ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಹೊಸ ಧಾರಾವಾಹಿಯ ಕೈ ಹಿಡಿದ ವೀಕ್ಷಕ; ಈ ವಾರದ ಟಿಆರ್‌ಪಿಯಲ್ಲಿ ಯಾರು ಫಸ್ಟ್‌, ಯಾರು ಲಾಸ್ಟ್‌?

Kannada Serial TRP: ಹೊಸ ಧಾರಾವಾಹಿಯ ಕೈ ಹಿಡಿದ ವೀಕ್ಷಕ; ಈ ವಾರದ ಟಿಆರ್‌ಪಿಯಲ್ಲಿ ಯಾರು ಫಸ್ಟ್‌, ಯಾರು ಲಾಸ್ಟ್‌?

ಹೊಸ ಸೀರಿಯಲ್‌ ತಂಡಗಳು, ಹೊಸತನದ ಕಥೆಯ ಮೂಲಕವೇ ಎಲ್ಲರನ್ನು ಆಕರ್ಷಿಸುವ ಹಾದಿಯಲ್ಲಿವೆ. ಅದರಂತೆ ಇದೀಗ ಒಂದು ವಾರ ಕಳೆದಿದೆ. ಈ ವಾರದ ಆರಂಭದಲ್ಲಿ ಶುರುವಾದ ಸೀರಿಯಲ್‌ಗಳು ಮತ್ತು ಹಳೇ ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರವೂ ರಿವೀಲ್‌ ಆಗಿದೆ. ಹಾಗಾದರೆ, ಯಾರು ಫಸ್ಟ್‌ ಯಾರು ಲಾಸ್ಟ್‌? ಇಲ್ಲಿದೆ ಮಾಹಿತಿ.

Kannada Serial TRP: ಹೊಸ ಧಾರಾವಾಹಿಯ ಕೈ ಹಿಡಿದ ವೀಕ್ಷಕ; ಈ ವಾರದ ಟಿಆರ್‌ಪಿಯಲ್ಲಿ ಯಾರು ಫಸ್ಟ್‌, ಯಾರು ಲಾಸ್ಟ್‌?
Kannada Serial TRP: ಹೊಸ ಧಾರಾವಾಹಿಯ ಕೈ ಹಿಡಿದ ವೀಕ್ಷಕ; ಈ ವಾರದ ಟಿಆರ್‌ಪಿಯಲ್ಲಿ ಯಾರು ಫಸ್ಟ್‌, ಯಾರು ಲಾಸ್ಟ್‌?

Kannada Serial TRP: ಕನ್ನಡ ಕಿರುತೆರೆ ನೋಡುಗರನ್ನು ಹೊಸ ಹೊಸ ಸೀರಿಯಲ್‌ಗಳು ಸೆಳೆಯುತ್ತಿವೆ. ಹಳೇ ಸೀರಿಯಲ್‌ ಸಂಗ ಬಿಡದ ವೀಕ್ಷಕ, ಇದೀಗ ಶುರುವಾಗಿರುವ ಧಾರಾವಾಹಿಗಳಿಗೂ ಮಾರುಹೋಗಿದ್ದಾನೆ. ಹಳೇ ಸೀರಿಯಲ್‌ಗಳು ಎಂದಿನ ಕಥೆಯನ್ನು ಮತ್ತಷ್ಟು ರೋಚಕವಾಗಿ ನೋಡುಗನ ಎದೆಗಿಳಿಸುವ ಪ್ರಯತ್ನದಲ್ಲಿದ್ದರೆ, ಹೊಸ ಸೀರಿಯಲ್‌ ತಂಡಗಳು, ಹೊಸತನದ ಕಥೆಯ ಮೂಲಕವೇ ಎಲ್ಲರನ್ನು ಆಕರ್ಷಿಸುವ ಹಾದಿಯಲ್ಲಿವೆ. ಅದರಂತೆ ಇದೀಗ ಒಂದು ವಾರ ಕಳೆದಿದೆ. ಈ ವಾರದ ಆರಂಭದಲ್ಲಿ ಶುರುವಾದ ಸೀರಿಯಲ್‌ಗಳು ಮತ್ತು ಹಳೇ ಸೀರಿಯಲ್‌ಗಳ ಟಿಆರ್‌ಪಿ ಲೆಕ್ಕಾಚಾರವೂ ರಿವೀಲ್‌ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಹಾಗಾದರೆ, ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಧಾರಾವಾಹಿಗಳ್ಯಾವವು? ಯಾವ ಧಾರಾವಾಹಿಗೆ ವೀಕ್ಷಕನ ಬಹುಪರಾಕ್‌ ಸಿಕ್ಕಿದೆ? ಈ ವಾರ ಪ್ರಸಾರ ಆರಂಭಿಸಿದ ಸೀರಿಯಲ್‌ಗಳಾವವು? ಅವುಗಳ ಟಿಆರ್‌ಪಿ ಅಂಕಿ ಅಂಶವೇನು? ಇದೆಲ್ಲದರ ಮಾಹಿತಿ ಇಲ್ಲಿದೆ.

ಪುಟ್ಟಕ್ಕನ ಮಕ್ಕಳು

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡುಗರನ್ನು ರಂಜಿಸುತ್ತಲೇ ಬಂದಿದೆ. ಕಳೆದ ಎರಡು ವರ್ಷಗಳಿಂದ ಈ ಸೀರಿಯಲ್‌ ಟಿಆರ್‌ಪಿ ವಿಚಾರದಲ್ಲಿ ಟಾಪ್‌ನಲ್ಲಿಯೇ ಉಳಿದಿದ್ದೇ ಹೆಚ್ಚು. ಇತ್ತೀಚಿನ ಕೆಲ ವಾರಗಳಿಂದ ಚೂರು ಆಚೀಚೆಯಾದರೂ, ಪುಟ್ಟಕ್ಕನಿಗೆ ಮೊದಲ ಸ್ಥಾನವೇ ಫಿಕ್ಸ್‌! ಅದರಂತೆ ಈ ವಾರವೂ ಪುಟ್ಟಕ್ಕನ ಮಕ್ಕಳು ಧಾರಾವಾಹಿಯೇ ಮೊದಲ ಸ್ಥಾನದಲ್ಲಿದೆ. ಈ ಮೊದಲು ಎರಡಂಕಿ ಟಿಆರ್‌ಪಿ ಪಡೆದುಕೊಂಡಿದ್ದ ಈ ಸೀರಿಯಲ್, ಇದೀಗ ಮತ್ತೊಮ್ಮೆ ಆ ಗುರಿ ಮುಟ್ಟುವ ಸನಿಹದಲ್ಲಿದೆ. ಉಮಾಶ್ರೀ, ಮಂಜು ಭಾಷಿಣಿ ಈ ಸೀರಿಯಲ್‌ನ ಹೈಲೈಟ್.‌

ಲಕ್ಷ್ಮೀ ನಿವಾಸ

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಮತ್ತೊಂದು ಸೀರಿಯಲ್‌ ಲಕ್ಷ್ಮೀ ನಿವಾಸ. ಈ ಧಾರಾವಾಹಿಯೂ ವೀಕ್ಷಕರ ಮನಗೆದ್ದಿದೆ. ಆರಂಭದಿಂದಲೂ ಕಥೆಯ ವಿಚಾರದಲ್ಲಿ ಗಟ್ಟಿತನವನ್ನು ಕಾಪಾಡಿಕೊಂಡಿರುವ ಲಕ್ಷ್ಮೀ ನಿವಾಸ, ಇಂದಿಗೂ ಅದೇ ಕಾಯಕವನ್ನೇ ಮುಂದುವರಿಸಿದೆ. ಅದರಲ್ಲೂ ಸೈಕೋ ಜಯಂತನ ಮುಖವಾಡ ಅನಾವರಣವಾಗುತ್ತಿದ್ದಂತೆ, ನೋಡುಗನನ್ನು ಮತ್ತಷ್ಟು ಸೆಳೆಯುತ್ತಿದೆ ಈ ಸೀರಿಯಲ್.‌ ಇದೀಗ ಈ ಧಾರಾವಾಹಿ ಟಿಆರ್‌ಪಿ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದೆ.

ಶ್ರಾವಣಿ ಸುಬ್ರಮಣ್ಯ

ಇತ್ತೀಚೆಗಷ್ಟೇ ಶುರುವಾಗಿರುವ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಸಹ, ವೀಕ್ಷಕರನ್ನು ಸೆಳೆಯುತ್ತಿದೆ. ದೊಡ್ಡ ರಾಜಕಾರಣಿಯ ಅತ್ಯಾಪ್ತ ಸಹಾಯಕನ ಏಳುಬೀಳಿನ ಕಥೆ ಒಂದೆಡೆಯಾದರೆ, ಅಪ್ಪನನ್ನು ಅತಿಯಾಗಿ ಗೌರವಿಸೋ ಮಗಳಿಗೆ ಅದೇ ಅಪ್ಪನಿಂದ ಸಿಗದ ಪ್ರೀತಿಯೂ ಈ ಸೀರಿಯಲ್‌ನ ಹೈಲೈಟ್.‌ ಹೀಗೆ ಸಾಗುತ್ತಿರುವ ಈ ಸೀರಿಯಲ್‌ ಕಳೆದ ವಾರ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಇದೀಗ ಈ ವಾರವೂ ಅದೇ ಮೂರನೇ ಪ್ಲೇಸ್‌ನಲ್ಲಿಯೇ ಗಟ್ಟಿಯಾಗಿ ನಿಂತಿದೆ.

ಸೀತಾ ರಾಮ

ಸೀತಾ ರಾಮ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವುಗಳು ನೋಡುಗರನ್ನು ಸೆಳೆಯುತ್ತಿವೆ. ರಾಮ್‌ ಮತ್ತು ಸೀತಾ ಮದುವೆ ನಿಶ್ಚಿತಾರ್ಥ ಮುಗಿದಿದೆ. ರಾಮು ವೇಷಧರಿಸಿರುವ ಲಾಯರ್‌ ರುದ್ರಪ್ರತಾಪ್‌ ಮತ್ತು ಅಂಜಲಿ ಲವ್‌ಸ್ಟೋರಿ ಪ್ರಿಯಾಳ ಅಮ್ಮನಿಗೂ ಗೊತ್ತಾಗಿದೆ. ಮತ್ತೊಂದು ಮಗ್ಗುಲಲ್ಲಿ ಸೀತಾ ರಾಮನ ಮದುವೆ ಕೆಲಸಗಳೂ ನಡೆಯುತ್ತಿದ್ದು, ಭಾರ್ಗವಿಯ ಮೇಲೆ ಅಶೋಕನಿಗೆ ಒಂದಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹೀಗೆ ಸಾಗಿರುವ ಈ ಸೀರಿಯಲ್‌ ಈ ವಾರ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವಾರ ಈ ಸೀರಿಯಲ್‌ ಐದನೇ ಸ್ಥಾನದಲ್ಲಿತ್ತು.

ಅಮೃತಧಾರೆ

ಜೀ ಕನ್ನಡದ ಅಮೃತಧಾರೆ ಸೀರಿಯಲ್‌ ಸಹ ನೋಡುಗರ ಮನಗೆದ್ದಿದೆ. ಭೂಮಿಕಾ ಮತ್ತು ಡುಮ್ಮ ಸರ್‌ ಗೌತಮ್‌ ನಡುವಿನ ಪ್ರೀತಿ ಎಲ್ಲರ ಮನಗೆದ್ದಿದೆ. ಇಬ್ಬರ ನಡುವೆ ಮೊದಲ ರಾತ್ರಿಯೂ ಘಟಿಸಿ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ನಾವಿಬ್ಬರು ಒಂದಾಗಬಾರದೆಂಬ ಕಾರಣಕ್ಕೆ ಅತ್ತೆ ಶಕುಂತಲಾ ಆಡಿದ ಕಳ್ಳಾಟ ಭೂಮಿಕಾ ಗಮನಕ್ಕೂ ಬಂದಿದ್ದು, ಪರೋಕ್ಷವಾಗಿಯೇ ವಾರ್ನಿಂಗ್‌ ಕೊಟ್ಟಿದ್ದಾಳೆ. ಹೀಗೆ ಸಾಗಿರುವ ಈ ಸೀರಿಯಲ್‌ ಈ ವಾರ ಟಿಆರ್‌ಪಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು.

ನಿನಗಾಗಿ

ಕಲರ್ಸ್‌ ಕನ್ನಡದಲ್ಲಿ ಕಳೆದವಾರದಿಂದ ಶುರುವಾಗಿರುವ ದಿವ್ಯ ಉರುಡುಗ, ರಿತ್ವಿಕ್‌ ಮಠದ್‌ ಮುಖ್ಯಭೂಮಿಕೆಯಲ್ಲಿರುವ ನಿನಗಾಗಿ ಧಾರಾವಾಹಿಯೂ ನೋಡುಗರ ಮನಗೆದ್ದಿದೆ. ಅಷ್ಟೇ ಅಲ್ಲ, ಟಿಆರ್‌ಪಿಯಲ್ಲಿಯೂ ಈ ಸೀರಿಯಲ್‌ ಕಮಾಲ್‌ ಮಾಡಿದೆ. ಈ ವಿಚಾರವನ್ನು ಸ್ವತಃ ಕಲರ್ಸ್‌ ವಾಹಿನಿ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು. 6.3 ಟಿಆರ್‌ಪಿ ಗಿಟ್ಟಿಸಿಕೊಳ್ಳುವ ಮೂಲಕ ಮೊದಲ ವಾರವನ್ನು ಮುಗಿಸಿದೆ. ಇನ್ನುಳಿದಂತೆ ಕಲರ್ಸ್‌ ಕನ್ನಡದ ಶ್ರೀಗೌರಿ, ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ ಸೀರಿಯಲ್‌ಗಳೂ ನೋಡುಗರ ಗಮನ ಸೆಳೆದಿವೆಯಾದರೂ, ಹೆಚ್ಚು ವೀಕ್ಷಕರನ್ನು ಸೆಳೆಯುತ್ತಿಲ್ಲ.

ಟಿ20 ವರ್ಲ್ಡ್‌ಕಪ್ 2024