‘ದೇವರು ಎಲ್ಲ ನೋಡ್ತಿದ್ದಾನೆ.. ಅವನಿಗೆ ಎಲ್ಲವೂ ಗೊತ್ತು!’ ವರುಣ್ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಇನ್‌ಸ್ಟಾ ಪೋಸ್ಟ್‌‌ ಮರ್ಮವೇನು?-television news varsha kaveri shared a post on social media after her whatsapp chat with varun aradya was leaked mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ದೇವರು ಎಲ್ಲ ನೋಡ್ತಿದ್ದಾನೆ.. ಅವನಿಗೆ ಎಲ್ಲವೂ ಗೊತ್ತು!’ ವರುಣ್ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಇನ್‌ಸ್ಟಾ ಪೋಸ್ಟ್‌‌ ಮರ್ಮವೇನು?

‘ದೇವರು ಎಲ್ಲ ನೋಡ್ತಿದ್ದಾನೆ.. ಅವನಿಗೆ ಎಲ್ಲವೂ ಗೊತ್ತು!’ ವರುಣ್ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಇನ್‌ಸ್ಟಾ ಪೋಸ್ಟ್‌‌ ಮರ್ಮವೇನು?

ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ವಾಟ್ಸಾಪ್ ಚಾಟ್‌ ಲೀಕ್‌ ‌ಆದ ಬೆನ್ನಲ್ಲೇ, ವರುಣ್‌ಗೆ ನೆಟ್ಟಿಗರು ಒಂದಷ್ಟು ಪ್ರಶ್ನೆ ಕೇಳಿದ್ದರು. ಚಾಟ್‌ ಪೋಟೋಗಳನ್ನು ಮುಂದಿಟ್ಟುಕೊಂಡು, ಇದ್ದಕ್ಕೆ ಏನ್‌ ಹೇಳ್ತಿರಿ ವರುಣ್‌ ಎಂದಿದ್ದರು. ಈ ನಡುವೆಯೇ ವರ್ಷಾ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ, ದೇವರಿಗೆ ಎಲ್ಲವೂ ಗೊತ್ತು ಎಂಬರ್ಥದ ಪೋಸ್ಟ್‌ ಹಂಚಿಕೊಂಡಿದ್ದರು.

ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ವರುಣ್‌ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
ವಾಟ್ಸಾಪ್‌ ಚಾಟ್‌ ಲೀಕ್‌ ಆದ ಬೆನ್ನಲ್ಲೇ ವರುಣ್‌ ಆರಾಧ್ಯ ಮಾಜಿ ಪ್ರೇಯಸಿ ವರ್ಷಾ ಕಾವೇರಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. (instagram)

Varsha Kaveri:ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವರುಣ್‌ ಆರಾಧ್ಯ ಮತ್ತು ವರ್ಷಾ ಕಾವೇರಿ ಈ ಇಬ್ಬರದ್ದೇ ಮಾತು. ವರುಣ್‌ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ಅವರಿಂದ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬಲ್ಲಿಂದ ಶುರುವಾದ ಈ ಸುದ್ದಿ, ಅದಾದ ಮೇಲೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ನಾನು ನೀಡಿದ ದೂರೇ ಬೇರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು ವರ್ಷಾ. ಇತ್ತ ವರುಣ್‌ ಸಹ ಈ ವರೆಗೂ ಆಗಿದ್ದೇನು? ಹರಿದಾಡುತ್ತಿರುವ ಸುದ್ದಿಯಲ್ಲಿನ ಅಸಲಿಯತ್ತೇನು? ಎಂಬ ಬಗ್ಗೆ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಸ್ಪಷ್ಟನೆ ನೀಡಿದ್ದರು. ಈ ನಡುವೆಯೇ ವರ್ಷಾ ಅವರ ಇತ್ತೀಚಿನ ಪೋಸ್ಟ್‌ ಇದೀಗ ಹೊಸ ಕಥೆ ಹೇಳುತ್ತಿದೆ.

ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ, ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಘಟನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಕಣ್ಣೀರು ಸುರಿಸಿ, ನಾನು ಅಂಥ ಹುಡುಗ ಅಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ವರ್ಷಾ ಮತ್ತು ವರುಣ್‌ ಜೋಡಿಯ ಸಾಕಷ್ಟು ರೀಲ್ಸ್‌ಗಳು ಇಂದಿಗೂ ಹರಿದಾಡುತ್ತಿವೆ. ಅವುಗಳನ್ನು ತೆಗೆಯುವಂತೆ ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದರೂ, ವರುಣ್‌ ಅವುಗಳನ್ನು ತೆಗೆದಿರಲಿಲ್ಲ. ಆ ನಿಟ್ಟಿನಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾದ ಬಳಿಕ ಪೊಲೀಸರ ಸಮ್ಮುಖದಲ್ಲಿ, ವಿಡಿಯೋ ಡಿಲಿಟ್‌ ಮಾಡಿಸುವುದಾಗಿ ಹೇಳಿದ್ದರು.

ವರುಣ್‌ ವಿಡಿಯೋದಲ್ಲಿ ಹೇಳಿಕೊಂಡಿದ್ದೇನು?

"ನಾನು ಕೊಲೆ ಬೆದರಿಕೆ ಹಾಕಿದೆ, ಬ್ಲಾಕ್ ಮೇಲ್ ಮಾಡಿದೆ ಎಂದೆಲ್ಲಾ ಹೇಳಲಾಗಿದೆ. ಅಂಥದ್ದೆಲ್ಲಾ ಮಾಡಿ ಜೈಲಿಗೆ ಹೋಗುವಷ್ಟು ಮೀಟರ್ ನಂಗಿಲ್ಲ. ನಾನೊಬ್ಬ ಫ್ಯಾಮಿಲಿ ಬಾಯ್ ಅಷ್ಟೇ. ಕೊಲೆ ಬೆದರಿಕೆ ಅಂತೆಲ್ಲಾ ಹೇಳಿರೋದು ಸರಿ ಅಲ್ಲ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ. ಬ್ಲಾಕ್‌ಮೇಲ್ ಮಾಡುವುದು ನನ್ನ ಕೆಲಸವಲ್ಲ. ಒಂದೊಳ್ಳೆಯ ಫ್ಯಾಮಿಲಿಯಿಂದ ಬಂದಿದ್ದೇನೆ" ಎಂದಿದ್ದರು ವರುಣ್. ವರುಣ್‌ ಹೀಗೆ ವಿಡಿಯೋ ಪೋಸ್ಟ್‌ ಮಾಡುತ್ತಿದ್ದಂತೆ, ವರ್ಷಾ ಕಾವೇರಿ ಜತೆಗಿನ ವರುಣ್‌ ಅವರ ಕೆಟ್ಟ ವಾಟ್ಸಾಪ್‌ ಚಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿದ್ದವು.

ಲೀಕ್‌ ಆದ ಚಾಟ್‌ನಲ್ಲಿ ಏನಿತ್ತು?

ವಿಡಿಯೋ ಮೂಲಕ ಎಲ್ಲರ ಮುಂದೆ ಬಂದಿದ್ದ ವರುಣ್, ನಾನೇನೂ ಮಾಡಿಯೇ ಇಲ್ಲ. ನಾನು ಕೊಲೆ ಬೆದರಿಕೆ ಹಾಕೋವಷ್ಟು ಮೀಟರ್‌ ನಂಗಿಲ್ಲ ಎಂದಿದ್ದರು. ಆ ಬೆನ್ನಲ್ಲೇ ಇವರಿಬ್ಬರದ್ದು ಎನ್ನಲಾದ ವಾಟ್ಸಾಪ್‌ ಚಾಟ್‌ನಲ್ಲಿ, "ನೀನು ಲವ್ ಮಾಡಿದವನನ್ನು ಬೆಳಗ್ಗೆನೇ ಮರ್ಡರ್ ಮಾಡ್ತೀನಿ, ನಿನ್ನನ್ನು ನಾಳೆನೇ ಪ್ರಗ್ನೆಂಟ್‌ ಮಾಡ್ತೀನಿ, ರೇಪ್‌ ಮಾಡ್ತಿನಿ" ಎಂದೆಲ್ಲ ಬೆದರಿಕೆ ಮೆಸೆಜ್‌ಗಳು ವರ್ಷಾ ಅವರಿಗೆ ಹೋಗಿದ್ದವು.

ದೇವರು ಎಲ್ಲ ನೋಡುತ್ತಿದ್ದಾನೆ ಎಂದ ವರ್ಷಾ..

ಹೀಗೆ ಚಾಟ್‌ ಲೀಕ್‌ ಬೆನ್ನಲ್ಲೇ, ವರುಣ್‌ ಆರಾಧ್ಯಗೆ ನೆಟ್ಟಿಗರು ಒಂದಷ್ಟು ಪ್ರಶ್ನೆ ಕೇಳಿದ್ದರು. ಚಾಟ್‌ ಪೋಟೋಗಳನ್ನು ಮುಂದಿಟ್ಟುಕೊಂಡು, ಇದ್ದಕ್ಕೆ ಏನ್‌ ಹೇಳ್ತಿರಿ ವರುಣ್‌ ಎಂದಿದ್ದರು. ಈ ವೇಳೆಯೇ ವರ್ಷಾ ಕಾವೇರಿ ಸಹ ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. "ದೇವರು ಎಲ್ಲವನ್ನೂ ನೋಡುತ್ತಿದ್ದಾನೆ, ಎಲ್ಲವನ್ನೂ ತಿಳಿದಿದ್ದಾನೆ! ನಾನು ಅವನ ನ್ಯಾಯ ಮತ್ತು ಕರುಣೆಯನ್ನು ನಂಬುತ್ತೇನೆ" ಎಂದಿದ್ದರು. ನಟಿಯ ಈ ಪೋಸ್ಟ್‌ಗೆ ಬಗೆ ಬಗೆ ಕಾಮೆಂಟ್‌ಗಳು ಸಂದಾಯವಾಗ್ತಿವೆ. "ನೀನು ವುಮೆನ್‌ ಕಾರ್ಡ್‌ ಪ್ಲೇ ಮಾಡ್ತಿದ್ದೀಯಾ" ಎಂದೂ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಬೃಂದಾವನ ಸೀರಿಯಲ್‌ ಮುಗಿದ ಬಳಿಕ, ಸದ್ಯ ಸಿನಿಮಾವೊಂದರಲ್ಲಿ ನಟಿಸುವ ಚಾನ್ಸ್‌ ಗಿಟ್ಟಿಸಿಕೊಂಡಿದ್ದಾರೆ ವರುಣ್.‌ ಮುಂದಿನ ದಿನಗಳಲ್ಲಿ ಸೀರಿಯಲ್‌ ಮತ್ತು ಸಿನಿಮಾ ಎರಡರಲ್ಲಿಯೂ ಮುಂದುವರಿಯುವುದಾಗಿಯೂ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದರು.

mysore-dasara_Entry_Point