Seetha Rama Serial: ರಾಮನಿಗೆ ಕೆಡುಕು ಬಯಸೋ ಭಾರ್ಗವಿಗೆ, ಚಾಂದಿನಿಯೇ ದಾಳ! ಆದ್ರೆ, ದೈವದ ಲೀಲೆ ಮಾತ್ರ ಸೀತಾ ರಾಮನ ಬೆನ್ನಿಗಿದೆ-television news seetha rama serial thursday february 29th episode highlights seetha raama serial latest updates mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ರಾಮನಿಗೆ ಕೆಡುಕು ಬಯಸೋ ಭಾರ್ಗವಿಗೆ, ಚಾಂದಿನಿಯೇ ದಾಳ! ಆದ್ರೆ, ದೈವದ ಲೀಲೆ ಮಾತ್ರ ಸೀತಾ ರಾಮನ ಬೆನ್ನಿಗಿದೆ

Seetha Rama Serial: ರಾಮನಿಗೆ ಕೆಡುಕು ಬಯಸೋ ಭಾರ್ಗವಿಗೆ, ಚಾಂದಿನಿಯೇ ದಾಳ! ಆದ್ರೆ, ದೈವದ ಲೀಲೆ ಮಾತ್ರ ಸೀತಾ ರಾಮನ ಬೆನ್ನಿಗಿದೆ

Seetha Rama Serial: ಸೀತಾ ರಾಮ ಧಾರಾವಾಹಿ ನೋಡುಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಜತೆಗೆ ಕುತೂಹಲ ಘಟ್ಟಕ್ಕೂ ಬಂದು ನಿಂತಿದೆ. ಭಾರ್ಗವಿಯ ಕೆಟ್ಟತನಕ್ಕೆ ಚಾಂದಿನಿಯೂ ದಾಳವಾಗುತ್ತಿದ್ದಾಳೆ. ಲಾಯರ್‌ ತಂತ್ರ ಹೆಣೆಯುತ್ತಿದ್ದರೆ, ಅಶೋಕ ರಾಮನಿಗೆ ಆಸರೆಯಾಗಿ ನಿಂತಿದ್ದಾನೆ.

Seetha Rama Serial: ರಾಮನಿಗೆ ಕೆಡುಕು ಬಯಸೋ ಭಾರ್ಗವಿಗೆ, ಚಾಂದಿನಿಯೇ ದಾಳ! ಆದ್ರೆ, ದೈವದ ಲೀಲೆ ಮಾತ್ರ ಸೀತಾ ರಾಮನ ಬೆನ್ನಿಗಿದೆ
Seetha Rama Serial: ರಾಮನಿಗೆ ಕೆಡುಕು ಬಯಸೋ ಭಾರ್ಗವಿಗೆ, ಚಾಂದಿನಿಯೇ ದಾಳ! ಆದ್ರೆ, ದೈವದ ಲೀಲೆ ಮಾತ್ರ ಸೀತಾ ರಾಮನ ಬೆನ್ನಿಗಿದೆ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಏರಿಳಿತಗಳೇ ಹೆಚ್ಚು ಕಾಣಿಸುತ್ತಿವೆ. ಪಾಪಿ ರುದ್ರಪ್ರತಾಪ್‌ ಆಗಮಿಸುತ್ತಿದ್ದಂತೆ, ರಾಮನಿಗೆ ಅಪಘಾತ ಮಾಡಿಸಿದ್ದಾನೆ. ಮತ್ತೊಂದು ಕಡೆ, ಸಿಕ್ಕಿದ್ದೇ ಚಾನ್ಸು ಅಂತ, ರಾಮನ ಮನಸ್ಥಿತಿ ಹಾಳು ಮಾಡಲು ಚಾಂದಿನಿಯನ್ನು ತನ್ನ ಕೈಗೊಂಬೆಯನ್ನಾಗಿಸಿಕೊಂಡು ಅಖಾಡಕ್ಕಿಳಿಸಿದ್ದಾಳೆ ಭಾರ್ಗವಿ. ಈ ನಡುವೆ ಮೊಮ್ಮಗನ ಚೇತರಿಕೆಗಾಗಿ ತಾತ ಸೂರ್ಯಪ್ರಕಾಶ್‌ ಎದುರು ನೋಡುತ್ತಿದ್ದರೆ, ಮತ್ತೊಂದು ಕಡೆ ಅಶೋಕ ಹಗಲು ರಾತ್ರಿ ಅವನ ಕಾವಲು ಕಾಯುತ್ತಿದ್ದಾನೆ. ಸೀತಾ ದೇವರ ಮೊರೆ ಹೋಗಿದ್ದಾಳೆ.

ಇದೀಗ ಖುಷಿಯ ವಿಚಾರ ಏನೆಂದರೆ, ಅಶೋಕನ ಒಳ್ಳೆಯತನ, ಸೀತಾಳ ಪ್ರಾರ್ಥನೆ ಫಲ ನೀಡಿದೆ. ರಾಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ. ಅಷ್ಟೇ ಅಲ್ಲ ಕೊಂಚ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಶಿಫ್ಟ್‌ ಆಗಿದ್ದಾನೆ. ಈ ನಡುವೆ ಆಸ್ಪತ್ರೆಯಲ್ಲಿ ರಾಮನ ಈ ದಿಢೀರ್‌ ಚೇತರಿಕೆಗೆ ಚಾಂದನಿ ಪ್ರಭಾವವೇ ಜಾಸ್ತಿ ಇದೆಯಲ್ಲ ಎಂದು ಬೇಕು ಅಂತಲೇ ಅಶೋಕನ ಮುಂದೆ ಕೊಂಕು ನುಡಿದಿದ್ದಾಳೆ. ಅದಕ್ಕೆ ಪ್ರತ್ಯುತ್ತರ ನೀಡದ ಅಶೋಕ ಮೌನಕ್ಕೆ ಜಾರಿದ್ದಾನೆ. ಭಾರ್ಗವಿ ಅಲ್ಲಿಂದ ಕಾಲ್ಕಿತ್ತ ಬಳಿಕ, ಇದಕ್ಕೆಲ್ಲ ಸೀತಾ ಕಾರಣ ಎಂದಿದ್ದಾನೆ.

ಅಂಜಲಿ ಮೇಲೆ ಬಿತ್ತು ಪ್ರತಾಪನ ಕಣ್ಣು

ಇನ್ನೊಂದು ಬದಿಯಲ್ಲಿ ಲಾಯರ್‌ ರುದ್ರಪ್ರತಾಪ್‌ ಟ್ರೀಟ್‌ಮೆಂಟ್‌ಗೆಂದು ಆಸ್ಪತ್ರೆಗೆಂದು ಬಂದಿದ್ದಾನೆ. ಇದೇ ವೇಳೆ ಅದೇ ಆಸ್ಪತ್ರೆಯಲ್ಲಿನ ಒಂದು ಫೋಟೋ ಮೇಲೆ ಲಾಯರ್‌ ಕಣ್ಣು ಬಿದ್ದಿದೆ. ಅಚ್ಚರಿ ಏನೆಂದರೆ, ಆ ಫೋಟೋ ಬೇರೆ ಯಾರದೂ ಅಲ್ಲ, ಅಶೋಕ ಮತ್ತು ರಾಮನ ಜತೆಗಿದ್ದ ಅಂಜಲಿಯದ್ದು! ಈ ಮೂವರು ಜತೆಗಿದ್ದ ಫೋಟೋವನ್ನು ನೋಡುತ್ತಿದ್ದಂತೆ, ಕಡು ಕೋಪದಲ್ಲಿ ಹಲ್ಲು ಮಸೆದಿದ್ದಾನೆ ರುದ್ರಪ್ರತಾಪ್.‌ ಕೋಪತಾಪದಿಂದಲೇ ಕಣ್ಣು ಕೆಂಪಾಗಿಸಿ ಮನದೊಳಗೆ ಮತ್ತೊಂದು ಕುತಂತ್ರ ಹೆಣೆಯುತ್ತಿದ್ದಾನೆ.

ಆಫೀಸ್‌ಗೆ ಸೀತಾಳನ್ನು ಭೇಟಿಯಾಗಿ ಆಕೆ ಜತೆ ಮಾತನಾಡಬೇಕೆಂದು ತಾತ ಸೂರ್ಯ ಪ್ರಕಾಶ್‌ ದೇಸಾಯಿ, ಆಗಮಿಸಿದ್ದಾನೆ. ಇದೇ ಗ್ಯಾಪ್‌ನಲ್ಲೇ ಆಫೀಸ್‌ಗೆ ಚಾಂದಿನಿಯ ಎಂಟ್ರಿಯಾಗಿದೆ. ತಾತನ ಬಳಿ ಬಂದು ತನ್ನ ಪೂರ್ವಾಪರ ಹೇಳಿಕೊಂಡಿದ್ದಾಳೆ. ನಾನು ರಾಮ್‌ ಇಬ್ಬರೂ ಕ್ಲಾಸ್‌ಮೇಟ್ಸ್‌ ಎಂದು ಪರಿಚಯ ಮಾಡಿಕೊಂಡಿದ್ದಾಳೆ. ಜತೆಗೆ ಸೀತಾಳ ಜತೆಗೂ ಮುಖಾಮುಖಿಯಾಗಿದೆ. ಬಳಿಕ ಇದೇ ಕಂಪನಿಗೆ ಅಕೌಂಟ್ಸ್‌ ಮತ್ತು ಫಿನಾನ್ಸ್‌ ಸೆಕ್ಷನ್‌ಗೆ ಹೊಸದಾಗಿ ಜಾಯಿನ್‌ ಆಗಿದ್ದಾರೆಂದು ಎಲ್ಲರಿಗೂ ಪರಿಚಯ ಮಾಡಿಸಿಕೊಟ್ಟಿದ್ದಾನೆ ತಾತ.

ಚಾಂದಿನಿಯೇ ಭಾರ್ಗವಿಗೆ ಸಿಕ್ಕ ಹೊಸ ದಾಳ

ಅಸಲಿಗೆ ಚಾಂದಿನಿಯನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇ ಭಾರ್ಗವಿ. ಅಶೋಕ ರಾಮನ ಚಾಕರಿಯಲ್ಲಿ ಮುಳುಗಿದ್ದಾನೆ. ತಾತನಿಗೆ ಭಾರ್ಗವಿಯ ವ್ಯವಹಾರದ ಜ್ಞಾನ ಇಲ್ಲ. ಇದೇ ಒಳ್ಳೆಯ ಸಮಯ ಎಂದು ರಾಮನ ಬಾಳು ಹಾಳು ಮಾಡುವ ಉದ್ದೇಶಕ್ಕೆ ಚಾಂದಿನಿಯನ್ನು ಆಫೀಸ್‌ಗೆ ಕೆಲಸಕ್ಕೆ ಸೇರಿಸಿಕೊಂಡು, ಆಕೆಯನ್ನು ತನ್ನ ದಾಳದಂತೆ ಬಳಸಿಕೊಳ್ಳುತ್ತಿದ್ದಾಳೆ.

ಫಲಿಸದ ತಾತನ ಮಾತು

ಇತ್ತ ಆಫೀಸ್‌ನಲ್ಲಿ ಸೀತಾಳ ಬಳಿ ಬಾಸ್‌ ಸೂರ್ಯಪ್ರಕಾಶ್‌ ಮಾತಿಗಿಳಿದಿದ್ದಾನೆ. ರಾಮ್‌ ನಿನ್ನ ಭೇಟಿಯಾಗಲು ಬಂದಾಗ ನಿನ್ನ ಬಳಿ ಏನು ಹೇಳಿದ್ನಮ್ಮ ಎಂದು ಪ್ರಶ್ನಿಸಿದ್ದಾನೆ. ಆಗ ಬಾಸ್‌ ಮನೆ ಬಳಿ ಬಂದಾಗ, ಜನ ನೋಡುವ ರೀತಿಯೇ ಬೇರೆಯಾಗಿತ್ತು. ಹಾಗಾಗಿ ಅವರ ಜತೆ ಏನೂ ಮಾತನಾಡಲಿಲ್ಲ. ಇಲ್ಲಿಂದ ಹೊರಡಿ ಎಂದು ಕಳುಹಿಸಿದೆ ಎಂದಿದ್ದಾಳೆ ಸೀತಾ. ಹಾಗಾದ್ರೆ ರಾಮ್‌ ನಿನ್ನ ಬಳಿ ಏನೂ ಹೇಳಿಲ್ವಾ ಎಂದು ಬೇಸರದಲ್ಲಿಯೇ ಸೀತಾಳನ್ನು ಕಳುಹಿಸಿದ್ದಾನೆ ತಾತ. ಇತ್ತ ರಾಮ್‌ ಏನು ಹೇಳಲು ಬಂದಿರಬಹುದು ಎಂಬ ಕುತೂಹಲ ಸೀತಾ ಮನದಲ್ಲೂ ಮೂಡಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

You are reading this copy on "Hindustan Times Kannada". For latest updates on entertainment, OTT, Web series, Kannada film industry, Kannada serials, Reality shows visit kannada.hindustantimes.com/entertainment

mysore-dasara_Entry_Point