ನಾನು ಹುಡುಗಿ ವೇಷ ಹಾಕಿದಾಗ ಗಂಡಸ್ರ ಕಣ್ಣು ಅಲ್ಲೇ ಇರ್ತಿತ್ತು, ತುಂಬ ಮುಜುಗರ ಆಗ್ತಿತ್ತು; ಗಿಚ್ಚಿ ಗಿಲಿಗಿಲಿ ರಾಗಿಣಿ ಅಲಿಯಾಸ್ ರಾಘವೇಂದ್ರ
ಮಜಾಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ರಾಘವೇಂದ್ರ ತೆರೆಮೇಲೆ ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಗಮನ ಸೆಳೆದಿದ್ದೇ ಹೆಚ್ಚು. ಶಿವಮೊಗ್ಗದ ಸಾಗರ ಮೂಲದ ರಾಘವೇಂದ್ರ ಇಂದಿಗೂ ಆ ರಾಗಿಣಿ ಪಾತ್ರದ ಫೇಮ್‌ನಿಂದಲೇ ಉಸಿರಾಡುತ್ತಿದ್ದಾರೆ. ಆ ಪಾತ್ರವನ್ನೇ ಶಕ್ತಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಮುಜುಗರದ ಪ್ರಸಂಗಗಳೂ ನಡೆದಿವೆ.

Majabharatha Raghavendra: ಮಜಾಭಾರತ ಶೋ ಮೂಲಕ ನಾಡಿನ ಕಿರುತೆರೆ ವೀಕ್ಷಕರಿಗೆ ಪರಿಚಿತರಾದವರು ನಟ ರಾಘವೇಂದ್ರ ಆರ್‌ಕೆ. ರಾಘವೇಂದ್ರ ತೆರೆಮೇಲೆ ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಗಮನ ಸೆಳೆದಿದ್ದೇ ಹೆಚ್ಚು. ಶಿವಮೊಗ್ಗದ ಸಾಗರ ಮೂಲದ ರಾಘವೇಂದ್ರ ಇಂದಿಗೂ ಆ ರಾಗಿಣಿ ಪಾತ್ರದ ಫೇಮ್‌ನಿಂದಲೇ ಉಸಿರಾಡುತ್ತಿದ್ದಾರೆ. ಆ ಪಾತ್ರವನ್ನೇ ಶಕ್ತಿಯಾಗಿ ಸ್ವೀಕರಿಸಿದ್ದಾರೆ. ಅಷ್ಟೇ ಮುಜುಗರಕ್ಕೀಡಾದ ಪ್ರಸಂಗಗಳನ್ನೂ ರಾಘವೇಂದ್ರ ಎದುರಿಸಿದ್ದಾರೆ. ಆ ಬಗ್ಗೆ ಸ್ವತಃ ರಾಗಿಣಿ ಅಲಿಯಾಸ್ ರಾಘವೇಂದ್ರ ವಿವರವಾಗಿಯೇ ಮಾತನಾಡಿದ್ದಾರೆ.
ನನ್ನ ಜೀವನಕ್ಕೆ ದೇವತೆಯಾದವಳು ರಾಗಿಣಿ..
"ಎಷ್ಟೋ ಜನ ನನ್ನ ಹುಡುಗಿ ನನ್ನ ಜೀವನದಲ್ಲಿ ದೇವತೆ ಥರ ಬಂದ್ಲು ಅಂದಿರ್ತಾರೆ. ಇನ್ನು ಕೆಲವರು ನನ್ನ ಹೆಂಡತಿ ನನ್ನ ಜೀವನದ ದೇವತೆ ಎಂದು ಹೇಳ್ತಾರೆ. ಅದೇ ರೀತಿ ನನ್ನ ಜೀವನದಲ್ಲೂ ರಾಗಿಣಿಗೆ ಕೊಡಲು ಇಷ್ಟ ಪಡ್ತಿನಿ. ಇಲ್ಲಿಯವರೆಗೂ ನಾನು ಏನಾಗಿದ್ದೇನೋ ಅದೆಲ್ಲದಕ್ಕೂ ಆ ರಾಗಿಣಿ ವೇಷವೇ ಕಾರಣ. ಅವಳು ಜೀವನದಲ್ಲಿ ನನ್ನ ಜತೆ ಬಂದಿರಲಿಲ್ಲ ಅಂದ್ರೆ, ರಾಘವೇಂದ್ರನಾಗಿ ಈ ಹಂತಕ್ಕೆ ಗುರುತಿಸಿಕೊಳ್ಳುತ್ತಿರಲಿಲ್ಲ. ಅವಳು ಹೇಗೆ ಬಂದ್ಲು, ನನ್ನಲ್ಲಿ ಹೇಗೆ ಶಕ್ತಿಯಾಗಿ ಉಳಿದ್ಲು ಎಂಬುದು ದೇವರಾಣೆಗೂ ಅದು ನನಗೂ ಗೊತ್ತಿಲ್ಲ" ಎಂದಿದ್ದಾರೆ.
ರಾಗಿಣಿಯ ಕಾಲ್ಗುಣದಿಂದ ಬದುಕೇ ಬದಲಾಯ್ತು..
"ಮಜಾಭಾರತದಲ್ಲಿ ಕೂತಿದ್ದಾಗ ಕನ್ನಡಿ ಮುಂದೆ ಕೂತಿದ್ದಾಗ ಮೇಕಪ್ ಹಾಕುವಾಗ ನಮಗೆ ಅದರ ಪರಿಜ್ಞಾನವೇ ಇರುತ್ತಿರಲಿಲ್ಲ. ಸೀರೆ ಉಟ್ಟಾಗ ಅದನ್ನು ಸರಿ ಮಾಡಿಕೊಳ್ಳುವುದಕ್ಕೂ ಭಯ. ರೆಡಿ ಮಾಡಿ ಕನ್ನಡಿ ಮುಂದೆ ಬಿಟ್ಟಾಗ ನಮಗೇ ನಂಬೋಕೆ ಆಗುತ್ತಿರಲಿಲ್ಲ. ಯಾರಿದು ಎಂದೇ ಅನಿಸುತ್ತಿತ್ತು. ರಾಗಿಣಿಯ ಕಾಲ್ಗುಣ ಏನಿದೆಯೋ ಈ ರಾಘವೇಂದ್ರನ ಲೈಫ್‌ಅನ್ನೇ ಚೇಂಜ್ ಮಾಡಿದ್ಲು. ರಾಘವೇಂದ್ರನಾಗಿ ಎಷ್ಟು ಪ್ರಬುದ್ಧವಾಗಿ ಥಿಂಕ್ ಮಾಡುತ್ತೇನೋ, ರಾಗಿಣಿ ಆಗಿದ್ದಾಗ ಇದರ 20 ಪಟ್ಟು ಹೆಚ್ಚು ಮೆಚ್ಯೂರ್ ಆಗಿ ವರ್ತಿಸುತ್ತಿರುತ್ತೇನೆ" ಎಂದಿದ್ದಾರೆ.
ರಾಗಿಣಿ ವೇಷ ಹಾಕಿದಾಗ ಹೈ ಅಲರ್ಟ್...
ಅದು ಆ ಉಡುಗೆಯ ಪ್ರಭಾವವೋ ಏನೋ ಗೊತ್ತಿಲ್ಲ. ಸದಾ ಅಲರ್ಟ್ ಆಗಿರ್ತಿನಿ. ಏನೇ ಮಾತನಾಡುವುದಿದ್ದರೂ ಯೋಚಿಸಿಯೇ ಮಾತನಾಡುತ್ತೇನೆ. ಅವಳನ್ನು ನಾನು ಶಕ್ತಿ ಅಂತಲೇ ನಾನು ನಂಬುತ್ತೇನೆ. ಆ ಪಾತ್ರಕ್ಕಾಗಿ ಹುಡುಗಿ ವೇಷ ಹಾಕಿದಾಗ ನನಗೆ ಏನೋ ಒಂದು ರೀತಿ ಸಂತೋಷ ಆಗುತ್ತದೆ. ರಾಗಿಣಿ ಪಾತ್ರ ಮಾಡ್ತಾ ಮಾಡ್ತಾ ಹೆಣ್ಣುಮಕ್ಕಳ ಬಗ್ಗೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತ ಹೋದೆ. ಹೆಣ್ಮಕ್ಕಳು ಎಷ್ಟು ಕಷ್ಟ ಅನುಭವಿಸ್ತಾರೆ ಅನ್ನೋದು ನನಗೂ ಗೊತ್ತಾಗ್ತಾ ಹೋಯ್ತು.
ಗಂಡಸ್ರ ಕಣ್ಣು ಅಲ್ಲಿಯೇ ಇರುತ್ತೆ..
ಪಕ್ಕದಲ್ಲಿ ಯಾರೋ ಹೆಣ್ಮಗಳು ಬಂದ್ರೆ ಎಷ್ಟು ಬೇಗ ಝೂಮ್ ಹಾಕಿಬಿಡ್ತಾರೆ. ಒಂದು ವೇಳೆ ನಾನು ಹುಡುಗಿ ಪಾತ್ರ ಹಾಕದಿದ್ದರೆ ಹುಡುಗಿಯರನ್ನು ಹೇಗೆ ನೋಡುತ್ತಿದ್ನೋ ಗೊತ್ತಿಲ್ಲ. ನಾನು ಆ ವೇಷ ಹಾಕಿದ್ದಕ್ಕೆ ಅವರಿಗೆ ರೆಸ್ಪೆಕ್ಟ್ ಕೊಡ್ತೀನಿ. ಹೆಣ್ಮಕ್ಕಳಿಗೆ ಎಲ್ಲಿ ನೋಡಿ ಮಾತನಾಡಬೇಕೋ ಅಲ್ಲಿಯೇ ನೋಡಿ ಮಾತನಾಡ್ತೀನಿ. ಹೆಣ್ಮಕ್ಕಳಿಗೆ ಎಲ್ಲಿ ನೋಡಿ ಮಾತನಾಡಿದ್ರೆ ಮುಜುಗರ ಆಗುತ್ತೆ ಅನ್ನೋದು ನನಗೆ ಗೊತ್ತು. ಏಕೆಂದರೆ ನಾನು ಅದನ್ನು ಅನುಭವಿಸಿದ್ದೇನೆ.
ಒಂದು ಸಮಯದಲ್ಲಿ ಹುಡುಗಿ ವೇಷ ಹಾಕಿದಾಗ, ಸೆರಗು ಜಾರಿತ್ತು. ಅದನ್ನು ಸರಿ ಮಾಡಿಕೊಳ್ಳಲು ನನಗೆ ಆಗಿರಲಿಲ್ಲ. ಆಗ ನನ್ನ ಎದುರಿಗಿದ್ದವರು ನನ್ನ ಕಣ್ಣು ನೋಡಿ ಮಾತನಾಡುವ ಬದಲು, ನನ್ನ ಎದೆ ಭಾಗ ನೋಡಿ ಮಾತನಾಡುತ್ತಿದ್ದರು. ಆಗಲೇ ನಾನು ರಪ್ ಅಂತ ಸೆರಗು ಸರಿ ಮಾಡಿಕೊಂಡೆ. ಅಲ್ಲಿಂದ ಒಂದಷ್ಟು ವಿಚಾರಗಳು ತಿಳಿಯುತ್ತ ಹೋಯಿತು. ಒಬ್ಬ ಗಂಡಸಾಗಿ ನನಗೆ ಆ ಕ್ಷಣ ಮುಜುಗರ ಆಯ್ತು. ಅದೇ ಹೆಣ್ಮಕ್ಕಳಿಗೆ ಹೇಗೆಲ್ಲ ಆಗಿರಬಹುದು ಊಹಿಸಿ.
ಒಬ್ಬ ಗೊತ್ತಿರುವ ವ್ಯಕ್ತಿಯೊಬ್ಬ ಬಂದು, ನಾನು ನಿಮ್ಮನ್ನು ಮದುವೆ ಆಗಬೇಕು ಅನ್ಕೊಂಡಿದ್ದೀನಿ ಎಂದು ಕೇಳಿದ. ಅವನು ಗೊತ್ತಿರುವ ವ್ಯಕ್ತಿ. ನೀವು ಚೇಂಜ್ ಮಾಡಿಸಿಕೊಳ್ಳಿ ಅಂದುಬಿಡೋದಾ. ಇದಷ್ಟೇ ಅಲ್ಲ ಎಷ್ಟೋ ಮಂದಿ ನನಗೆ ಪ್ರಪೋಸ್ ಮಾಡಿದ್ದಾರೆ. ಇಂದಿಗೂ ಅಂಥ ಘಟನೆಗಳನ್ನು ನೆನೆದು ನಗ್ತಾ ಇರ್ತೀನಿ" ಎಂದು ರಾಘವೇಂದ್ರ ರಾಗಿಣಿಯ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ವಿಭಾಗ