ಕಿಚ್ಚನ ಮುಂದೆ ನಡೆಯದ ಜಗದೀಶ್ ಹಾರಾಟ, ಕೂಗಾಟ! ಸಿಎಂ ಆಗ್ತೀನಿ ಅಂದವರಿಗೆ ‘ನಿಯಮ’ಗಳ ಪಾಠ ಮಾಡಿದ ಸುದೀಪ್
ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಜಗದೀಶ್ ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಜಗದೀಶ್ ಅವರ ನಡೆಯನ್ನು ಕೊಂಚ ಬಿರುಸಾಗಿಯೇ ವಿರೋಧಿಸಿದ್ದಾರೆ.

Bigg boss Kannada 11: ಬಿಗ್ ಬಾಸ್ ಕನ್ನಡ 11ರ ಮೊದಲ ವಾರದ ಕಿಚ್ಚನ ಪಂಚಾಯ್ತಿ ಮೇಲೆ ಇಡೀ ಪ್ರೇಕ್ಷಕ ವರ್ಗ ಕಣ್ಣಿಟ್ಟಿತ್ತು. ಅದಕ್ಕೆ ಕಾರಣ; ಲಾಯರ್ ಜಗದೀಶ್! ಬಿಗ್ ಬಾಸ್ ಶುರುವಾಗಿ ಈಗಷ್ಟೇ ಒಂದು ವಾರ ಕಳೆದಿದೆ. ಅದಾಗಲೇ ಫಿನಾಲೆ ಹತ್ರಕ್ಕೆ ಬಂದಾಗ ಇರುವ ಮನಸ್ಥಿತಿ ಮನೆಯವರದ್ದಾಗಿದೆ. ಅದಕ್ಕೆ ಕಾರಣರಾಗಿದ್ದು ಮತ್ತದೇ ವಕೀಲ್ ಸಾಬ್ ಜಗದೀಶ್. ಸ್ವರ್ಗ ನರಕ ಎರಡೂ ಮನೆಗಳ ಜತೆಗೆ ಮಾತಿಗೆ ಮಾತು ಬೆಳೆಸಿ ಎಲ್ಲರ ಮನಸ್ಸುಗಳನ್ನು ಘಾಸಿಗೊಳಿಸಿದ್ದರು. ಇಡೀ ಮನೆ ಮಂದಿಯೂ ಲಾಯರ್ ಜಗದೀಶ್ ಅವರಿಂದಾಗಿ ನಲುಗಿತ್ತು. ಇದೀಗ ವಾರದ ಪಂಚಾಯ್ತಿಗೆ ಕಿಚ್ಚನ ಆಗಮನ ಆಗ್ತಿದ್ದಂತೆ, ಬೆಪ್ಪಾಗಿ ಕೂತಿದ್ದಾರೆ ಜಗದೀಶ್.
ಲಾಯರ್ ಜಗದೀಶ್‌ಗೆ ಕ್ಲಾಸ್
ಹೊರಗಿನ ಜನ ಏನೆಲ್ಲ ಮಾತನಾಡುತ್ತಿದ್ದಾರೆ. ಮನೆ ಮಂದಿಯ ರೆಸ್ಪಾನ್ಸ್ ಹೇಗಿದೆ ಎಲ್ಲವನ್ನು ಅರಿತುಕೊಂಡೇ, ಆರಂಭದಲ್ಲಿ ಎಲ್ಲರ ಜತೆಗೆ ಲೈವ್ಲಿಯಾಗಿಯೇ ಮಾತಿಗಿಳಿದ ಕಿಚ್ಚ, ಒಂದು ವಾರದ ಜರ್ನಿ ಹೇಗಿತ್ತು ಎಂದು ಎಲ್ಲರ ಅಭಿಪ್ರಾಯವನ್ನು ಪಡೆದುಕೊಂಡರು. ಅದಾದ ಮೇಲೆ ನಿಧಾನಕ್ಕೆ ಲಾಯರ್ ಜಗದೀಶ್ ಅವರನ್ನು ಮಾತಿಗೆಳೆದರು. "ಮೊದಲ ದಿನವೇ ನೀವು ನರಕವಾಸಿಗಳ ಪರ ನಿಂತ್ರಿ. ಹಾಗಾದ್ರೆ ಸ್ವರ್ಗವಾಸಿಗಳೇನು? ನರಕವಾಸಿಗಳಿಗೆ ಎಲ್ಲ ಕೊಟ್ಟು, ಸ್ವರ್ಗದವರಿಗೆ ಶಿಕ್ಷೆ ಕೊಡಿಸೋದು ಮಾನವೀಯತೆನಾ ಜಗದೀಶ್" ಎಂದು ಸುದೀಪ್ ಕೇಳಿದ್ದಾರೆ. ಇದಕ್ಕೆ ಜಗದೀಶ್ ಅವರ ಉತ್ತರ ಹೀಗಿದೆ.
ಇದೇನಾ ಮಾನವೀಯತೆ?
’ನಾನು ಯಾವಾಗಲೂ ವೀಕ್ ಆಗಿರೋರ ಜೊತೆಗೇ ನಿಂತು ಅಭ್ಯಾಸ. ನಾನು ಒಳ್ಳೆಯ ಹಾಸಿಗೆ ಮೇಲೆಯೇ ಮಲಗಿದ್ದೆ. ಆದರೆ, ಅವರು ಕಂಬಿ ಹಿಂದೆ ಇರೋರನ್ನು ನೋಡಿ, ಆ ನೈಟ್ ನಿದ್ದೆ ಆಗಲಿಲ್ಲ. ನನಗೂ ಬೇಜಾರಾಯ್ತು. ನನ್ನ ಜೀವನದಲ್ಲಿ ನನಗಿಂತ ಕೆಳಗಿನವರ ಕಡೆಗೆ ನಾನು ಗುರುತಿಸಿಕೊಂಡಿದ್ದೇನೆ. ಅವರ ಧ್ವನಿಯಾಗಿದ್ದೇನೆ" ಎಂದು ಜಗದೀಶ್ ಹೇಳುತ್ತಿದ್ದಂತೆ, "ತೊಂದರೆಯಲ್ಲಿರೋರನ್ನ ಅಥವಾ ಕಷ್ಟದಲ್ಲಿ ಇದ್ದಾಗ ಅವರ ಪರ ನಿಲ್ಲೋಕ್ಕೋಸ್ಕರ ಇನ್ನು ಬೇರೆಯವರನ್ನ ಕಷ್ಟಕ್ಕೆ ಸಿಲುಕಿಸೋದು, ಅಥವಾ ಇನ್ನು ಕೆಲವರಿಗೆ ಶಿಕ್ಷೆ ಸಿಗೋ ಹಾಗೆ ಮಾಡೋದು ಓಕೆನಾ?" ಎಂದು ಸುದೀಪ್ ಮರು ಪ್ರಶ್ನೆ ಮಾಡಿದ್ದರು.
"ಅವರು ನನ್ನನ್ನು ಕನ್ಸಿಡರ್ ಮಾಡಿಕೊಂಡಿದ್ರೆ, ನಾನು ಅವರನ್ನು ಟಾರ್ಗೆಟೂ ಮಾಡುತ್ತಿರಲಿಲ್ಲ, ಡಿಬೇಟ್ ಸಹ ಮಾಡುತ್ತಿರಲಿ"ಲ್ಲ ಎಂದು ಉತ್ತರಿಸಿದ್ದಾರೆ. ಈ ಉತ್ತರಕ್ಕೆ ಪ್ರತಿಯಾಗಿ, "ಒಬ್ಬರಿಗೆ ಒಳ್ಳೆಯದ್ದು ಮಾಡೋದು ಮನುಷ್ಯತ್ವ. ಅಲ್ಲಿ ಮನುಷ್ಯತ್ವ ತೋರಿಸೋಕೆ ಹೋಗಿ ಇನ್ನೂ 10 ಜನರಿಗೆ ಕಷ್ಟವಾಗುತ್ತೆ ಅಂತ ಗೊತ್ತಾದ್ರೆ, ಅದಕ್ಕೆ ಅವರು ಅರ್ಹರಲ್ಲದಿದ್ದರೆ, ಅದು ತಪ್ಪು ಅಲ್ಲವೇ’’ ಎಂದಿದ್ದಾರೆ ಸುದೀಪ್. "ಅಲ್ಲಿ ನೀರು ಕೊಡು ಅಂತ ಬರೆದಿದ್ದಾರೆ, ಹೊರತು ಬಿಸಿನೀರು ಕೊಡಬಾರದು ಅಂತ ಎಲ್ಲೂ ಬರೆದಿಲ್ಲ. ನಾನೆಲ್ಲೂ ನಿಯಮ ಮುರಿದಿಲ್ಲ" ಎಂದಿದ್ದಾರೆ.
ಕಾನೂನು ಪಾಲಿಸುವವರೇ ಲಾ ಬ್ರೇಕ್ ಮಾಡಿದ್ರೆ?
ಹಾಗೆ ಕೊಟ್ಟ ನೀವು ಆ ಕ್ಷಣಕ್ಕೆ ಅದನ್ನು ಎಂಜಾಯ್ ಮಾಡಲು ಹೊರಟಿರಿ. ರೂಲ್ ಬ್ರೇಕ್ ಆಗಿದ್ದನ್ನ ಎಂಜಾಯ್ ಮಾಡಿದ್ರಿ. ಬಿಸಿ ನೀರಿನ ಜತೆಗೆ ಬೇರೆ ಏನೆಲ್ಲ ಐಟಂಗಳು ಅಲ್ಲಿ ಹೋದ್ವು? ಸ್ವರ್ಗವಾಸಿ, ನರಕವಾಸಿ ಅನ್ನೋದು ಒಂದು ಗೇಮ್. ಇಲ್ಲಿ ನೀವು, ಸದಾ ಒಂದು ಮಾತನ್ನು ಹೇಳುತ್ತಿರುತ್ತೀರಿ. ನಾನು ಲಾ ಕೀಪಪ್ ಮಾಡೋನು ಅಂತ. ಐ ರೆಸ್ಪೆಕ್ಟ್ ಲಾ. ಐ ವಾಂಟ್ ಟು ಬಿ ದಿ ಸಿಎಂ’.. ಅಂತ. ಹೀಗಿರುವಾಗ ನೀವು ಅದೇ ಕಾನೂನನ್ನೇ ಬ್ರೇಕ್ ಮಾಡ್ತೀದ್ದೀರಿ ಅಲ್ಲವೇ? ಬಿಗ್‌ಬಾಸ್‌ನಲ್ಲಿ ಒಂದು ಕಾನೂನು ಅಂತ ಬರೆದ ಮೇಲೆ. ಎಲ್ಲ ಥರ ಸ್ಟಡಿ ಮಾಡಿನೇ ಬರಿದಿರ್ತಿರೆ ಅಲ್ಲವೇ" ಎಂದಿದ್ದಾರೆ.
ವಿಭಾಗ