ಬೆಣ್ಣೆನಗರಿ ದಾವಣಗೆರೆಯಲ್ಲಿ ವರಮಹಾಲಕ್ಷ್ಮೀ ಉತ್ಸವ; ಶ್ರಾವಣಿ ಸುಬ್ರಮಣ್ಯ, ಬ್ರಹ್ಮಗಂಟು ಸೀರಿಯಲ್ ತಂಡಗಳ ಆಗಮನ
ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ಶ್ರಾವಣಿ ಸುಬ್ರಮಣ್ಯ ಮತ್ತು ಬ್ರಹ್ಮಗಂಟು ತಂಡದ ಸದಸ್ಯರು ದಾವಣಗೆರೆಗೆ ಬರಲಿದ್ದಾರೆ. ವರಮಹಾಲಕ್ಷ್ಮೀ ಉತ್ಸವದ ನಿಮಿತ್ತ ಬೆಣ್ಣೆನಗರಿಯ ಮಂದಿಗೆ ಮನರಂಜನೆಯ ರಸದೌತಣ ನೀಡಲಿದ್ದಾರೆ.
Varamahalakshmi utsava 2024: ಇನ್ನೇನು ಶ್ರಾವಣ ಬಂತು. ಸರಣಿ ಹಬ್ಬಗಳೂ ಇಲ್ಲಿಂದ ಆರಂಭ. ಧಾರಾವಾಹಿ ತಂಡಗಳಿಗೂ ಇದೀಗ ಹಬ್ಬ. ಅಂದರೆ, ಜೀ ಕನ್ನಡ ವಾಹಿನಿ ವರಮಹಾಲಕ್ಷ್ಮೀ ಉತ್ಸವವನ್ನು ಆಯೋಜಿಸಿದೆ. ಅದೂ ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಅದ್ಧೂರಿ ಉತ್ಸವದಲ್ಲಿ ಇತ್ತೀಚೆಗಷ್ಟೇ ಶುರುವಾಗಿ ನೋಡುಗರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಎರಡು ಧಾರಾವಾಹಿ ತಂಡಗಳು ಭಾಗವಹಿಸಿ, ದಾವಣಗೆರೆ ಮಂದಿಗೆ ಮನರಂಜನೆ ರಸದೌತಣವನ್ನೇ ನೀಡಲಿದ್ದಾರೆ.
ತನ್ನ ವಿಭಿನ್ನ, ವಿಶೇಷ ಕಾರ್ಯಕ್ರಮಗಳಿಂದಲೇ ಕನ್ನಡಿಗರನ್ನು ನಿರಂತರವಾಗಿ ರಂಜಿಸುತ್ತಲಿರುವ ಕರ್ನಾಟಕದ ನಂಬರ್ 1 ಮನರಂಜನಾ ವಾಹಿನಿಯಾಗಿ ನಿಂತಿದೆ ಜೀ ಕನ್ನಡ. ಇದೀಗ ಇದೇ ವಾಹಿನಿಯ ಜನಮೆಚ್ಚಿದ 2 ಧಾರಾವಾಹಿಗಳಾದ ಶ್ರಾವಣಿ ಸುಬ್ರಹ್ಮಣ್ಯ ಹಾಗೂ ಬ್ರಹ್ಮಗಂಟು ತಂಡಗಳೊಟ್ಟಿಗೆ ಜೀ ಕನ್ನಡ ವರಮಹಾಲಕ್ಷ್ಮೀ ಉತ್ಸವವನ್ನು ಇದೇ ಆಗಸ್ಟ್ 4ರಂದು ದಾವಣಗೆರೆಯಲ್ಲಿ ಆಯೋಜಿಸಿದೆ.
ಹಬ್ಬ ಅಂದರೆ ಸಂಭ್ರಮ, ಸಡಗರ. ಅದರಲ್ಲೂ ಈ ಬಾರಿಯ ವರಮಹಾಲಕ್ಷ್ಮೀ ಹಬ್ಬ ಕನ್ನಡಿಗರಿಗೆ ವಿಶಿಷ್ಟವಾಗಿರಲಿದ್ದು ತಮ್ಮ ನೆಚ್ಚಿನ ಕಲಾವಿದರ ಜೊತೆ ಆಚರಿಸಬಹುದಾಗಿದೆ. ವೀಕ್ಷಕರ ಜೊತೆ ವಿಶೇಷ ನಂಟು ಹೊಂದಿರುವ ಜೀ ಕನ್ನಡ ವಾಹಿನಿ ಅವರ ನಡುವೆಯೇ ಮನರಂಜನೆಯನ್ನು ಹಬ್ಬವಾಗಿಸುತ್ತಿದೆ.
ದಾವಣಗೆರೆಯಲ್ಲಿ ಎಲ್ಲಿ ನಡೆಯಲಿದೆ..
ಪ್ರತಿದಿನ ರಾತ್ರಿ 9 ಗಂಟೆ ಪ್ರಸಾರವಾಗುವ ಶ್ರಾವಣಿ ಸುಬ್ರಹ್ಮಣ್ಯ ಹಾಗೂ 10 ಗಂಟೆಗೆ ಪ್ರಸಾರವಾಗುವ ಬ್ರಹ್ಮಗಂಟು ಧಾರಾವಾಹಿಗಳ ಕಲಾವಿದರು, ತಂತ್ರಜ್ಞರು ಉತ್ಸವದಲ್ಲಿ ಭಾಗಿಯಾಲಿದ್ದು ಹಾಡಿ, ಕುಣಿದು ನೋಡುಗರನ್ನು ರಂಜಿಸಿ ಹಬ್ಬದ ಮೆರುಗನ್ನು ಹೆಚ್ಚಿಸಲಿದ್ದಾರೆ. ದಾವಣಗೆರೆಯ ಹದಡಿ ರಸ್ತೆಯ ಐಟಿಐ ಗೇಟ್ ಬಳಿಯಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಎಷ್ಟೊತ್ತಿಗೆ ಶುರು ಕಾರ್ಯಕ್ರಮ
ಆಗಸ್ಟ್ 4 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆಗಸ್ಟ್ 3 ಶನಿವಾರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಪಾಸ್ ವಿತರಣೆಯಾಗಲಿದೆ. ಸೀಮಿತ ಆಸನಗಳಿರಲಿದ್ದು ಮೊದಲು ಬಂದವರಿಗೆ ಆದ್ಯತೆ ಎಂದು ವಾಹಿನಿ ವಿಶೇಷ ಸೂಚನೆ ನೀಡಿದೆ. ದಾವಣಗೆರೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಮನರಂಜನಾ ಉತ್ಸವಕ್ಕೆ ಆಗಮಿಸಿ ನೆಚ್ಚಿನ ಕಲಾವಿದರ ಜೊತೆ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಬಹುದು.