Seetha Rama Serial: ಕರುಳ ಬಂಧಕ್ಕೆ ಕಾನೂನಿನ ಉರುಳು; ಭಾರ್ಗವಿ ಬ್ರಹ್ಮಾಸ್ತ್ರಕ್ಕೆ ತಲೆ ಬಾಗಿದ್ರಾ ಸೀತಾ -ಸಿಹಿ?
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಕರುಳ ಬಂಧಕ್ಕೆ ಕಾನೂನಿನ ಉರುಳು; ಭಾರ್ಗವಿ ಬ್ರಹ್ಮಾಸ್ತ್ರಕ್ಕೆ ತಲೆ ಬಾಗಿದ್ರಾ ಸೀತಾ -ಸಿಹಿ?

Seetha Rama Serial: ಕರುಳ ಬಂಧಕ್ಕೆ ಕಾನೂನಿನ ಉರುಳು; ಭಾರ್ಗವಿ ಬ್ರಹ್ಮಾಸ್ತ್ರಕ್ಕೆ ತಲೆ ಬಾಗಿದ್ರಾ ಸೀತಾ -ಸಿಹಿ?

Seetha Rama Serial: ಭಾರ್ಗವಿಯ ಕುತಂತ್ರ ಫಲಿಸಿದೆ. ಸೀತಾಳನ್ನು ಕೊನೆಗೂ ಜೈಲಿಗೆ ಕಳಿಸುವಲ್ಲಿ ಗೆದ್ದು ಬೀಗಿದ್ದಾಳೆ. ಇತ್ತ ಸೀತಾ ಮಡಿಲಲ್ಲಿದ್ದ ಸಿಹಿ, ಶ್ಯಾಮ್-‌ ಶಾಲಿನಿ ದಂಪತಿ ಕೈ ಸೇರಿದ್ದಾಳೆ. ಹಾಗಾದರೆ, ರಾಮನ ಮುಂದಿನ ನಡೆ ಏನು?

Seetha Rama Serial: ಕರುಳ ಬಂಧಕ್ಕೆ ಕಾನೂನಿನ ಉರುಳು
Seetha Rama Serial: ಕರುಳ ಬಂಧಕ್ಕೆ ಕಾನೂನಿನ ಉರುಳು

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ವಿರುದ್ಧ ಕೇವಲ ಮೇಘಶ್ಯಾಮ್‌ ಮತ್ತು ಶಾಲಿನಿ ಮಾತ್ರ ತಿರುಗಿ ಬಿದ್ದಿಲ್ಲ. ಇತ್ತ ಭಾರ್ಗವಿಯೂ ಸೀತಾಳಿಗೆ ತಕ್ಕ ಶಾಸ್ತಿ ಮಾಡಬೇಕೆಂಬ ನಿಟ್ಟಿನಲ್ಲಿದ್ದಾಳೆ. ಇದೀಗ ಮುಂದುವರಿದು, ಸೀತಾಳನ್ನು ಜೈಲಿಗೆ ಕಳಿಸಲು ನಿಟ್ಟಿನಲ್ಲಿ ಇವರೆಲ್ಲರೂ ಸೇರಿ ಪ್ಲಾನ್‌ ಮಾಡಿದ್ದಾರೆ. ಆ ಪ್ಲಾನ್‌ನ ಸೂರ್ತಧಾರಿ ಭಾರ್ಗವಿ. ಈ ಪ್ಲಾನ್‌ ಸಕ್ಸಸ್‌ ಆಗಲು, ನೇರವಾಗಿ ಚಾಂದಿನಿ ಮತ್ತು ಶಾಲಿನಿಗೆ ಸಾಲು ಸಾಲು ಐಡಿಯಾ ಕೊಡುತ್ತಿದ್ದಾಳೆ ಭಾರ್ಗವಿ. ಅದರಂತೆ, ಭಾರ್ಗವಿ ಮಾತಿನ ಪ್ರಕಾರವೇ ಸಿಹಿ ಇದ್ದ ಕೋಣೆಯ ಲಾಕ್‌ ಓಪನ್‌ ಮಾಡಿಟ್ಟಿದ್ದಾರೆ.

ಹೀಗೆ ಬಾಗಿಲು ತೆರೆದು ಇಡುತ್ತಿದ್ದಂತೆ, ಇದನ್ನು ಗಮನಿಸಿದ ಸಿಹಿ, ಮನೆಯಲ್ಲಿನ ಯಾರ ಗಮನಕ್ಕೂ ಬಾರದಂತೆ, ನೇರವಾಗಿ ಸೀತಾ ಮತ್ತು ರಾಮನ ಬಳಿಗೆ ತೆರಳಿದ್ದಾಳೆ. ಸಿಹಿಯನ್ನು ನೋಡಲು ಸೀತಾ ಮತ್ತು ರಾಮ್‌ ಬರಬೇಕು ಎನ್ನುವಷ್ಟರಲ್ಲಿಯೇ, ಸಿಹಿಯೇ ಬಂದಿದ್ದನ್ನು ನೋಡಿ ಖುಷಿಯಲ್ಲಿದ್ದಾರೆ. ನಾನು ಆ ಮನೆಗೆ ಹೋಗಲ್ಲ ಸೀತಮ್ಮ. ಅಲ್ಲಿ ಊಟಕ್ಕೂ ಏನೂ ಇಲ್ಲ. ಆಟ ಆಡುವುದಕ್ಕೂ ಯಾರೂ ಇಲ್ಲ. ಎಲ್ಲರೂ ಬೈಯುತ್ತಾರೆ ಎಂದು ನೋವನ್ನು ಹೇಳಿಕೊಂಡಿದ್ದಾಳೆ. ಇತ್ತ ಭಾರ್ಗವಿಯ ಪ್ಲಾನ್‌ ವರ್ಕೌಟ್‌ ಆಗಿದೆ. ತಮ್ಮ ಪ್ಲಾನ್‌ನಂತೆ ಸಿಹಿ ಮನೆಯಿಂದ ಓಡಿಹೋಗಿ ಸೀತಾ ಮಡಿಲು ಸೇರಿದ್ದಾಳೆ.

ವರ್ಕೌಟ್‌ ಆಯ್ತು ಭಾರ್ಗವಿ ಪ್ಲಾನ್

ಸಿಹಿ ನಿಮ್ಮ ಕಣ್ಣು ತಪ್ಪಿಸಿ, ಸೀತಾಳ ಮಡಿಲು ಸೇರಬೇಕು. ಇಬ್ಬರೂ ಒಟ್ಟಿಗೆ ಇದ್ದಾಗಲೇ ನೀವು ನೇರವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿ. ಆಗ ಪೊಲೀಸರು ಬಂದು ಸೀತಾಳನ್ನು ಬಂಧಿಸಿ ಕರೆದೊಯ್ಯುತ್ತಾರೆ. ಆಗ ಸಿಹಿ ನಿಮ್ಮ ಜತೆಯಲ್ಲಿಯೇ ಇರ್ತಾಳೆ ಎಂದೂ ಶಾಲಿನಿ ಮತ್ತು ಚಾಂದಿನಿಗೆ ಭಾರ್ಗವಿ ಐಡಿಯಾ ಕೊಟ್ಟಿದ್ದಳು. ಆ ಪ್ಲಾನ್‌ ಪ್ರಕಾರವೇ ಇದೀಗ ನಡೆದಿದೆ. ಇತ್ತ ಮನೆಯಲ್ಲಿ ಸಿಹಿ ಕಾಣಿಸ್ತಿಲ್ಲ ಎಂದು ರಂಪಾಟ ಮಾಡಿ, ಶ್ಯಾಮ್‌ ಮುಂದೆಯೂ ಸೀತಾ ಸಿಹಿಯನ್ನು ಕರೆದೊಯ್ದಿದ್ದಾಳೆ ಎಂದು ಹೇಳಿದ್ದಾಳೆ. ಇಷ್ಟಾಗಿದ್ದೇ ತಡ ಸೀತಾಳ ಮನೆಗೆ ಪೊಲೀಸರ ಸಮೇತ ಬಂದಿದ್ದಾರೆ.

ಸೀತಾಳನ್ನು ಜೈಲಿಗೆ ಎಳೆದೊಯ್ದ ಪೊಲೀಸರು

ಸಿಹಿಯನ್ನು ಕರೆದೊಯ್ಯುವ ವಿಚಾರಕ್ಕೆ ಶ್ಯಾಮ್‌ ಮತ್ತು ರಾಮ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದೇ ವೇಳೆ ಅಲ್ಲೇ ಇದ್ದ ಅಶೋಕ್‌ ಸಹ ಶ್ಯಾಮ್‌ ವಿರುದ್ಧ ಗುಡುಗಿದ್ದಾನೆ. ಆತನ ಕೊರಳಪಟ್ಟಿ ಹಿಡಿದು ಆವಾಜ್‌ ಹಾಕಿದ್ದಾನೆ. ಇತ್ತ ಯಾರ ಮಾತನ್ನೂ ಕೇಳದ ಪೊಲೀಸರು ಸೀತಾಳನ್ನು ಕರೆದುಕೊಂಡು ಠಾಣೆಯತ್ತ ನಡೆದಿದ್ದಾರೆ. ರಾಮ್‌ ಸಹ ಏನೂ ತಿಳಿಯದಂತೆ ಮಂಕಾಗಿದ್ದಾನೆ. ಮತ್ತೊಂದು ಕಡೆ ಪ್ಲಾನ್‌ ಸಕ್ಸಸ್‌ ಆದ ಖುಷಿಯಲ್ಲಿ ಭಾರ್ಗವಿ ಹಾಲು ಕುಡಿದಷ್ಟು ಸಂತಸದಲ್ಲಿದ್ದಾಳೆ. ಮತ್ತೊಂದು ಕಡೆ ಸೀತಾ ಪೊಲೀಸ್‌ ಸ್ಟೇಷನ್‌ಗೆ ಹೋಗ್ತಿದ್ದಂತೆ, ಸಿಹಿಯನ್ನು ಒತ್ತಾಯದಿಂದ ಮನೆಗೆ ಕರೆದೊಯ್ಯಲು ಶ್ಯಾಮ್‌ ಶಾಲಿನಿ ಹರಸಾಹಸಪಟ್ಟಿದ್ದಾರೆ. ರಾಮನ ಮುಂದಿನ ನಡೆ ಏನು? ಭಾರ್ಗವಿ ತಂತ್ರ ಫಲಿಸಿತಾ?

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner