ಕಿಶನ್‌ ಬಿಳಗಲಿ ದಿವ್ಯ ಉರುಡುಗ ಮದುವೆಯಾದ್ರ? ಅಯ್ಯೋ ಬೈಕ್‌ ರೇಸರ್‌ ಅರವಿಂದ ಕೆಪಿ ಗತಿ! ಮದುವೆ ಆಲ್ಬಂ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಕಿಶನ್‌ ಬಿಳಗಲಿ ದಿವ್ಯ ಉರುಡುಗ ಮದುವೆಯಾದ್ರ? ಅಯ್ಯೋ ಬೈಕ್‌ ರೇಸರ್‌ ಅರವಿಂದ ಕೆಪಿ ಗತಿ! ಮದುವೆ ಆಲ್ಬಂ ನೋಡಿ

ಕಿಶನ್‌ ಬಿಳಗಲಿ ದಿವ್ಯ ಉರುಡುಗ ಮದುವೆಯಾದ್ರ? ಅಯ್ಯೋ ಬೈಕ್‌ ರೇಸರ್‌ ಅರವಿಂದ ಕೆಪಿ ಗತಿ! ಮದುವೆ ಆಲ್ಬಂ ನೋಡಿ

ಕಿಶನ್‌ ಬಿಳಗಲಿ- ದಿವ್ಯ ಉರುಡುಗ ಮದುವೆಯಾದ್ರ? ಬಿಗ್‌ಬಾಸ್‌ ಕನ್ನಡದ ಮಾಜಿ ಸ್ಪರ್ಧಿಗಳ ಮದುವೆ ಫೋಟೋ ನೋಡಿ ಸಾಕಷ್ಟು ಜನರು ಅಚ್ಚರಿಗೊಂಡಿದ್ದಾರೆ. ಬಿಬಿಕೆ ಮಾಜಿ ಸ್ಪರ್ಧಿ ಬೈಕ್‌ ರೇಸರ್‌ ಅರವಿಂದ ಕೆಪಿ ಜತೆ ದಿವ್ಯ ಉರುಡುಗ ಮದುವೆಯಾಗೋದಿಲ್ವೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ. ಇದು ನಿನಗಾಗಿ ಸೀರಿಯಲ್‌ನ ಶೂಟಿಂಗ್‌ ಆಗಿರಬಹುದೇ? ಮುಂದೆ ಓದಿ.

ಕಿಶನ್‌ ಬಿಳಗಲಿ ದಿವ್ಯ ಉರುಡುಗ ಫೋಟೋಗಳು
ಕಿಶನ್‌ ಬಿಳಗಲಿ ದಿವ್ಯ ಉರುಡುಗ ಫೋಟೋಗಳು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಡ್ಯಾನ್ಸರ್‌, ಕಿರುತೆರೆ ಕಲಾವಿದ ಕಿಶನ್‌ ಬಿಳಗಲಿ ಅಚ್ಚರಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್‌ ಮಾಜಿ ಸ್ಪರ್ಧಿ, ಸೀರಿಯಲ್‌ ನಟಿ ದಿವ್ಯಾ ಉರುಡುಗ ಜತ ಹಸೆಮಣೆಯಲ್ಲಿ ಕುಳಿತಿದ್ದಾರೆ. ಇವರಿಬ್ಬರ ಮದುವೆ ಫೋಟೋಗಳನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಯ್ಯೋ, ಬೈಕ್‌ ರೇಸರ್‌, ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಅರವಿಂದ ಕೆಪಿ ಜತೆಗೆ ದಿವ್ಯ ಉರುಡುಗ ಲವ್‌ ಸ್ಟೋರಿ ಏನಾಯ್ತು ಎಂದು ಅಚ್ಚರಿಗೊಂಡಿದ್ದಾರೆ.

ಕಿಶನ್‌ ಬಿಳಗಲಿ ಹಂಚಿಕೊಂಡಿರುವುದು ಮದುವೆಯ ಫೋಟೋ ಅಷ್ಟೇ. ಆದರೆ, ಇದು ನಿಜವಾದ ಮದುವೆ ಫೋಟೋ ಅಥವಾ ಧಾರಾವಾಹಿ ಫೋಟೋ ಎಂದು ಅವರು ಸ್ಪಷ್ಟಪಡಿಸಿಲ್ಲ. ಸದ್ಯ ಕಿರುತೆರೆ ಸೀರಿಯಲ್‌ಗಳಲ್ಲಿ ಬಿಝಿಯಾಗಿರುವ ಈ ಕಲಾವಿದರು ಯಾವುದೋ ಸೀರಿಯಲ್‌ಗೆ ಸಂಬಂಧಪಟ್ಟಂತೆ ಮದುವೆ ಗಂಡು ಹೆಣ್ಣಾಗಿ ನಟಿಸಿರಬಹುದು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

 

ಈ ಫೋಟೋಗಳಿಗೆ ಕಿಶನ್‌ ಬಿಳಗಲಿ ನೀಡಿರುವ ಹ್ಯಾಷ್‌ ಟ್ಯಾಗ್‌ಗಳನ್ನು ಗಮನಿಸಿದರೆ ಅಸಲಿಯತ್ತು ಅರ್ಥವಾಗುತ್ತದೆ. ನಿನಗಾಗಿ ಮತ್ತು ಸೀರಿಯಲ್‌ ಎಂಬ ಎರಡು ಹ್ಯಾಷ್‌ಟ್ಯಾಗ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ, ನಿನಗಾಗಿ ಸೀರಿಯಲ್‌ನಲ್ಲಿ ಈ ಎರಡು ಪಾತ್ರಗಳ ಮದುವೆ ನಡೆಯುತ್ತದೆಯೇ?

ಈ ಫೋಟೋಗಳಿಗೆ ಹ್ಯಾಷ್‌ಟ್ಯಾಗ್‌ ನೋಡದ ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ. "ಇಬ್ಬರೂ ಮುದ್ದಾಗಿ ಕಾಣಿಸುತ್ತಿದ್ದೀರಿ" "ನಾವು ನಿಮ್ಮನ್ನು ಅರವಿಂದ ಕೆಪಿ ಜತೆ ಮಧುಮಗಳಾಗಿ ಮಾತ್ರ ನೋಡಲು ಇಷ್ಟಪಡುತ್ತೇವೆ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. "ನಿಜವಾಗಿಯೂ ಮದುವೆಯ ಉಡುಗೆ - ತೊಡುಗೆಯಲ್ಲಿ ಚೆಂದ ಕಾಣುತ್ತೀರಿ" ಎಂದೆಲ್ಲ ಆಪ್ತರು, ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.