ನಾನಾ ನೀನಾ! ಮೊದಲ ಸ್ಥಾನದಲ್ಲಿ ಎರಡು ಧಾರಾವಾಹಿಗಳು, TRPಯಲ್ಲಿ ಮುಂದುವರಿದ ಪೈಪೋಟಿ; ಇನ್ನುಳಿದ ಸೀರಿಯಲ್‌ಗಳ ಕಥೆ ಏನು?
ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ಬಿರುಸಿನ ಪೈಪೋಟಿ ಮುಂದುವರಿದಿದೆ. ಟಿಆರ್‌ಪಿ ವಿಚಾರದಲ್ಲಿ ಒಂದಕ್ಕೊಂದು ಧಾರಾವಾಹಿಗಳು ಸ್ಪರ್ಧೆಯೊಡ್ಡುತ್ತಿವೆ. ಹಾಗಾದರೆ, ಈ ವಾರದ ಟಿಆರ್‌ಪಿ ಅಂಕಿ ಅಂಶದಲ್ಲಿ ಟಾಪ್ 10ರಲ್ಲಿರುವ ಧಾರಾವಾಹಿಗಳು ಇಲ್ಲಿವೆ ನೋಡಿ.
Kannada Serial TRP: ಕನ್ನಡ ಕಿರುತೆರೆಯಲ್ಲಿ ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಸ್ಪರ್ಧೆಯೊಡ್ಡುತ್ತಿದ್ದಾರೆ. ಹಾಗಾದರೆ ಈ ವಾರದ (ಜುಲೈ 4ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ? ಟಾಪ್ 10ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ಎಂಬುದನ್ನು ಇಲ್ಲಿ ನೋಡೋಣ.
ಪುಟ್ಟಕ್ಕನ ಮಕ್ಕಳು
ಹಿರಿಯ ನಟಿ ಉಮಾಶ್ರೀ ಮತ್ತು ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸತನದ ಜತೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಬಂಗಾರಮ್ಮನ ಬದಲು ಸಿಂಗಾರಮ್ಮನ ವರಸೆ ಜೋರಾಗಿದೆ. ಈ ಕಾರಣದಿಂದಲೂ ನೋಡುಗನ ಗಮನ ಸೆಳೆದಿದೆ ಈ ಸೀರಿಯಲ್. ಅದರಂತೆ ಈ ವಾರ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದೆ.
ಲಕ್ಷ್ಮೀ ನಿವಾಸ
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪ್ರತಿಸ್ಪರ್ಧಿ ಎಂದರೆ ಅದು ಲಕ್ಷ್ಮೀ ನಿವಾಸ ಮಾತ್ರ ಅನ್ನೋ ಮಾತಿದೆ. ಪೈಪೋಟಿ ಅಂದಾಕ್ಷಣ ಈ ಎರಡು ಸೀರಿಯಲ್‌ಗಳೇ ನೆಕ್ ಟು ನೆಕ್ ಕಣದಲ್ಲಿರುತ್ತವೆ. ಅದರಂತೆ ಈ ವಾರ ಪುಟ್ಟಕ್ಕನ ಜತೆಗೆ ಮೊದಲ ಸ್ಥಾನವನ್ನು ಸಮನಾಗಿ ಹಂಚಿಕೊಂಡಿವೆ. ಕಳೆದ ವಾರ ಇದೇ ಸೀರಿಯಲ್ ಮೂರನೇ ಸ್ಥಾನಕ್ಕೆ ಕುಸಿದಿತ್ತು.
ಶ್ರಾವಣಿ ಸುಬ್ರಮಣ್ಯ
ಶ್ರಾವಣಿ ಮೇಲೆ ಅಪ್ಪ ವೀರೇಂದ್ರ ಪ್ರೀತಿ ತೋರುತ್ತಿದ್ದಾನೆ. ಇದು ವಿಜಯಾಂಬಿಕೆಯ ಕಣ್ಣು ಕೆಂಪಗಾಗಿಸಿದೆ. ಹೀಗೆ ಸಾಗುತ್ತಿರುವ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ, ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು ಸಂಪಾದಿಸುತ್ತಿದೆ. ಅದರಂತೆ ಈ ವಾರ ಎರಡನೇ ಸ್ಥಾನದಲ್ಲಿದೆ. ಕಳೆದ ವಾರವೂ ಎರಡನೇ ಸ್ಥಾನದಲ್ಲಿತ್ತು.
ಸೀತಾ ರಾಮ
ಸೀತಾ ರಾಮ ಸೀರಿಯಲ್‌ನಲ್ಲೀಗ ಸೀತಾ ರಾಮನ ದಾಂಪತ್ಯ ಜೀವನ ಶುರುವಾಗಿದೆ. ಇತ್ತ ಸಿಹಿಯ ಮೇಲೆ ಭಾರ್ಗವಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ, ಸೀತಾ ಮತ್ತು ರಾಮನಿಂದ ಸಿಹಿಯನ್ನು ದೂರ ಮಾಡಲು ಪ್ಲಾನ್ ಮಾಡುತ್ತಿದ್ದಾಳೆ ಭಾರ್ಗವಿ. ಈ ನಡುವೆ ರಾಮನ ತಾಯಿ ವಾಣಿಯ ಕಾಟ ಭಾರ್ಗವಿಯ ನಿದ್ದೆಗೆಡಿಸಿದೆ. ಹೀಗೆ ಸಾಗುತ್ತಿರುವ ಈ ಸೀರಿಯಲ್ ಈ ವಾರ ನಾಲ್ಕನೇ ಸ್ಥಾನದಲ್ಲಿದೆ.
ಅಮೃತಧಾರೆ
ಗೌತಮ್ ಮತ್ತು ಭೂಮಿಕಾ ಜೋಡಿಯ ಅಮೃತಧಾರೆ ಸೀರಿಯಲ್ ಸಹ ನೋಡುಗರ ಅಚ್ಚುಮೆಚ್ಚು. ಇದೀಗ ಸೀರಿಯಲ್‌ನಲ್ಲಿ ಪಾರ್ಥನ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಅತ್ತೆಯ ಮಾತಿಗೆ ಕೈ ಕಟ್ಟಿ ನಿಂತಿದ್ದಾಳೆ ಭೂಮಿಕಾ. ಹೀಗೆ ನೋಡಿಸಿಕೊಂಡು ಹೋಗುತ್ತಿರುವ ಈ ಧಾರಾವಾಹಿ ಈ ವಾರ ಐದನೇ ಸ್ಥಾನದಲ್ಲಿದೆ.
ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಹ ನೋಡುಗರರಿಗೆ ಅಚ್ಚರಿಗಳ ಗುಚ್ಛವನ್ನೇ ಉಣಬಡಿಸುತ್ತಿದೆ. ಜಾತಕದ ವಿಚಾರವಾಗಿ ಒಂದಷ್ಟು ಬದಲಾವಣೆಗೆ ಕೀರ್ತಿ ಮತ್ತು ಲಕ್ಷ್ಮೀ ಒಂದಾಗಿದ್ದಾರೆ. ಈ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರದಲ್ಲಿ ಆರನೇ ಸ್ಥಾನದಲ್ಲಿದೆ.
ರಾಮಾಚಾರಿ, ಭಾಗ್ಯಲಕ್ಷ್ಮೀ
ಕಲರ್ಸ್ ಕನ್ನಡದ ರಾಮಾಚಾರಿ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ಸಹ ಹಿಂದೆ ಮುಂದೆ ಇವೆ. ರಾಮಾಚಾರಿ ಸೀರಿಯಲ್ ಟಿಆರ್‌ಪಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ, ಎಂಟನೇ ಸ್ಥಾನವನ್ನು ಭಾಗ್ಯಲಕ್ಷ್ಮೀ ಪಡೆದುಕೊಂಡಿದೆ. ನಿನಗಾಗಿ ಒಂಭತ್ತನೇ ಸ್ಥಾನದಲ್ಲಿದ್ದರೆ, ಶ್ರೀಗೌರಿ ಹತ್ತನೇ ಸ್ಥಾನದಲ್ಲಿದೆ.
ವಿಭಾಗ