Seetha Rama Serial: ಸೀತಾ ರಾಮರ ನೆಮ್ಮದಿ ಕೆಡಿಸೋಕೆ ಸಿಹಿಯನ್ನೇ ವನವಾಸಕ್ಕೆ ತಳ್ತಿದ್ದಾಳೆ ಭಾರ್ಗವಿ! ರುದ್ರಪ್ರತಾಪ್ ಬಳಿಕ ಚಾಂದಿನಿಯ ಆಗಮನ
ಸೀತಾ ರಾಮರ ನೆಮ್ಮದಿ ಕೆಡಿಸಲು ಭಾರ್ಗವಿ ಜತೆ ಸೇರಿ ವಿಶ್ವ ಸಿಹಿಯನ್ನು ಕಿಡ್ನಾಪ್ ಮಾಡಿ ಶಾಕ್ ಕೊಟ್ಟಿದ್ದಾನೆ. ಈ ನಡುವೆ ರುದ್ರಪ್ರತಾಪ್ ಬಳಿಕ, ಇಲ್ಲಿಯವರೆಗೂ ಕಣ್ಮರೆಯಾಗಿದ್ದ ಚಾಂದಿನಿಯ ಎಂಟ್ರಿಯಾಗಿದೆ.
Seetha Rama Serial: ಸೀತಾ ರಾಮನ ನಡುವಿನ ಸಿಹಿ ಅನ್ನೋ ಕೊಂಡಿಯನ್ನ ದೂರ ಮಾಡಲು ಪ್ಲಾನ್ ಮಾಡುತ್ತಿದ್ದಾಳೆ ಭಾರ್ಗವಿ. ಇಷ್ಟು ದಿನ ಬರೀ ಭಾರ್ಗವಿ ಮಾತ್ರ ಇಂಥ ಹಾಳು ಕೆಲಸಕ್ಕಿ ಇಳಿಯುತ್ತಿದ್ದಳು. ಇದೀಗ ಆಕೆಯ ಈ ಕೆಟ್ಟ ಕೆಲಸಕ್ಕೆ ಆಕೆಯ ಪತಿ ವಿಶ್ವಜಿತ್ ಸಹ ಜತೆಯಾಗಿದ್ದಾನೆ. ಯಾವಾಗ ಸೀತಾಗೆ ಕಂಪನಿಯಲ್ಲಿ ಬೋರ್ಡ್ ಮೆಂಬರ್ ಅನ್ನೋ ಉನ್ನತ ಹುದ್ದೆಯ ಜವಾಬ್ದಾರಿ ಕೊಟ್ಟನೋ, ಅಲ್ಲಿಂದ ಮನೆಯಲ್ಲಿನ ಮನಸ್ಸುಗಳ ನಡುವೆಯೇ ಒಡಕು ಮೂಡಿದೆ. ಮನೆ ಮಗನಾದರೂ, ನನಗೆ ಕಿಮ್ಮತ್ತಿಲ್ಲ ಎಂದು ವಿಶ್ವ ರಾಮನ ಮೇಲೆ ಗರಂ ಆಗಿದ್ದಾನೆ. ಈಗ ಬಂದವಳಿಗೇ ಎಲ್ಲ ಸಿಗ್ತಿದೆ ಎಂದು ಭಾರ್ಗವಿ ಮುಂದೆ ಹೇಳಿಕೊಂಡಿದ್ದಾನೆ.
ವಿಶ್ವನ ಈ ಸ್ಥಿತಿ ಕಂಡು, ಇವನ ಎದೆಯೊಳಗಿನ ಕಾಳ್ಗಿಚ್ಚಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾಳೆ. ಹೇಗಾದರೂ ಮಾಡಿ ಆ ಸಿಹಿಯನ್ನೇ ಇವರಿಬ್ಬರಿಂದ ದೂರ ಮಾಡಿದರೆ ಹೇಗೆ ಎಂದು ಪ್ಲಾನ್ ಮಾಡಿ, ವಿಶ್ವನ ತಲೆಗೆ ತುಂಬಿದ್ದಾಳೆ. ಒಂದು ಕ್ಷಣ ಸಿಹಿ ಕಾಣದಿದ್ದಕ್ಕೆ ಆತಂಕಗೊಂಡಿದ್ದ ರಾಮ್‌ನನ್ನು ನೋಡಿ, ಇದೇ ಒಳ್ಳೆಯ ಐಡಿಯಾ ಎಂದು ಕಿಡ್ನಾಪ್ ದಾಳ ಹೂಡಿದ್ದಾಳೆ. ವಿಶ್ವ ನೀನೂ ಹೀರೋ ಆಗೋ ಟೈಮ್ ಬಂತು ಎಂದಿದ್ದಾಳೆ. ಸೀತಾ ರಾಮ್‌ಗಾಗಿ ಆಫೀಸ್‌ಗೆ ಊಟ ತೆಗೆದುಕೊಂಡು ಹೋಗುತ್ತಿದ್ದಂತೆ, ಅವರಿಬ್ರು ಆಫೀಸ್‌ನಲ್ಲಿ ರೊಮ್ಯಾಂಟಿಕ್ ಆಗಿ ಲಂಚ್ ಮಾಡಲಿ, ನೀನು ಸಿಹಿಯನ್ನ ಕಿಡ್ನಾಪ್ ಮಾಡ್ಸು ಎಂದಿದ್ದಾಳೆ.
ಕಿಡ್ನಾಪ್ ದಾಳ ಉರುಳಿಸಿದ ಭಾರ್ಗವಿ..
ಇತ್ತ ಸಿಹಿಯ ಸ್ಕೂಲ್ ಬಿಡ್ತಿದ್ದಂತೆ, ಕಾರ್ ಸಮೇತ ಶಾಲೆ ಬಳಿ ಬಂದಿದ್ದ ಡ್ರೈವರ್ ಅವರನ್ನು ನೋಡಿ, ಕಾರ್ ಹತ್ತಿದ್ದಾಳೆ ಸಿಹಿ. ಅಷ್ಟರಲ್ಲಿ ಕಾರ್‌ನಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಸಿಹಿಯ ಮುಖವನ್ನು ಮುಚ್ಚಿದ್ದಾನೆ. ಅಷ್ಟರಲ್ಲಿಯೇ ಡ್ರೈವರ್ ಸಹ ವಿಶ್ವನಿಗೆ ಸನ್ನೆ ಮಾಡಿ, ಪ್ಲಾನ್ ಸಕ್ಸಸ್ ಎಂದಿದ್ದಾರೆ. ಇತ್ತ ಭಾರ್ಗವಿಗೂ ಫೋನ್ ಮಾಡಿದ ವಿಶ್ವ, ಕೆಲಸ ಆಯ್ತು ಎಂದಿದ್ದಾನೆ. ಈ ನಡುವೆ ನಾನು ಶಾಲೆ ಬಳಿಯೇ ನಿಂತಿದ್ದೇನೆ. ಸಿಹಿ ಇಲ್ಲಿ ಕಾಣಿಸ್ತಿಲ್ಲ ಎಂದು ರಾಮನಿಗೆ ಫೋನ್ ಮಾಡಿದ್ದಾನೆ. ಆಫೀಸ್‌ನಲ್ಲಿದ್ದ ಸೀತಾ ಮತ್ತು ರಾಮ್ ಮತ್ತೆ ಶಾಕ್ ಆಗಿದ್ದಾರೆ.
ಮಗು ಚಿವುಟಿ ತೊಟ್ಟಿಲು ತೂಗಿದ ವಿಶ್ವ
ಶಾಂತಮ್ಮಜ್ಜಿಗೂ ಕರೆ ಮಾಡಿ ಸಿಹಿ ಬಗ್ಗೆ ವಿಚಾರಿಸಿದ್ದಾಳೆ ಸೀತಾ. ರಾಮ್ ಸಹ ಗೊಂದಲಕ್ಕೆ ಒಳಗಾಗಿದ್ದಾನೆ. ಈ ನಡುವೆ ಸಿಹಿ ಜತೆಗೇ ಮನೆಗೆ ಬಂದಿದ್ದಾನೆ ವಿಶ್ವ. ಕಿಡ್ನಾಪ್ ಆಗಿದ್ದ ಸಿಹಿಯನ್ನು ನಾನೇ ಕಾಪಾಡಿದೆ ಅನ್ನೋ ಹೊಸ ನಾಟಕ ಆಡಿದ್ದಾನೆ ವಿಶ್ವ. ರಾಮ್ ಮತ್ತು ಸೀತಾ ಸಹ ಮನೆಗೆ ಓಡೋಡಿ ಬಂದಿದ್ದಾರೆ. ಸಿಹಿಯನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಏನಾಯ್ತು ಎಂದು ಸಿಹಿಯನ್ನು ಕೇಳಿದಾಗ, ನಡೆದ ಘಟನೆ ವಿವರಿಸಿದ್ದಾಳೆ. ಕಿಡ್ನಾಪ್ ವಿಚಾರ ತಿಳಿದು ರಾಮ್ ಗಾಬರಿಯಾಗಿದ್ದಾನೆ. ಇನ್ಮೇಲೆ ನಾನೇ ಸಿಹಿಯನ್ನ ಶಾಲೆಗೆ ಪಿಕಪ್ ಡ್ರಾಪ್ ಮಾಡ್ತಿನಿ ಎಂದು ಹೇಳಿದ್ದಾನೆ.
ಸಿಹಿಯನ್ನು ಹೇಗಾದರೂ ಮಾಡಿ ಈ ಮನೆಯಿಂದ ಹೊರ ಕಳಿಸಬೇಕು ಎಂದು ಪ್ಲಾನ್ ಮಾಡಿದ್ದ ಭಾರ್ಗವಿ, ಈ ಕಿಡ್ನಾಪ್ ವಿಚಾರವನ್ನೇ ರಾಮ್ ಮುಂದೆ ಪ್ರಸ್ತಾಪಿಸಿದ್ದಾಳೆ. ಸಿಹಿಗೆ ಸಮಸ್ಯೆ ಆಗ್ತಿದೆ ಎಂದಾದರೆ, ಈಗ ಉಳಿದಿರುವುದು ಒಂದೇ ದಾರಿ. ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಹಾಕುವುದು ಎಂದಿದ್ದಾಳೆ. ಭಾರ್ಗವಿಯ ಈ ಮಾತು ಕೇಳಿ, ಅದೆಲ್ಲ ಅಸಾಧ್ಯ. ಸಿಹಿ ಯಾವತ್ತಿದ್ದರೂ ನನ್ನ ಜತೆಗೇ ಇರ್ತಾಳೆ ಎಂದು ಆಕೆಯನ್ನು ಕರೆದುಕೊಂಡು ಒಳನಡೆದಿದ್ದಾಳೆ.
ಮತ್ತೆ ಬಂದಳು ಚಾಂದಿನಿ..
ಇನ್ನೊಂದು ಕಡೆ, ಇಲ್ಲಿಯವರೆಗೂ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ಚಾಂದಿನಿ ಮತ್ತೆ ಆಗಮನವಾಗಿದೆ. ಆಫೀಸ್‌ನಲ್ಲಿ ಲಂಚ್ ಮಾಡ್ತಿದ್ದ ವೇಳೆ ಚಾಂದಿನಿಯನ್ನ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ ಎಂದಿದ್ದಾಳೆ ಸೀತಾ. ಸೀತಾಳ ಮಾತಿಗೆ ಒಪ್ಪದ ರಾಮ್, ನೇರವಾಗಿ ಮೇಲ್ ಮೂಲಕ ಆಕೆಯನ್ನು ಕಂಪನಿಯ ಕೆಲಸದಿಂದ ತೆಗೆದುಹಾಕಿದ್ದಾಳೆ. ಹಾಗಾದರೆ, ಚಾಂದಿನಿ ಮುಂದಿನ ನಡೆ ಏನು? ಇತ್ತ ಬೋರ್ಡಿಂಗ್ ಸ್ಕೂಲ್ ಕದ ತಟ್ಟುತ್ತಾಳಾ ಸಿಹಿ? ಇದಕ್ಕೆ ಮುಂದಿನ ಸಂಚಿಕೆಗಳಲ್ಲಿಯೇ ಉತ್ತರ ಸಿಗಲಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ