ನನ್ನ ಮಗ ಪಾರ್ಥನ ಕೊಲ್ಲಲು ಯತ್ನಿಸಿದ ನಿನಗೆ ಈ ಮನೆಯಲ್ಲಿ ಇನ್ನು ಸ್ಥಾನವಿಲ್ಲ; ಜೈದೇವ್‌ನ ಹೊರದಬ್ಬಿದ ಶಕುಂತಲಾದೇವಿ- ಅಮೃತಧಾರೆ
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ನ ಪಾಪಕೃತ್ಯಗಳನ್ನು ವಿಷಯ ಕೇಳಿದ ಶಕುಂತಲಾದೇವಿ ಆತನನ್ನು ಮನೆಯಿಂದ ಹೊರದಬ್ಬಿದ್ದಾರೆ. ಗೌತಮ್ ಪ್ರತಿಯೊಂದು ವಿಷಯವನ್ನೂ ಸಾಕ್ಷ್ಯ ಸಮೇತ ಎಲ್ಲರ ಮುಂದೆ ತಿಳಿಸಿದ್ದಾರೆ. ಇಂದಿನ ಸಂಚಿಕೆಯನ್ನು ನೋಡಿದ ಪ್ರೇಕ್ಷಕರು ವಾಹ್ ಎಂದಿದ್ದಾರೆ.
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಕಥೆ: ಜೈದೇವ್ ಮಾಡಿರುವ ಒಂದೊಂದೇ ಅಪರಾಧಗಳನ್ನು ಗೌತಮ್ ದಿವಾನ್ ಎಲ್ಲರ ಮುಂದೆ ಬಿಚ್ಚಿಡುತ್ತಿದ್ದಾರೆ. ಮೊದಲಿಗೆ ಟೆಂಡರ್ ವಿಷಯ ತಿಳಿಸುತ್ತಾರೆ. ಇದಾದ ಬಳಿಕ ಚಮಕ್ ಚಲ್ಲೋ ದಿಯಾಳ ಜತೆ ಅಕ್ರಮ ಸಂಬಂಧದ ವಿವರ ನೀಡುತ್ತಾರೆ. "ಭಂಡತನದಿಂದ ವರ್ತಿಸುತ್ತಿದ್ದಾನೆ. ಈಗ ಎಲ್ಲಿಂದ ಬಂದ ಗೊತ್ತ? ಅವಳನ್ನೇ ಭೇಟಿಯಾಗಿ ಬಂದ" ಎಂದು ಗೌತಮ್ ಹೇಳುತ್ತಾರೆ. "ಗೆಳೆಯ ಸರಿಯಾಗಿ ಬೆಂಡೆತ್ತುತ್ತಿದ್ದಾನೆ. ಇದು ಯಾವತ್ತೋ ಆಗಬೇಕಿತ್ತು. ಪ್ರೇಕ್ಷಕರ ಒತ್ತಾಯದ ಮೇರೆಗೆ ಇವತ್ತು ಆಗುತ್ತಿದೆ" ಎಂದು ಆನಂದ್ ಅಂದುಕೊಳ್ಳುತ್ತಾನೆ. "ತನ್ನ ದಾರಿಗೆ ಯಾರೇ ಬಂದರೂ ಅವರನ್ನು ಮಲಗಿಸೋದು, ಸಾಯಿಸೋದು ಇವನ ಕೆಲಸ. ಅದು ಮನೆಯವರೇ ಆಗಿರಲಿ, ಯಾರೇ ಆಗಿರಲಿ, ಇವನ ದೃಷ್ಟಿಯಲ್ಲಿ ನಾವೆಲ್ಲರೂ ಶತ್ರುಗಳೇ" ಎಂದು ಗೌತಮ್ ಮುಂದಿನ ವಿವರ ನೀಡುತ್ತಾರೆ. ತಾನು ಮಾಡಿದ ಕೊಲೆ ಪ್ರಯತ್ನಗಳ ವಿವರವೂ ಗೌತಮ್‌ಗೆ ತಿಳಿದಿದೆ ಎಂದು ಗೊತ್ತಾಗಿ ಜೈದೇವ್ ಥರಗುಟ್ಟುತ್ತಾನೆ. "ಗೌತಮ್ ಹೇಳ್ತಾ ಇರೋದು ನಿಜನಾ? ಮನೆಯವರನ್ನೇ ಕೊಲ್ಲಲು ನೋಡ್ತಿಯಾ?" ಎಂದು ಶಕುಂತಲಾದೇವಿ ಕೇಳುತ್ತಾರೆ.
ಕೆಂಚಪ್ಪ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿದ ಸ್ಟೋರಿ
"ನಾನು ಮತ್ತು ಭೂಮಿಕಾ ಚಿಕ್ಕಮಗಳೂರಿಗೆ ಹೋದದ್ದು ಹನಿಮೂನ್‌ಗೆ ಅಲ್ಲ. ಅಲ್ಲಿ ಕೆಂಚಪ್ಪನ ಜಗಳ ಜಾಸ್ತಿ ಆಗಿದೆ ಅಂತ. ಅಲ್ಲಿ ಜಗಳ ಜಾಸ್ತಿಯಾಗುವ ರೀತಿ ಮಾಡಿದ್ದು ಇದೇ ಜೈದೇವ್. ಅಲ್ಲಿ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿಸಿದ್ದೂ ಇದೇ ಜೈದೇವ್" ಎಂದು ಗೌತಮ್ ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗುತ್ತದೆ. ಇದರಲ್ಲಿ ಶಕುಂತಲಾದೇವಿಯ ಕೈವಾಡವೂ ಇರುವುದರಿಂದ ತಲೆತಗ್ಗಿಸುತ್ತಾರೆ. "ಬ್ರೋ ಇದು ಅತಿಯಾಯ್ತು. ಏನೂ ಹೇಳದೆ ಸುಮ್ಮನಿದ್ದೇನೆ ಎಂದು ಎಲ್ಲಾ ನನ್ನ ತಲೆಗೆ ಕಟ್ತಾ ಇದ್ದೀಯಾ?. ಟೆಂಡರ್ ಮಿಸ್ ಆಯ್ತು, ದಿಯಾಳ ಜತೆ ಸುತ್ತಾಡ್ತ ಇದ್ದೆ. ಆದರೆ, ಎಲ್ಲವನ್ನೂ ನಾನೇ ಮಾಡಿದ್ದೇನ. ನನ್ನ ತಲೆಗೆ ಎಲ್ಲವನ್ನೂ ಕಟ್ಟಬೇಡ. ಸಾಕ್ಷಿ ಇದೆಯಾ " ಎಂದು ಜೈದೇವ್ ಹೇಳುತ್ತಾನೆ. "ಕೆಂಚಾ" ಎಂದು ಗೌತಮ್ ಕರೆದಾಗ ಕೆಂಚ ಒಳಗೆ ಬರುತ್ತಾನೆ. "ನನಗೆ ಹಣದ ಅವಶ್ಯಕತೆ ಇತ್ತು. ನನಗೆ ಹಣದ ಆಸೆ ತೋರಿಸಿ, ನಿಮ್ಮ ಮೇಲೆ ಎತ್ತಿ ಕಟ್ಟಿದ್ರು. ಭೂಮಿಕಾನ ಕಿಡ್ನ್ಯಾಪ್ ಮಾಡಿಸಿದ್ರು, ಕೊನೆಗೆ ನನ್ನ ಕಿಡ್ನ್ಯಾಪ್ ಮಾಡಿಸಿದ್ರು" ಎಂದು ಎಲ್ಲಾ ಸ್ಟೋರಿ ಹೇಳುತ್ತಾನೆ.
ಆನಂದ್‌ಗೆ ಆಕ್ಸಿಡೆಂಟ್ ಮಾಡಿದ ಸ್ಟೋರಿಯೂ ಬಹಿರಂಗ
"ಇವನ ಬಂಡವಾಳ ಎಲ್ಲಾ ಗೊತ್ತಾಗಿ, ಒಂದು ದಿನ ಎಲ್ಲಾ ಹೊರಗೆ ಬರುತ್ತದೆ ಎಂದು ಆನಂದ್‌ಗೆ ಆಕ್ಸಿಡೆಂಟ್ ಮಾಡಿಸಿದ್ದೂ ಇವನೇ" ಎಂದು ಗೌತಮ್ ಹೇಳುತ್ತಾರೆ. ಇದನ್ನು ಕೇಳಿ ಶಕುಂತಲಾ ಮತ್ತು ಇತರರಿಗೆ ಅಚ್ಚರಿಯಾಗುತ್ತದೆ. "ನೋ ಎಲ್ಲಾ ಸುಳ್ಳು" ಎಂದು ಜೈದೇವ್ ತಪ್ಪಿಸಿಕೊಳ್ಳುತ್ತಾನೆ. "ಹೌದು ನೀನೇ ಮಾಡಿದ್ದು, ಪೊಲೀಸ್ ಹತ್ರ ಇದಕ್ಕೆ ಸಾಕ್ಷಿಯೂ ಇದೆ. ನಿನ್ನ ಕಾಲ್ ಡಿಟೇಲ್ಸ್, ಯಾರಿಗೆ ಸುಫಾರಿ ಕೊಟ್ಟಿದ್ದೀ, ಎಲ್ಲವೂ ಪೊಲೀಸರ ಬಳಿ ಇದೆ" ಎಂದು ಅಪರ್ಣಾ ಹೇಳುತ್ತಾಳೆ.
ಪಾರ್ಥ ಮತ್ತು ಅಪೇಕ್ಷಾನ ಕೊಲೆ ಯತ್ನದ ಕಥೆ
"ಅಮ್ಮಾ.. ಇವನು ಮಾಡಿದ ಸಾಧನೆ ತುಂಬಾ ಇದೆ. ಈಗ ನಾನು ಹೇಳುವ ವಿಚಾರವನ್ನು ಸ್ವಲ್ಪ ಗಟ್ಟಿ ಮನಸ್ಸಿನಿಂದ ಎಲ್ಲರೂ ಕೇಳಿ" ಎಂದು ಗೌತಮ್ ಪಾರ್ಥನ ವಿಷಯ ತಿಳಿಸುತ್ತಾನೆ. "ಆನಂದ್‌ನ ಕೊಲೆ ಮಾಡಲು ಕಾರಣ ಏನು ಗೊತ್ರ? ಅಪೇಕ್ಷಾಳನ್ನು ಪ್ರೀತಿಸಿದ ಅಂತ ತನ್ನ ತಮ್ಮ ಪಾರ್ಥನನ್ನೇ ಕೊಲೆ ಮಾಡಲು ನೋಡಿದ" ಎಂದು ಹೇಳಿದಾಗ ಎಲ್ಲರಿಗೂ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದನ್ನು ಕೇಳಿ ಶಕುಂತಲಾದೇವಿ ನೆಲಕ್ಕೆ ಬೀಳುವಂತೆ ಆಗುತ್ತಾರೆ. ಇದು ಇವರಿಗೆ ಗೊತ್ತಿಲ್ಲದ ವಿಚಾರ. "ನನ್ನ ಪಾರ್ಥನ ನೀನು ಕೊಲ್ಲಲು ನೋಡಿದ್ಯ?" ಎಂದು ಶಕುಂತಲಾದೇವಿ ದುಃಖದಲ್ಲಿ ಕೇಳುತ್ತಾರೆ. "ನನ್ನ ಪ್ರೀತಿಯ ತಮ್ಮ, ಹೇಗೆ ಕೊಲೆ ಮಾಡಲು ಸಾಧ್ಯ" ಎಂದು ಜೈದೇವ್ ಹೇಳಿದಾಗ ಗೌತಮ್ ಲೋಕಿ ಎಂದು ಕರೆಯುತ್ತಾನೆ. ಸಾಕ್ಷಿ ಲೋಕಿ ಎಲ್ಲವನ್ನೂ ಹೇಳುತ್ತಾನೆ. ಪಾರ್ಥ ಮತ್ತು ಅಪೇಕ್ಷಾ ಈ ವಿಚಾರ ಕೇಳಿ ಬೆಚ್ಚಿ ಬೀಳುತ್ತಾನೆ.
ಮಲ್ಲಿಗೆ ಅಪಘಾತವಾದ ವಿಷಯ
"ಇವನ ಅಪರಾಧ ಇಲ್ಲಿಗೆ ಮುಗಿಯೋದಿಲ್ಲ. ಮಲ್ಲಿಗೆ ಅಪಘಾತವಾಯ್ತು. ನಂತರ ಕೊಲ್ಲಲು ನೋಡಿದ" ಎಂದು ಮಲ್ಲಿಯನ್ನು ಆಸ್ಪತ್ರೆಯಲ್ಲಿ ಕೊಲ್ಲಲು ಜೈದೇವ್ ಮಾಡಿರುವ ಪ್ಲ್ಯಾನ್‌ಗಳ ಬಗ್ಗೆ ಗೌತಮ್ ತಿಳಿಸುತ್ತಾರೆ. ಆ ಸಮಯದಲ್ಲಿ ಆಸ್ಪತ್ರೆಯ ನರ್ಸ್ ಬಂದು ಸಾಕ್ಷಿ ತಿಳಿಸುತ್ತಾರೆ. "ಇವರೇ ಮಲ್ಲಿಯ ಪ್ಲ್ಯಾನ್ ಉಳಿಸಿದ್ದು" ಎಂದು ಹೇಳುತ್ತಾರೆ. ನರ್ಸ್ ಎಲ್ಲಾ ವಿಷಯಗಳನ್ನೂ ಹೇಳುತ್ತಾರೆ.