Gicchi Giligili 3 ಶೋನಿಂದ ನೇರವಾಗಿ Bigg Boss Kannada Season 11ಕ್ಕೆ ಎಂಟ್ರಿ ಪಡೆದ ಇಬ್ಬರು ಸ್ಪರ್ಧಿಗಳು!? ಅಧಿಕೃತ ಘೋಷಣೆಯೊಂದೇ ಬಾಕಿ-television news huli karthik manasa santhosh entered bigg boss kannada season 11 directly from gicchi giligili 3 mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Gicchi Giligili 3 ಶೋನಿಂದ ನೇರವಾಗಿ Bigg Boss Kannada Season 11ಕ್ಕೆ ಎಂಟ್ರಿ ಪಡೆದ ಇಬ್ಬರು ಸ್ಪರ್ಧಿಗಳು!? ಅಧಿಕೃತ ಘೋಷಣೆಯೊಂದೇ ಬಾಕಿ

Gicchi Giligili 3 ಶೋನಿಂದ ನೇರವಾಗಿ Bigg Boss Kannada Season 11ಕ್ಕೆ ಎಂಟ್ರಿ ಪಡೆದ ಇಬ್ಬರು ಸ್ಪರ್ಧಿಗಳು!? ಅಧಿಕೃತ ಘೋಷಣೆಯೊಂದೇ ಬಾಕಿ

Gicchi Giligili 3 Grand Finale: ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ವಿನ್ನರ್‌ ಯಾರೆಂಬ ಕುತೂಹಲಕ್ಕೆ ತೆರೆಬಿದ್ದಿದೆ. ಜತೆಗೆ ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಹೋಗುವ ಇಬ್ಬರು ಸ್ಪರ್ಧಿಗಳು ಇವರೇ ಎಂದೂ ಗೊತ್ತಾಗಿದೆ. ಇನ್ನೇನು ಅಧಿಕೃತ ಘೋಷಣೆಯೊಂದೇ ಬಾಕಿ.

ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ವಿಜೇತರಾಗಿ ಹುಲಿ ಕಾರ್ತಿಕ್‌ ಹೊರಹೊಮ್ಮಿದರೆ, ರನ್ನರ್‌ ಅಪ್‌ ಸ್ಥಾನ ಮಾನಸಾ ಸಂತೋಷ್‌ಗೆ ಸಿಕ್ಕಿದೆ.
ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ವಿಜೇತರಾಗಿ ಹುಲಿ ಕಾರ್ತಿಕ್‌ ಹೊರಹೊಮ್ಮಿದರೆ, ರನ್ನರ್‌ ಅಪ್‌ ಸ್ಥಾನ ಮಾನಸಾ ಸಂತೋಷ್‌ಗೆ ಸಿಕ್ಕಿದೆ.

Gicchi Giligili 3 Grand Finale: ಭಾನುವಾರವಷ್ಟೇ ಈ ಸಲದ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಯಾವಾಗ ಶುರು ಎಂಬುದನ್ನು ಹೇಳುವುದಕ್ಕೆಂದೇ ಮೊದಲ ಪೂರ್ಣ ಪ್ರಮಾಣದ ಪ್ರೋಮೋ ಬಿಡುಗಡೆ ಆಗಿದೆ. ಅದೂ ಗಿಚ್ಚಿ ಗಿಲಿ ಗಿಲಿ ಸೀಸನ್‌ 3ನೇ ಫಿನಾಲೆ ವೇದಿಕೆ ಮೇಲೆ. ಈ ಸಲ ಕಾಮಿಡಿಯನ್‌ ಹುಲಿ ಕಾರ್ತಿಕ್‌ ವಿನ್ನರ್‌ ಆಗಿ ಹೊರಹೊಮ್ಮಿದರೆ, ಮಾನಸಾ ಸಂತೋಷ್‌ ರನ್ನರ್‌ ಅಪ್‌ ಆಗಿದ್ದಾರೆ. ಲಕ್ಷ ಲಕ್ಷ ನಗದು ಬಹುಮಾನ ಮತ್ತು ವಿಶೇಷ ಸ್ಮರಣಿಕೆಯನ್ನೂ ಪಡೆದುಕೊಂಡಿದ್ದಾರೆ.

ಈ ಸಲದ ಶೋನಲ್ಲಿ ಆಕ್ಟರ್‌ ಮತ್ತು ನಾನ್‌ ಆಕ್ಟರ್‌ ಎಂಬ ಎರಡು ವಿಭಾಗಗಳಿದ್ದವು. ಆ ಪೈಕಿ ನಾನ್‌ ಆಕ್ಟರ್‌ ವಿಭಾಗದಲ್ಲಿ ಹುಲಿ ಕಾರ್ತಿಕ್‌ ವಿಜೇತರಾಗಿ ಹೊರಹೊಮ್ಮಿದರೆ, ಆಕ್ಟರ್‌ ವಿಭಾಗದಲ್ಲಿ ಮಾನಸಾ ಸಂತೋಷ್‌ ರನ್ನರ್‌ ಅಪ್‌ ಆಗಿದ್ದಾರೆ. ಹಾಗಾದರೆ ಈ ಇಬ್ಬರು ವಿಜೇತರಿಗೆ ಕಲರ್ಸ್‌ ಕನ್ನಡದಿಂದ ಸಿಕ್ಕ ಬಹುಮಾನ ಎಷ್ಟು? ಇಲ್ಲಿದೆ ನೋಡಿ.

ಇದೇ ವರ್ಷದ ಫೆಬ್ರವರಿ 3ರಿಂದ ಕಲರ್ಸ್‌ ಕನ್ನಡದಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್‌ 3 ಶೋಗೆ ಅದ್ಧೂರಿ ಚಾಲನೆ ಸಿಕ್ಕಿತ್ತು. ನಟಿ ಶ್ರುತಿ ಹಾಗೂ ಹಾಸ್ಯನಟ ಸಾಧು ಕೋಕಿಲ ಜತೆಗೆ ಮೂರನೇ ತೀರ್ಪುಗಾರರಾಗಿ ಕಾಮಿಡಿ ನಟ ಕೋಮಲ್ ಕುಮಾರ್‌ ಈ ಸಲದ ಶೋನ ಹೈಲೈಟ್.‌ ಇದೀಗ ಸುದೀರ್ಘ ಆರೂವರೆ ತಿಂಗಳ ಈ ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ಪಯಣ ಅಂತ್ಯವಾಗಿದೆ. ಹತ್ತಾರು ಸ್ಪರ್ಧಿಗಳ ಪೈಕಿ ಹುಲಿ ಕಾರ್ತಿಕ್‌ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಲಕ್ಷ ಲಕ್ಷ ಬಹುಮಾನ

ಈ ಸಲದ ಗಿಚ್ಚಿ ಗಿಲಿಗಿಲಿ ಸೀಸನ್‌ 3 ವಿನ್ನರ್‌ ಆದ ಹುಲಿ ಕಾರ್ತಿಕ್‌ಗೆ 10 ಲಕ್ಷ ರೂ ಬಹುಮಾನದ ಜತೆಗೆ ವಿಶೇಷ ಸ್ಮರಣಿಕೆ ಸಿಕ್ಕಿದೆ. ಅದೇ ರೀತಿ ರನ್ನರ್‌ ಅಪ್‌ ಆದ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸಾ ಸಂತೋಷ್‌ಗೆ 3 ಲಕ್ಷ ನಗದು ಸಿಕ್ಕಿದೆ. ಕಳೆದ ಎಂಟಿ ವರ್ಷಗಳಿಂದ ಕಲರ್ಸ್‌ ಕನ್ನಡ ವಾಹಿನಿ ಖಾಯಂ ಕಲಾವಿದನಾಗಿ ಕಾರ್ತಿಕ್‌ ಗುರುತಿಸಿಕೊಂಡಿದ್ದಾರೆ. ಆರಂಭದಲ್ಲಿ ಕಲರ್ಸ್ ಸೂಪರ್‌ ನ ಮಜಾ ಭಾರತ ಶೋದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್‌, ಅದಾದ ಮೇಲೆ ಸಾಕಷ್ಟು ಶೋಗಳಲ್ಲಿ ಭಾಗವಹಿಸಿದ್ದರು. ಆದರೆ, ವಿಜೇತರಾಗಿ ಹೊರಹೊಮ್ಮಿರಲಿಲ್ಲ. ಇದೀಗ ಆ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ. ಗಿಚ್ಚಿ ಗಿಲಿಗಿಲಿಯ ವಿನ್ನರ್‌ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ನೇರವಾಗಿ ಬಿಗ್‌ಬಾಸ್‌ಗೆ ಎಂಟ್ರಿ!?

ಇನ್ನೇನು ಸೆಪ್ಟೆಂಬರ್‌ 29ರಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಕಿಚ್ಚ ಸುದೀಪ್‌ ಅವರೇ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಿಡುಗಡೆ ಆಗಿರುವ ಪ್ರೋಮೋ ಸಹ ಅಷ್ಟೇ ವಿಶೇಷವಾಗಿದೆ. ಇದೀಗ ಗಿಚ್ಚಿ ಗಿಲಿಗಿಲಿ ಶೋ ಅಂತ್ಯವಾಗ್ತಿದ್ದಂತೆ, ಅದೇ ಶೋಗೆ ಕಾಮಿಡಿ ಶೋನ ವಿನ್ನರ್‌ ಹುಲಿ ಕಾರ್ತಿಕ್‌ ಮತ್ತು ತುಕಾಲಿ ಸಂತೋಷ್‌ ಪತ್ನಿ ಮಾನಸಾ ಸಂತೋಷ್‌ ಸಹ ಹೋಗಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಒಂದರ್ಥದಲ್ಲಿ ಇದು ಅಧಿಕೃತ ಎಂದೇ ಹೇಳಲಾಗುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ಕುತೂಹಲಕ್ಕೆ ತೆರೆಬೀಳಲಿದೆ.

mysore-dasara_Entry_Point