Seetha Rama Serial: ‘ನಾವಿರೋದೇ ನಾವು ಹೆತ್ತ ಮಕ್ಕಳನ್ನು ಬೇರೆಯವರಿಗೆ ಬಿಟ್ಟುಕೊಡೋಕೆ!’ ಸೀತಾ ಬಾಯ್ತಪ್ಪಿ ಬಂತು ‘ಸಿಹಿ’ ಸತ್ಯ-television news seethas shocking emotional outburst seetha rama serial september 25th episode mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ‘ನಾವಿರೋದೇ ನಾವು ಹೆತ್ತ ಮಕ್ಕಳನ್ನು ಬೇರೆಯವರಿಗೆ ಬಿಟ್ಟುಕೊಡೋಕೆ!’ ಸೀತಾ ಬಾಯ್ತಪ್ಪಿ ಬಂತು ‘ಸಿಹಿ’ ಸತ್ಯ

Seetha Rama Serial: ‘ನಾವಿರೋದೇ ನಾವು ಹೆತ್ತ ಮಕ್ಕಳನ್ನು ಬೇರೆಯವರಿಗೆ ಬಿಟ್ಟುಕೊಡೋಕೆ!’ ಸೀತಾ ಬಾಯ್ತಪ್ಪಿ ಬಂತು ‘ಸಿಹಿ’ ಸತ್ಯ

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ತನಗರಿವಿಲ್ಲದೇ ಎಲ್ಲರ ಮುಂದೆ ಬಾಯ್ತಪ್ಪ ಸಿಹಿ ಸತ್ಯವನ್ನು ಹೇಳಿದ್ದಾಳೆ. ಅರೇ ಕ್ಷಣ ಎಲ್ಲರೂ ಶಾಕ್‌ ಆಗಿದ್ದಾರೆ. ಮತ್ತೊಂದು ಕಡೆ ಭಾರ್ಗವಿ ಹೊಸ ತಂತ್ರ ರೂಪಿಸಿದ್ದಾಳೆ. ಪರೋಕ್ಷವಾಗಿ ಸಿಹಿ ಹುಟ್ಟಿನ ಬಗ್ಗೆ ಆಕೆ ಕಡೆಯಿಂದಲೇ ಬಾಯಿಬಿಡಿಸುವ ಯತ್ನ ಮಾಡಿದ್ದಾಳೆ.

ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿ (instagram\ Zee5)

Seetha Rama Serial September 25th Episode: ಮೇಘಶ್ಯಾಮ್‌ ಮತ್ತು ಶಾಲಿನಿ ಜೋಡಿಯ ಬಗ್ಗೆ ಡಾಕ್ಟರ್‌ ಅನಂತಲಕ್ಷ್ಮೀ ಬಳಿ ಬಂದಿದ್ದಾಳೆ ಭಾರ್ಗವಿ. ಆದರೆ, ದಯವಿಟ್ಟು ಅವರ ಬಗ್ಗೆ ಮಾತನಾಡಲು ನೀವಿಲ್ಲಿ ಬಂದಿದ್ದೀರಿ ಎಂದರೆ, ಮಾತನಾಡಲೇಬೇಡಿ. ಅವರು ಅದಕ್ಕೆ ಯೋಗ್ಯರಲ್ಲ. ಈ ವಿಷ್ಯಾ ನನಗೆ ಮಾತನಾಡೋಕೂ ಇಷ್ಟ ಇಲ್ಲ. ಇದರ ಮಧ್ಯೆ ನೀವು ಬರದಿದ್ದರೇ ಒಳ್ಳೆಯದು. ನನಗೊಂದು ಸರ್ಜರಿ ಇದೆ, ಮತ್ತೆ ಸಿಗೋಣ ಎಂದು ಅಲ್ಲಿಂದ ಹೊರನಡೆದಿದ್ದಾಳೆ ಅನಂತಲಕ್ಷ್ಮೀ. ಭಾರ್ಗವಿಯ ಈ ನಡೆ ಲಕ್ಷ್ಮೀಗೆ ಕೊಂಚ ಅನುಮಾನ ತರಿಸಿದೆ.

ಆ ಶ್ಯಾಮ್‌ ಈಗ ಮಗು ಹಿಂದೆ ಬಿದ್ದಿದ್ದಾರಾ? ಇಷ್ಟು ದಿನ ಎಲ್ಲಿದ್ದರು? ಬರಬೇಕಾದ ಟೈಮ್‌ಗೆ ಬರದೇ ಕೈಕೊಟ್ಟು ಈಗ ಬಂದಿದ್ದಾರೆ. ಈ ಭಾರ್ಗವಿ ಫ್ಯಾಮಿಲಿಗೆ ಶ್ಯಾಮ್‌, ಶಾಲಿನಿ ಸಹ ಗೊತ್ತಾ? ಈಗಾಗಲೇ ಸೀತಾ ಸಿಹಿ ಅನ್ಯೋನ್ಯವಾಗಿದ್ದಾರೆ. ಈಗ ಈ ಮಗು ನೆನಪಾಯ್ತಾ ಅವರಿಗೆ? ಯಾವುದೇ ಕಾರಣಕ್ಕೂ ಆ ಮಗು ಸೀತಾ ಬಳಿ ಇದೆ ಅಂತ ನಾನು ಹೇಳಲ್ಲ ಎಂದು ಮನದಲ್ಲಿಯೇ ಮಾತನಾಡಿಕೊಂಡಿದ್ದಾಳೆ ಅನಂತಲಕ್ಷ್ಮೀ. ಅಲ್ಲಿಗೆ ಭಾರ್ಗವಿಯ ಪ್ಲಾನ್‌ ಉಲ್ಟಾ ಹೊಡೆದಿದೆ. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿದ್ದಾಳೆ.

ಬಾಯ್ತಪ್ಪಿ ಬಂತು ಸಿಹಿ ಸತ್ಯ

ಇತ್ತ ಮನೆಯಲ್ಲಿ ಸೀತಾ ರಾಮ ಸ್ಕೂಲ್‌ ಡ್ರೆಸ್‌ ಹಾಕಿಕೊಂಡು ವಿದ್ಯಾರ್ಥಿಗಳಾದರೆ, ಸಿಹಿ ಮತ್ತು ಅನಿಕೇತ್‌ ಶಿಕ್ಷಕರಾಗಿದ್ದಾರೆ. ಶ್ಯಾಮ್‌ ಮತ್ತು ಶಾಲಿನಿ ಜಡ್ಜಸ್‌ ಆಗಿದ್ದಾರೆ. ಈ ಆಟದಲ್ಲಿ ಸಿಹಿ ಮಾತಿನಿಂದ ಸೀತಾಗೆ ನೋವುಂಟಾಗಿದೆ. ಈ ಆಟ ಸಾಕು ಎಂದು ಸೀತಾ ಹೇಳಿದರೂ, ಸಿಹಿ ಕೇಳುತ್ತಿಲ್ಲ. ಇದೇ ವೇಳೆ ಕೊಂಚ ಭಾವುಕಳಾದ ಸೀತಾ, ನಾವು ಇರೋದೇ ನೋವು ಅನುಭವಿಸೋಕೆ, ನಾವಿರೋದೇ ತ್ಯಾಗ ಮಾಡೋಕೆ. ನಾವಿರೋದೇ ನಾವು ಹೆತ್ತ ಮಕ್ಕಳನ್ನು ಬೇರೆಯವರಿಗೆ ಬಿಟ್ಟುಕೊಡೋಕೆ ಎಂದಿದ್ದಾಳೆ ಸೀತಾ. ಸೀತಾಳ ಈ ಮಾತು ಅಲ್ಲಿದ್ದ ಶ್ಯಾಮ್‌ ಮತ್ತು ರಾಮ್‌ಗೂ ಆಶ್ಚರ್ಯ ತರಿಸಿದೆ.

ಸಿಹಿ ಅಪ್ಪ ಸಿಕ್ಕೇ ಸಿಗ್ತಾನೆ ಅಂತ ಇತ್ತ ರುದ್ರ ಪ್ರತಾಪ್‌ ರಾಮನ ವಿರುದ್ಧ ಹಲ್ಲು ಮಸಿಯುತ್ತಿದ್ದಾನೆ. ಇಲ್ಲದ ಅಪ್ಪನನ್ನು ನಾನೇ ಸೃಷ್ಟಿ ಮಾಡ್ತಿನಿ ಎಂದಿದ್ದಾನೆ. ಅಷ್ಟೊತ್ತಿಗಾಗಲೇ ಭಾರ್ಗವಿ ಫೋನ್‌ ಬಂದಿದೆ. ಸಿಹಿಯ ತಂದೆಯನ್ನು ಆದಷ್ಟು ಬೇಗ ಹುಡುಕಿ ಎಂದು ರೇಗಿದ್ದಾಳೆ. ನಾನೂ ಅದೇ ಪ್ರಯತ್ನದಲ್ಲಿದ್ದೇನೆ ಎಂದಿದ್ದಾನೆ ರುದ್ರಪ್ರತಾಪ್‌. ಈ ಆಟದಲ್ಲಿ ಒಂದು ದೊಡ್ಡ ಲಾಭ ಮಾಡಿಕೊಂಡೇ ತೀರುತ್ತೇನೆ ಎಂದಿದ್ದಾನೆ. ಇತ್ತ ಅನಂತಲಕ್ಷ್ಮೀಗೂ ಟಕ್ಕರ್‌ ಕೊಡಲು ಭಾರ್ಗವಿ ಸಂಚು ರೂಪಿಸಿದ್ದಾಳೆ.

ಭಾರ್ಗವಿ ತಲೆ ಸೇರಿದ ಹೊಸ ಹುಳ..

ಸೀತಾ ಶ್ಯಾಮ್‌ ಶಾಲಿನಿ ಈ ಮೂವರಿಗೂ ಏನೋ ಕನೆಕ್ಷನ್‌ ಇದೆ. ಶ್ಯಾಮ್‌ ಮತ್ತು ಶಾಲಿನಿ ಬಾಡಿಗೆ ತಾಯಿ ಆಯ್ಕೆ ಮಾಡಿಕೊಂಡಾಗ ಆ ತಾಯಿಯ ಮುಖವನ್ನು ಅವರು ನೋಡಿಲ್ಲ. ಅದೇ ರೀತಿ ನಮ್ಮ ಮನೆಯಲ್ಲಿರೋ ಸೀತಾಳಿಗೆ ಸಿಹಿ ಮಗಳು. ಆದರೆ ಅದೇ ಸೀತಾಳ ಗಂಡನನ್ನೂ ಯಾರೂ ನೋಡಿಲ್ಲ. ಹಾಗಾದರೆ ಆ ಮಗುವಿನ ತಂದೆ ಎಲ್ಲಿದ್ದಾನೆ? ಅವನ್ಯಾರು? ಎಂಬ ಸಣ್ಣ ಸುಳಿವೂ ಇಲ್ಲ. ಸೀತಾಳ ಹಿಸ್ಟರಿನೇ ಯಾರಿಗೂ ಗೊತ್ತಿಲ್ಲ ಎಂದು ಗಂಡ ವಿಶ್ವನ ಜತೆ ಚರ್ಚೆ ಮಾಡಿದ್ದಾಳೆ. ಅಲ್ಲಿಗೆ ಭಾರ್ಗವಿ ತಲೆಗೆ ಹೊಸ ಹುಳ ಸೇರಿಕೊಂಡಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಮೇಘಶ್ಯಾಮ- ನಾಗಾರ್ಜುನ್‌ ಬಿ.ಆರ್‌

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

mysore-dasara_Entry_Point