Seetha Rama Serial: ಡಾ. ಅನಂತಲಕ್ಷ್ಮೀ ಮುಂದೆ ಸೀತೆಯ ಒಡಲ ಸತ್ಯ ಅನಾವರಣ! ಸಿಹಿ ಹುಟ್ಟಿನ ರಹಸ್ಯ ಬಯಲು
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಡಾ. ಅನಂತಲಕ್ಷ್ಮೀ ಮುಂದೆ ಸೀತೆಯ ಒಡಲ ಸತ್ಯ ಅನಾವರಣ! ಸಿಹಿ ಹುಟ್ಟಿನ ರಹಸ್ಯ ಬಯಲು

Seetha Rama Serial: ಡಾ. ಅನಂತಲಕ್ಷ್ಮೀ ಮುಂದೆ ಸೀತೆಯ ಒಡಲ ಸತ್ಯ ಅನಾವರಣ! ಸಿಹಿ ಹುಟ್ಟಿನ ರಹಸ್ಯ ಬಯಲು

ಸಿಹಿ ಹುಟ್ಟಿನ ರಹಸ್ಯ ನನ್ನೊಳಗೇ ಇರಲಿ ಎಂದು ಸೀತಾ ಆ ಒಡಲ ಗುಟ್ಟನ್ನು ಒಳಗಿಟ್ಟುಕೊಂಡೇ ಬಂದಿದ್ದಳು. ಇದೀಗ ಆ ಗುಟ್ಟ ದೇಸಾಯಿ ಮನೆ ಮಂದಿ ಮುಂದೆ ಗೊತ್ತಾಗುವ ಸಮಯ ಬಂದಿದೆ

ಸೀತಾ ರಾಮ ಸೀರಿಯಲ್‌
ಸೀತಾ ರಾಮ ಸೀರಿಯಲ್‌ (Instagram\ Zee Kannada)

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ವೀಕ್ಷಕನ ತಲೆಯಲ್ಲಿ ಕೊರೆಯುತ್ತಿದ್ದ ಬಹುದೊಡ್ಡ ಪ್ರಶ್ನೆಗಳಲ್ಲಿ, ಸಿಹಿಯ ತಂದೆ ಯಾರು ಎಂಬುದು. ಇದೀಗ ಇದೇ ಧಾರಾವಾಹಿ 300 ಸಂಚಿಕೆಗಳನ್ನು ಪೂರೈಸಿದೆ. ಈ ನಡುವೆ ಇದೇ ಧಾರಾವಾಹಿ ಅಚ್ಚರಿಯ ಘಟನಾವಳಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿಯವರೆಗೂ ಒಂದಿಲ್ಲೊಂದು ಕಾರಣಕ್ಕೆ ಮುಂದೂಡುತ್ತಲೇ ಬಂದಿದ್ದ ವಿಚಾರವೀಗ ಬಟಾಬಯಲಾಗಿದೆ. ಸೀತಾ ನಿಜಕ್ಕೂ ಸಿಹಿಯ ಅಮ್ಮನಾ? ಹಾಗಾದರೆ ಸಿಹಿ ಅಪ್ಪ ಯಾರು? ರಾಮ್‌ ಮುಂದೆಯೂ ಸಿಹಿ ಹುಟ್ಟಿನ ಬಗ್ಗೆ ಸೀತಾ ಮುಚ್ಚಿಟ್ಟಿದ್ದೇನು? ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಒಂದೊಂದೆ ಉತ್ತರ ಸಿಗುತ್ತಿದೆ.

ದೇಸಾಯಿ ಮನೆಯಲ್ಲಿ ತಾತ ಸೂರ್ಯ ಪ್ರಕಾಶ್‌ ಅವರ 75ನೇ ಬರ್ತ್‌ಡೇಗೆ ಪ್ಲಾನ್‌ ಮಾಡಿಕೊಳ್ಳಲಾಗುತ್ತಿದೆ. ಮನೆಯವರೆಲ್ಲರೂ ತಾತನಿಗೆ ವಿಶೇಷ ಸರ್ಪ್ರೈಸ್‌ ನೀಡಲು ಮುಂದಾಗುತ್ತಿದ್ದಾರೆ. ಅದೇ ರೀತಿ ಭಾರ್ಗವಿ ಮಾವಯ್ಯನ ಬದಲು, ಸೀತಾಗೆ ಶಾಕ್‌ ಕೊಡಲು ಹೊಸ ತಂತ್ರ ರೂಪಿಸಿದ್ದಾಳೆ. ಇಲ್ಲಿಯವರೆಗೂ ಸೀತಾಗೆ ಡಾ. ಅನಂತಲಕ್ಷ್ಮೀ ಹೆಸರು ಕೇಳಿದರೇ ನಡುಕ ಶುರುವಾಗುತ್ತಿತ್ತು. ಇದೀಗ ಅದೇ ಅನಂತ ಲಕ್ಷ್ಮೀಯನ್ನೇ ಕರೆತಂದು ಸೀತಾಳ ಮುಂದೆ ನಿಲ್ಲಿಸಿದ್ದಾಳೆ ಭಾರ್ಗವಿ. ಇಲ್ಲಿಯವರೆಗೂ ಒಮ್ಮೆಯೂ ಮುಖಾಮುಖಿಯಾಗದ ಸೀತಾ- ಅನಂತ ಲಕ್ಷ್ಮೀ ಇದೀಗ ಅಚ್ಚರಿಯ ರೀತಿಯಲ್ಲಿ ಎದುರುಬದುರಾಗಿದ್ದಾರೆ.

ಇಕ್ಕಟ್ಟಿನಲ್ಲಿ ಸಿಲುಕಿದ ಸೀತಾ

ಸಿಹಿ ಹುಟ್ಟಿನ ರಹಸ್ಯ ನನ್ನೊಳಗೇ ಇರಲಿ ಎಂದು ಸೀತಾ ಆ ಒಡಲ ಗುಟ್ಟನ್ನು ಒಳಗಿಟ್ಟುಕೊಂಡೇ ಬಂದಿದ್ದಳು. ಇದೀಗ ಆ ಗುಟ್ಟ ದೇಸಾಯಿ ಮನೆ ಮಂದಿ ಮುಂದೆ ಗೊತ್ತಾಗುವ ಸಮಯ ಬಂದಿದೆ. ಹಾಗಾದರೆ ಸೀತಾಗೂ ಸಿಹಿಗೂ ಹೇಗೆ ನಂಟು? ಮೇಘಶ್ಯಾಮ್‌ಗೂ ಸಿಹಿಗೂ ಯಾವ ಸಂಬಂಧ? ಈ ಎಲ್ಲ ಕೌತುಗಳು ಈ ವಾರಾಂತ್ಯದಲ್ಲಿಯೇ ವೀಕ್ಷಕರಿಗೂ ಗೊತ್ತಾಗಲಿದೆ. ಅಪ್ಪನ ಅನಾರೋಗ್ಯದ ನಿಮಿತ್ತ, ಹಣಕಾಸಿನ ತೊಂದರೆ ಎದುರಿಸಿದ್ದ ಸೀತಾ, ಆಗ ಹಣಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಬಾಡಿಗೆ ತಾಯ್ತನವನ್ನು. ಮೇಘಶ್ಯಾಮ್‌ ಮತ್ತು ಶಾಲಿನಿ ದಂಪತಿ ಮಗುವಿಗಾಗಿ ಸರೋಗಸಿ ಮೂಲಕ ಮಗು ಪಡೆಯುವ ನಿರ್ಧಾರ ಮಾಡಿದ್ದರು.

ಬಾಡಿಗೆ ತಾಯ್ತನದ ಮೂಲಕ ಮಗು

ಆಗ ಅಪ್ಪನನ್ನು ಉಳಿಸಿಕೊಳ್ಳಲು ಸೀತಾ, ಮೇಘಶ್ಯಾಮ್‌ ಮತ್ತು ಶಾಲಿನಿಯ ಮಗುವನ್ನು ಹೆತ್ತು ಕೊಡಲು, ಡಾ. ಅನಂತ ಲಕ್ಷ್ಮೀ ಮೂಲಕ ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡಿದ್ದಳು. ಇಲ್ಲಿ ಮೇಘಶ್ಯಾಮ್‌ಗಾಗಲಿ ಸೀತಾಗಾಗಲಿ ಮುಖಾಮುಖಿ ಭೇಟಿಯಿಲ್ಲ. ಅನಂತಲಕ್ಷ್ಮೀಯೇ ಇಲ್ಲಿ ಇಬ್ಬರಿಗೂ ಸೇತುವೆಯಾಗಿದ್ದಳು. ಹೀಗೆ 9 ತಿಂಗಳ ಬಳಿಕ, ಸಿಹಿ ಜನಿಸಿದಳು. ಹಾಗೆ ಜನಿಸಿದ ಮಗುವನ್ನು ಮೇಘಶ್ಯಾಮ್‌ ಕುಟುಂಬ ಸ್ವೀಕರಿಸಲಿಲ್ಲ. ಅನಾಥಾಶ್ರಮಕ್ಕೆ ಸೇರಿಸುವ ಅಭಿಪ್ರಾಯವೂ ಬಂದರೂ, ತಾನೇ ಹೆತ್ತ ಮಗುವನ್ನು ಹೇಗೆ ಅಲ್ಲಿಗೆ ಕಳುಹಿಸಲಿ ಎಂದು, ಸೀತಾ ತಾನೇ ಮಗುವನ್ನು ಸಾಕಿ, ಸಲುಹಿದಳು. ಇಂತಿಪ್ಪ ಸೀತಾಳ ಒಡಲ ಸತ್ಯ ಹೀಗಿದೆ.

ಸಿಹಿ ತನ್ನ ಮಗಳೆಂದು ಮೇಘಶ್ಯಾಮ್‌ಗೆ ಗೊತ್ತಾಗುತ್ತಾ?

ಇತ್ತ ಅಪ್ಪ ಕಣ್ಮುಚ್ಚಿದ. ಸೀತಾಳ ಕೈಗೆ ಮಗು ಬಂತು. ಮದುವೆಯಾಗದೇ ತಾಯಿಯಾದಳು ಎಂದು ಸೀತಾಳ ಅಣ್ಣ ಸುದೇಶ ಮತ್ತು ಅತ್ತಿಗೆ ಸುಲೋಚನಾ ಆಕೆಯಿಂದ ದೂರವೇ ಉಳಿದರು. ಸಿಂಗಲ್‌ ಪೇರೆಂಟ್‌ ಆಗಿಯೇ ಮಧುಮೇಹ ಪೀಡಿತ ಸಿಹಿಯನ್ನು ಸೀತಾ ಬೆಳೆಸಿದಳು. ಇದೀಗ ಇದೇ ವಿಚಾರದ ಗೊತ್ತಿದ್ದ ಏಕೈಕ ವ್ಯಕ್ತಿ ಡಾ. ಅನಂತಲಕ್ಷ್ಮೀ ದೇಸಾಯಿ ಮನೆಗೆ ಬಂದಿದ್ದಾಳೆ. ಸೀತಾಳಿಗೂ ಭೇಟಿಯಾಗಿದ್ದಾಳೆ. ನನ್ನ ಮತ್ತು ಸಿಹಿ ನಡುವಿನ ವಿಚಾರವನ್ನು ಎಲ್ಲಿಯೂ ಹೇಳಬೇಡಿ. ಇದರಿಂದ ಸಿಹಿ ಬೇಸರ ಮಾಡಿಕೊಳ್ಳುತ್ತಾಳೆ ಎಂದು ಅನಂತಲಕ್ಷ್ಮೀ ಬಳಿ ಮನವಿ ಮಾಡಿದ್ದಾಳೆ. ಹಾಗಾದರೆ, ಇದು ನನ್ನ ಮಗುವೇ ಎಂದು ಮೇಘಶ್ಯಾಮ್‌ಗೆ ಗೊತ್ತಾಗುತ್ತಾ? ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿಯೇ ಗೊತ್ತಾಗಬೇಕಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner