ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ಬಾರಮ್ಮ ನಟ ಶಮಂತ್ ಬ್ರೋ ಗೌಡ-ಮೇಘನಾ; ಮದುವೆಯಲ್ಲಿ ಸ್ಟಾರ್ ನಟಿನಟರು ಭಾಗಿ
ಕನ್ನಡ ಕಿರುತೆರೆ ನಟ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಘನಾ ಜತೆ ಇವರ ಶುಭ ವಿವಾಹ ನಡೆದಿದೆ. ತಾವು ಪ್ರೀತಿಸಿದ ಯುವತಿ ಜತೆ ಕುಟುಂಬದ ಒಪ್ಪಿಗೆ ಪಡೆದು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಕನ್ನಡ ಕಿರುತೆರೆ ನಟ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಘನಾ ಜತೆ ಇವರ ಶುಭ ವಿವಾಹ ನಡೆದಿದೆ. ತಾವು ಪ್ರೀತಿಸಿದ ಯುವತಿ ಜತೆ ಕುಟುಂಬದ ಒಪ್ಪಿಗೆ ಪಡೆದು ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಶಮಂತ್ ಬ್ರೋ ಗೌಡ ಹಾಗೂ ಮೇಘನಾಗೆ ಶುಭ ಹಾರೈಸಲು ಕಿರುತೆರೆ, ಸಿನಿಮಾ ನಟರು, ನಟಿಯರು ಆಗಮಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಧು ವರ ಮದುವೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ. ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಶಮಂತ್ ಅವರ ಬಿಗ್‌ಬಾಸ್ ಮತ್ತು ಸೀರಿಯಲ್ ಗೆಳೆಯರು, ಗೆಳತಿಯರು ನಿನ್ನೆ ಆಗಮಿಸಿದ್ದರು. ಬಿಗ್‌ಬಾಸ್‌ನ ನವಾಜ್ ನಟಿ ಮೌನ ಗುಡ್ಡೆಮನೆ, ಬಾಲನಟ ಗುಂಡಣ್ಣ ನಿಹಾರ್, ಅಮೃತ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.
ಶಮಂತ್ ಬ್ರೋ ಗೌಡ-ಮೇಘನಾ ಲವ್ ಸ್ಟೋರಿ
ಶಮಂತ್ ಬ್ರೋ ಗೌಡ-ಮೇಘನಾ ಲವ್ ಸ್ಟೋರಿ ಬಗ್ಗೆ ಸಾಕಷ್ಟು ಜನರಿಗೆ ಕುತೂಹಲ ಇರಬಹುದು. ಮೆಘನಾ ಮೂಲತಃ ಸಿನಿಮಾ ಅಥವಾ ಸೀರಿಯಲ್ ಫೀಲ್ಡ್‌ನವರು ಅಲ್ಲ. ಕಾಲೇಜು ಕಾರ್ಯಕ್ರಮವೊದಕ್ಕೆ ಶಮಂತ್ ಬ್ರೋ ಗೌಡ ಅತಿಥಿಯಾಗಿ ಆಗಮಿಸಿದ್ದರು. ಅಲ್ಲಿ ಅವರಿಗೆ ಮೇಘನಾ ಅವರ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿತ್ತು. ಸ್ನೇಹ ಪ್ರೀತಿಯಾಗಿತ್ತು. ಪ್ರೀತಿ ಈಗ ಮದುವೆಯಾಗಿದೆ.
ಶಮಂತ್ ಬ್ರೋ ಗೌಡ ಮೂಲ ಹೆಸರು ಶಮಂತ್ ಹಿರೇಮಠ. ಇವರು ಉತ್ತರ ಕರ್ನಾಟಕದವರು. ಮೇಘನಾ ಮರಾಠಿಗರು. ಇವರಿಬ್ಬರ ಕಡೆಯ ಶಾಸ್ತ್ರಗಳಂತೆ ಮದುವೆ ಕಾರ್ಯಕ್ರಮ ನಡೆದಿದೆ ಎಂದು ವರದಿಗಳು ತಿಳಿಸಿವೆ. ಬಿಗ್‌ಬಾಸ್ ಕನ್ನಡ ಸೀಸನ್ 8ರಲ್ಲಿ ಶಮಂತ್ ಮನೆಮಾತಾಗಿದ್ದರು. ಇದಾದ ಬಳಿಕ ಲಕ್ಷ್ಮಿ ಬಾರಮ್ಮ ಸೀರಿಯಲ್‌ನ ನಾಯಕ ಪಾತ್ರದಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. ಅಂದಹಾಗೆ, ಬಿಗ್‌ಬಾಸ್ ಕನ್ನಡದಲ್ಲಿ ಇವರು ಅತ್ಯುತ್ತಮವಾಗಿ ಆಡಿದ್ದರು. ಆದರೆ, ಆ ಸೀಸನ್‌ನಲ್ಲಿ ಮಂಜು ಪಾವಗಡ ಗೆಲುವು ಪಡೆದಿದ್ದರು.