ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ಈ ವಾರ ಟಿಆರ್‌ಪಿಯಲ್ಲಿ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ? ಮೊದಲ ಸ್ಥಾನ ಯಾರಿಗೆ?

Kannada Serial TRP: ಈ ವಾರ ಟಿಆರ್‌ಪಿಯಲ್ಲಿ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ? ಮೊದಲ ಸ್ಥಾನ ಯಾರಿಗೆ?

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳ ಪೈಕಿ, ಈ ವಾರ ಯಾವ ಸೀರಿಯಲ್‌ಗಳು ಟಾಪ್‌ ಐದರಲ್ಲಿ ಸ್ಥಾನ ಪಡೆದಿವೆ. ಹೀಗಿದೆ ನೋಡಿ ವಿವರ.

Kannada Serial TRP: ಈ ವಾರ ಟಿಆರ್‌ಪಿಯಲ್ಲಿ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ? ಮೊದಲ ಸ್ಥಾನ ಯಾರಿಗೆ?
Kannada Serial TRP: ಈ ವಾರ ಟಿಆರ್‌ಪಿಯಲ್ಲಿ ಟಾಪ್‌ ಐದರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ? ಮೊದಲ ಸ್ಥಾನ ಯಾರಿಗೆ?

Kannada Serial TRP: ಕಿರುತೆರೆಯಲ್ಲಿ ನಿತ್ಯ ಸಾಕಷ್ಟು ಸೀರಿಯಲ್‌ಗಳು ಒಂದಿಲ್ಲೊಂದು ರೋಚಕ ಟ್ವಿಸ್ಟ್‌ಗಳ ಮೂಲಕ ವೀಕ್ಷಕನನ್ನು ಸೆಳೆಯುವ ತಂತ್ರ ರೂಪಿಸುತ್ತಲೇ ಇರುತ್ತವೆ. ನೋಡುಗನಿಗೆ ಹೊಸತು ಎನಿಸುವ, ಹಿಡಿದು ಕೂರಿಸುವ ವಿಚಾರಗಳನ್ನು ಟಿವಿ ಪರದೆಗೆ ತರುವ ಕಾಯಕ ಮುಂದುವರಿಸಿವೆ. ಹೀಗೆ ಪ್ರಸಾರ ಕಾಣುವ ಸೀರಿಯಲ್‌ಗಳಲ್ಲೂ ಪೈಪೋಟಿ ಸಹಜ. ಹಾಗಾದರೆ, ಸದ್ಯ ಟಿಆರ್‌ಪಿ ಪಟ್ಟಿಯಲ್ಲಿನ ಟಾಪ್‌ ಧಾರಾವಾಹಿಗಳ್ಯಾವವು?

ಟ್ರೆಂಡಿಂಗ್​ ಸುದ್ದಿ

ಪುಟ್ಟಕ್ಕನ ಮಕ್ಕಳು

ಸಹನಾ ಇಲ್ಲ ಅನ್ನೋ ಸತ್ಯವನ್ನು ಪುಟ್ಟಕ್ಕ ಒಪ್ಪಿಕೊಳ್ಳುತ್ತಿಲ್ಲ. ಆಕೆಯ ಹುಡುಕಾಟದ ಸಲುವಾಗಿಯೇ ಕಂಠಿ ಜತೆಗೆ ಬೆಂಗಳೂರು ಸುತ್ತಾಡಿ ಬಂದಿದ್ದಾಳೆ. ಆದರೂ, ಮಗಳು ಬದುಕಿದ್ದಾಳೆ ಅನ್ನೋ ಚಡಪಡಿಕೆ ಹೆತ್ತ ಜೀವದ್ದು. ಹೀಗೆ ಸಾಗಿರುವ ಈ ಕಥೆ ಸದ್ಯ ನೋಡುಗರನ್ನು ಸೆಳೆದಿದೆ, ಅದರಂತೆ, ಟಿಆರ್‌ಪಿಯಲ್ಲಿಯೂ ಈ ಸೀರಿಯಲ್‌ ಎಂದಿನಂತೆ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದೆ.

ಲಕ್ಷ್ಮೀ ನಿವಾಸ

ಜೀ ಕನ್ನಡದ ಮತ್ತೊಂದು ಸೀರಿಯಲ್‌ ಲಕ್ಷ್ಮೀ ನಿವಾಸ ವೀಕ್ಷಕರ ಮನಗೆದ್ದಿದೆ. ಹಲವು ಪದರಗಳಲ್ಲಿ ತೆರೆದುಕೊಂಡಿರುವ ಈ ಕಥೆ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಜಯಂತ್‌ ಜಾನ್ವಿ ಕಥೆ ಒಂದೆಡೆಯಾದರೆ, ಭಾವನಾ ಸಿದ್ದೇಗೌಡರ ಕಥೆ ಮತ್ತೊಂದು ಮಗ್ಗುಲಲ್ಲಿ ಸಾಗುತ್ತಿದೆ. ಹೀಗೆ ಸಾಗುತ್ತಿರುವ ಈ ಧಾರಾವಾಹಿ ಈ ವಾರ ಟಿಆರ್‌ಪಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ.

ಶ್ರಾವಣಿ ಸುಬ್ರಮಣ್ಯ

ಈಗಷ್ಟೇ ಶುರುವಾಗಿರುವ ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಸಹ ನೋಡುಗರಿಂದ ಪ್ರೀತಿ ಗಿಟ್ಟಿಸಿಕೊಳ್ಳುತ್ತಿದೆ. ಅಪ್ಪ ವೀರೇಂದ್ರ ಮೊದಲ ಸಲ ತನ್ನ ಮಾತನ್ನು ಪರಿಗಣಿಸಿರುವುದಕ್ಕೆ ಶ್ರಾವಣಿ ಖುಷಿಯಲ್ಲಿದ್ದಾಳೆ. ಕೆಲಸಗಾರರಿಗೂ ಬೋನಸ್‌ ಕೊಡುವ ನಿರ್ಧಾರ ಮಾಡಿದ್ದಾನೆ ವೀರು. ಹೀಗೆ ಸಾಗಿರುವ ಈ ಸೀರಿಯಲ್‌ ಈ ವಾರ ಮೂರನೇ ಸ್ಥಾನದಲ್ಲಿದೆ.

ಅಮೃತಧಾರೆ

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಸೀರಿಯಲ್‌ನಲ್ಲಿನ, ಭೂಮಿಕಾ ಮತ್ತು ಗೌತಮ್‌ ನಡುವಿನ ಪ್ರೀತಿ ಎಲ್ಲರ ಮನಗೆದ್ದಿದೆ. ಇವರಿಬ್ಬರು ಒಂದಾಗಬಾರದು ಎಂದು ಅತ್ತೆ ಶಕುಂತಲಾ ಶತಪ್ರಯತ್ನ ಪಡುತ್ತಿದ್ದಾಳಾದರೂ, ಒಂದಿಲ್ಲೊಂದು ಕಾರಣಕ್ಕೆ ಅದು ವಿಫಲವಾಗುತ್ತಿದೆ. ಹೀಗೆ ಸಾಗಿರುವ ಈ ಸೀರಿಯಲ್‌ ಈ ವಾರ ನಾಲ್ಕನೇ ಸ್ಥಾನದಲ್ಲಿದೆ.

ಸೀತಾ ರಾಮ

ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ರಾಮನ ನಿಶ್ಚಿತಾರ್ಥ ನೆರವೇರಿದೆ. ಇನ್ನೊಂದು ಕಡೆ, ಅಶೋಕನ ತಂಗಿ ಅಂಜಲಿಗೆ ತಾಳಿ ಕಟ್ಟಿದ್ದಾನೆ ರಾಮು ಎಂದು ಹೇಳಿಕೊಂಡ ರುದ್ರಪ್ರತಾಪ್.‌ ಭಾರ್ಗವಿಗೂ ಈ ಮದುವೆ ಭಯಹುಟ್ಟಿಸಿದೆ. ಹೀಗೆ ಸಾಗಿರುವ ಈ ಸೀರಿಯಲ್‌ ಈ ವಾರ ಐದನೇ ಸ್ಥಾನದಲ್ಲಿದೆ.

ಟಿ20 ವರ್ಲ್ಡ್‌ಕಪ್ 2024