Kannada Serial TRP: ಹೊಸಬರಾದ್ರೂ ಬರಲಿ, ಹಳಬರಾದ್ರೂ ಇರಲಿ ಟಿಆರ್‌ಪಿ ರೇಸ್‌ನಲ್ಲಿ ಈ ಧಾರಾವಾಹಿಯನ್ನ ದಾಟೋಕಾಗುತ್ತಾ?
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಹೊಸಬರಾದ್ರೂ ಬರಲಿ, ಹಳಬರಾದ್ರೂ ಇರಲಿ ಟಿಆರ್‌ಪಿ ರೇಸ್‌ನಲ್ಲಿ ಈ ಧಾರಾವಾಹಿಯನ್ನ ದಾಟೋಕಾಗುತ್ತಾ?

Kannada Serial TRP: ಹೊಸಬರಾದ್ರೂ ಬರಲಿ, ಹಳಬರಾದ್ರೂ ಇರಲಿ ಟಿಆರ್‌ಪಿ ರೇಸ್‌ನಲ್ಲಿ ಈ ಧಾರಾವಾಹಿಯನ್ನ ದಾಟೋಕಾಗುತ್ತಾ?

ಕನ್ನಡದ ಕಿರುತೆರೆ ಲೋಕದಲ್ಲಿ ಈ ವಾರ ಯಾವೆಲ್ಲ ಸೀರಿಯಲ್‌ಗಳು ಟಾಪ್‌ 10ರಲ್ಲಿವೆ? ಯಾವ ಸೀರಿಯಲ್‌ ಫಸ್ಟ್, ಯಾವುದು ಲಾಸ್ಟ್‌? ಇಲ್ಲಿದೆ Kannada Serial TRP ವಿವರ.

Kannada Serial TRP: ಹೊಸಬರಾದ್ರೂ ಬರಲಿ, ಹಳಬರಾದ್ರೂ ಇರಲಿ ಟಿಆರ್‌ಪಿ ರೇಸ್‌ನಲ್ಲಿ ಈ ಧಾರಾವಾಹಿಯನ್ನ ದಾಟೋಕಾಗುತ್ತಾ?
Kannada Serial TRP: ಹೊಸಬರಾದ್ರೂ ಬರಲಿ, ಹಳಬರಾದ್ರೂ ಇರಲಿ ಟಿಆರ್‌ಪಿ ರೇಸ್‌ನಲ್ಲಿ ಈ ಧಾರಾವಾಹಿಯನ್ನ ದಾಟೋಕಾಗುತ್ತಾ? (Images\ Zee5\ JioCinema)

Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವಿನ ಪೈಪೋಟಿ ತುಸು ಹೆಚ್ಚಾದಂತಿದೆ. ವೀಕ್ಷಕನನ್ನು ಸೆಳೆಯಲು ತರಹೇವಾರಿ ಸರ್ಕಸ್‌ ಮಾಡುತ್ತಿವೆ ಧಾರಾವಾಹಿ ತಂಡಗಳು. ಅದರಂತೆ, ಈ ವಾರದ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದೆ. ಹಾಗಾದರೆ ಟಾಪ್‌ 10 ಸೀರಿಯಲ್‌ಗಳು ಯಾವುವು? ಮೊದಲ ಸ್ಥಾನ ಯಾರಿಗೆ? ಇಲ್ಲಿದೆ ಮಾಹಿತಿ.

ಪುಟ್ಟಕ್ಕನ ಮಕ್ಕಳು

ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ಹತ್ರತ್ರ ಮೂರು ವರ್ಷಗಳಾಗುತ್ತ ಬಂತು. ಆರಂಭದಲ್ಲಿನ ಆ ಗಟ್ಟಿತನವನ್ನೇ ಇಂದಿಗೂ ಕಾಯ್ದುಕೊಂಡಿದೆ ಈ ಸೀರಿಯಲ್.‌ ಅದರ ಪರಿಣಾಮವೇ ಈ ಧಾರಾವಾಹಿ ಇಂದಿಗೂ ಟಿಆರ್‌ಪಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ.

ಲಕ್ಷ್ಮೀ ನಿವಾಸ

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುತ್ತ ಲಕ್ಷ್ಮೀ ನಿವಾಸ ಸೀರಿಯಲ್‌ನ ವಿಶೇಷತೆ ಏನೆಂದರೆ ಈ ಧಾರಾವಾಹಿ ಭರ್ಜರಿ ಒಂದು ಗಂಟೆಗಳ ಕಾಲ ನೋಡುಗರಿಗೆ ಮನರಂಜನೆ ನೀಡುತ್ತಿದೆ. ಹಲವು ಪದರಗಳಲ್ಲಿ ಸಾಗುವ ಈ ಕಥೆಯಲ್ಲಿ ಅಚ್ಚರಿಯ ಸಂಗತಿಗಳನ್ನು ನೋಡುಗರಿಗೆ ನೀಡುತ್ತಿದೆ. ಈ ಸೀರಿಯಲ್‌ ಟಿಆರ್‌ಪಿಯಲ್ಲಿ ಈ ವಾರ ಎಂದಿನಂತೆ ಎರಡನೇ ಸ್ಥಾನದಲ್ಲಿದೆ.

ಶ್ರಾವಣಿ ಸುಬ್ರಮಣ್ಯ

ಕಳೆದ ಕೆಲ ತಿಂಗಳಿಂದ ಜೀ ಕನ್ನಡದಲ್ಲಿ ಶುರುವಾಗಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌, ಸದ್ಯ ನೋಡುಗರ ಅಚ್ಚುಮೆಚ್ಚಿನ ಧಾರಾವಾಹಿ. ಅಪ್ಪನ ಪ್ರೀತಿ ಕಾಣದ ಮಗಳ ಕಥೆ- ವ್ಯಥೆ ಈ ಧಾರಾವಾಹಿಯ ಹೈಲೈಟ್.‌ ಈ ಸೀರಿಯಲ್‌ ಈ ವಾರ ಮೂರನೇ ಸ್ಥಾನದಲ್ಲಿದೆ.

ಸೀತಾ ರಾಮ

ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾ ಮತ್ತು ರಾಮನ ಮದುವೆ ಸಂಭ್ರಮ ನಡೆಯುತ್ತಿದೆ. ದೇಸಾಯಿ ಮನೆಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಈ ಧಾರಾವಾಹಿಯೂ ನೋಡುಗರ ಗಮನ ಸೆಳೆಯುತ್ತಿದೆ. ಅದರಂತೆ ಟಿಆರ್‌ಪಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಸೀತಾ ರಾಮ.

ಅಮೃತಧಾರೆ

ಇನ್ನು ಗೌತಮ್-‌ ಭೂಮಿಕಾ ಮಧ್ಯ ವಯಸ್ಕ ಜೋಡಿಯ ಅಮೃತಧಾರೆ ಸೀರಿಯಲ್‌ ಅನ್ನು ನೋಡುಗರು ಮೆಚ್ಚಿಕೊಂಡಿದ್ದಾರೆ. ಸೀರಿಯಲ್‌ ಶುರುವಾದಾಗಿನಿಂದಲೂ ವೀಕ್ಷಕರನ್ನು ಸೆಳೆದ ಈ ಸೀರಿಯಲ್‌ ಟಿಆರ್‌ಪಿಯಲ್ಲಿ ಹಿಂದೆ ಬಿದ್ದಿಲ್ಲ. ಈ ವಾರ ಐದನೇ ಸ್ಥಾನದಲ್ಲಿದೆ.

ರಾಮಾಚಾರಿ

ಇನ್ನು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುವ ರಾಮಾಚಾರಿ ನೋಡುಗರನ್ನು ಆಕರ್ಷಿಸಿದ ಮತ್ತೊಂದು ಸೀರಿಯಲ್.‌ ಕಲರ್ಸ್‌ ಕನ್ನಡದ ಸೀರಿಯಲ್‌ಗಳ ಪೈಕಿ ರಾಮಾಚಾರಿ ಸೀರಿಯಲ್‌ ಅತೀ ಹೆಚ್ಚು ಟಿಆರ್‌ಪಿ ಪಡೆದಿದೆ. ಈ ಸೀರಿಯಲ್‌ ಈ ವಾರ ಆರನೇ ಸ್ಥಾನದಲ್ಲಿದೆ.

ಶ್ರೀಗೌರಿ

ಅಮೂಲ್ಯ ಗೌಡ ಮುಖ್ಯಭೂಮಿಕೆಯಲ್ಲಿರುವ ಶ್ರೀಗೌರಿ ಧಾರಾವಾಹಿ ವೀಕ್ಷಕರು ಇಷ್ಟಪಟ್ಟ ಮತ್ತೊಂದು ಸೀರಿಯಲ್.‌ ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುವ ಈ ಧಾರಾವಾಹಿ ಈ ವಾರ ಏಳನೇ ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ

ಇನ್ನು ಸದಾ ಸುದ್ದಿಯಲ್ಲಿರುವ, ಮಹಿಳೆಯರ ಅಚ್ಚುಮೆಚ್ಚಿನ ಭಾಗ್ಯಲಕ್ಷ್ಮೀ ಧಾರಾವಾಹಿಯೂ ಟಿಆರ್‌ಪಿಯಲ್ಲಿ ಏರಿಳಿತ ಕಾಣುತ್ತಲೇ ಇರುತ್ತದೆ. ಟಾಪ್‌ ಐದರಲ್ಲಿಯೂ ಈ ಸೀರಿಯಲ್‌ ಈ ಹಿಂದೆ ಕಾಣಿಸಿತ್ತು. ಇದೀಗ ಈ ವಾರ ಎಂಟನೇ ಸ್ಥಾನದಲ್ಲಿದೆ.

ಲಕ್ಷ್ಮೀಬಾರಮ್ಮ

ಕಲರ್ಸ್‌ ಕನ್ನಡದ ಮತ್ತೊಂದು ಸೀರಿಯಲ್‌ ಲಕ್ಷ್ಮೀ ಬಾರಮ್ಮ ಸಹ ನೋಡುಗರ ಗಮನ ಸೆಳೆದಿದೆ. ಈ ಧಾರಾವಾಹಿ ಈ ವಾರ ಒಂಭತ್ತನೇ ಸ್ಥಾನದಲ್ಲಿದೆ.

Whats_app_banner