ಕನ್ನಡ ಸುದ್ದಿ  /  Entertainment  /  Television News Seetha Rama Serial Wednesday March 13th Episode Highlights Seetha Raama Serial Latest Updates Mnk

Seetha Rama Serial: ನನ್ನನ್ನು ಬದುಕಿಸೋ ಅಮ್ಮನೇ ಸಿಹಿ, ನನಗೆ ನೀವಿಬ್ಬರೂ ಬೇಕು; ರಾಮನ ಪ್ರೀತಿಗೆ ಸಿಗುತ್ತಾ ಸೀತಾಳ ಒಪ್ಪಿಗೆ?

Seetha Rama Serial Latest Episode: ಸೀತಾ ರಾಮ ಧಾರಾವಾಹಿಯಲ್ಲೀಗ ರಾಮ ದೇವರ ಸನ್ನಿಧಾನದಲ್ಲಿ ಸೀತಾಳಿಗೆ ಮನದಲ್ಲಿನ ಪ್ರೀತಿಯ ವಿಚಾರವನ್ನು ಹೇಳಿದ್ದಾನೆ. ರಾಮನ ಮಾತಿಗೆ ಸೀತಾ ಮೂಕಳಾಗಿದ್ದಾಳೆ. ರಾಮನ ಈ ಪ್ರೀತಿಯನ್ನು ಒಪ್ಪುತ್ತಾಳಾ ಸೀತಾ?

Seetha Rama Serial: ನನ್ನನ್ನು ಬದುಕಿಸೋ ಅಮ್ಮನೇ ಸಿಹಿ, ನನಗೆ ನೀವಿಬ್ಬರೂ ಬೇಕು; ರಾಮನ ಪ್ರೀತಿಗೆ ಸಿಗುತ್ತಾ ಸೀತಾಳ ಒಪ್ಪಿಗೆ?
Seetha Rama Serial: ನನ್ನನ್ನು ಬದುಕಿಸೋ ಅಮ್ಮನೇ ಸಿಹಿ, ನನಗೆ ನೀವಿಬ್ಬರೂ ಬೇಕು; ರಾಮನ ಪ್ರೀತಿಗೆ ಸಿಗುತ್ತಾ ಸೀತಾಳ ಒಪ್ಪಿಗೆ?

Seetha Rama Serial: ದೈವದ ಸನ್ನಿಧಿಯಲ್ಲಿ ರಾಮನಿಗೆ ಒಳ್ಳೆಯದಾಗಲಿ, ರಾಮ್‌ ಯಾವಾಗಲೂ ಖುಷಿಯಿಂದ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾಳೆ ಸೀತಾ. ಇತ್ತ ಅದೇ ದೇವಸ್ಥಾನದ ಕಡೆಗೆ ರಾಮನ ಆಗಮನವಾಗುತ್ತಿದೆ. ನನಗೆ ಸೀತಾಳ ಖುಷಿ ಇಷ್ಟ. ಸೀತಾ ಮತ್ತು ಸಿಹಿ ಇಬ್ಬರು ಜತೆಗಿದ್ದರೆ ಅದೇ ನನಗೆ ದೊಡ್ಡ ಖುಷಿ ಎನ್ನುತ್ತಿದ್ದಾನೆ ರಾಮ. ಸೀತಾ ನನಗೆ ಸಿಗ್ತಾರಾ? ಅವರಿಗೆ ನನ್ನ ಮೇಲೆ ಪ್ರೀತಿ ಇದೆಯಾ ಎಂದು ರಾಮ್‌ ತನ್ನಲ್ಲಿ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ.

ಚಾಂದಿನಿ ಮತ್ತು ರಾಮನನ್ನು ಒಟ್ಟಿಗೆ ನೋಡಿದಾಗ ನನಗ್ಯಾಕೋ ಬೇಸರ ಆಯ್ತು. ಯಾಕೆ ನನ್ನ ಮನಸ್ಸಲ್ಲಿ ಈ ರೀತಿಯ ಚಡಪಡಿಕೆ ಮೂಡಿಸಿದೆ. ಅವರ ಹುಡುಗಿ ಅವರ ಜೀವನದಲ್ಲಿ ಇರಬೇಕೆಂದು ವಾಪಸ್ಸು ಬಂದಿದ್ದಾರೆ. ಅವರಿಬ್ಬರೂ ಚೆನ್ನಾಗಿರಬೇಕು ಎಂದು ಹರಸಬೇಕು. ಅದನ್ನು ಬಿಟ್ಟು ನನ್ನ ತಲೆಯಲ್ಲಿ ಬೇರೆಯ ವಿಚಾರಗಳೇ ಓಡಾಡುತ್ತಿವೆಯಲ್ಲ. ರಾಮ್‌ ನನಗೆ ಸ್ನೇಹಿತ ಮಾತ್ರ ಎಂದು ದೇವರ ಮುಂದೆ ನಿಂತು ಬೇಡುತ್ತಿದ್ದಾಳೆ ಸೀತಾ.

ದೇವಸ್ಥಾನದಲ್ಲಿ ಮುಖಾಮುಖಿ

ಇತ್ತ ಸೀತಾ ಬಳಿ ಎಲ್ಲವನ್ನು ಹೇಳಿಕೊಂಡರೆ, ಈ ಚಾಂದಿನಿ, ಅವಳ ಹಳೇ ನೆನಪು ಯಾವುದೂ ನನ್ನನ್ನು ಕಾಡಲ್ಲ ಎನ್ನುತ್ತಲೇ ಸೀತಾ ಇದ್ದ ದೇವಸ್ಥಾನಕ್ಕೇ ಕಾಕತಾಳೀತವೆಂಬಂತೆ, ರಾಮನ ಆಗಮನವಾಗಿದೆ. ದೇವಿಯ ಸನ್ನಿಧಾನದಲ್ಲಿ ಇಬ್ಬರ ಮುಖಾಮುಖಿಯೂ ಆಗಿದೆ. ಇಬ್ಬರೂ ಅಚ್ಚರಿಯಲ್ಲಿಯೇ ಒಬ್ಬರಿಗೊಬ್ಬರು ನೋಡಿಕೊಂಡಿದ್ದಾರೆ. ರಾಮನ ಹೆಸರಲ್ಲಿ ದೇವರಿಗೆ ಅರ್ಚನೆ ಮಾಡಿಸಿದ್ದಾಳೆ ಸೀತಾ.

ರಾಮನಿಗಾಗಿ ಸೀತಾಳ ಹರಕೆ

ಇಬ್ಬರೂ ದೇವಸ್ಥಾನದಿಂದ ಆಚೆ ಬಂದಿದ್ದಾರೆ. ಸೀತಾಗೆ ನೀವಿಲ್ಲಿ ಸಿಕ್ಕಿದ್ದೇ ದೊಡ್ಡ ಸರ್ಪ್ರೈಸ್‌ ಎಂದಿದ್ದಾನೆ ರಾಮ. ನೀವೊಬ್ಬರೇ ಬಂದಿದ್ದೀರಾ ಎಂದು ಸೀತಾ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಚಾಂದಿನಿ ಜತೆಗೆ ಬರಬೇಕಿತ್ತಾ? ಎಂದಿದ್ದಾನೆ ರಾಮ. ಈ ನಡುವೆ ಹರಕೆ ವಿಚಾರವನ್ನೂ ಸೀತಾ ಹೇಳಿದ್ದಾಳೆ. ಸೀತಾ ನಾವು ಯಾರ್ಯಾರಿಗೋಸ್ಕರ ಹರಕೆ ಹೊತ್ತುಕೊಳ್ಳಲು ಆಗಲ್ಲ. ನಾವು ಯಾರನ್ನು ಜಾಸ್ತಿ ಪ್ರೀತಿಸ್ತಿವೋ ಅವರು ಚೆನ್ನಾಗಿರಲಿ ಎಂದು ಬಯಸುತ್ತೇವೆ ಎಂದಿದ್ದಾನೆ ಸೀತಾ.

ನನ್ನನ್ನು ಬದುಕಿಸೋ ಅಮ್ಮನೇ ಸಿಹಿ

ನನ್ನ ಪರಿಸ್ಥಿತಿಯನ್ನು ನನ್ನವರು ಎಂದು ಯಾರಿದ್ದಾರೋ ಅವರ ಬಳಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಆದರೆ, ಅಮ್ಮ ನೆನಪಾದಳು. ಅಷ್ಟೊತ್ತಿಗೆ ಸಿಹಿ ಕಾಲ್‌ ಮಾಡಿದ್ಲು. ಒಮೊಮ್ಮೆ ನನಗನಿಸುತ್ತೆ, ನನ್ನನ್ನು ಬದುಕಿಸೋ ಅಮ್ಮನೇ ಸಿಹಿ ಅಂತ. ದೇವಸ್ಥಾನಕ್ಕೆ ಕಳಿಸಿದ್ದೂ ಅವಳೇ ಎಂದಿದ್ದಾನೆ. ಅಷ್ಟೊತ್ತಿಗೆ ನಿಮ್ಮ ಪ್ರೈವಸಿಗೆ ತೊಂದರೆ ಮಾಡ್ತಿದ್ದೇನೆ. ನಾನಿನ್ನು ಹೊರಡುತ್ತೇನೆ ಎಂದು ಸೀತಾ ಹೊರಟು ನಿಂತಿದ್ದಾಳೆ.

ನನಗೆ ನೀವು ಬೇಕು ಸೀತಾ..

ನನ್ನಿಂದ ದೂರ ಹೋಗುವುದಕ್ಕೇ ಕಾಯ್ತಿದ್ದೀರಿ ಅಲ್ವ ನೀವು. ನಿಜ ಹೇಳಿ ದೇವಸ್ಥಾನದಲ್ಲಿ ನಿಮಗೆ ನಾನು ಸಿಕ್ಕಿದ್ದಕ್ಕೆ ಖುಷಿ ಇಲ್ವಾ? ನಾನು ಹೇಳುವುದಾದರೆ, ನೀವು ನನಗೆ ಸಿಕ್ಕಿದ್ದಕ್ಕೆ ತುಂಬ ಖುಷಿಯಾಯ್ತು. ಏನನ್ನು ಹುಡುಕಿ ಬಂದ್ನೋ ಅದೇ ಸಿಕ್ತು. ನನ್ನ ಸಮಾಧಾನ, ಕಂಫರ್ಟ್‌ ಎಲ್ಲವೂ ನೀವೇ. ಒಂದು ಮಾತು ನಿಜ ಹೇಳಬೇಕು ಅಂದರೆ ನಾನು ದೇವಸ್ಥಾನಕ್ಕೆ ಬಂದು ಬೇಡಿಕೊಂಡಿದ್ದೇ, ನೀವು ನನಗೆ ಸಿಗಲಿ ಅಂತ. ನಾನು ಬೇಡಿಕೊಂಡಿದ್ದನ್ನು ದೇವರ ಕ್ಷಣಾರ್ಧದಲ್ಲಿ ಈಡೇರಿಸಿದ ಎಂದಿದ್ದಾನೆ ರಾಮ.

ಗೊತ್ತಿದ್ದೂ ಗೊತ್ತಿದ್ದೂ ಪ್ರೀತಿ ಮಾಡುವವರನ್ನು ಕಳೆದುಕೊಳ್ತಾರಾ? ಹೀಗೆ ಹೇಳುತ್ತಲೇ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಸೀತಾಳ ಮುಂದೆ ಹೇಳಿಕೊಂಡಿದ್ದಾನೆ ರಾಮ. ಸೀತಾ ಅಕ್ಷರಶಃ ಶಾಕ್‌ ಆಗಿದ್ದಾಳೆ. ದೇವರ ಸನ್ನಿಧಿಯಲ್ಲಿ ನನಗೆ ನೀವಂದ್ರೆ ಇಷ್ಟ ಎಂದಿದ್ದಾನೆ ರಾಮ. ಹಾಗಾದ್ರೆ, ರಾಮನ ಈ ಪ್ರೀತಿಯನ್ನು ಸೀತಾ ಒಪ್ಪುತ್ತಾಳಾ? ಇದಕ್ಕೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.