Jyothi Rai: ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ವಿಡಿಯೊಗಳು ವೈರಲ್, ಸಾಮಾಜಿಕ ಮಾಧ್ಯಮಗಳಲ್ಲಿ ಇನ್‌ಫ್ಲುಯೆನ್ಸರ್‌ಗಳ ಕೆಟ್ಟ ಆಟ
ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳ ಮೂಲಕವೇ ಸದಾ ಸದ್ದು ಮಾಡುವ ಕರ್ನಾಟಕ ಮೂಲದ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಒಂದಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ಈ ವಿಚಾರ ಹೆಚ್ಚು ಸಂಚಲನ ಮೂಡಿಸುತ್ತಿದೆ.
ಬೆಂಗಳೂರು: ಮೂಲತಃ ಕನ್ನಡಿಗರೇ ಆದ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊಗಳು ಇದೀಗ ಹಲವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. 'ನಮ್ಮ ಯುಟ್ಯೂಬ್ ಚಾನೆಲ್‌ಗೆ ವಿಡಿಯೊ ಅಪ್‌ಲೋಡ್ ಮಾಡುತ್ತೇವೆ. ಬೇಗ ಲೈಕ್ / ಸಬ್‌ಸ್ಕ್ರೈಬ್ ಮಾಡಿ' ಎಂದು ಕೆಲವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ. ಹಾಸನದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಸಾವಿರಾರು ವಿಡಿಯೊ ವೈರಲ್ ಆದ ನಂತರ ತೀವ್ರ ಮುಜಗರಕ್ಕೆ ಒಳಗಾಗಿರುವ ಕರ್ನಾಟಕದಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೊಗಳು ಇದೀಗ ಚರ್ಚೆಯ ವಿಷಯವಾಗಿವೆ.
twitter.com/EDIT_BY_ABHI ಎನ್ನುವ ಟ್ವಿಟರ್ ಖಾತೆಯಲ್ಲಿ 'Now jyothi rai videos are leaked #PrajwalRevanna #jyothirai' (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್ ಮಾಡಲಾಗಿದೆ. ಇದೇ ಟ್ವಿಟರ್ ಖಾತೆಯಲ್ಲಿಯೇ ಜ್ಯೋತಿ ಅವರು ಸೀರೆ ಉಟ್ಟುಕೊಂಡಿರುವ ಚಿತ್ರದ ಜೊತೆಗೆ ಅವರು ಆಕ್ಷೇಪಾರ್ಹ ಭಂಗಿಯಲ್ಲಿರುವ ಚಿತ್ರವನ್ನೂ ಹಂಚಿಕೊಂಡು 'ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ' ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ವಾಟ್ಸಾಪ್‌ಗಳಲ್ಲಿಯೂ ಇಂಥದ್ದೇ ಸಂದೇಶಗಳು ಹರಿದಾಡುತ್ತಿವೆ.
ಇದೇ ಟ್ವಿಟರ್ ಖಾತೆಗೆ ರಿಪ್ಲೈ ಮಾಡಿರುವ ಹಲವರು, ಬೆಂಗಳೂರು ನಗರ ಪೊಲೀಸರಿಗೆ 'ದಯವಿಟ್ಟು ಗಮನಕೊಡಿ' ಎಂದು ಟ್ಯಾಗ್ ಮಾಡಿದ್ದಾರೆ. ಆದರೆ ಈವರೆಗೆ (ಮೇ 8, ಮಧ್ಯಾಹ್ನ 12) ಬೆಂಗಳೂರು ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕಾಮೆಂಟ್ ಮಾಡಿರುವ ಹಲವರು ವಿಡಿಯೊ ಹಂಚಿಕೊಳ್ಳುವಂತೆ, ಡೈರೆಕ್ಟ್ ಮೆಸೇಜ್‌ನಲ್ಲಿ ಕಳಿಸುವಂತೆ ಬೇಡಿಕೊಂಡಿರುವುದು ಮಾತ್ರ ಅಸಹ್ಯ ಹುಟ್ಟಿಸುವಂತಿದೆ. ಮಂಜು ನಿಡವಾಣಿ ಎನ್ನುವವರು ವಿಡಿಯೊದ ಲಿಂಕ್ ಇದೆ ಎನ್ನಲಾದ ಸ್ಕ್ರೀನ್‌ಶಾಟ್ ಅನ್ನೂ ರಿಪ್ಲೈ ಆಗಿ ಹಾಕಿದ್ದಾರೆ.
'ನಟಿ ತನ್ನ ಪತಿಯೊಂದಿಗೆ ಇರುವ ವಿಡಿಯೊ ತುಣುಕುಗಳನ್ನು ಹೀಗೆ ವೈರಲ್ ಮಾಡುವುದರ ಹಿಂದೆ ಎಂಥ ಕೆಟ್ಟ ಮನಸ್ಸು ಇರಬೇಕು? ಇಂಥವರಿಗೆ ಪೊಲೀಸರು ಸರಿಯಾಗಿ ಬುದ್ಧಿಕಲಿಸಬೇಕು. ಇಲ್ಲದಿದ್ದರೆ ಇಂಥವು ಹೆಚ್ಚಾಗುತ್ತವೆ' ಎಂದು ಹಲವರು ಒತ್ತಾಯಿಸಿದ್ದಾರೆ. ‘ಇದರಲ್ಲಿರುವುದು ಜ್ಯೋತಿ ರೈ ಅಲ್ಲ. ಮಾರ್ಫ್ ಮಾಡಲಾಗಿದೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಪ್ರಜ್ವಲ್ ಪ್ರಕರಣದ ನೆನಪು, ತೀವ್ರ ಆಕ್ರೋಶ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಬರೀ ಕರುನಾಡಿನಲ್ಲಿ ಮಾತ್ರವಲ್ಲ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಕೆಸರೆರಚಾಟದ ನಡುವೆ, ಅಚ್ಚರಿಯ ಹೊಸ ಹೊಸ ಬೆಳವಣಿಗೆಗಳೂ ಘಟಿಸುತ್ತಿವೆ. ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ, ಆರೋಪಿ ಪ್ರಜ್ವಲ್ ರೇವಣ್ಣ ಕಣ್ಮರೆಯಾಗಿದ್ದರೆ, ಇತ್ತ ಅಪಹರಣ ಸೇರಿ ಹಲವು ಕೃತ್ಯದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಎಚ್.ಡಿ ರೇವಣ್ಣ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಪಾಲಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ.
ಸ್ಯಾಂಡಲ್‌ವುಡ್ ಸಿನಿಮಾ ಮಂದಿ ಮಾತ್ರವಲ್ಲದೇ, ಸೌತ್‌ನ ಹಲವು ಕಲಾವಿದರು, ಬಾಲಿವುಡ್‌ನ ನಟಿಯರೂ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಧ್ವನಿ ಎತ್ತಿದ್ದಾರೆ. ಆಕೆಯ ಬಾಯಿಗೆ ಅನ್ನ ಹಾಕಿ, ಅದನ್ನಲ್ಲ ಎಂದು ನೇರವಾಗಿ ತಿವಿದಿದ್ದರು ತೆಲುಗಿನ ರಶ್ಮಿ ಗೌತಮ್. ಅಷ್ಟೇ ಅಲ್ಲ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಹ ಘಟನೆಯನ್ನು ವಿರೋಧಿಸಿದ್ದರು. ಒಂದು ವೇಳೆ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಸುಮ್ಮನೆ ಬಿಡುತ್ತಿದ್ರಾ? ಎಂದು ಪ್ರಶ್ನೆ ಮಾಡಿದ್ದರು. ನಟಿ ಹರ್ಷಿಕಾ ಪೂಣಚ್ಚ ಸುದೀರ್ಘ ಬರಹದ ಮೂಲಕ, ವಿಡಿಯೋದಲ್ಲಿ ಕಂಡವನಿಗೆ ಸಿಗುವ ಶಿಕ್ಷೆಯ ಪ್ರಮಾಣದಷ್ಟೇ ಇದನ್ನು ಹರಿಬಿಟ್ಟವನಿಗೂ ಸಿಗಬೇಕು ಎಂದಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಸಂಚಲನ
ಹೀಗೆ ಈ ಚರ್ಚೆಯ ಬೆನ್ನಲ್ಲೇ, ಕನ್ನಡ ಕಿರುತೆರೆ ಮತ್ತು ಪರಭಾಷೆಯ ಕಿರುತೆರೆಯಲ್ಲಿ ಗುರುತಿಸಿಕೊಂಡು, ಬೋಲ್ಡ್ ಫೋಟೋಗಳ ಮೂಲಕವೇ ಸೆನ್ಸೆಷನ್ ಸೃಷ್ಟಿಸುತ್ತಿರುವ ನಟಿ ಜ್ಯೋತಿ ರೈ ಸಹ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ ಚರ್ಚೆಯಲ್ಲಿರುವಾಗಲೇ, ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಜ್ಯೋತಿ ರೈ ಅವರದ್ದು ಎನ್ನಲಾದ ವಿಡಿಯೋ ತುಣುಕುಗಳು, ಫೋಟೋ ಕ್ಲಿಪ್ಪಿಂಗ್‌ಗಳು ಸಂಚಲನ ಸೃಷ್ಟಿ ಮಾಡುತ್ತಿವೆ. ಪುರುಷನ ಜತೆಗಿನ ಆಪ್ತ ದೃಶ್ಯಗಳ ವಿಡಿಯೋಗಳು ವೈರಲ್ ಆಗುತ್ತಿವೆ.
ಆಪ್ತ ದೃಶ್ಯಗಳು ವೈರಲ್
ಇತ್ತೀಚಿನ ಕೆಲ ವರ್ಷಗಳಿಂದ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಮಿನುಗುತ್ತಿದ್ದಾರೆ. ಬೋಲ್ಡ್ ಎನಿಸುವ ಫೋಟೋಗಳನ್ನೇ ಶೇರ್ ಮಾಡುತ್ತ, ತಮ್ಮ ಮೈಮಾಟ ಪ್ರದರ್ಶಿಸುತ್ತಿರುತ್ತಾರೆ. ಈಗ ಇದೇ ನಟಿಯ ಅಶ್ಲೀಲ ಮತ್ತು ನಗ್ನ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ಇವು ಜ್ಯೋತಿ ರೈ ಅವರದ್ದೇ ಫೋಟೋಗಳಾ? ಅಥವಾ ಮುಖವನ್ನು ಮಾರ್ಫ್ ಮಾಡಿ ಹರಿಬಿಟ್ಟ ವಿಡಿಯೋಗಳಾ ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸದ್ಯ ಎಲ್ಲೆಡೆ ಚರ್ಚೆಗೆ ಕಾರಣವಾಗಿರುವ ಈ ವಿಡಿಯೋಗಳ ಬಗ್ಗೆ ನಟಿ ಜ್ಯೋತಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪೂರ್ವಜ್ ಜತೆ ಎರಡನೇ ಮದುವೆ
ತೆಲುಗು ಕಿರುತೆರೆಯಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸುಕುಮಾರ್ ಪೂರ್ವಜ್, ಜತೆಗೆ ಜ್ಯೋತಿ ರೈ ಪ್ರೀತಿಯಲ್ಲಿ ಬಿದ್ದಿದ್ದರು. ಅದಾದ ಬಳಿಕ ಕಳೆದ ವರ್ಷವಷ್ಟೇ ತಮ್ಮಿಬ್ಬರ ನಡುವಿನ ಸಂಬಂಧವನ್ನು ಅಧಿಕೃತಗೊಳಿಸಿತ್ತು ಈ ಜೋಡಿ. ಅಂದಹಾಗೆ, ಜ್ಯೋತಿಗಿದು ಎರಡನೇ ಮದುವೆ. 20ನೇ ವಯಸ್ಸಿಗೆ ಪದ್ಮನಾಭ್ ಜತೆಗೆ ಜ್ಯೋತಿ ರೈ ವಿಬಾಹ ನೆರವೇರಿತ್ತು. ಒಂದಷ್ಟು ಕಾರಣಗಳಿಂದ ಈ ಜೋಡಿ ವಿಚ್ಛೇದನ ಪಡೆದು, ದೂರವಾಗಿತ್ತು. ಈ ದಂಪತಿಗೆ 11 ವರ್ಷದ ಮಗನೂ ಇದ್ದಾನೆ.