ಚಿತ್ರಮಂದಿರ, ಒಟಿಟಿ ಬಳಿಕ ಕಿರುತೆರೆಗೂ ಬರ್ತಿದೆ ಡಾಲಿ ಧನಂಜಯ್‌ ಕೋಟಿ ಸಿನಿಮಾ; ಯಾವಾಗ, ವೀಕ್ಷಣೆ ಎಲ್ಲಿ?-television news kotee world television premiere when and where to watch daali dhananjay starrer kotee mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಚಿತ್ರಮಂದಿರ, ಒಟಿಟಿ ಬಳಿಕ ಕಿರುತೆರೆಗೂ ಬರ್ತಿದೆ ಡಾಲಿ ಧನಂಜಯ್‌ ಕೋಟಿ ಸಿನಿಮಾ; ಯಾವಾಗ, ವೀಕ್ಷಣೆ ಎಲ್ಲಿ?

ಚಿತ್ರಮಂದಿರ, ಒಟಿಟಿ ಬಳಿಕ ಕಿರುತೆರೆಗೂ ಬರ್ತಿದೆ ಡಾಲಿ ಧನಂಜಯ್‌ ಕೋಟಿ ಸಿನಿಮಾ; ಯಾವಾಗ, ವೀಕ್ಷಣೆ ಎಲ್ಲಿ?

ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ KOTEE ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರವಾಗಲಿದೆ. ಹಾಗಾದರೆ ಯಾವಾಗ, ಎಲ್ಲಿ ಈ ಸಿನಿಮಾ ವೀಕ್ಷಿಸಬಹುದು ? ಇಲ್ಲಿದೆ ಮಾಹಿತಿ.

ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ KOTEE ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರವಾಗಲಿದೆ.
ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ KOTEE ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರವಾಗಲಿದೆ. (Image\ Prime Video)

Kotee World Television Premiere Release: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರೇಕ್ಷಕ ವಲಯದಿಂದ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದ ಈ ಸಿನಿಮಾವನ್ನು ಪರಮ್‌ ನಿರ್ದೇಶನ ಮಾಡಿದ್ದರು. ಮಧ್ಯಮ ವರ್ಗದ ಯುವಕನೊಬ್ಬ ಕೋಟಿ ರೂಪಾಯಿ ಗಳಿಸಬೇಕೆಂಬ ಕನಸಿನ ಸುತ್ತ ಈ ಕಥೆಯನ್ನು ಹೆಣೆಯಲಾಗಿತ್ತು. ಡಾಲಿ ಧನಂಜಯ ಜತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದರು. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದರು. ಇದೀಗ ಇದೇ ಸಿನಿಮಾ ಕಿರುತೆರೆಗೆ ಆಗಮಿಸುತ್ತಿದೆ.

ಜೂನ್‌ 14ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಕೋಟಿ ಸಿನಿಮಾ ಪ್ರಸಾರವಾಗಲಿದೆ. ಹಾಗಾದರೆ ಯಾವಾಗ, ಎಲ್ಲಿ ಈ ಸಿನಿಮಾ ವೀಕ್ಷಣೆ? ಇಲ್ಲಿದೆ ನೋಡಿ ಮಾಹಿತಿ.

ಸಾಮಾನ್ಯ ಚಾಲಕನ ಕಥೆ

ಮಧ್ಯಮವರ್ಗದ ಕುಟುಂಬದ ಕಷ್ಟ ಸುಖ ಹಾಗೂ ಒದ್ದಾಟಗಳನ್ನು ಮನಮುಟ್ಟುವಂತೆ ನಿರೂಪಿಸುವ ‘ಕೋಟಿ’ ಸಿನಿಮಾದ ನಿರ್ದೇಶಕರು ಈ ಮೊದಲು ಕಲರ್ಸ್ ಕನ್ನಡ ಚಾನೆಲ್ಲಿನ ಬ್ಯುಸಿನೆಸ್ ಹೆಡ್ ಆಗಿದ್ದ ಪರಮೇಶ್ವರ ಗುಂಡ್ಕಲ್. ಇದು ಅವರ ಚೊಚ್ಚಲ ಚಿತ್ರ. ಪ್ರಾಮಾಣಿಕತೆ ಮತ್ತು ಕನಸುಗಳ ತಿಕ್ಕಾಟ ಒಬ್ಬ ಸಾಮಾನ್ಯ ಕ್ಯಾಬ್ ಚಾಲಕನ ಬದುಕನ್ನು ಯಾವ ಯಾವ ದಿಕ್ಕಿನಲ್ಲಿ ಕರೆದೊಯ್ಯುತ್ತದೆ ಎಂಬುದೇ ‘ಕೋಟಿ’ ಸಿನಿಮಾದ ಕತೆ.

ದುನಿಯಾ ವಿಜಯ್‌ ವಿಶೇಷ ಪಾತ್ರ..

ನಿಯತ್ತಾಗಿ ಒಂದು ಕೋಟಿ ರೂಪಾಯಿ ದುಡಿಯುವ ಕನಸು ಹೊತ್ತ ನಾಯಕನಟನಾಗಿ ಡಾಲಿ ಧನಂಜಯ್ ನೀಡಿದ ಅಭಿನಯವನ್ನು ಪ್ರೇಕ್ಷಕರು ಈಗಾಗಲೇ ಮೆಚ್ಚಿಕೊಂಡಿದ್ದಾರೆ. ಜೊತೆಗೆ ತಾರಾ, ರಂಗಾಯಣ ರಘು ಸೇರಿದಂತೆ ಈ ಸಿನಿಮಾದ ತಾರಾಗಣದಲ್ಲಿ ಪ್ರತಿಭಾನ್ವಿತರ ದಂಡೇ ಇದೆ. ವಿಶೇಷ ಪಾತ್ರವೊಂದರಲ್ಲಿ ದುನಿಯಾ ವಿಜಯ್ ಕಾಣಿಸಿಕೊಂಡಿರುವುದು ಸಿನಿಮಾದ ಹೈಲೈಟ್. ಎಲ್ಲರ ಮನಸ್ಸಿನೊಳಗೂ ಒಬ್ಬ ಕಳ್ಳ ಇರ್ತಾನೆ ಅನ್ನುವುದು ಈ ಕತೆಯ ಆತ್ಮ. ಈ ಸಾಲನ್ನು ಪರೀಕ್ಷೆಗೊಡ್ಡುತ್ತಾ ಸಿನಿಮಾ ಮುಂದೆ ಸಾಗುತ್ತದೆ.

ಆಗಸ್ಟ್‌ 24ರ ಸಂಜೆ 7:30ಕ್ಕೆ ಕಲರ್ಸ್‌ ಕನ್ನಡದಲ್ಲಿ ಕೋಟಿ..

ಕೋಟಿ ಸಿನಿಮಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವುದರ ಬಗ್ಗೆ ಉತ್ಸುಕತೆ ವ್ಯಕ್ತಪಡಿಸಿದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ‘ಥೇಟರಿನ ಪ್ರೇಕ್ಷಕರು ಈಗಾಗಲೇ ಮೆಚ್ಚಿಕೊಂಡಿರುವ ಕೋಟಿ ಸಿನಿಮಾದ ಕತೆ ಟಿವಿ ವೀಕ್ಷಕರಿಗೆ ಹೇಳಿಮಾಡಿಸಿದಂತಿದ್ದು, ಟಿವಿಯಲ್ಲಿ ಪ್ರಸಾರಗೊಂಡಾಗ ಎಲ್ಲರೂ ಕುಟುಂಬ ಸಮೇತ ಈ ಸಿನಿಮಾವನ್ನು ನೋಡಿ ಆನಂದಿಸುವುದರಲ್ಲಿ ಅನುಮಾನವೇ ಇಲ್ಲ’ ಎಂದು ಅಭಿಪ್ರಾಯ ಪಟ್ಟರು. ಧನಂಜಯ್ ಅಭಿನಯದ ಕೋಟಿ ಸಿನಿಮಾವನ್ನು ಇಂದು ಸಂಜೆ (ಆಗಸ್ಟ್ 24) 7:30ಕ್ಕೆ ಕಲರ್ಸ್ ಕನ್ನಡ ಚಾನೆಲ್ಲಿನಲ್ಲಿ ಪ್ರಸಾರವಾಗಲಿದೆ.