ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸ ಧಾರಾವಾಹಿ, ಫೆ 12ರಿಂದ ಕಸ್ತೂರಿ ಸೀರಿಯಲ್‌ ಆರಂಭ, ಪ್ರಸಾರ ಸಮಯ, ಪಾತ್ರವರ್ಗ, ಚಾನೆಲ್‌ ವಿವರ ತಿಳಿಯಿರಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸ ಧಾರಾವಾಹಿ, ಫೆ 12ರಿಂದ ಕಸ್ತೂರಿ ಸೀರಿಯಲ್‌ ಆರಂಭ, ಪ್ರಸಾರ ಸಮಯ, ಪಾತ್ರವರ್ಗ, ಚಾನೆಲ್‌ ವಿವರ ತಿಳಿಯಿರಿ

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸ ಧಾರಾವಾಹಿ, ಫೆ 12ರಿಂದ ಕಸ್ತೂರಿ ಸೀರಿಯಲ್‌ ಆರಂಭ, ಪ್ರಸಾರ ಸಮಯ, ಪಾತ್ರವರ್ಗ, ಚಾನೆಲ್‌ ವಿವರ ತಿಳಿಯಿರಿ

Kasturi Seiral: ಸೀರಿಯಲ್‌ ಇಷ್ಟಪಡುವವರಿಗೆ ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಧಾರಾವಾಹಿ ಆರಂಭವಾಗುತ್ತದೆ. ಸ್ಟಾರ್‌ ಸುವರ್ಣದಲ್ಲಿ ಇದೇ ಫೆಬ್ರವರಿ 12 (ಸೋಮವಾರ)ರಿಂದ ಕಸ್ತೂರಿ ಎಂಬ ಸೀರಿಯಲ್‌ ಆರಂಭವಾಗುತ್ತಿದೆ. ತೆಲುಗಿನಿಂದ ಡಬ್‌ ಆದ ಈ ಸೀರಿಯಲ್‌ನಲ್ಲಿ ಐಶ್ವರ್ಯಾ ಪಿಸ್ಸೆ, ವೀನಾ ಪೊನ್ನಪ್ಪ ಮುಂತಾದ ಕನ್ನಡ ನಟಿಯರೂ ಇದ್ದಾರೆ.

ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸ ಧಾರಾವಾಹಿ, ಫೆ 12ರಿಂದ ಕಸ್ತೂರಿ ಸೀರಿಯಲ್‌ ಆರಂಭ
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಹೊಸ ಧಾರಾವಾಹಿ, ಫೆ 12ರಿಂದ ಕಸ್ತೂರಿ ಸೀರಿಯಲ್‌ ಆರಂಭ

ಬೆಂಗಳೂರು: ಸ್ಟಾರ್‌ ಸುವರ್ಣದಲ್ಲಿ ಇದೇ ಫೆಬ್ರವರಿ 12ರಿಂದ ಕಸ್ತೂರಿ ಎಂಬ ಹೊಸ ಸೀರಿಯಲ್‌ ಆರಂಭವಾಗುತ್ತಿದೆ. ಕನ್ನಡ ನಟಿ ಐಶ್ವರ್ಯಾ ಪಿಸ್ಸೆ ಈ ಸೀರಿಯಲ್‌ನಲ್ಲಿ ಡಾಕ್ಟರ್‌ ಆಗಿ ನಟಿಸಿದ್ದಾರೆ. ಬಿಳಿ ಹೆಂಡ್ತಿ, ಪುಟ್ಟಮಲ್ಲಿ, ಕಿನ್ನಾರಿ ಸೀರಿಯಲ್‌ಗಳಲ್ಲಿ ನಟಿಸಿದ್ದ ವೀನಾ ಪೊನ್ನಪ್ಪ ಕೂಡ ಈ ಸೀರಿಯಲ್‌ನಲ್ಲಿದ್ದಾರೆ. ಶಬೀನಾ ಶೇಕ್‌, ನಿಹಾರಿಕಾ ಹರ್ಷು, ವೀನಾ ಪೊನ್ನಪ್ಪ ಮುಂತಾದ ಕಲಾವಿದರು ಕಸ್ತೂರಿ ಸೀರಿಯಲ್‌ಗೆ ಜೀವ ತುಂಬಿದ್ದಾರೆ. ಅಂದಹಾಗೆ, ಇದು ತೆಲುಗು ಡಬ್ಬಿಂಗ್‌ ಸೀರಿಯಲ್‌. ಈಗಾಗಲೇ ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿರುವ ಕಸ್ತೂರಿ ಹೆಸರಿನ ಸೀರಿಯಲ್‌ನ ಡಬ್ಬಿಂಗ್‌ ಆವೃತ್ತಿ ಕನ್ನಡದಲ್ಲಿ ಪ್ರಸಾರವಾಗಲಿದೆ. ಕಸ್ತೂರಿ ಎಂಬ ಯುವತಿಯ ಬದುಕಿನ ಕಥೆ, ಲವ್‌ ಮ್ಯಾರೇಜ್‌ ಆಗಿ ಮೋಸಕ್ಕೆ ಒಳಗಾದ ಯುವತಿಯ ಬದುಕಿನ ಕಥೆಯನ್ನು ಈ ಸೀರಿಯಲ್‌ ಹೊಂದಿದೆ.

ಕನ್ನಡಕ್ಕೆ ಡಬ್‌ ಆಗಿರುವ ತೆಲುಗಿನ ಕಸ್ತೂರಿ ಸೀರಿಯಲ್‌ ರಾತ್ರಿಯ ಪ್ರೈಮ್‌ ಟೈಮ್‌ನಲ್ಲಿ ಪ್ರಸಾರವಾಗುತ್ತಿಲ್ಲ. ಈ ಸೀರಿಯಲ್‌ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಮಧ್ಯಾಹ್ನದ ಊಟದ ಸಮಯದಲ್ಲಿ ಟೀವಿ ನೋಡುವವರು ಈ ಸೀರಿಯಲ್‌ಗೆ ಫಿಕ್ಸ್‌ ಆಗಬಹುದಾಗಿದೆ. ಈಗಾಗಲೇ ಕಸ್ತೂರಿ ಸೀರಿಯಲ್‌ ತೆಲುಗಿನಲ್ಲಿ ಸೂಪರ್‌ಹಿಟ್‌ ಆಗಿದೆ. ಕನ್ನಡ ಪ್ರೇಕ್ಷಕರಿಗೂ ಇಷ್ಟವಾಗುವ ನಿರೀಕ್ಷೆಯಿದೆ.

ಕಸ್ತೂರಿ ಸೀರಿಯಲ್‌ ಸ್ಟೋರಿ ಏನು?

ಇದು ಪ್ರೀತಿಸಿ ಮದುವೆಯಾಗಿ ಯುವಕನಿಂದ ಮೋಸಕ್ಕೆ ಒಳಗಾಗುವ ಯುವತಿಯ ಕಥೆ. ಪಾಲಿಟಿಕ್ಸ್‌ನಲ್ಲಿ ಸಾಧನೆ ಮಾಡುವ ಸಲುವಾಗಿ ರಾಜಕಾರಣಿಯೊಬ್ಬ ತಾನು ಪ್ರೀತಿಸಿ ಮದುವೆಯಾದ ಯುವತಿಗೆ ಮೋಸ ಮಾಡುತ್ತಾನೆ. ರಾಜಕೀಯದಲ್ಲಿ ಮೇಲೆ ಬರಲು ತನ್ನ ಪತ್ನಿಯನ್ನು ದೂರ ಮಾಡಿರುತ್ತಾನೆ. ಆಕೆಯನ್ನು ಮರ್ಡರ್‌ ಮಾಡಲು ಪ್ರಯತ್ನಿಸಿರುತ್ತಾನೆ. ಆದರೆ, ಆ ಯುವತಿಯಾದ ಕಸ್ತೂರಿ ಬದುಕಿ ಉಳಿಯುತ್ತಾಳೆ. ಒಂದು ಹೆಣ್ಣು ಮಗುವಿನ ತಾಯಿಯಾಗುತ್ತಾಳೆ. ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿ ಈಗ ದೊಡ್ಡ ರಾಜಕಾರಣಿಯಾಗಿದ್ದರೂ ತನಗೆ ಆದ ಅನ್ಯಾದ ವಿರುದ್ಧ ಕಸ್ತೂರಿ ಹೋರಾಟ ಮಾಡುತ್ತಾಳೆ. ಆಕೆಯ ಹೋರಾಟದ ಕಥೆ ಕಸ್ತೂರಿ ಸೀರಿಯಲ್‌ ಆಗಿ ತೆಲುಗಿನಲ್ಲಿ ಫೇಮಸ್‌ ಆಗಿತ್ತು.

ಕಸ್ತೂರಿ ಸೀರಿಯಲ್‌ ಪಾತ್ರವರ್ಗ

ಶಬೀನಾ ಶೇಕ್‌, ನಿಹಾರಿಕಾ ಹರ್ಷು, ವೀನಾ ಪೊನ್ನಪ್ಪ, ಮೀನಾ ಕುಮಾರಿ, ಐಶ್ವರ್ಯಾ ಪಿಸ್ಸೆ ಸೇರಿದಂತೆ ಹಲವು ಕಲಾವಿದರ ದಂಡೇ ಕಸ್ತೂರಿ ಸೀರಿಯಲ್‌ನಲ್ಲಿ ಇದೆ. ಇವರಲ್ಲಿ ಇಬ್ಬರು ಕರ್ನಾಟಕ ಮೂಲದ ಕನ್ನಡ ನಟಿಯರು ಅನ್ನೋದು ವಿಶೇಷ. ವೀನಾ ಪೊನ್ನಪ್ಪ ಮತ್ತು ಐಶ್ವರ್ಯಾ ಪಿಸ್ಸೆ ಈಗಾಗಲೇ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರು.

ಕಸ್ತೂರಿ ಸೀರಿಯಲ್‌ನಲ್ಲಿ ಕನ್ನಡ ನಟಿಯರು

ಕಸ್ತೂರಿ ಸೀರಿಯಲ್‌ನಲ್ಲಿ ಐಶ್ವರ್ಯ ಪಿಸ್ಸೆ ಎಂಬ ನಟಿ ಮುಖ್ಯ ಪಾತ್ರದಲ್ಲಿ ಅಂದರೆ ಕಸ್ತೂರಿಯಾಗಿ ನಟಿಸಿದ್ದಾರೆ. ಇವರು ತೆಲುಗು ಸೀರಿಯಲ್‌ನಲ್ಲೂ ಕಸ್ತೂರಿಯಾಗಿದ್ದರು. ವಿಶೇಷವೆಂದರೆ ಇವರು ಕನ್ನಡ ನಟಿ. ಕನ್ನಡದ ಅನುರೂಪ ಸೀರಿಯಲ್‌ನಲ್ಲಿ ನಟಿಸಿದ್ದರು. ಬಳಿಕ ತೆಲುಗು ಕಿರುತೆರೆಯಲ್ಲಿ ಅವಕಾಶ ಪಡೆದಿದ್ದರು. ಇದಕ್ಕೂ ಮೊದಲು ಪುನರ್‌ ವಿವಾಹ ಎಂಬ ಸೀರಿಯಲ್‌ನಲ್ಲೂ ನಟಿಸಿದ್ದರು. ಗಿರಿಜಾ ಕಲ್ಯಾಣ, ಕುಲವಧು ಸೀರಿಯಲ್‌ನಲ್ಲೂ ನಟಿಸಿದ್ದರು. ಇದಾದ ಬಳಿಕ ಸರ್ವ ಮಂಗಳ ಮಾಂಗಲೈ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ತೆಲುಗಿನ ಅಗ್ನಿಸಾಕ್ಷಿ ಸೀರಿಯಲ್‌ ಅವಕಾಶ ಪಡೆದರು. ತೆಲುಗು ಅಗ್ನಿಸಾಕ್ಷಿ ಸೀರಿಯಲ್‌ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ತೆಲುಗು ಕಸ್ತೂರಿ ಸೀರಿಯಲ್‌ನಲ್ಲಿ ಡಾಕ್ಟರ್‌ ಆಗಿದ್ದರು. ಕೆಜಿಎಫ್‌ ನಟ ಯಶ್‌ ಅವರ ಸಂತು ಸ್ಟ್ರೈಟ್‌ ಫಾರ್ವಾರ್ಡ್‌ ಚಿತ್ರದಲ್ಲಿ ಯಶ್‌ ಸಹೋದರಿಯಾಗಿ ನಟಿಸಿದ್ದರು.

ಕಸ್ತೂರಿ ಸೀರಿಯಲ್‌ ಪಾತ್ರದಾರಿ ವೀನಾ ಪೊನ್ನಪ್ಪ ಕನ್ನಡ ಸಿನಿಮಾ ನಟಿಯೂ ಹೌದು. ಇವರು ಕೊಡಗು ಮೂಲದವರು. ಬಿಳಿ ಹೆಂಡ್ತಿ, ಪುಟ್‌ಮಲ್ಲಿ, ಕಿನ್ನಾರಿಯಂತಹ ಟೀವಿ ಕಾರ್ಯಕ್ರಮಗಳಲ್ಲಿ, ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ವಿಜಯ್‌ ಟಿವಿಯಲ್ಲಿ ಪ್ರಸಾರವಾಗುವ ಶಿವ ಮನಸುಲಾ ಶಕ್ತಿ ಸೀರಿಯಲ್‌ನಲ್ಲಿ ನೆಗೆಟಿವ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾ ಪೇರು ಮೀನಾಕ್ಷಿ ಎಂಬ ತೆಲುಗು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಒಟಿಟಿ ಅಥವಾ ಇತರೆ ವೇದಿಕೆಗಳಲ್ಲಿ ಈಗಾಗಲೇ ಬಹುತೇಕ ಡಬ್ಬಿಂಗ್‌ ಸಿನಿಮಾಗಳೇ ತುಂಬಿಕೊಂಡಿವೆ. ಅಮೆಜಾನ್‌ ಪ್ರೈಮ್‌ ಇತರೆ ಒಟಿಟಿಗಳಲ್ಲಿ ಕನ್ನಡ ವಿಭಾಗದಲ್ಲಿ ಅಚ್ಚ ಕನ್ನಡದ ಸಿನಿಮಾ ನೋಡೋಣ ಎಂದುಕೊಂಡು ಹೋದರೆ ಬೇರೆ ಭಾಷೆಯಿಂದ ಡಬ್ಬಿಂಗ್‌ ಆಗಿ ಕನ್ನಡದಲ್ಲಿರುವ ಸಿನಿಮಾಗಳೇ ಕಾಣಿಸುತ್ತವೆ. ಇದೇ ರೀತಿ ಇದೀಗ ಸೀರಿಯಲ್‌ಗಳು ಡಬ್ಬಿಂಗ್‌ ಆಗಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಡಬ್ಬಿಂಗ್‌ ಸೀರಿಯಲ್‌ಗಳೇ ಕಿರುತೆರೆಯಲ್ಲಿ ತುಂಬಿಕೊಂಡರೆ ಅಚ್ಚರಿಯಿಲ್ಲ ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ವ್ಯಕ್ತವಾಗಿದೆ.

Whats_app_banner