕಲಾವಿದರು; ಅಷ್ಟಕ್ಕೂ ಇವ್ರು ಮಾಡಿದ್ದೇನು?-television news colors kannada serial artistes joined hands for namma desha namma hemme campaign mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಮ್ಮ ದೇಶ ನಮ್ಮ ಹೆಮ್ಮೆ ಅಭಿಯಾನಕ್ಕೆ ಕೈ ಜೋಡಿಸಿದ ಕಲರ್ಸ್‌ ಕನ್ನಡ ಸೀರಿಯಲ್‌ ಕಲಾವಿದರು; ಅಷ್ಟಕ್ಕೂ ಇವ್ರು ಮಾಡಿದ್ದೇನು?

ನಮ್ಮ ದೇಶ ನಮ್ಮ ಹೆಮ್ಮೆ ಅಭಿಯಾನಕ್ಕೆ ಕೈ ಜೋಡಿಸಿದ ಕಲರ್ಸ್‌ ಕನ್ನಡ ಸೀರಿಯಲ್‌ ಕಲಾವಿದರು; ಅಷ್ಟಕ್ಕೂ ಇವ್ರು ಮಾಡಿದ್ದೇನು?

ಟಿವಿ ತಾರೆಗಳಾದ ರಿತ್ವಿಕ್ ಕೃಪಾಕರ್, ತನ್ವಿ ರಾವ್, ಸ್ಪಂದನಾ ಸೋಮಣ್ಣ, ಸುಷ್ಮಾ ನಾಣಯ್ಯ, ಮೌನ ಗುಡ್ಡೆಮನೆ, ಚಂದ್ರಪ್ರಭಾ ಮುಂತಾದವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧ್ವಜಾರೋಹಣದಲ್ಲಿ ಪಾಲ್ಗೊಂಡರು.

ಟಿವಿ ತಾರೆಗಳಾದ ರಿತ್ವಿಕ್ ಕೃಪಾಕರ್, ತನ್ವಿ ರಾವ್, ಸ್ಪಂದನಾ ಸೋಮಣ್ಣ, ಸುಷ್ಮಾ ನಾಣಯ್ಯ, ಮೌನ ಗುಡ್ಡೆಮನೆ, ಚಂದ್ರಪ್ರಭಾ ಮುಂತಾದವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧ್ವಜಾರೋಹಣದಲ್ಲಿ ಪಾಲ್ಗೊಂಡರು.
ಟಿವಿ ತಾರೆಗಳಾದ ರಿತ್ವಿಕ್ ಕೃಪಾಕರ್, ತನ್ವಿ ರಾವ್, ಸ್ಪಂದನಾ ಸೋಮಣ್ಣ, ಸುಷ್ಮಾ ನಾಣಯ್ಯ, ಮೌನ ಗುಡ್ಡೆಮನೆ, ಚಂದ್ರಪ್ರಭಾ ಮುಂತಾದವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧ್ವಜಾರೋಹಣದಲ್ಲಿ ಪಾಲ್ಗೊಂಡರು.

Namma Desha Namma Hemme campaign: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಡಗರದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಕಲಾವಿದರು ಪಾಲ್ಗೊಂಡದ್ದು ಈ ಸಲದ ಸ್ವಾತಂತ್ರ್ಯ ಹಬ್ಬಕ್ಕೆ ಹೊಸ ಮೆರುಗನ್ನು ತುಂಬಿತು. 'ನಮ್ಮ ದೇಶ ನಮ್ಮ ಹೆಮ್ಮೆ' ಎಂಬ ತನ್ನ ಅಭಿಯಾನದ ಅಂಗವಾಗಿ ಕಲರ್ಸ್ ವಾಹಿನಿಯ ನಟ ನಟಿಯರು ರಾಜ್ಯದ ಮೂವತ್ತೊಂದು ಜಿಲ್ಲೆಗಳಿಗೆ ತೆರಳಿ ಸ್ವಾತಂತ್ರ್ಯ ಸಂಭ್ರಮವನ್ನು ಹೆಚ್ಚಿಸಿದರು.

ಟಿವಿ ತಾರೆಗಳಾದ ರಿತ್ವಿಕ್ ಕೃಪಾಕರ್, ತನ್ವಿ ರಾವ್, ಸ್ಪಂದನಾ ಸೋಮಣ್ಣ, ಸುಷ್ಮಾ ನಾಣಯ್ಯ, ಮೌನ ಗುಡ್ಡೆಮನೆ, ಚಂದ್ರಪ್ರಭಾ ಮುಂತಾದವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಟೆಲಿವಿಷನ್ ಚಾನಲ್‌ವೊಂದು ಸ್ವಾತಂತ್ರ್ಯ ದಿನಾಚರಣೆಗಾಗಿ ಈ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದೇ ಮೊದಲು.

ಇದು ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಹೆಚ್ಚಿಸಿದ್ದಷ್ಟೇ ಅಲ್ಲದೆ, ಚಾನೆಲ್ ವೀಕ್ಷಕರೊಂದಿಗೆ ಹೊಂದಿರುವ ಬಂಧವನ್ನು ಮತ್ತಷ್ಟು ಬಿಗಿಗೊಳಿಸಿತು. ಕಲರ್ಸ್ ತನ್ನ ಕಲಾವಿದರನ್ನು ಅವರವರ ತವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಕಳಿಸಿಕೊಟ್ಟಿತ್ತು. ಸ್ವಾತಂತ್ರ್ಯ ದಿನವನ್ನು ವಿನೂತನವಾಗಿ ಆಚರಿಸಿದ ಬಳಿಕ ಕಲಾವಿದರು ಆಯಾ ಊರುಗಳ ದೇವಾಲಯಗಳಿಗೆ ಭೇಟಿ ಕೊಟ್ಟು 'ಮಹರ್ಷಿ ದರ್ಶನ' ಕಾರ್ಯಕ್ರಮದ ಪ್ರಚಾರವನ್ನೂ ನಡೆಸಿದರು. ಆಯಾ ಊರುಗಳ ಸ್ಥಳೀಯ ತಿನಿಸುಗಳನ್ನು ಸವಿಯುವ ಮೂಲಕ 'ಸವಿರುಚಿ' ಕಾರ್ಯಕ್ರಮಕ್ಕೆ ಪ್ರಚಾರ ಕೊಟ್ಟರು. ಈ ಎಲ್ಲಾ ವಿಶೇಷ ಕ್ಷಣಗಳ ತುಣುಕುಗಳು ಕಲರ್ಸ್ ಕನ್ನಡದ ಕಾರ್ಯಕ್ರಮಗಳ ನಡುವೆ ಪ್ರಸಾರಗೊಳ್ಳಲಿವೆ.

ಮನರಂಜನೆ ನೀಡುವುದರ ಜೊತೆಜೊತೆಗೆ 'ನಮ್ಮ ದೇಶ ನಮ್ಮ ಹೆಮ್ಮೆ'ಯಂಥ ಅಭಿಯಾನಗಳನ್ನು ಆಯೋಜಿಸಿ ರಾಷ್ಟ್ರೀಯ ಭಾವೈಕ್ಯತೆಗೆ ಕಾಣಿಕೆ ನೀಡಿದ ಖುಷಿ ವ್ಯಕ್ತಪಡಿಸಿದ್ದು ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್. ವಯಾಕಾಮ್ ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಸುಷ್ಮಾ ರಾಜೇಶ್ ಮಾತನಾಡಿ, ಕಲರ್ಸ್ ಕನ್ನಡ ತನ್ನ ರಂಜನೆಯನ್ನು ದಾಟಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈ ಸ್ವಾತಂತ್ರ್ಯ ದಿನಾಚರಣೆ ಕುರಿತ ಅಭಿಯಾನ ನಮಗೆ ಹೆಮ್ಮೆ ತಂದಿದೆ' ಎಂದರು.

ಕಲಾವಿದರು ಹೇಳಿದ್ದೇನು?

ಮೈಸೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ರಾಮಾಚಾರಿ ಧಾರಾವಾಹಿಯ ನಾಯಕನಟ ರಿತ್ವಿಕ್ ಕೃಪಾಕರ್, ಇದು ತಮ್ಮ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ ಎಂದರು. ಜನರೊಟ್ಟಿಗೆ ಸೇರಿ ಧ್ವಜ ಹಾರಿಸಿದ್ದನ್ನು ಎಂದೂ ಮರೆಯಲಾಗದು ಎಂದದ್ದು ಕರಿಮಣಿ ಧಾರಾವಾಹಿಯ ಅಶ್ವಿನ್ (ಕರ್ಣ). ಲಕ್ಷ್ಮೀ ಬಾರಮ್ಮ ಖ್ಯಾತಿಯ ತನ್ವಿ (ಕೀರ್ತಿ) ಮಾತನಾಡಿ, ಕಲರ್ಸ್ ಆಯೋಜಿಸಿದ ಈ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಮ್ಮೆ ಅನಿಸಿತು ಎಂದರು.