Kannada Serial TRP: ಟಿಆರ್‌ಪಿಯಲ್ಲಿ ನಂ 1 ಧಾರಾವಾಹಿ ಪಟ್ಟಕ್ಕಾಗಿ ಹೆಚ್ಚಿದ ಪೈಪೋಟಿ; ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ-television news kannada serial trp puttakkana makkalu lakshmi nivasa to ramachari lakshmi baramma trp ratings mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಟಿಆರ್‌ಪಿಯಲ್ಲಿ ನಂ 1 ಧಾರಾವಾಹಿ ಪಟ್ಟಕ್ಕಾಗಿ ಹೆಚ್ಚಿದ ಪೈಪೋಟಿ; ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ

Kannada Serial TRP: ಟಿಆರ್‌ಪಿಯಲ್ಲಿ ನಂ 1 ಧಾರಾವಾಹಿ ಪಟ್ಟಕ್ಕಾಗಿ ಹೆಚ್ಚಿದ ಪೈಪೋಟಿ; ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ

ಕನ್ನಡ ಕಿರುತೆರೆಯಲ್ಲಿ ಈ ವಾರ ಯಾವ ಸೀರಿಯಲ್‌ ಟಿಆರ್‌ಪಿಯಲ್ಲಿ ಹೆಚ್ಚು ಮುಂದಿದೆ, ಕನ್ನಡದ ಟಾಪ್‌ 10 ಸೀರಿಯಲ್‌ಗಳು ಯಾವವು? ಇಲ್ಲಿದೆ ನೋಡಿ ಮಾಹಿತಿ

ಈ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಮುಂದಿದೆ? ಇಲ್ಲಿದೆ ನೋಡಿ ಮಾಹಿತಿ
ಈ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಮುಂದಿದೆ? ಇಲ್ಲಿದೆ ನೋಡಿ ಮಾಹಿತಿ (image\ Zee5 and JioCinema)

Kannada Serial TRP Ratings: ಶತಾಯಗತಾಯ ಸೀರಿಯಲ್‌ ವೀಕ್ಷಕರಿಗೆ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ ಕೊಡಬೇಕು ಎಂದು ನಿರ್ಧರಿಸಿರುವ ಧಾರಾವಾಹಿ ತಂಡಗಳು, ನೋಡುಗರನ್ನು ಹಿಡಿದು ಕೂರಿಸುವ ಕೆಲಸಕ್ಕೆ ಮುಂದಾಗಿವೆ. ಕನ್ನಡದ ಮೆಗಾ ಸೀರಿಯಲ್‌ಗಳೀಗ ರೋಚಕ ಘಟ್ಟ ತಲುಪಿವೆ. ಅದರ ಜತೆಗೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಈ ವಾರ ಒಳ್ಳೊಳ್ಳೆ ನಂಬರ್‌ಗಳನ್ನೇ ಸಂಪಾದಿಸಿವೆ. ಹಾಗಾದರೆ, ಯಾವೆಲ್ಲ ಸೀರಿಯಲ್‌ಗಳು ಈ ವಾರ ಟಾಪ್‌ ಸ್ಥಾನದಲ್ಲಿವೆ? ಹೊಸ ಸೀರಿಯಲ್‌ಗಳು ಯಾವ ಹಂತದಲ್ಲಿವೆ? ಇಲ್ಲಿದೆ ಈ ವಾರದ ಟಿಆರ್‌ಪಿ ಪಟ್ಟಿ.

ಲಕ್ಷ್ಮೀ ನಿವಾಸ

ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿ ಸದ್ಯ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿ. ಒಂದು ಗಂಟೆಯ ಕಾಲ ಪ್ರಸಾರ ಕಾಣುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಐದಾರು ಕಥೆಗಳು ಕವಲುಗಳಾಗಿ ವೀಕ್ಷಕನಿಗೆ ನೋಡಲು ಸಿಗುತ್ತಿದೆ. ಪ್ರತಿ ಕಥೆಯನ್ನೂ ಅಷ್ಟೇ ರೋಚಕವಾಗಿಯೇ ನಿರ್ದೇಶಕರು ಕಟ್ಟಿಕೊಡುತ್ತಿದ್ದಾರೆ. ಇಂತಿಪ್ಪ ಸೀರಿಯಲ್‌ ಈ ವಾರ ಎಂದಿನಂತೆ 9.5 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.

ಶ್ರಾವಣಿ ಸುಬ್ರಮಣ್ಯ

ಜೀ ಕನ್ನಡದ ಮತ್ತೊಂದು ಸೀರಿಯಲ್‌ ಶ್ರಾವಶಿ ಸುಬ್ರಮಣ್ಯ ಸಹ ನೋಡುಗರ ಗಮನ ಸೆಳೆದಿದೆ. ಕಣಿ ಹೇಳುವ ಜೋಗತಿಯ ಮಾತು ಕೇಳಿ ಶ್ರಾವಣಿ ಶಾಕ್‌ ಆಗಿದ್ದಾಳೆ. ಇನ್ನೇನು ಶೀಘ್ರದಲ್ಲಿ ನಿನ್ನ ಮದುವೆ ಆಗಲಿದೆ. ನಿನಗಾಗಿ ಏನು ಬೇಕಾದರೂ ಮಾಡುವ ಹುಡುಗ ನಿನಗೆ ಸಿಗ್ತಾನೆ ಎಂದೂ ಜೋಗತಿ ಹೇಳಿದ್ದಾಳೆ. ಹೀಗೆ ರೋಚಕವಾಗಿ ಸಾಗಿರುವ ಈ ಸೀರಿಯಲ್‌ ಈ ವಾರ 7.2 ಟಿಆರ್‌ಪಿ ಪಡೆದು ಎರಡನೇ ಸ್ಥಾನದಲ್ಲಿದೆ.

ಲಕ್ಷ್ಮೀ ಬಾರಮ್ಮ

ಕಲರ್ಸ್‌ ಕನ್ನಡದಲ್ಲಿನ ಲಕ್ಷ್ಮೀ ಬಾರಮ್ಮ ಧಾರಾವಾಹಿ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸಿದೆ. ಈ ನಡುವೆ ಕೀರ್ತಿ ಕೊಲೆಯಾಗಿದೆ. ಅಂತ್ಯಸಂಸ್ಕಾರವೂ ನಡೆದಿದೆ. ಈ ನಡುವೆ ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಬಂದಂತಿದೆ. ಲಕ್ಷ್ಮೀ ವರ್ತನೆ ಕಂಡು ಎಲ್ಲರೂ ಸ್ತಬ್ಧರಾಗಿದ್ದಾರೆ. ಮುಂದೇನು? ಹೀಗೆ ಕುತೂಹಲದಲ್ಲಿ ನೋಡಿಸಿಕೊಂಡು ಹೋಗುತ್ತಿದೆ. ಈ ವಾರ 7.2 ಟಿಆರ್‌ಪಿ ಪಡೆದು ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.

ಅಮೃತಧಾರೆ

ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್‌ನ ಅಸಲಿ ಆಟ ಬಯಲಿಗೆ ಬಂದಿದೆ. ಇನ್ನೊಂದು ಕಡೆ, ಜೈದೇವ್ ಬದಲಾಗ್ತಾನೆ ಅನ್ನೋ ಸಣ್ಣ ನಂಬಿಕೆಯಲ್ಲಿದ್ದಾನೆ ಗೌತಮ್. ಆತನ ನಂಬಿಕೆ ಉಳಿಯುತ್ತಾ ಎಂಬ ರೋಚಕತೆಯಲ್ಲಿ ಸೀರಿಯಲ್‌ ಸಾಗಿದೆ. ಈ ಸೀರಿಯಲ್‌ 7.0 ಟಿಆರ್‌ಪಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.

ರಾಮಾಚಾರಿ

ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್‌ ಇದೀಗ ಟಾಪ್‌ ಸ್ಥಾನಕ್ಕೆ ಎಂಟ್ರಿಕೊಟ್ಟಿದೆ. ಈ ಮೊದಲು ಟಾಪ್‌ ಐದರಲ್ಲಿಯೂ ಈ ಸೀರಿಯಲ್‌ ಕಾಣಿಸಿಕೊಂಡಿತ್ತು. ಸದ್ಯ ಸೀರಿಯಲ್‌ನಲ್ಲಿ ರಾಮಾಚಾರಿ- ಚಾರು ಮದುವೆ ತಯಾರಿ ನಡೆದಿದೆ. ಈ ಸೀರಿಯಲ್‌ ಈ ವಾರ 7.0 ಟಿಆರ್‌ಪಿ ಪಡೆದುಕೊಳ್ಳುವ ಮೂಲಕ ಅಮೃತಧಾರೆ ಜತೆಗೆ ಮೂರನೇ ಸ್ಥಾನವನ್ನು ಸಮವಾಗಿ ಹಂಚಿಕೊಂಡಿವೆ.

ಅಣ್ಣಯ್ಯ

ಕಳೆದ ಮೂರು ವಾರಗಳಿಂದ ಜೀ ಕನ್ನಡದಲ್ಲಿ ರಾತ್ರಿ 7;30ಕ್ಕೆ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಸೀರಿಯಲ್‌, ಟಿಆರ್‌ಪಿ ವಿಚಾರದಲ್ಲಿಯೂ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಈ ವಾರ 6.7 ಟಿಆರ್‌ಪಿ ಪಡೆಯುವ ಮೂಲಕ ಟಾಪ್‌ ಹತ್ತರಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಪುಟ್ಟಕ್ಕನ ಮಕ್ಕಳು

ಅಣ್ಣಯ್ಯ ಸೀರಿಯಲ್‌ನಿಂದಾಗಿ 6:30ಕ್ಕೆ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲೀಗ, ಮತ್ತಷ್ಟು ರೋಚಕ ಟ್ವಿಸ್ಟ್‌ಗಳು ಎದುರಾಗಿವೆ. ಸಿಂಗಾರಮ್ಮನ ಅಸಲಿ ಮುಖ ಸಹನಾಗೆ ಗೊತ್ತಾಗಿದೆ. ಈ ಧಾರಾವಾಹಿ ಈ ವಾರ 6.5 ಟಿಆರ್‌ಪಿ ಪಡೆದು 5ನೇ ಸ್ಥಾನದಲ್ಲಿದೆ.

ಸೀತಾ ರಾಮ

ಸಿಹಿ ಮೇಘಶ್ಯಾಮನ ಮಗಳು ಎಂಬ ವಿಚಾರ ಇದೀಗ ಹೊರ ಬಂದಿದೆ. ಈ ನಡುವೆ ಈ ವಿಚಾರವನ್ನು ದಯವಿಟ್ಟು ಸಿಹಿಗೆ ಹೇಳಬೇಡಿ ಎಂದೂ ಡಾ. ಅನಂತಲಕ್ಷ್ಮೀ ಮುಂದೆ ಅಂಗಲಾಚಿದ್ದಾಳೆ ಸೀತಾ. ನಿನ್ನ ಮಗಳನ್ನು ನಿನ್ನ ಕೈಗೆ ಬರುವ ಹಾಗೆ ನಾನು ನಿನ್ನ ಜತೆಗಿರುವೆ ಎಂದು ಶ್ಯಾಮ್‌ಗೆ ಭರವಸೆ ನೀಡಿದ್ದಾನೆ ರಾಮ್‌. ಹೀಗೆ ಸಾಗಿರುವ ಈ ಸೀರಿಯಲ್‌ 5.9 ಪಡೆದು ಆರನೇ ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ, ಕರಿಮಣಿ, ಶ್ರೀರಸ್ತು ಶುಭಮಸ್ತು: ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್‌ 5.9 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದ್ದರೆ, ಅದೇ ವಾಹಿನಿಯ ಕರಿಮಣಿ ಸೀರಿಯಲ್‌ 5.4 ಟಿಆರ್‌ಪಿ ಪಡೆದು ಎಂಟನೇ ಸ್ಥಾನದಲ್ಲಿದೆ. ಶ್ರೀರಸ್ತು ಶುಭಮಸ್ತು ಈ ವಾರ ಕೇವಲ 3 ಟಿಆರ್‌ಪಿ ಪಡೆದುಕೊಂಡಿದೆ.

mysore-dasara_Entry_Point