Seetha Rama Serial: ಅಮ್ಮನ ಮುಂದೆ ಡಾಕ್ಟರ್ ಮೇಘಶ್ಯಾಮನ ಬಗ್ಗೆ ಬಾಯ್ಬಿಟ್ಟ ಸಿಹಿ, ಹೆಸರು ಕೇಳುತ್ತಿದ್ದಂತೆ ನಡುಗಿದ ಸೀತಾ!
ಬೋರ್ಡಿಂಗ್ ಸ್ಕೂಲ್‌ನಲ್ಲಿ ಆಪ್ತವಾದ ಡಾ. ಮೇಘಶ್ಯಾಮ್ ಬಗ್ಗೆ ಅಮ್ಮ ಸೀತಾಳ ಮುಂದೆ ಸಹಿ ಹೇಳಿದ್ದಾಳೆ. ಇತ್ತ ಮೇಘಶ್ಯಾಮ್ ಮಾತು ಕೇಳುತ್ತಿದ್ದಂತೆ ಸೀತಾ ನಡುಗಿದ್ದಾಳೆ. ಈ ಹಿಂದೆ ಅನಂತಲಕ್ಷ್ಮೀ ಹೆಸರು ಕೇಳಿದಾಗಲೂ ಸೀತಾ ಇದೇ ರೀತಿ ಪ್ರತಿಕ್ರಿಯಿಸಿದ್ದಳು.
Seetha Rama Serial: ಒಲ್ಲದ ಮನಸ್ಸಿನಿಂದಲೇ ಮಗಳನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸಿರುವ ಸೀತಾ ಮತ್ತು ರಾಮ ಕೊಂಚ ಬೇಸರದಲ್ಲಿದ್ದಾರೆ. ಅತ್ತ ಹೊಸ ಸ್ಕೂಲ್ ಸೇರಿರುವ ಸಿಹಿ ಸಹ ಹೊಸ ಸ್ನೇಹಿತರ ಜತೆಗೆ ಸೇರಿದ್ದಳಾದರೂ, ಮೊದಲನ ಖುಷಿ ಅವಳ ಮೊಗದಲ್ಲಿಲ್ಲ. ಅಪ್ಪ ಅಮ್ಮನನ್ನು ನೆನೆಪಿಸಿಕೊಂಡು ಕಣ್ಣೀರಾಗುತ್ತಿದ್ದಾಳೆ. ಇಷ್ಟು ದಿನ ಅಮ್ಮನ ಜತೆಗೆ ಹೆಚ್ಚು ಕಾಲ ಕಳೆದಿದ್ದ ಸಿಹಿಗೆ ಈಗಷ್ಟೇ ಅಪ್ಪನಾಗಿ ರಾಮ್ ಸಿಕ್ಕಿದ್ದ. ಅಪ್ಪನ ಪ್ರೀತಿ ಕಳೆದುಕೊಂಡಿದ್ದ ಸಿಹಿಗೆ ರಾಮ್ ತಂದೆ ಪ್ರೀತಿ ನೀಡಿದ್ದ. ಆದರೆ, ಆ ಪ್ರೀತಿ ಸಿಕ್ಕ ಕೆಲವೇ ದಿನಗಳಲ್ಲಿ ಇಡೀ ಕುಟುಂಬದಿಂದಲೇ ದೂರವಾಗಿದ್ದಾಳೆ ಸಿಹಿ.
ಹೀಗಿರುವಾಗಲೇ ಮೊದಲ ದಿನ ಶಾಲೆಗೆ ಬಂದ ಸಿಹಿಗೆ ಎಲ್ಲರೂ ಪರಿಚಯವಾಗಿದ್ದಾರೆ. ಹೊಸ ಸ್ನೇಹಿತರು ಸಿಕ್ಕಿದ್ದಾರೆ. ಜತೆಗೆ ಮೇಘಶ್ಯಾಮ್ ಅನ್ನೋ ಡಾಕ್ಟರ್ ಪರಿಚಯವೂ ಸಿಹಿಗಾಗಿದೆ. ಮೊದಲ ದಿನ ಏನೇನಾಯ್ತು ಅಂತ ಅಪ್ಪ ಅಮ್ಮನ ಜತೆಗೆ ಮಾತನಾಡುವ ಅವಕಾಶ ಸಿಹಿಗೆ ಸಿಕ್ಕಿತ್ತು. ಆಗ ಫೋನ್‌ನಲ್ಲಿ ತನ್ನ ಇಡೀ ದಿನದ ಬಗ್ಗೆ ಹೇಳಿಕೊಂಡಿದ್ದಾಳೆ. ಜತೆಗೆ ನನಗೆ ಊಟ ಸೇರುತ್ತಿಲ್ಲ. ರಾತ್ರಿ ನಿದ್ದೆ ಬರ್ತಿಲ್ಲ. ಫ್ರೆಂಡ್ಸ್ ಯಾರೂ ಇಲ್ಲ ಎಂದು ಅಪ್ಪ ರಾಮ್ ಮುಂದೆ ಹೇಳಿದ್ದಾಳೆ. ಜತೆಗೆ ಡಾಕ್ಟರ್ ಅಂಕಲ್ ಸಿಕ್ಕಿದ್ದಾರೆ. ಅವರು ತುಂಬ ಸ್ವೀಟ್ ಎಂದಿದ್ದಾಳೆ.
ಮೇಘಶ್ಯಾಮ ಹೆಸರು ಕೇಳಿ ನಡುಗಿದ ಸೀತಾ
ಇದೇ ವೇಳೆ ರಾಮ್ ಬಳಿಕ ಅಮ್ಮ ಸೀತಾಳ ಜತೆಗೂ ಸಿಹಿ ಮಾತನಾಡಿದ್ದಾಳೆ. ಅಮ್ಮನ ಮುಂದೆ ನೀವಿಬ್ಬರೂ ಖುಷಿಯಿಂದ ಇದ್ದೀರಲ್ವ? ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ, ಹ್ಞುಂ ನಾವಿಲ್ಲಿ ಖುಷಿಯಿಂದ ಇದ್ದೇವೆ ಎಂದಿದ್ದಾಳೆ ಸೀತಾ. ನೀನು ಸಮಯಕ್ಕೆ ಸರಿಯಾಗಿ ಊಟ ಮಾಡ್ತಿದ್ದೀಯಾ? ಮಾತ್ರೆ ತೆಗೋಳ್ತಿದ್ದೀಯಾ ಎಂದು ಕೇಳಿದ್ದಾಳೆ. ಅದಕ್ಕೆ ಸಿಹಿ ಕೂಡ ಹ್ಞುಂ ಎಂದಿದ್ದಾಳೆ. ಜತೆಗೆ ಡಾಕ್ಟರ್ ಅಂಕಲ್ ತುಂಬ ಸ್ವೀಟು, ಅವರ ಹೆಸರು ಮೇಘಶ್ಯಾಮ ಎಂದಿದ್ದಾಳೆ. ಸಿಹಿಯ ಬಾಯಿಂದ ಡಾಕ್ಟರ್ ಮೇಘಶ್ಯಾಮ ಅನ್ನೋ ಹೆಸರು ಕೇಳುತ್ತಿದ್ದಂತೆ ಸೀತಾ ಶಾಕ್ ಆಗಿದ್ದಾಳೆ.
ರಾಮನ ಬಗ್ಗೆ ತಾತನ ಮುನಿಸು
ಮಗಳ ಈ ಕಷ್ಟ ನೋಡಿ, ರಾಮನ ಮನಸು ಕರಗಿದೆ. ನೇರವಾಗಿ ಈಗಲೇ ಶಾಲೆಗೆ ಹೋಗುತ್ತೇನೆ ಎಂದು ಹೊರಟಿದ್ದಾನೆ. ತಾತನ ಬಳಿ ಬಂದು ಸಿಹಿಗೆ ಬೋರ್ಡಿಂಗ್ ಸ್ಕೂಲ್ ಸರಿಹೊಂದುತ್ತಿಲ್ಲ ಎಂದಿದ್ದಾನೆ. ರಾಮನ ಮಾತಿಗೆ ತಾತ ಸೂರ್ಯಪ್ರಕಾಶ್ ಬೇಸರಿಸಿಕೊಂಡಿದ್ದಾನೆ. ಸಿಹಿ ಹತ್ತಿರ ಇದ್ದರೆ, ಸೀತಾ ರಾಮ ಮಕ್ಕಳು ಮಾಡಿಕೊಳ್ಳಲು ಗಮನಹರಿಸಲ್ಲ. ದೇಸಾಯಿ ಕುಟುಂಬಕ್ಕೆ ಈ ಜೋಡಿಯಿಂದ ಮಗು ಬೇಕು ಎಂಬ ಆಸೆ ತಾತನದ್ದು. ಹೇಗಾದರೂ ಮಾಡಿ ಇವರಿಬ್ಬರನ್ನು ಹನಿಮೂನ್‌ಗೂ ಕಳಿಸಬೇಕು ಎಂದೂ ಪ್ಲಾನ್ ಮಾಡಿದ್ದಾನೆ. ಆದರೆ, ಇದೀಗ ಬೇರೆಯದ್ದೇ ನಡೆಯುತ್ತಿದೆ.
ಈಗಾಗಲೇ ಸ್ತ್ರೀ ರೋಗ ತಜ್ಞೆ ಅನಂತಲಕ್ಷ್ಮೀ ಹೆಸರು ಕೇಳಿದಾಗಲೂ ಸೀತಾ ಅರೇ ಕ್ಷಣ ನಡುಗಿದ್ದಳು. ಇದೀಗ ಮೇಘಶ್ಯಾಮನ ಹೆಸರು ಕೇಳಿ ಮತ್ತಷ್ಟು ಗಾಬರಿಯಾಗಿದ್ದಾಳೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಿಹಿಯ ಜನ್ಮ ರಹಸ್ಯದ ಸಂಚಿಕೆಗಳು ಪ್ರಸಾರವಾಗುವ ಸಾಧ್ಯತೆ ಇದೆ. ಅದರಲ್ಲಿ ಈ ಇಬ್ಬರ ಪಾತ್ರವೇನು ಎಂಬುದು ಮುಂದಿನ ದಿನಗಳಲ್ಲಿಯೇ ಗೊತ್ತಾಗಲಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)