ನನ್ನ ಮಗಳ ವಿರುದ್ಧ ದರ್ಶನ್ ಫ್ಯಾನ್ಸ್ ಕೆಟ್ಟ ಕಾಮೆಂಟ್ ಮಾಡ್ತಿದ್ದಾರೆ; ಗಿಚ್ಚಿ ಗಿಲಿಗಿಲಿ ಖ್ಯಾತಿಯ ದಿವ್ಯಾ ವಸಂತ ತಾಯಿಯ ಕಣ್ಣೀರು VIDEO
ಹಣ ಸುಲಿಗೆ ಕೇಸ್‌ನಲ್ಲಿ ಬಂಧಿತರಾಗಿರುವ ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ದಿವ್ಯಾ ವಸಂತ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಹರಿದಾಡುತ್ತಿದ್ದಂತೆ, ದಿವ್ಯಾ ಅವರ ತಾಯಿ ವಸಂತ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆಲ್ಲ ದರ್ಶನ್ ಅವರ ಫ್ಯಾನ್ಸ್ ಕಾರಣ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.
Gicchi GiliGili Divya Vasantha: ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಮತ್ತು ಟ್ರೋಲ್‌ಗೆ ಸಿಲುಕಿದವರ ಪೈಕಿ ಕಲರ್ಸ್ ಕನ್ನಡದ ಗಿಚ್ಚಿ ಗಿಲಿಗಿಲಿ ಶೋ ಖ್ಯಾತಿಯ ದಿವ್ಯಾ ವಸಂತ ಸಹ ಒಬ್ಬರು. ಇತ್ತೀಚೆಗಷ್ಟೇ ಹಣ ವಸೂಲಿ ಆರೋಪದ ಮೇಲೆ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ದಿವ್ಯಾ ವಸಂತ ಮತ್ತವರ ಸಹೋದರ ಸಂದೇಶ ವಸಂತ ಸೇರಿ ಮೂವರನ್ನು ಬಂಧಿಸಲಾಗಿತ್ತು. ತಮ್ಮದೇ ವಾಟ್ಸಾಪ್ ಗ್ರೂಪ್ ರಚಿಸಿಕೊಂಡು, ಉದ್ಯಮಿಗಳನ್ನೇ ಟಾರ್ಗೇಟ್ ಮಾಡಿ, ಅವರಿಂದ ಹಣವಸೂಲಿಗೆ ಪ್ಲಾನ್ ರೂಪಿಸುತ್ತಿದ್ದರು.
ಹಣ ಸುಲಿಗೆ ಆರೋಪದಲ್ಲಿ ಬಂಧನ
ಬೆಂಗಳೂರಿನ ಇಂದಿರಾನಗರದ ‘ಟ್ರೀ ಸ್ಪಾ ಮತ್ತು ಬ್ಯೂಟಿ ಪಾರ್ಲರ್’ ಮಾಲೀಕರಿಂದ ಹಣ ವಸೂಲಿ ಮಾಡಲು ದಿವ್ಯಾ ವಸಂತ ಮತ್ತವರ ಗ್ಯಾಂಗ್ ನಿರ್ಧರಿಸಿತ್ತು. ವಿಡಿಯೋ ರೆಕಾರ್ಡ್ ಮಾಡಿ, ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂದೂ ಬಿಂಬಿಸಿತ್ತು. ಅದರಂತೆ ದಿವ್ಯಾ ವಸಂತ ವಿಡಿಯೋ ಸಮೇತ ಸ್ಪಾ ಮಾಲೀಕರನ್ನು ಸಂಪರ್ಕಿಸಿ 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಸ್ಥಳೀಯ ಸುದ್ದಿ ವಾಹಿನಿಯಲ್ಲಿ ವಿಡಿಯೋ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಬಳಿಕ 8 ಲಕ್ಷ ನೀಡುವಂತೆ ಹೇಳಿದ್ದರು.
ಇದಾದ ಬಳಿಕ ಜುಲೈ 1 ರಂದು ಸ್ಪಾ ಮ್ಯಾನೇಜರ್ ಶಿವಶಂಕರ್, ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು, ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಕನ್ನಡ ವಾಹಿನಿಯೊಂದರ ಸಿಇಒ ಎಂದು ಹೇಳಿಕೊಂಡಿದ್ದ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ವಸಂತ ಮತ್ತವರ ಸಹೋದರ ಸಂದೇಶ್ ವಸಂತ ಅವರನ್ನು ಬಂಧಿಸಿದ್ದರು.
ಇದಾದ ಬಳಿಕ ಲಗ್ಗೆರೆಯಲ್ಲಿನ ದಿವ್ಯಾ ವಸಂತ ಮನೆ ಮೇಲೆ ದಾಳಿ ಮಾಡಿದ ಪೊಲೀಸರು, ಮನೆಯಲ್ಲಿದ್ದ ಲ್ಯಾಪ್‌ಟಾಪ್ ಸೇರಿ ಇನ್ನೂ ಕೆಲವು ವಸ್ತುಗಳನ್ನು ಜಪ್ತಿ ಮಾಡಿದ್ದರು. ಇದೀಗ ಇದೇ ದಿವ್ಯಾ ವಸಂತ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಅಭಿಪ್ರಾಯಗಳು ಹರಿದಾಡುತ್ತಿದ್ದಂತೆ, ದಿವ್ಯಾ ಅವರ ತಾಯಿ ವಸಂತ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆಲ್ಲ ದರ್ಶನ್ ಅವರ ಫ್ಯಾನ್ಸ್ ಕಾರಣ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ವಿಡಿಯೋದಲ್ಲಿ ವಸಂತಾ ಅವರು ಹೇಳಿದ್ದೇನು? ಇಲ್ಲಿದೆ ನೋಡಿ.
ದರ್ಶನ್ ಫ್ಯಾನ್ಸ್ ಬಗ್ಗೆ ಬೇಸರ
"ನಾನು ದಿವ್ಯಾಳ ತಾಯಿ ವಸಂತ. ನಗೆ ಅಳು ಬರುತ್ತಿದೆ. ಆದರೆ ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ. ಆದರೆ ಮಾತನಾಡಿರುವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ನನಗೆ ಚೆನ್ನಾಗಿ ಗೊತ್ತು. ಆಕೆ ತಪ್ಪು ಮಾಡಿದ್ದಾಳೋ ಇಲ್ಲವೋ ಮುಂದೆ ಗೊತ್ತಾಗುತ್ತದೆ. ದಿವ್ಯ ಬಂದ ಮೇಲೆ ಗೊತ್ತಾಗುತ್ತದೆ. ಅವಳ ಕೆಲಸ ಅವಳು ಮಾಡಿದ್ದಾಳೆ. ನಿಮ್ಮ ದರ್ಶನ್ ಅವರು ಎಲ್ಲರಿಗೂ ಬೇಕಾಗಿರುವವರೇ. ನನಗೂ ದರ್ಶನ್ ಅಂದ್ರೆ ಇಷ್ಟ, ನಮ್ಮ ಮಕ್ಕಳಿಗೂ ಇಷ್ಟ. ನಮ್ಮ ಮಗನಿಗೂ ಇಷ್ಟ"
ನನ್ನ ಮಗಳೂ ದರ್ಶನ್ ಫ್ಯಾನೇ..
"ನನ್ನ ಮಗಳಿಗೆ ಏನು ಕೆಲಸ ಕೊಟ್ಟಿದ್ದಾರೆ. ಅದನ್ನಷ್ಟೇ ದಿವ್ಯಾ ಮಾಡಿದ್ದಾಳೆ. ಅವಳೇ ಬಂದು ಅದಕ್ಕೆ ಏನು ಉತ್ತರ ಕೊಡಬೇಕೋ ಅವಳೇ ಕೊಡ್ತಾಳೆ. ಅಲ್ಲಿಯವರೆಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ವೈರಲ್ ಮಾಡಬೇಡಿ. ನಿಮ್ಮ ಸಪೋರ್ಟ್ ನಮಗೆ ಸದಾ ಇರಬೇಕು. ನಮ್ಮ ಮಗಳು ಬೇಗ ಬರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಅದನು ದೇವರು ನೋಡಿಕೊಳ್ತಾನೆ. ನೀವು ಅಂದುಕೊಂಡಂತೆ ನನ್ನ ಮಗಳು ಕೆಟ್ಟವಳಲ್ಲ. ನನ್ನ ಮಗಳೂ ದರ್ಶನ್ ಫ್ಯಾನೇ. ನಾವೂ ದರ್ಶನ್ ಫ್ಯಾನೇ. ನೀವು ಅಂದುಕೊಳ್ಳುವುದು ಏನೆಂದರೆ, ಅವಳು ಕೆಟ್ಟವಳು ಎಂದು ನೀವು ಅಂದುಕೊಳ್ತೀರಾ. ಇಷ್ಟು ದಿನ ದಿವ್ಯಾಳನ್ನು ಹೇಗೆ ಬೆಳೆಸಿದ್ದೀರೋ, ಅದೇ ರೀತಿ ಬೆಳೆಸಿ, ಅದನು ಬಿಟ್ಟು ಬೇರೆ ಏನನ್ನೂ ನಾವು ಕೇಳಿಕೊಳ್ಳುವುದಿಲ್ಲ" ಎಂದಿದ್ದಾರೆ ವಸಂತಾ.
ವಿಭಾಗ