ಕನ್ನಡ ಸುದ್ದಿ  /  ಮನರಂಜನೆ  /  Lakshmi Nivasa Serial: ಪತ್ನಿ ಜಾಹ್ನವಿ ಮನೆಯಲ್ಲಿ ಕದ್ದು ಕೇಳಿಸಿಕೊಳ್ಳುವ ಕೆಲಸಕ್ಕಿಳಿದ ಜಯಂತ್‌; ಶುರುವಾಯ್ತು ಹೊಸ ಅನುಮಾನ

Lakshmi Nivasa Serial: ಪತ್ನಿ ಜಾಹ್ನವಿ ಮನೆಯಲ್ಲಿ ಕದ್ದು ಕೇಳಿಸಿಕೊಳ್ಳುವ ಕೆಲಸಕ್ಕಿಳಿದ ಜಯಂತ್‌; ಶುರುವಾಯ್ತು ಹೊಸ ಅನುಮಾನ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಯುಗಾದಿ ಹಬ್ಬದ ನಿಮಿತ್ತ ಜಾಹ್ನವಿ ಜತೆಗೆ ಆಕೆಯ ಮನೆಗೆ ತೆರಳಿದ್ದಾನೆ ಜಯಂತ್.‌ ಎಲ್ಲರ ಜತೆಗೆ ಖುಷಿ ಖುಷಿಯಾಗಿಯೇ ಸಮಯ ಕಳೆದಿದ್ದಾನೆ. ಈ ನಡುವೆ ಜಾಹ್ನವಿ ಮೇಲೆ ಜಯಂತನಿಗೆ ಹೊಸ ಅನುಮಾನವೊಂದು ಕಾಡತೊಡಗಿದೆ. ಅದಕ್ಕಾಗಿ ಮರೆಯಲ್ಲಿಯೇ ನಿಂತು ಆಕೆಯ ಮಾತುಗಳನ್ನು ಕೇಳುತ್ತಿದ್ದಾನೆ.

Lakshmi nivasa Serial: ಪತ್ನಿ ಜಾಹ್ನವಿ ಮನೆಯಲ್ಲಿ ಕದ್ದು ಕೇಳಿಸಿಕೊಳ್ಳುವ ಕೆಲಸಕ್ಕಿಳಿದ ಜಯಂತ್‌; ಶುರುವಾಯ್ತು ಹೊಸ ಅನುಮಾನ
Lakshmi nivasa Serial: ಪತ್ನಿ ಜಾಹ್ನವಿ ಮನೆಯಲ್ಲಿ ಕದ್ದು ಕೇಳಿಸಿಕೊಳ್ಳುವ ಕೆಲಸಕ್ಕಿಳಿದ ಜಯಂತ್‌; ಶುರುವಾಯ್ತು ಹೊಸ ಅನುಮಾನ

Lakshmi nivasa Serial: ಲಕ್ಷ್ಮೀ ಶ್ರೀನಿವಾಸನ ಕುಟುಂಬದಲ್ಲೀಗ ಯುಗಾದಿಯ ಸಂಭ್ರಮ. ಕೂಡು ಕುಟುಂಬವೀಗ ಹಬ್ಬದ ಖುಷಿಯಲ್ಲಿದೆ. ಮದುವೆಯಾಗಿ ಹೋದ ಮಗಳು ಜಾಹ್ನವಿ ಮತ್ತು ಅಳಿಯ ಜಯಂತ್‌ ಮೊದಲ ಸಲ ಹಬ್ಬಕ್ಕೆಂದು ಮನೆಗೆ ಬಂದಿದ್ದಾರೆ. ಒಂದು ರೀತಿ ಇಡೀ ಮನೆ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ. ಹೊಸ ಅಳಿಯನ ಚಾಕರಿಯಲ್ಲಿ ತೊಡಗಿಸಿಕೊಂಡಿದ್ದಾರೆ ಮನೆ ಮಂದಿ. ಇನ್ನು ಯುಗಾದಿ ಅಂದರೆ ಬರೀ ಬೇವು ಬೆಲ್ಲ ಸವಿಯುವುದಷ್ಟೇ ಅಲ್ಲ ಎಣ್ಣೆ ಸ್ನಾನವೂ ಅಷ್ಟೇ ಮಹತ್ವದ್ದು. ಅದೂ ಕೂಡ ಇಲ್ಲಿ ಜರುಗಿದೆ.

ಟ್ರೆಂಡಿಂಗ್​ ಸುದ್ದಿ

ಲಕ್ಷ್ಮೀ ನಿವಾಸದಲ್ಲಿ ಯುಗಾದಿ ಸಂಭ್ರಮ

ಎಲ್ಲರೂ ಅವರವರ ಪತಿಯ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದ್ದಾರೆ. ಜಾಹ್ನವಿ ಸಹ ಪತಿ ಜಯಂತ್‌ಗೆ ಸೀಗೆಕಾಯಿ ಪುಡಿ ಹಚ್ಚಿ ಎಣ್ಣೆ ಸ್ನಾನ ಮಾಡಿಸಿದ್ದಾಳೆ. ಜಯಂತ್‌ಗೂ ಇದು ಹೊಸದು. ಅಪ್ಪ ಅಮ್ಮ ಇಲ್ಲದೆ ಬೆಳೆದ ಆತನಿಗೆ ಈ ಸಂಪ್ರದಾಯ, ಆಚಾರ ವಿಚಾರವೂ ಅಷ್ಟಕಷ್ಟೇ. ಆದರೆ, ಜಾಹ್ನವಿ ಸಲುವಾಗಿ ಹಬ್ಬಕ್ಕೆ ತಯಾರಾಗುತ್ತಿದ್ದಾನೆ. ಬಳಿಕ ಎಲ್ಲರೂ ದೇವರ ಮುಂದೆ ನಿಂತು ಪೂಜೆ ಮಾಡಿ ಬೇವು ಬೆಲ್ಲ ಸವಿದಿದ್ದಾರೆ. ಖುಷಿ ಖುಷಿಯಲ್ಲಿಯೇ ಹಬ್ಬ ಮಾಡಿದ್ದಾರೆ.

ಅಮ್ಮನ ಜತೆ ಮಾತನಾಡಲು ಪತಿಯ ಪರ್ಮಿಷನ್

ಇನ್ನು ಹುಟ್ಟಿದ ಮನೆಗೆ ಜಾಹ್ನವಿ ಬಂದಿದ್ದಾಳೆ. ಎಲ್ಲರ ಜತೆಗೆ ಪಟಪಟ ಅಂತ ಮಾತನಾಡುವ ಜಾಹ್ನವಿ ಅದ್ಯಾಕೋ ಅಕ್ಕ‌ ಖುಷಿ ಬಳಿ ಮಾತನಾಡಿರಲಿಲ್ಲ. ಅದಕ್ಕಾಗಿಯೇ, ಪತಿ ಜಯಂತ್‌ ಬಳಿ ಬಂದು, ನಾನು ಅಪ್ಪ ಅಮ್ಮನ ಜತೆಗೆ ಇನ್ನಷ್ಟು ಹೊತ್ತು ಮಾತನಾಡಿ ಬರ್ತಿನಿ. ಅದೇ ರೀತಿ ಖುಷಿ ಅಕ್ಕನ ಜತೆಗೆ ಇವತ್ತು ಮಲಗ್ತೀನಿ. ಅಕ್ಕನ ಜತೆ ತುಂಬ ದಿನ ಆಯ್ತು ಸರಿಯಾಗಿ ಮಾತನಾಡಿಲ್ಲ. ಇವತ್ತು ಅವಳ ಜತೆ ಕಾಲ ಕಳೀತಿನಿ ಎಂದಿದ್ದಾಳೆ. ಇದಕ್ಕೆ ಜಯಂತ್‌, ಕೊಂಚ ಬೇಸರದಲ್ಲಿಯೇ ಅಯ್ಯೋ ಹೋಗಿ ಅದರಲ್ಲೇನಿದೆ ಎಂದಿದ್ದಾನೆ.

ಶುರುವಾಯ್ತು ಜಯಂತನ ಹೊಸ ಅನುಮಾನ‌

ಇತ್ತ ಜಾಹ್ನವಿ ಪತಿಯ ಅನುಮತಿ ಪಡೆದು ಅಕ್ಕನ ಜತೆ ಮಲಗಲು ಹೋಗಿದ್ದಾಳೆ. ಆಕೆ ಹೋಗುತ್ತಿದ್ದಂತೆ, ಇವಳು ಇವರ ಅಪ್ಪ ಅಮ್ಮನ ಹತ್ತಿರವೋ ಅಥವಾ ಇವರ ಅಕ್ಕನ ಹತ್ತಿರ ಹೋಗಿ ಮನೆಯಲ್ಲಿ ನಡೆಯುವ ವಿಷಯ ಹೇಳಿಬಿಟ್ರೆ? ಇಡೀ ಮನೆಯಲ್ಲಿ ನಾನೊಬ್ಬಳೇ ಇರ್ತಿನಿ, ಡೋರ್‌ ಲಾಕ್‌ ಮಾಡಿಕೊಂಡು ಹೋಗ್ತಾರೆ. ಅಲ್ಯಾರು ಇರೋದೇ ಇಲ್ಲ ಎಂದರೆ ಖಂಡಿತ ಅವರಿಗೆ ಅನುಮಾನ ಬರುತ್ತೆ. ಇತ್ತ ಬಾಗಿಲು ಬಳಿ ನಿಂತು ಜಾಹ್ನವಿಯ ಮಾತು ಕೇಳುತ್ತಿದ್ದಾನೆ ಜಯಂತ್.‌ ಅಪ್ಪ ಅಮ್ಮನ ಮುಂದೆ ಪತಿಯ ಗುಣಗಾನ ಮಾಡಿದ್ದಾಳೆ.

ಖುಷಿಯ ಮನೆ ಬಾಗಿಲ ಬಳಿಯೂ ನಿಂತ ಜಯಂತ್

ಅಮ್ಮನ ಮಡಿಲಲ್ಲಿ ಮಲಗಿದ್ದಾಳೆ. ಇದನ್ನೂ ಜಯಂತ್‌ ನೋಡಿದ್ದಾನೆ. ನನ್ನ ಜತೆ ಯಾವತ್ತೂ ಈ ರೀತಿ ಮಲಗೇ ಇಲ್ವಲ್ಲ. ಅಪ್ಪ ಅಮ್ಮನ ಜತೆ ಇಷ್ಟೊಂದು ಬಾಂಡಿಂಗ್‌ ಇದೆಯಾ ಎಂದೂ ಮನದಲ್ಲೇ ಮಾತನಾಡಿಕೊಂಡಿದ್ದಾನೆ ಜಯಂತ್. ಆದ್ರೂ ಆ ಮನೆ ಒಂದು ರೀತಿ ಭದ್ರಕೋಟೆ ಇದ್ದಂಗಿದೆ ಎಂದೂ ಹೇಳಿದ್ದಾಳೆ. ನಗುಮೊಗದಲ್ಲೇ ಪತಿ ಮತ್ತು ಅತ್ತೆ ಮಾವನ ಮಾತನ್ನು ಮರೆಯಲ್ಲಿ ನಿಂತು ಕೇಳಿ ಸಮಾಧಾನಪಟ್ಟುಕೊಂಡಿದ್ದಾನೆ. ಅದಾದ ಬಳಿಕ ಅಕ್ಕ ಖುಷಿಯ ಬಳಿಯೂ ತೆರಳಿದ್ದಾಳೆ. ಅಲ್ಲಿಯೂ ಇಬ್ಬರೂ ಮಾತು ಕೇಳಿಸಿಕೊಂಡಿದ್ದಾನೆ.

IPL_Entry_Point