ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಭಾವನಾ ಮೇಲೆ ಜೀವಾನೇ ಮಡ್ಗೌವ್ರೇ ನಮ್ ಸಿದ್ದೇಗೌಡ್ರು, ಅಷ್ಟು ಸುಲಭಕ್ಕೆ ಬುಟ್ಬುಡ್ತಾರಾ, ಕೆಲಸ ಕೊಡಿಸಿಯೇ ಬಿಟ್ರು‌

Lakshmi Nivasa Serial: ಭಾವನಾ ಮೇಲೆ ಜೀವಾನೇ ಮಡ್ಗೌವ್ರೇ ನಮ್ ಸಿದ್ದೇಗೌಡ್ರು, ಅಷ್ಟು ಸುಲಭಕ್ಕೆ ಬುಟ್ಬುಡ್ತಾರಾ, ಕೆಲಸ ಕೊಡಿಸಿಯೇ ಬಿಟ್ರು‌

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಭಾವನಾ ಮತ್ತು ಸಿದ್ದೇಗೌಡ ಜೋಡಿಯ ಪ್ರೇಮಕಥೆ ಮಜವಾಗಿದೆ. ಭಾವನಾ ಮೇಲೆ ಜೀವನಾ ಇರಿಸಿಕೊಂಡಿರುವ ಗೌಡ್ರು, ಅವರ ಕೆಲಸದ ಆಸೆಯನ್ನು ಈಡೇರಿಸಿದ್ದಾರೆ. ಈ ನಡುವೆ ಸಿದ್ದೇಗೌಡರಿಗೆ ಹುಡುಗಿ ತಾಯಿ ಯಾರು ಅನ್ನೋ ಸತ್ಯವೂ ತಿಳಿದಿದೆ.

Lakshmi Nivasa Serial: ಭಾವನಾ ಮೇಲೆ ಜೀವಾನೇ ಮಡ್ಗೌವ್ರೇ ನಮ್ ಸಿದ್ದೇಗೌಡ್ರು, ಅಷ್ಟು ಸುಲಭಕ್ಕೆ ಬುಟ್ಬುಡ್ತಾರಾ, ಕೆಲಸ ಕೊಡಿಸಿಯೇ ಬಿಟ್ರು‌
Lakshmi Nivasa Serial: ಭಾವನಾ ಮೇಲೆ ಜೀವಾನೇ ಮಡ್ಗೌವ್ರೇ ನಮ್ ಸಿದ್ದೇಗೌಡ್ರು, ಅಷ್ಟು ಸುಲಭಕ್ಕೆ ಬುಟ್ಬುಡ್ತಾರಾ, ಕೆಲಸ ಕೊಡಿಸಿಯೇ ಬಿಟ್ರು‌

Lakshmi Nivasa Serial: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಒಂದೇ ಕುಟುಂಬದ ಹಲವು ಕಥೆಗಳು ಕವಲುಗಳಾಗಿ ತೆರೆದುಕೊಂಡಿವೆ. ಜಯಂತ್‌ ಜಾಹ್ನವಿಯಷ್ಟೇ, ಭಾವನಾ ಮತ್ತು ಸಿದ್ಧೇಗೌಡ್ರ ಪ್ರೇಮಕಥೆಯೂ ನೋಡುಗರ ಗಮನ ಸೆಳೆಯುತ್ತಿದೆ. ಸದ್ಯ ಕಥೆಯಲ್ಲಿ ಇವರಿಬ್ಬರ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಕೆಲಸ ನಡೆಯುತ್ತಿದೆ. ಪುಟಾಣಿ ಖುಷಿಗಾಗಿ ತನ್ನ ಖುಷಿಯನ್ನೇ ತ್ಯಾಗ ಮಾಡಲು ಹೊರಟಿದ್ದಾಳೆ ಭಾವನಾ. ಭಾವನಾಳ ಆ ಕೆಲಸಕ್ಕೆ ತೆರೆಮರೆಯಲ್ಲಿಯೇ ಸಾಥ್‌ ನೀಡುತ್ತಿದ್ದಾನೆ ಸಿದ್ದೇಗೌಡ.

ಟ್ರೆಂಡಿಂಗ್​ ಸುದ್ದಿ

ಪುಟಾಣಿ ಖುಷಿ ಭಾವನಾಳ ಮಡಿಲು ಸೇರಿದ್ದಾಳೆ. ಅಪಘಾತದಲ್ಲಿ ಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಖುಷಿ ಮೊದಲಿನಂತಾಗಬೇಕು, ಎದ್ದು ಎಲ್ಲರಂತೆ ಓಡಾಡಬೇಕು ಎಂಬುದು ಭಾವನಾಳ ಬಯಕೆ. ಆ ಆಸೆಗೆ ಹಣಕಾಸಿನ ನೆರವು ಅಗತ್ಯ. ಮನೆಯಲ್ಲಿ ಅಣ್ಣಂದಿರಿಗೆ ಕೇಳಿದರೆ, ಅವ್ರೋ ಅದನ್ನು ತಲೆಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ ತಾನೇ ಯಾವುದಾದರೂ ಕೆಲಸ ಹಿಡಿದು, ಆಕೆಯನ್ನು ಸರಿ ಮಾಡುವ ಪಣ ತೊಟ್ಟಿದ್ದಾಳೆ. ತಿಂಗಳಿಗೆ ಏನಿಲ್ಲ ಅಂದರೂ ಖುಷಿಯ ಚಿಕಿತ್ಸೆಗೆ 30 ಸಾವಿರ ಬೇಕು. ಅಷ್ಟೇ ಸಂಬಳ ಸಿಗುವ ಕೆಲಸದ ಹುಡುಕಾಟದಲ್ಲಿದ್ದಾಳೆ ಭಾವನಾ.

ಕೆಲಸದ ವಿಚಾರ ಸಿದ್ಧೇಗೌಡ್ರಿಗೂ ಗೊತ್ತಾಯ್ತು

ಭಾವನಾಳ ಪರಿಸ್ಥಿತಿ ಸದ್ಯ ತೂಗುಗತ್ತಿಯಂತಿದೆ. ಶತಾಯಗತಾಯ ತಿಂಗಳಿಗೆ 30 ಸಾವಿರದ ಸಂಬಳ ಸಿಗುವ ಕೆಲಸವನ್ನು ಹುಡುಕಿ ಹಿಡಿಯಲೇಬೇಕು. ಕೆಲಸಕ್ಕೆಂದು ತನ್ನ ಅನುಭವದ ಸ್ವ ವಿವರದ ದಾಖಲೆ ಹಿಡಿದು ಕಂಪನಿ ಸುತ್ತಾಡಿದ್ದಾಳೆ. ವಿಶೇಷ ಏನೆಂದರೆ ಸಿದ್ದೇಗೌಡ ಆಫೀಸ್‌ಗೆ ಭಾವನಾ ಅವರನ್ನು ಡ್ರಾಪ್‌ ಮಾಡಿದ್ದಾನೆ. ಆದರೆ, ಒಂದು ಕಂಪನಿಯಲ್ಲಿ ಕೇವಲ 20 ಸಾವಿರದ ಕೆಲಸವಿದೆ. ಅದನ್ನೇ 30 ಸಾವಿರ ಕೊಡಿ ಎಂದು ಅಂಗಲಾಚಿದ್ದಾಳೆ. ಆದರೆ, ಅದ್ಯಾವುದಕ್ಕೂ ಬಗ್ಗದ ಆತ, ಇಷ್ಟ ಇದ್ದರೆ ಮಾಡಿ, ಇಲ್ಲದಿದ್ದರೆ ಇಲ್ಲ ಎಂದಿದ್ದಾನೆ. ಅದೇ ಆಫೀಸ್‌ನ ಮರೆಯಲ್ಲಿ ನಿಂತು ಭಾವನಾ ಅವರಿಗೆ ಕೆಲಸ ಸಿಗದ ವಿಚಾರ ಸಿದ್ದೇಗೌಡನಿಗೂ ಗೊತ್ತಾಗಿದೆ.

ಆಫೀಸ್‌ ಮಾಲೀಕನಿಗೆ ಫೋನ್‌ ಕರೆ

ಭಾವನಾ ಕೊಂಚ ಬೇಸರದಲ್ಲಿಯೇ ಆಫೀಸ್‌ನಿಂದ ಹೊರ ನಡೆದಿದ್ದನ್ನು ಸಿದ್ದೇಗೌಡ ನೋಡಿದ್ದಾನೆ. ಏನಾಗಿರಬಹುದೆಂದು ವಿಚಾರಿಸಿದಾಗ, ಕೆಲಸ ಸಿಗದ ವಿಚಾರವೂ ಗೊತ್ತಾಗಿದೆ. ಭಾವನಾ ಅವರ ಪ್ರೀತಿ ಸಂಪಾದಿಸಬೇಕು ಅನ್ನೋ ಸಿದ್ದೇಗೌಡರಿಗೆ ಈಗ ಚಾನ್ಸ್‌ ಸಿಕ್ಕಿದೆ. ತಕ್ಷಣ ಅದೇ ಕಂಪನಿಯಾತನಿಗೆ ಫೋನ್‌ ಮಾಡಿ, ಯಾಕೆ ಅವರು ಬೇಸರಿಸಿಕೊಂಡು ಹೋದ್ರು, ಕೆಲಸ ಯಾಕೆ ಸಿಗಲಿಲ್ಲ, ಸಂಬಳದ ಕಥೆ ಏನು ಎಂದು ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾನೆ.

50 ಸಾವಿರದ ಕೆಲಸ ಕೊಡಿಸಿದ ಗೌಡ್ರು

ಈ ಕೂಡಲೇ ಅವರಿಗೆ ಕರೆದು ಕೆಲಸ ಕೊಡು, ನೀನು 20 ಸಾವಿರ ಕೊಡು, ನಾನು 30 ಸಾವಿರ ಕೊಡ್ತೀನಿ ಎಂದಿದ್ದಾನೆ ಸಿದ್ದೇಗೌಡ. ಅಲ್ಲಿಗೆ ಭಾವನಾಗೆ 50 ಸಾವಿರದ ಕೆಲಸ ಸಿಕ್ಕಿದೆ. ಸ್ವತಃ ಅವರನ್ನು ಕರೆದು ಕೆಲಸಕ್ಕೆ ಸೇರಿ ಎಂದು ಹೇಳಿದ್ದಾನೆ. ಭಾವನಾ ಮೊಗದಲ್ಲೂ ನಗು ಮೂಡಿದೆ. ಸಿದ್ಧೇಗೌಡನಿಗೂ ಖುಷಿಯಾಗಿದೆ. ಆಫೀಸ್‌ನಿಂದ ಭಾವನಾ ಹೊರಬರುತ್ತಿದ್ದಂತೆ, ಆಕೆಯನ್ನೇ ಹಿಂಬಾಲಿಸಿ ಬಂದಿದ್ದಾನೆ ಸಿದ್ದೇಗೌಡ. ಕೆಲಸ ಸಿಕ್ತು ಅಲ್ವಾ, ನನ್ನ ಮುಖ ನೋಡಿ ಹೋದ ಮೇಲೆ ಸಿಗಲೇಬೇಕು ಎಂದಿದ್ದಾನೆ. ಬನ್ನಿ ಮನೆಗೆ ಡ್ರಾಪ್‌ ಮಾಡ್ತಿನಿ ಎಂದಿದ್ದಾನೆ. ಇಲ್ಲ ನೀವು ಹೊರಡಿ ಎಂದಿದ್ದಾಳೆ.

ಭಾವನಾಳೇ ಹುಡುಗಿ ತಾಯಿ ಸತ್ಯವೂ ಹೊರಬಿತ್ತು

ಇತ್ತ ಸಿದ್ದೇಗೌಡ ಹೋಗ್ತಿದ್ದಂತೆ, ಅದೇ ಗೌಡ್ರಿಗೆ ಫೋನ್‌ ಮಾಡಿ, ನನ್ನ ಹಿಂದಿಂದೇ ಒಬ್ಬ ಸುತ್ತಾಡ್ತಾ ಕಾಟ ಕೊಡ್ತಿದ್ದಾನೆ. ಹೇಗಾದ್ರೂ ಮಾಡಿ ಅವನಿಂದ ಪಾರು ಮಾಡಿ ಎಂದಿದ್ದಾಳೆ. ಇರೋ ವಿಷ್ಯವನ್ನೆಲ್ಲ ಹೇಳಿಕೊಂಡಿದ್ದಾಳೆ. ಅದಕ್ಕೆ, ಸರಿ ಸರಿ ಯಾವನೇ ಆಗಿರಲಿ ನಿಮಗೆ ಕಾಟ ಕೊಡೋವ್ರನ್ನ ನಾನು ಸುಮ್ಮನೆ ಬಿಡಲ್ಲ ಎಂದಿದ್ದಾನೆ. ಅಷ್ಟರಲ್ಲಿ, ಗೌಡನ ಅಪ್ಪನ ಹೆಸರು ಹೇಳಿದ್ದಾಳೆ. ಅಷ್ಟೊತ್ತಿಗೆ ಸಿದ್ದೇಗೌಡ ಹಿಂತಿರುಗಿ ನೋಡಿದ್ದಾನೆ. ಭಾವನಾಳೇ 'ಹುಡುಗಿ ತಾಯಿ' ಅನ್ನೋ ಸತ್ಯ ಸಿದ್ದೇಗೌಡ್ರಿಗೂ ಗೊತ್ತಾಗಿದೆ!

IPL_Entry_Point