Kannada Serial TRP: ಅಗ್ರಸ್ಥಾನದಲ್ಲಿದ್ದ ಸೀರಿಯಲ್‌ನ ಬುಡ ಅಲುಗಾಡಿಸಿತು ಆ ಧಾರಾವಾಹಿ; ಟಿಆರ್‌ಪಿಯಲ್ಲಿ ಸೀತಾ ರಾಮನಿಗೂ ಬಹುಪರಾಕ್‌
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಅಗ್ರಸ್ಥಾನದಲ್ಲಿದ್ದ ಸೀರಿಯಲ್‌ನ ಬುಡ ಅಲುಗಾಡಿಸಿತು ಆ ಧಾರಾವಾಹಿ; ಟಿಆರ್‌ಪಿಯಲ್ಲಿ ಸೀತಾ ರಾಮನಿಗೂ ಬಹುಪರಾಕ್‌

Kannada Serial TRP: ಅಗ್ರಸ್ಥಾನದಲ್ಲಿದ್ದ ಸೀರಿಯಲ್‌ನ ಬುಡ ಅಲುಗಾಡಿಸಿತು ಆ ಧಾರಾವಾಹಿ; ಟಿಆರ್‌ಪಿಯಲ್ಲಿ ಸೀತಾ ರಾಮನಿಗೂ ಬಹುಪರಾಕ್‌

ಈ ವಾರದ ಕನ್ನಡ ಕಿರುತೆರೆಯ ಧಾರಾವಾಹಿಗಳ ಟಿಆರ್‌ಪಿಯಲ್ಲಿ ಸಾಕಷ್ಟು ಏರಿಳಿತಗಳು ಘಟಿಸಿವೆ. ಮೊದಲ ಸ್ಥಾನದಲ್ಲಿದ್ದ ಧಾರಾವಾಹಿ ಮೂರನೇ ಸ್ಥಾನಕ್ಕೆ ಕುಸಿದರೆ, ಹೊಸ ಸೀರಿಯಲ್‌ ಎರಡನೇ ಸ್ಥಾನ ಅಲಂಕರಿಸಿದೆ.

Kannada Serial TRP: ಅಗ್ರಸ್ಥಾನದಲ್ಲಿದ್ದ ಸೀರಿಯಲ್‌ನ ಬುಡ ಅಲುಗಾಡಿಸಿತು ಆ ಧಾರಾವಾಹಿ; ಟಿಆರ್‌ಪಿಯಲ್ಲಿ ಸೀತಾ ರಾಮನಿಗೂ ಬಹುಪರಾಕ್‌
Kannada Serial TRP: ಅಗ್ರಸ್ಥಾನದಲ್ಲಿದ್ದ ಸೀರಿಯಲ್‌ನ ಬುಡ ಅಲುಗಾಡಿಸಿತು ಆ ಧಾರಾವಾಹಿ; ಟಿಆರ್‌ಪಿಯಲ್ಲಿ ಸೀತಾ ರಾಮನಿಗೂ ಬಹುಪರಾಕ್‌

Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್‌ಗಳಿಗೆ ನೋಡುಗ ಆಕರ್ಷಿತನಾಗುತ್ತಿದ್ದಾನೆ. ಹಾಗಂತ, ಹಳೇ ಸೀರಿಯಲ್‌ಗಳ ಖದರ್‌ ಕಡಿಮೆ ಆಗಿಲ್ಲ. ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಟಕ್ಕರ್‌ ಕೊಡುತ್ತಿದ್ದಾರೆ. ಈ ನಡುವೆ ಈ ವಾರದ (ಜುಲೈ 3ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ? ಇಲ್ಲಿ ನೋಡೋಣ.

ಪುಟ್ಟಕ್ಕನ ಮಕ್ಕಳು

ಉಮಾಶ್ರೀ ಮಂಜು ಭಾಷಿಣಿ ಮುಖ್ಯಭೂಮಿಕೆಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರವೂ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಬಂಗಾರಮ್ಮನ ಬದಲಿಗೆ ಸಿಂಗಾರಮ್ಮನ ಆಗಮನವಾಗಿದ್ದು, ನೋಡುಗರನ್ನು ಕುತೂಹಲಕ್ಕೆ ದೂಡಿದೆ. ಮತ್ತೊಂದು ಕಡೆ ಸಹನಾಳ ಸುಳಿವೂ ವಿದೇಶಿ ಯೂಟ್ಯೂಬರ್‌ನಿಂದ ಪುಟ್ಟಕ್ಕನಿಗೆ ಸಿಗುವ ಸೂಚನೆಯೂ ಸಿಕ್ಕಿದೆ.

ಶ್ರಾವಣಿ ಸುಬ್ರಮಣ್ಯ

ಅಪ್ಪ ಮಗಳ ನಡುವಿನ ಮುನಿಸು ಮತ್ತೆ ಅಪ್ಪನ ಮೇಲಿನ ಅತಿಯಾದ ಪ್ರೀತಿಯ ಕಥೆಯೇ ಶ್ರಾವಣಿ ಸುಬ್ರಮಣ್ಯ. ಈ ಧಾರಾವಾಹಿ ಶುರುವಾದಾಗಿನಿಂದ ನೋಡುಗರ ಪ್ರೀತಿ ಗಿಟ್ಟಿಸಿಕೊಳ್ಳುತ್ತಲೇ ಬಂದಿದೆ. ಅದರಂತೆ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದ ಈ ಸೀರಿಯಲ್‌ ಈ ವಾರ ಏಕಾಏಕಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಕಳೆದ ವಾರ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಜತೆಗೆ ಮೊದಲ ಸ್ಥಾನ ಹಂಚಿಕೊಂಡಿದ್ದ ಲಕ್ಷ್ಮೀ ನಿವಾಸವನ್ನು ಹಿಂದಿಕ್ಕಿದೆ ಈ ಧಾರಾವಾಹಿ.

ಲಕ್ಷ್ಮೀ ನಿವಾಸ

ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಪ್ರತಿಸ್ಪರ್ಧಿ ಎಂದರೆ ಅದು ಲಕ್ಷ್ಮೀ ನಿವಾಸ ಮಾತ್ರ. ಇಂದಿಗೂ ಅದು ಪುಟ್ಟಕ್ಕನ ಮಕ್ಕಳು ಜತೆಗೆ ಸಮಬಲದ ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ ಈ ವಾರ ಅದ್ಯಾಕೋ ಕೊಂಚ ಟಿಆರ್‌ಪಿಯಲ್ಲಿ ಇಳಿಮುಖ ಕಂಡಿದೆ. ಮೊದಲ ಸ್ಥಾನದಿಂದ ನೇರವಾಗಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಸೀತಾ ರಾಮ

ಕಳೆದೊಂದು ವಾರವಿಡೀ ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ರಾಮರ ಮದುವೆಯ ಸಂಭ್ರಮ ಜೋರಾಗಿತ್ತು. ಇದೀಗ ಸೀತಾ ಜತೆಗೆ ಸಿಹಿಯೂ ಮನೆ ಪ್ರವೇಶಿಸಿದ್ದಾಳೆ. ಭಾರ್ಗವಿಯೂ ಒಳಗೊಳಗೇ ಷಡ್ಯಂತ್ರ ರೂಪಿಸುತ್ತಿದ್ದಾಳೆ. ಒಟ್ಟಾರೆ ಮದುವೆ ಸಂಭ್ರಮವೇ ಈ ವಾರ ಸೀತಾ ರಾಮನಿಗೆ ಪ್ಲಸ್‌ ಆಗಿದೆ. ಟಿಆರ್‌ಪಿಯಲ್ಲಿಯೂ ನಾಲ್ಕನೇ ಸ್ಥಾನ ಪಡೆದರೂ, ಅರ್ಬನ್‌ ಏರಿಯಾದಲ್ಲಿ ಈ ಧಾರವಾಹಿಯದ್ದೇ ಪಾರಮ್ಯ.

ಲಕ್ಷ್ಮೀ ಬಾರಮ್ಮ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಹ ನೋಡುಗರರಿಗೆ ಅಚ್ಚರಿಗಳ ಗುಚ್ಛವನ್ನೇ ಉಣಬಡಿಸುತ್ತಿದೆ. ಈ ಸೀರಿಯಲ್‌ ಟಿಆರ್‌ಪಿ ಲೆಕ್ಕಾಚಾರದಲ್ಲಿ ಈ ವಾರ ಐದನೇ ಸ್ಥಾನದಲ್ಲಿದೆ. ಇವು ಈ ವಾರದ ಟಾಪ್‌ ಐದು ಸೀರಿಯಲ್‌ಗಳ ಟಿಆರ್‌ಪಿ ಅಂಕಿಅಂಶ.

Whats_app_banner